HOME » NEWS » Tech » GOOD NEWS FOR IPHONE LOVERS APPLE TO LAUNCH IPHONE 12 SERIES ON THIS DATE HG

ಆ್ಯಪಲ್ ಪ್ರಿಯರಿಗೆ ಸಿಹಿಸುದ್ದಿ! ಇದೇ 13ರಂದು ಐಫೋನ್ 12 ಸಿರೀಸ್ ಮಾರುಕಟ್ಟೆಗೆ!

iPhone 12 series: ಇದೀಗ ಐಫೋನ್​​ 12 ಸಿರೀಸ್ ​ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅಂತು ಇದೇ ಅಕ್ಟೋಬರ್ 13ರಂದು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅಕ್ಟೋಬರ್​ 23ರಿಂದ ಐಫೋನ್​ 12 ಸೇಲ್​ ಮಾಡುತ್ತಿದೆ.​

news18-kannada
Updated:October 8, 2020, 7:22 AM IST
ಆ್ಯಪಲ್ ಪ್ರಿಯರಿಗೆ ಸಿಹಿಸುದ್ದಿ! ಇದೇ 13ರಂದು ಐಫೋನ್ 12 ಸಿರೀಸ್ ಮಾರುಕಟ್ಟೆಗೆ!
ಐಫೋನ್​
  • Share this:
ಜನಪ್ರಿಯ ಆ್ಯಪಲ್​ ಸಂಸ್ಥೆ ಐಫೋನ್​ 12 ಸಿರೀಸ್​ ಅನ್ನು ಉತ್ಪಾದಿಸುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಐಫೋನ್​ 12 ಸಿರೀಸ್​ ಬಿಡುಗಡೆಯ ದಿನಾಂಕ ಬಹಿರಂಗವಾಗಿದೆ. ಅಕ್ಟೋಬರ್​​ 13ರಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ.

ಆ್ಯಪಲ್​ ಸಂಸ್ಥೆ ಉತ್ಪಾದಿಸುವ ಐಫೋನ್​ಗಳಿಗೆ ಸದಾ ಬೇಡಿಕೆ ಇದೆ. ನೂತನ ಐಫೊನ್ ಸಿರೀಸ್​ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸುತ್ತಾ ಬಂದಿದೆ. ಕಳೆದ ಬಾರಿ ಆ್ಯಪಲ್​ ಸಂಸ್ಥೆ ಕಡಿಮೆ ಬೆಲೆಯ ಐಫೋನ್​ ಎಸ್​ಇ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿತ್ತು. ಭಾರತದಲ್ಲೂ ಉತ್ಪಾದಿಸಿ ಬೇರೆ ದೇಶಕ್ಕೆ ರವಾನೆ ಮಾಡಿತ್ತು. ಇದೀಗ ಐಫೋನ್​​ 12 ಸಿರೀಸ್ ​ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಅಂತು ಇದೇ ಅಕ್ಟೋಬರ್ 13ರಂದು ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಅಕ್ಟೋಬರ್​ 23ರಿಂದ ಐಫೋನ್​ 12 ಸೇಲ್​ ಮಾಡುತ್ತಿದೆ.​

ಈ ಬಾರಿ ಆ್ಯಪಲ್​ 5.4 ಇಂಚಿನ ಐಫೋನ್​ 12 ಮಿನಿ, 6.1 ಇಂಚಿನ ಐಫೋನ್​ 12, 6.1 ಇಂಚಿನ ಐಫೋನ್​ 12 ಪ್ರೊ ಮತ್ತು 6.7 ಇಂಚಿನ ಐಫೋನ್​ 12 ಪ್ರೊ ಮ್ಯಾಕ್ಸ್​ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ:  ಐಫೋನ್​ 12 ಮಿನಿ ಬೆಲೆ 54 ಸಾವಿರ ಎಂದು ಹೇಳಲಾಗುತ್ತಿದೆ. ಅದರಂತೆ ಐಫೋನ್​ 12 ಮ್ಯಾಕ್ಸ್​ ಬೆಲೆ 62 ಸಾವಿರ ಇರಲಿದೆಯಂತೆ. ಇನ್ನು ಪ್ರೊ ಮತ್ತು ಪ್ರೊ ಮ್ಯಾಕ್ಸ್​ ಬೆಲೆ 87 ಸಾವಿರ ಇರಲಿದೆ ಎಂದು ಹೇಳಲಾಗುತ್ತಿದೆ.
Youtube Video

ನೂತನ ಐಫೋನ್​​​ 12 ಸಿರೀಸ್​ ಕಪ್ಪು, ಬಿಳಿ, ನೀಲಿ, ಕೆಂಪು ಮತ್ತು ಹಳದಿ ಬಣ್ಣದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ
Published by: Harshith AS
First published: October 8, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories