ಭಾರತದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Indian Telecom Companies). ಖಾಸಗಿ ಟೆಲಿಕಾಂ ಕಂಪೆನಿಗಳಿಂದ ಸಾರ್ವಜನಿಕ ಟೆಲಿಕಾಂ ಕಂಪೆನಿಗಳವರೆಗೆ ಹಲವಾರು ಕಂಪೆನಿಗಳನ್ನು ನಾವು ನೋಡಬಹುದಾಗಿದೆ. ಸಾರ್ವಜನಿಕ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಬಿಎಸ್ಎನ್ಎಲ್ ಕಂಪೆನಿ (BSNL Company) ಖಾಸಗಿ ಕಂಪೆನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ವಿಶೇಷ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಲೇ ಇದೆ. ಈ ಕಂಪೆನಿ ಬಹಳ ಹಿಂದಿನಿಂದಲೂ ಒಂದು ಮಟ್ಟದಲ್ಲಿ ಗ್ರಾಹಕರನ್ನು ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಇದು ಬಿಡುಗಡೆ ಮಾಡಿರುವ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳು (Recharge Plans) ಎಂದು ಹೇಳ್ಬಹುದು. ಇದೀಗ ಬಿಎಸ್ಎನ್ಎಲ್ ಕಂಪೆನಿ ಓಟಿಟಿ (OTT Platforms) ಪ್ರಯೋಜನಗಳನ್ನು ಒಳಗೊಂಡ ಬಜೆಟ್ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಬಿಎಸ್ಎನ್ಎಲ್ ಕಂಪೆನಿ ತನ್ನ ಗ್ರಾಹಕರಿಗಾಗಿ ಬ್ರಾಡ್ಬ್ಯಾಂಡ್ ಯೋಜನೆಯ ಅಡಿಯಲ್ಲಿ ಭಾರೀ ಅಗ್ಗದ ಬೆಲೆಯಲ್ಲಿ 9 ಓಟಿಟಿ ಪ್ಲಾಟ್ಫಾರ್ಮ್ಗಳ ಉಚಿತ ಚಂದಾದಾರಿಕೆ ಸೌಲಭ್ಯವನ್ನು ನೀಡುತ್ತಿದೆ. ಹಾಗಿದ್ರೆ ಆ ಯೋಜನೆಗಳು ಯಾವುದೆಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಬಿಎಸ್ಎನ್ಎಲ್ನ 249 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ ತನ್ನ 249 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 9 ಓಟಿಟಿ ಪ್ಲಾಟ್ಫಾರ್ಮ್ಗಳನ್ನು ನೀಡುತ್ತದೆ. ಅವುಗಳು ಕ್ರಮವಾಗಿ ಜೀ5, ಸೋನಿಲೈವ್, ವೂಟ್ ಸೆಲೆಕ್ಟ್, ಯುಪ್ ಟಿವಿ, ಆಹಾ,ಲಯನ್ಸ್ಗೇಟ್ ಪ್ಲೇ, ಹಂಗಾಮಾ ಮತ್ತು ಡಿಸ್ನಿ+ ಹಾಟ್ಸ್ಟಾರ್ ಇದರೊಂದಿಗೆ ಇನ್ನೊಂದು ಓಟಿಟಿ ಪ್ರಯೋಜನ ದೊರೆಯುತ್ತದೆ. ಎಂಟ್ರಿ ಲೆವೆಲ್ ಬೆಲೆಯ ಬ್ರಾಡ್ಬ್ಯಾಂಡ್ ಯೋಜನೆಯಲ್ಲಿ ಓಟಿಟಿ ಪ್ರಯೋಜನ ಬಯಸುವ ಬಳಕೆದಾರರು ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಳ್ಳಬಹುದು.
ಬಿಎಸ್ಎನ್ಎಲ್ನ 499 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ನ 499 ರೂಪಾಯಿ ಬ್ರಾಡ್ಬ್ಯಾಂಡ್ ಯೋಜನೆಯು 40 ಎಮ್ಬಿಪಿಎಸ್ ಇಂಟರ್ನೆಟ್ ವೇಗವನ್ನು 3.3 ಟಿಬಿ ಡೇಟಾದೊಂದಿಗೆ ಅನ್ಲಿಮಿಟೆಡ್ ಉಚಿತವಾಗಿ ವಾಯ್ಸ್ ಕಾಲ್ ಮಾಡುವ ಸೌಲಭ್ಯವನ್ನು ಪಡೆದಿದೆ. ಈ ಯೋಜನೆಯಲ್ಲಿ ನೀಡಿದ ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4ಎಮ್ಬಿಪಿಎಸ್ ಗೆ ಇಳಿಕೆಯಾಗುತ್ತದೆ. ಇದ್ರಲ್ಲಿ, ಬಳಕೆದಾರರು ಫೈಬರ್ನ ಮೊದಲ ತಿಂಗಳ ಬಾಡಿಗೆಯಲ್ಲಿ 500 ರೂಪಾಯಿವರೆಗಿನ 90% ರಿಯಾಯಿತಿಯನ್ನು ಸಹ ಪಡೆಯುತ್ತಾರೆ.
ಬಿಎಸ್ಎನ್ಎಲ್ನ 499 ರೂಪಾಯಿ ಫೈಬರ್ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ 449ರೂ. ಫೈಬರ್ ಬೇಸಿಕ್ ನಿಯೋ ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ ಅಂದರೆ 3,300ಜಿಬಿ ವರೆಗೆ ಡೇಟಾ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಡೇಟಾವು 30 ಎಮ್ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಯೋಜನೆಯ ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 ಎಮ್ಬಿಪಿಎಸ್ಗೆ ಇಳಿಸಲಾಗುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯು ಹೆಚ್ಚು ಬೇಡಿಕೆಯನ್ನು ಹೊಂದಿದೆ.
ಬಿಎಸ್ಎನ್ಎಲ್ನ 799 ರೂಪಾಯಿ ಫೈಬರ್ ವ್ಯಾಲ್ಯೂ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ 'ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ತಿಂಗಳಿಗೆ 799 ರೂಪಾಯಿ ಆಗಿದೆ. ಬಳಕೆದಾರರು ಈ ಯೋಜನೆಯಲ್ಲಿ 3.3 ಟಿಬಿ ಅಂದರೆ 3,300 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯ ಮಾಸಿಕ ಡೇಟಾ ಮುಗಿಯುವವರೆಗೆ 100 ಎಮ್ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಇದರ 3.3 ಟಿಬಿ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗವು 2 ಎಮ್ಬಿಪಿಎಸ್ಗೆ ಇಳಿಕೆಯಾಗುತ್ತದೆ.
ಇದನ್ನೂ ಓದಿ: ವಿವೋ ಕಂಪೆನಿಯ ಹೊಸ ಸ್ಮಾರ್ಟ್ಫೋನ್ ಲಾಂಚ್! ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ
ಬಿಎಸ್ಎನ್ಎಲ್ನ 799 ರೂಪಾಯಿ ಫೈಬರ್ ಪ್ರೀಮಿಯಂ ರೀಚಾರ್ಜ್ ಪ್ಲ್ಯಾನ್
ಬಿಎಸ್ಎನ್ಎಲ್ 'ಫೈಬರ್ ಪ್ರೀಮಿಯಂ' ಯೋಜನೆಯ ಬೆಲೆ 999 ರೂಪಾಯಿ ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್ಬ್ಯಾಂಡ್ ಯೋಜನೆ ತನ್ನ ಗ್ರಾಹಕರಿಗೆ ಒಟ್ಟು 2 ಟಿಬಿ ಅಂದರೆ 2000 ಜಿಬಿ ಡೇಟಾ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಡೇಟಾವು 200 ಎಮ್ಬಿಪಿಎಸ್ ಡೌನ್ಲೋಡ್ ಮತ್ತು ಅಪ್ಲೋಡ್ ವೇಗವನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ