Jio Fiber: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ಕೇವಲ 399 ರೂ.ಗೆ ಡೇಟಾ, ಓಟಿಟಿ ಪ್ಲಾಟ್​ಫಾರ್ಮ್​ಗಳು ಉಚಿತ

ಜಿಯೋಫೈಬರ್​

ಜಿಯೋಫೈಬರ್​

ಜಿಯೋ ಫೈಬರ್​ ಅನ್ನು ಹೊಂದಿರುವವರಿಗೆ ಜಿಯೋದಿಂದ ವಿಶೇಷ ಆಫರ್ ಬಿಡುಗಡೆ ಯಾಗಿದೆ. ಈ ರೀಚಾರ್ಜ್ ಪ್ಲ್ಯಾನ್​ ಮೂಲಕ ಉತ್ತಮ ಡೇಟಾ ಆಫರ್, ಓಟಿಟಿ ಅಪ್ಲಿಕೇಶನ್​ಗಳ ಚಂದಾದಾರಿಕೆಯನ್ನು ಪಡೆಯಬಹುದು.

 • Share this:

  ರಿಲಯನ್ಸ್ ಜಿಯೋ (Reliance Jio) ಟೆಲಿಕಾಂ ಕಂಪೆನಿಗಳಲ್ಲಿ ಭಾರೀ ಮುಂಚೂಣಿಯಲ್ಲಿ. ಇದು ತನ್ನ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್​ ಅನ್ನು ಪರಿಚಯಿಸುವ ಮೂಲಕ ಬಹಳಷ್ಟು ಜನಪ್ರಿತೆಯನ್ನು ಪಡೆದಿದೆ.  ಇಂದಿನ ಕಾಲದಲ್ಲಿ ವೈಫೈ (Wi-Fi) ಅನಿವಾರ್ಯವಾಗಿದೆ. ಇಂಟರ್ನೆಟ್ ಡೇಟಾದ ಕೆಲಸವು ತುಂಬಾ ಹೆಚ್ಚಾಗಿದೆ, ವೈಫೈ ಅನ್ನು ಸ್ಥಾಪಿಸುವುದು ಉತ್ತಮ ಆಯ್ಕೆಯಾಗಿದೆ. ಬ್ರಾಡ್‌ಬ್ಯಾಂಡ್ ಯೋಜನೆಗಳ ವಿಷಯಕ್ಕೆ ಬಂದಾಗ, ಮೊದಲು ನೆನಪಿಗೆ ಬರುವ ಹೆಸರು ಜಿಯೋ ಕಂಪೆನಿ. ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಅಗ್ಗದ ಮತ್ತು ಉತ್ತಮ ಫೈಬರ್ (Jio Fiber) ಯೋಜನೆಗಳನ್ನು ನೀಡುತ್ತದೆ. ಕಂಪನಿಯ ಯೋಜನೆಯ ಆರಂಭಿಕ ಬೆಲೆ 399 ರೂ. ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿಯೋಣ.


  ಜಿಯೋ ಫೈಬರ್​ ಅನ್ನು ಹೊಂದಿರುವವರಿಗೆ ಜಿಯೋದಿಂದ ವಿಶೇಷ ಆಫರ್ ಬಿಡುಗಡೆ ಯಾಗಿದೆ. ಈ ರೀಚಾರ್ಜ್ ಪ್ಲ್ಯಾನ್​ ಮೂಲಕ ಉತ್ತಮ ಡೇಟಾ ಆಫರ್ ಅನ್ನು ಪಡೆಯಬಹುದು.


  ಜಿಯೋನ 399 ರೂಪಾಯಿ ಬ್ರಾಡ್​ಬ್ಯಾಂಡ್​ ಯೋಜನೆ:


  ಜಿಯೋಫೈಬರ್ ರೂ 399 ರಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ಜಿಎಸ್‌ಟಿಯೂ ಅನ್ವಯವಾಗಲಿದೆ. ರೂ 399 ಯೋಜನೆಯಲ್ಲಿ, ಗ್ರಾಹಕರು 30 Mbps ಇಂಟರ್ನೆಟ್​ ವೇಗವನ್ನು ಪಡೆಯುತ್ತಾರೆ ಮತ್ತು ನೀವು ಅದರಲ್ಲಿ ಅನಿಯಮಿತ ಇಂಟರ್ನೆಟ್ ಡೇಟಾವನ್ನು ಸಹ ಪಡೆಯುತ್ತೀರಿ. ಇದರಲ್ಲಿ ವಾಯ್ಸ್ ಕಾಲಿಂಗ್ ಸೌಲಭ್ಯ ಕೂಡ ಉಚಿತವಾಗಿ ಲಭ್ಯವಿದೆ.


  ಇದನ್ನೂ ಓದಿ: ಸ್ಮಾರ್ಟ್​ಫೋನ್​ ಪ್ರಿಯರಿಗೆ ಗುಡ್​ನ್ಯೂಸ್​! ಒನ್​ಪ್ಲಸ್​ ಕಂಪೆನಿಯಿಂದಲೂ ಬರ್ತಿದೆ ಫೋಲ್ಡೇಬಲ್ ಮೊಬೈಲ್


  ಜಿಯೋನ 699 ರೂಪಾಯಿ ಯೋಜನೆ:


  ಜಿಯೋ ತನ್ನ 399 ರೂಪಾಯಿ ಪ್ಲ್ಯಾನ್​ ಬೇಡ ಎನ್ನುವವರಿಗೆ, ಕಂಪನಿಯು ರೂ 699 ರ ಯೋಜನೆಯನ್ನು ಪರಿಚಯಿಸಿದೆ. ಇದರೊಂದಿಗೆ ಜಿಎಸ್‌ಟಿಯೂ ಅನ್ವಯವಾಗಲಿದೆ. ಇದರಲ್ಲಿ ಗ್ರಾಹಕರು 100 Mbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ. ಇದರೊಂದಿಗೆ, ಜಿಯೋಫೈಬರ್ ಮೂಲಕ ತನ್ನ ಗ್ರಾಹಕರಿಗೆ ಅನಿಯಮಿತ ಉಚಿತ ಕರೆ ಮತ್ತು ಜಿಯೋ ಟಿವಿ, ಜಿಯೋ ಮೂವಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.


  ಜಿಯೋನ 999 ರೂಪಾಯಿ ಯೋಜನೆ:


  ಜಿಯೋಫೈಬರ್‌ನ ರೂ 999 ಯೋಜನೆಯನ್ನು ಕಂಪನಿಯು ಅತ್ಯಂತ ಜನಪ್ರಿಯ ಯೋಜನೆ ಎಂದು ವಿವರಿಸಿದೆ. ಆದರೆ, ಇದರೊಂದಿಗೆ ಜಿಎಸ್‌ಟಿಯೂ ಅನ್ವಯವಾಗಲಿದೆ. ಇದರಲ್ಲಿ ಇಂಟರ್ನೆಟ್​ 150 Mbps ವೇಗವನ್ನು ಪಡೆಯುತ್ತದೆ.


  ಜಿಯೋಫೈಬರ್​


  ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇದರಲ್ಲಿ ಆ್ಯಪ್​ಗಳ ಉಚಿತ ಚಂದಾದಾರಿಕೆಯನ್ನು ಸಹ ಇದರಲ್ಲಿ ನೀಡಲಾಗಿದೆ. ಇದು ಪ್ರೈಮ್​ ವಿಡಿಯೋ, ಡಿಸ್ನಿ + ಹಾಟ್​ಸ್ಟಾರ್, ಝೀ5, ವೂಟ್, ಸೋನಿಲೈವ್ ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

   ಜಿಯೋನ 1499 ರೂಪಾಯಿ ಯೋಜನೆ:   ಜಿಯೋಫೈಬರ್‌ನ 1499 ರೂಪಾಯಿ ಯೋಜನೆಯಲ್ಲಿ ಗ್ರಾಹಕರು 300Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಯುಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಗ್ರಾಹಕರಿಗೆ ಇದರಲ್ಲಿ ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ. ಇದು ಪ್ರೈಮ್​ ವಿಡಿಯೋ, ಡಿಸ್ನಿ + ಹಾಟ್​ಸ್ಟಾರ್, ಝೀ5, ವೂಟ್, ಸೋನಿಲೈವ್ ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.


  ಜಿಯೋನ ವಾರ್ಷಿಕ ಪ್ರೀಪೇಯ್ಡ್​​ ಪ್ಲ್ಯಾನ್​
  ಜಿಯೋನ 2023 ರೂಪಾಯಿ ಪ್ರೀಪೇಯ್ಡ್​ ಪ್ಲ್ಯಾನ್​


  ಜಿಯೋನ ಈ ಯೋಜನೆಯು ಈ ವರ್ಷದಲ್ಲಿ ಬಿಡುಗಡೆಯಾದ ಮೊದಲ ವಾರ್ಷಿಕ ಯೋಜನೆಯನ್ನು ನೀಡಿದಂತಹ ಪ್ಲ್ಯಾನ್ ಆಗಿದೆ. ಹೊಸ ವರ್ಷದ ಪ್ರಯುಕ್ತ ಈ ಯೋಜನೆಯನ್ನು ಕಂಪೆನಿ ತನ್ನ ಗ್ರಾಹಕರಿಗೆ ಪರಿಚಯಿಸಿತು. ಈ ಯೋಜನೆಯು ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ.  ಇದರಲ್ಲಿ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾಗಿ ವ್ಯಾಲಿಡಿಟಿ ಮುಗಿಯುವ ಹೊತ್ತಿಗೆ 630ಜಿಬಿ ಡೇಟಾವನ್ನು ಬಳಸಬಹುದು. ಹಾಗೆಯೇ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಸವಲಭ್ಯ, ಉಚಿತ ದೈನಂದಿನ 100 ಎಸ್​​ಎಮ್​ಎಸ್ರ್ ಸೌಲಭ್ಯಗಳು ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಇತರೆ ಆ್ಯಪ್​ಗಳನ್ನು ಪಡೆಯಬಹುದು. 


  Published by:Prajwal B
  First published: