ತಂತ್ರಜ್ಞಾನ (Technology) ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಬಹಳಷ್ಟು ಬೇಡಿಕೆಯಿದೆ. ಅದಕ್ಕಾಗಿ ಭಾರತ ಕೂಡ ತಂತ್ರಜ್ಞಾನ ವಿಷಯದಲ್ಲಿ ಹೊಸದನ್ನು ಪರಿಚಯಿಸಲು ರೆಡಿಯಾಗುತ್ತಿದೆ. ಇದೀಗ ಭಾರತದ ತಂತ್ರಜ್ಞಾನ ಕಂಪನಿಗಳು (Technology Company) ತಾವು ಯಾರಿಗೂ ಕಮ್ಮಿ ಇಲ್ಲ ಮಾತಿಗೆ ತಕ್ಕಂತೆ ದಿನದಿಂದ ದಿನಕ್ಕೆ ಟೆಕ್ನಾಲಜಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಇದೆ. ಹಲವಾರು ಕಂಪನಿಗಳು ತನ್ನ ಬ್ರಾಂಡ್ಗಳನ್ನು ದೇಶದಲ್ಲಿ ಬಿಡುಗಡೆ ಮಾಡುವ ಜೊತೆಗೆ ಕಂಪನಿಯ ಉತ್ಪನ್ನಗಳನ್ನು ಸಹ ಭಾರತದಲ್ಲಿ (India) ಉತ್ಪಾದಿಸಲು ಸಜ್ಜಾಗಿದ್ದಾರೆ. ಈ ರೀತಿಯಾಗಿ ತಂತ್ರಜ್ಞಾನದಲ್ಲಿ ಪೈಪೋಟಿ ನೀಡುತ್ತಿರುವಂತಹ ಚೀನಾ ಕಂಪನಿಗಳನ್ನು ಸೋಲಿಸುವ ಉದ್ದೇಶವನ್ನು ಹೊಂದಿದೆ. ಈ ಹಿಂದೆ ಹಲವಾರು ಉತ್ಪನ್ನಗಳು ಚೀನಾದಿಂದ ಭಾರತಕ್ಕೆ ಆಮದು ಮಾಡುವ ಮೂಲಕ ಮಾರಾಟವಾಗುತ್ತಿತ್ತು. ಇದರಲ್ಲಿ ಮುಖ್ಯವಾಗಿ ಆ್ಯಪಲ್ ಕಂಪನಿ (Apple Company) ಕೂಡ ಒಂದು. ಇದೀಗ ಭಾರತೀಯರು ಸಂತಸಪಡುವ ಸುದ್ದಿಯೊಂದು ಹೊರಬಿದ್ದಿದೆ.
ಗೂಗಲ್ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿರುವಂತಹ ಎಲ್ಲಾ ಸಾಧನಕ್ಕೆ ಭಾರತದಲ್ಲಿ ಬಹಳಷ್ಟು ಬೇಡಿಕೆ ಇದೆ. ಅದ್ರಲ್ಲೂ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮುಂಚೂಣಿಯಲ್ಲಿದೆ. ಇದೆಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಹೊಸ ನಿರ್ಧಾರವನ್ನು ಕೈಗೊಂಡಿದ್ದು, ಈ ನಿರ್ಧಾರ ಯಶಸ್ವಿಯಾದರೆ ಭಾರತ ತಂತ್ರಜ್ಞಾನ ವಿಷಯದಲ್ಲಿ ಸಂಚಲನ ಮೂಡಿಸುವುದಂತು ಗ್ಯಾರಂಟಿ.
ಇನ್ಮುಂದೆ ಭಾರತದಲ್ಲೇ ಪಿಕ್ಸೆಲ್ ಫೋನ್ ರೆಡಿ
ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಇತ್ತೀಚೆಗೆ ಮಾರುಕಟ್ಟೆ ಬಂದಿದ್ದು ಇದೀಗ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಬಹಳಬಷ್ಟು ಸಂಚಲನವನ್ನು ಮೂಡಿಸಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರ ಬೇಡಿಕೆಗಳು ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಲಿದೆ. ಈ ಎಲ್ಲಾ ಬೆಳವಣಿಗೆಯನ್ನು ಕಂಡು ಕಂಪನಿ ಇನ್ನುಮುಂದೆ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳು ಭಾರತದಲ್ಲೆ ರೆಡಿಯಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಏರ್ಟೆಲ್ನಲ್ಲಿ ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ, ಲೈಫ್ಟೈಮ್ ಯಾವುದೇ ನೆಟ್ವರ್ಕ್ ಸಮಸ್ಯೆ ಬರಲ್ಲ
ಚೀನಾಗೆ ಇದರಿಂದ ಭಾರೀ ನಷ್ಟ
ಮುಖ್ಯ ವಿಷಯ ಏನೆಂದರೆ ಈ ಹಿಂದೆ ಆ್ಯಪಲ್ ಕಂಪನಿಯ ಅರ್ಧಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಚೀನಾದಲ್ಲಿ ಉತ್ಪಾದಿಸಿ ನಂತರ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು. ಆದರೆ ಕೆಲದಿನಗಳ ಹಿಂದೆ ಆ್ಯಪಲ್ ಮಹತ್ವದ ವರದಿಯನ್ನು ಬಹಿರಂಗ ಪಡಿಸಿದೆ. ಏನೆಂದರೆ ಇನ್ಮುಂದೆ ಆ್ಯಪಲ್ ಕಂಪನಿಯ ಸ್ಮಾರ್ಟ್ಫೋನ್ಗಳನ್ನು ಮತ್ತು ಟ್ಯಾಪ್ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುತ್ತದೆ ಎಂದು ಹೇಳಿದೆ.
ಇದೀಗ ಗೂಗಲ್ ಕೂಡ ಈ ನಿರ್ಧಾರವನ್ನು ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಗೂಗಲ್ನ ಸಾಧನಗಳು ಕೂಡ ಭಾರತದಲ್ಲೇ ರೆಡಿಯಾಗುತ್ತದೆ. ಇದರಿಂದ ಚೀನಾಗೆ ಭಾರೀ ನಷ್ಟವಾಗಲಿದೆ. ಇದರ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬರುವ ವೇಳೆ ಗೂಗಲ್ ಪಿಕ್ಸೆಲ್ನ ಭಾರತದಲ್ಲಿ ಉತ್ಪಾದನೆ ಬಗ್ಗೆ ಮಾತುಕತೆ ನಡೆಯಲಿದೆ ಎಮದು ತಿಳಿದುಬಂದಿದೆ
ಸರ್ಕಾರದ ಕಂಪನಿ ಅಡಿಯಲ್ಲಿ ಪಿಕ್ಸೆಲ್ ಸ್ಮಾರ್ಟ್ಫೋನ್ ಉತ್ಪಾದನೆ:
ಭಾರತವು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಉದ್ಯಮಿಗಳನ್ನು ಕೈ ಬೀಸಿ ಕರೆಯುತ್ತಿದ್ದು, ಅವರಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಾ ಬರುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರದ ಪಿಎಲ್‌ಐ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಮೂಲಕ ಗೂಗಲ್ ಪಿಕ್ಸೆಲ್ ಫೋನ್‌ಗಳನ್ನು ತಯಾರಿಸುವ ಮಾತುಕತೆಗಾಗಿ ಸುಂದರ್ ಪಿಚೈ ನೇರವಾಗಿ ಭಾರತಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ.
ಯಾವಾಗ ಆಗಮನ?
ಈ ತಿಂಗಳ ಕೊನೆಯಲ್ಲಿ ಸುಂದರ್ ಪಿಚೈ ಭಾರತಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ. ಸುಂದರ್ ಪಿಚೈ ಅವರೊಂದಿಗಿನ ಸಭೆಯಲ್ಲಿ ಭಾರತದಲ್ಲಿ ಗೂಗಲ್ ಪಿಕ್ಸೆಲ್ ಫೋನ್‌ಗಳ ತಯಾರಿಕೆ ಬಗ್ಗೆ, ಆ್ಯಪ್ ಡೆವಲಪರ್ಗಳ ಬಗ್ಗೆ, ಎಕೋ ವ್ಯವಸ್ಥೆ, ಸೈಬರ್ ಭದ್ರತೆ, ಮೊಬೈಲ್ ಸೇವೆಗಳಲ್ಲಿ ಭಾರತೀಯ ಭಾಷೆಗಳ ಬಳಕೆ ಇವುಗಳ ಕುರಿತು ಚರ್ಚಿಸುತ್ತೇವೆ ಎಂದು ಕೇಂದ್ರ ಸಂವಹನ ಅಧಿಕಾರಿ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ