ಭಾರತದಲ್ಲಿ ಅನೇಕ ಟೆಲಿಕಾಂ ಕಂಪೆನಿಗಳಿವೆ (Telecom Company). ಇವೆಲ್ಲವೂ ಒಂದಕ್ಕೊಂದು ಪೈಪೋಟಿ ನೀಡುವ ದೃಷ್ಟಿಯಿಂದ ತನ್ನ ಗ್ರಾಹಕರಿಗೆ ವಿಶೇಷ ಮಾದರಿಯ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಪರಿಚಯಿಸುತ್ತಾ ಇರುತ್ತದೆ. ಅದರಲ್ಲೂ ರಿಲಯನ್ಸ್ ಕಂಪೆನಿಯ ಜಿಯೋ (Reliance Jio) ಅಗ್ಗದ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುವ ಮೂಲಕ ದೇಶದ ನಂಬರ್ ಒನ್ ಟೆಲಿಕಾಂ ಕಂಪೆನಿಯೆಂದು ಗುರುತಿಸಿಕೊಂಡಿದೆ. ಜಿಯೋ ಕಂಪೆನಿ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಿಮದ ಹಿಡಿದು ದುಬಾರಿ ಬೆಲೆಯವರೆಗೂ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಜಿಯೋ ದೇಶದೆಲ್ಲೆಡೆ 5ಜಿ ನೆಟ್ವರ್ಕ್ (5G Network) ಸೇವೆಯನ್ನು ವಿಸ್ತರಿಸುತ್ತಿದ್ದು, ಇಂಟರ್ನೆಟ್ ವೇಗ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಜಿಯೋ ತನ್ನ ಗ್ರಾಹಕರಿಗಾಗಿ ಸದ್ಯ ಅಧಿಕ ಡೇಟಾ ಬಳಸುವವರಿಗೆ ಪ್ರತೀ ದಿನ 2.5 ಜಿಬಿ ಡೇಟಾ ಲಭ್ಯವಾಗು ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು. ಈ ಸೌಲಭ್ಯವನ್ನು ಹೊಂದಿದ ಹಲವು ಯೋಜನೆಗಳಿವೆ. ಹಾಗಿದ್ರೆ ಜಿಯೋದಿಂದ ಯಾವೆಲ್ಲಾ ಪ್ಲ್ಯಾನ್ಗಳು ಲಭ್ಯವಿದೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ಜಿಯೋ ಪರಿಚಯಿಸಿರುವ ಯೋಜನೆಗಳು
ರಿಲಯನ್ಸ್ ಜಿಯೋ 2.5 ಜಿಬಿ ಡೇಟಾ ಸೌಲಭ್ಯವನ್ನು ನೀಡುವಂತಹ ಹಲವು ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ 60 ದಿನಗಳಿಂದ 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರು ವ ಯೋಜನೆಗಳಲ್ಲಿ ನಾವು ಹೆಚ್ಚಾಗಿ ಈ ಪ್ರಯೋಜನಗಳನ್ನು ಪಡೆಯಬಹುದು.
ಜಿಯೋನ 349 ರೂಪಾಯಿ ರೀಚಾರ್ಜ್ ಯೋಜನೆ
ರಿಲಯನ್ಸ್ ಜಿಯೋ ಪರಿಚಯಿಸಿದ 349 ರೂ. ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಸಮಯದಲ್ಲಿ ಗ್ರಾಹಕರಿಗೆ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ 75 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ.
ಈ ಸೌಲಭ್ಯದ ಜೊತೆಗೆ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟ್ವರ್ಕ್ ಕರೆಗಳಿಗೂ ಅನಿಯಮಿತ ವಾಯ್ಸ್ ಕಾಲ್ ಮಾಡುವ ಸೌಲಭ್ಯ ನೀಡಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ಮಾಡಬಹುದು. ಇನ್ನು ಜಿಯೋ ಅಪ್ಲಿಕೇಶನ್ಗಳ ಸೇವೆಗಳು ಸಹ ಸಿಗಲಿವೆ.
ಜಿಯೋನ 899 ರೂಪಾಯಿ ರೀಚಾರ್ಜ್ ಯೋಜನೆ
ರಿಲಯನ್ಸ್ ಜಿಯೋನ 899 ರೂ. ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗೆಯೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 225 ಜಿಬಿ ಡೇಟಾ ದೊರೆಯುತ್ತದೆ.
ಇನ್ನು ಈ ಯೋಜನೆ ಮೂಲಕ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟ್ವರ್ಕ್ ಕರೆಗಳಿಗೂ ಅನಿಯಮಿತ ವಾಯ್ಸ್ ಕರೆ ಮಾಡುವ ಸೌಲಭ್ಯವಿದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಾಗಲಿದೆ ಜೊತೆಗೆ ಜಿಯೋ ಆ್ಯಪ್ ಸೇವೆಗಳು ಸಹ ಸಿಗಲಿದೆ.
ಜಿಯೋನ 2023 ರೂಪಾಯಿ ರೀಚಾರ್ಜ್ ಯೋಜನೆ
ರಿಲಯನ್ಸ್ ಜಿಯೋ ಈ ವರ್ಷ ಪರಿಚಯಿಸಿದ 2023 ರೂ. ಪ್ಲ್ಯಾನ್ ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ ಗ್ರಾಹಕರು 2.5 ಜಿಬಿ ಡೇಟಾವನ್ನು ಬಳಸಬಹುದಾಗಿದ್ದು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 630 ಜಿಬಿ ಡೇಟಾ ಸಿಗಲಿದೆ.
ಇದನ್ನೂ ಓದಿ: ಚಾಟ್ಜಿಪಿಟಿ ಟೆಕ್ನಾಲಜಿಯಿಂದಾಗುವ ಲಾಭ, ನಷ್ಟಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ
ಹಾಗೆಯೇ ಈ ಯೋಜನೆ ಮೂಲಕ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋ ದಿಂದ ಇತರೆ ನೆಟ್ವರ್ಕ್ ಕರೆಗಳಿಗೂ ಅನಿಯಮಿತ ವಾಯ್ಸ್ ಕಾಲ್ ಮಾಡುವ ಸೌಲಭ್ಉ ಸಿಗುತ್ತದೆ. ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಸಿಗಲಿದ್ದು, ಜಿಯೋ ಆ್ಯಪ್ಗಳ ಉಚಿತ ಸೇವೆಗಳನ್ನು ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ