• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Recharge Plans: ಬಿಎಸ್​​ಎನ್​ಎಲ್​ ಗ್ರಾಹಕರಿಗೆ ಗುಡ್​ ನ್ಯೂಸ್​! ಅಧಿಕ ಡೇಟಾ ಬಳಸೋರಿಗೆ ಈ ರೀಚಾರ್ಜ್​ ಪ್ಲ್ಯಾನ್ಸ್ ಬೆಸ್ಟ್

Recharge Plans: ಬಿಎಸ್​​ಎನ್​ಎಲ್​ ಗ್ರಾಹಕರಿಗೆ ಗುಡ್​ ನ್ಯೂಸ್​! ಅಧಿಕ ಡೇಟಾ ಬಳಸೋರಿಗೆ ಈ ರೀಚಾರ್ಜ್​ ಪ್ಲ್ಯಾನ್ಸ್ ಬೆಸ್ಟ್

ಬಿಎಸ್​ಎನ್​ಎಲ್​

ಬಿಎಸ್​ಎನ್​ಎಲ್​

ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿರುವ ಬಿಎಸ್​ಎನ್​ಎಲ್ ಕಂಪೆನಿ ಇದೀಗ ಅಧಿಕ ಟೇಟಾ ಬಯಸುವವರಿಗೆ ಹೊಸ ರೀಚಾರ್ಜ್ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್​ಗಳು ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಭ್ಯವಿದೆ. ಇದರಲ್ಲಿ ಡೇಟಾ ಬಳಕೆದಾರರಿಗೆ ಹೆಚ್ಚು ಗಮನಹರಿಸಲಾಗಿದೆ.

ಮುಂದೆ ಓದಿ ...
 • Share this:

   ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ (Telecom Company) ಏರ್​ಟೆಲ್​, ಜಿಯೋ, ವೊಡಫೋನ್ ಐಡಿಯಾ ಟೆಲಿಕಾಂ ಕಂಪೆನಿಗಳಿಗೆ ಪ್ರಬಲ ಪೈಪೋಟಿ ನೀಡುವ ಸರ್ಕಾರಿ ಟೆಲಿಕಾಂ ಕಂಪೆನಿಯೆಂದರೆ ಬಿಎಸ್​ಎನ್​ಎಲ್ (BSNL)​. ಈ ಕಂಪೆನಿ ಬಹಳ ಹಿಂದಿನಿಂದಲೂ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಬಿಎಸ್​ಎನ್​​ಎಲ್​ ಕಂಪೆನಿಯ ರೀಚಾರ್ಜ್​ ರೀಚಾರ್ಜ್​ ಪ್ಲ್ಯಾನ್​ಗಳೆಲ್ಲವೂ ಅಗ್ಗದ ಬೆಲೆಯನ್ನು ಹೊಂದಿದೆ. ಖಾಸಗಿ ಕಂಪೆನಿಗಳು ಎಂಟ್ರಿ ನೀಡುವ ಮೊದಲು ಬಿಎಸ್​ಎನ್​ಎಲ್ ಕಂಪೆನಿ ಭಾರೀ ಮುಂಚೂಣಿಯಲ್ಲಿತ್ತು. ಆದರೆ ಜಿಯೋ (Jio), ಏರ್​ಟೆಲ್​ನಂತಹ (Airtel) ಬೆಳವಣಿಗೆಯಿಂದ ಬಿಎಸ್​ಎನ್​ಎಲ್​ ಕಂಪೆನಿ ಮಾರುಕಟ್ಟೆಯಲ್ಲಿ ಸ್ವಲ್ಪ ಹಿಂದುಳಿದಿದೆ. ಆದರೂ ಈ ಕಂಪೆನಿಯ ಗ್ರಾಹಕರು ಇಂದಿಗೂ ಹಾಗೇ ಇದ್ದಾರೆ. ಇದಕ್ಕೆ ಕಾರಣ ಇದು ಪರಿಚಯಿಸುವಂತಹ ರೀಚಾರ್ಜ್​ ಪ್ಲ್ಯಾನ್​ಗಳು ಮತ್ತು ಪ್ರಯೋಜನಗಳು.


  ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿರುವ ಬಿಎಸ್​ಎನ್​ಎಲ್ ಕಂಪೆನಿ ಇದೀಗ ಅಧಿಕ ಟೇಟಾ ಬಯಸುವವರಿಗೆ ಹೊಸ ರೀಚಾರ್ಜ್ ಪ್ಲ್ಯಾನ್​ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್​ಗಳು ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಭ್ಯವಿದೆ. ಇದರಲ್ಲಿ ಡೇಟಾ ಬಳಕೆದಾರರಿಗೆ ಹೆಚ್ಚು ಗಮನಹರಿಸಲಾಗಿದೆ.


  ಬಿಎಸ್​ಎನ್​ಎಲ್​ನ 16 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಸಾಮಾನ್ಯವಾಗಿ ಈ ರೀಚಾರ್ಜ್‌ ಪ್ಲ್ಯಾನ್‌ಅನ್ನು ಸಾಕಷ್ಟು ಜನ ತುರತು ಸಂದರ್ಭಗಳಲ್ಲಿ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ದೈನಂದಿನ ಡೇಟಾ ಖಾಲಿಯಾದರೆ ಈ 16 ರೂಪಾಯಿ ಪ್ರಿಪೇಯ್ಡ್ ಡೇಟಾ ಪ್ಯಾಕ್ ಬಹಳಷ್ಟು ಸಹಕಾರಿಯಾಗುತ್ತದೆ, ಈ ಮೂಲಕ ಬಳಕೆದಾರರು ಒಟ್ಟು 2 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದು ಕೇವಲ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ.


  ಇದನ್ನೂ ಓದಿ: ಅಜ್ಜಿಗೆ ಓಟಿಟಿ ಆ್ಯಪ್​ ಬಗ್ಗೆ ಹೇಳಿಕೊಟ್ಟ ಮೊಮ್ಮಗ, ಕ್ಯೂಟ್ ​ವಿಡಿಯೋ ಸಿಕ್ಕಾಪಟ್ಟೆ ವೈರಲ್​!


  ಬಿಎಸ್​ಎನ್​ಎಲ್​ನ 151 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಬಿಎಸ್‌ಎನ್‌ಎಲ್‌ನ 151 ರೂಪಾಯಿಗಳ ಮತ್ತೊಂದು ಡೇಟಾ ಪ್ಲ್ಯಾನ್‌ ಕೆಲವು ದಿನಗಳ ಹಿಂದೆಯಷ್ಟೇ ಪರಿಚಯಿಸಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 40 ಜಿಬಿಯಷ್ಟು ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇನ್ನು ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಬಿಎಸ್‌ಎನ್‌ಎಲ್‌ ಇದನ್ನು ವರ್ಕ್ ಫ್ರಮ್ ಹೋಮ್ ಪ್ಯಾಕ್ ಎಂಬ ಹೆಸರಿನಿಂದ ಘೋಷಣೆ ಮಾಡಲಾಗಿದ್ದು, ಮನೆಯಲ್ಲೇ ಕೆಲಸ ಮಾಡುವ ಅದೆಷ್ಟೋ ಉದ್ಯೋಗಿಗಳಿಗೆ ಇದು ಸಹಕಾರಿಯಾಗಲಿದೆ.


  ಬಿಎಸ್​ಎನ್​ಎಲ್​ನ 198 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಹೆಚ್ಚಿನ ಡೇಟಾ ಬಳಕೆದಾರರಿಗೆ ಬಿಎಸ್​ಎನ್​ಎಲ್ ಪರಿಚಯಿಸಿರುವ ಮತ್ತೊಂದು ಯೋಜನೆಯೆಂದರೆ, ಅದು 198 ರೂಪಾಯಿಯ ಪ್ರೀಪೇಯ್ಡ್​ ರೀಚಾರ್ಜ್ ಪ್ಲ್ಯಾನ್​. ಇದರಲ್ಲಿ ಗ್ರಾಹಕರು ದೈನಂದಿನ 2 ಜಿಬಿ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಇದು ಒಟ್ಟು 40 ದಿನಗಳ ವ್ಯಾಲಿಡಿಟಿ ಅವಧಿಗೆ ಸೀಮಿತವಾಗಿರುತ್ತದೆ. ಹಾಗೆಯೇ ಈ ಡೇಟಾವನ್ನು 40 Kbps ವೇಗದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹಲವಾರು ಗೇಮಿಂಗ್‌ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.


  ಬಿಎಸ್​ಎನ್​ಎಲ್​ನ 251 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಬಿಎಸ್‌ಎನ್‌ಎಲ್‌ನ 251 ರೂಪಾಯಿಗಳ ಪ್ರಿಪೇಯ್ಡ್ ಡೇಟಾ ಪ್ಯಾಕ್ ನಲ್ಲಿ ಗ್ರಾಹಕರು 70 ಜಿಬಿಯಷ್ಟು ಡೇಟಾವನ್ನು ಪಡೆಯಬಹುದಾಗಿದ್ದು, ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಹಾಗೆಯೇ ಜಿಂಗ್‌ ಸೌಲಭ್ಯ ಸಹ ಲಭ್ಯವಿದೆ. ಅದರಲ್ಲೂ ನಿಮ್ಮ ಪ್ರದೇಶದಲ್ಲಿ ಏನಾದರೂ 4ಜಿ ನೆಟ್‌ವರ್ಕ್ ಹೊಂದಿದ್ದರೆ ಅಥವಾ 3ಜಿ ನೆಟ್‌ವರ್ಕ್‌ ಹೊಂದಿದ್ದರೆ ಇದರಲ್ಲಿ ಇಂಟರ್ನಟ್ ವೇಗವು ಇನ್ನಷ್ಟು ವೇಗವಾಗಿರುತ್ತದೆ.
  ಬಿಎಸ್​ಎನ್​ಎಲ್​ನ 398 ರೂಪಾಯಿ ರೀಚಾರ್ಜ್ ಪ್ಲ್ಯಾನ್​


  ಬಿಎಸ್‌ಎನ್‌ಎಲ್‌ 398 ರೂಪಾಯಿ ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ಡೇಟಾವನ್ನು ಬಳಕೆ ಮಾಡಬಹುದಾಗಿದೆ. ಈ ಪ್ಲ್ಯಾನ್ 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಡೇಟಾ ಪ್ರಯೋಜನದ ಜೊತೆಗೆ ದಿನವೂ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯ್ಸ್‌ ಕಾಲ್‌ ಸೇವೆ ಸಹ ಪಡೆಯಬಹುದಾಗಿದೆ.

  Published by:Prajwal B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು