ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು (Smartphone) ಬಳಸುವವರ ಸಂಖ್ಯೆ ಹೆಚ್ಚಾಗಿದೆ ಆದರೆ ಈ ಮೊಬೈಲ್ಗಳನ್ನು ಬಳಸ್ಬೇಕಾದ್ರೆ ನೆಟ್ವರ್ಕ್ (Network) ಬೇಕೇ ಬೇಕು. ಇದಕ್ಕಾಗಿ ಹಲವಾರು ಇಂಟರ್ನೆಟ್ ಸರ್ವೀಸ್ (Internet Service) ನೀಡುವಂತಹ ಬ್ರಾಡ್ಬ್ಯಾಂಡ್ (Broadband) ಕಂಪನಿಗಳಿವೆ. ಅದ್ರಲ್ಲಿ ಬೆಂಗಳೂರಿನ ಬ್ರಾಡ್ಬ್ಯಾಂಡ್ ಕಂಪನಿ ಬೆಂಗಳೂರು ಜನರಿಗೆ ಭರ್ಜರಿ ಆಫರ್ ಘೋಷಿಸಿದೆ. ಹಾತ್ವೇ (Hathway) ಎಂಬ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸರ್ವೀಸ್ ಕಂಪನಿ 100ಎಮ್ಬಿಪಿಎಸ್ ವೇಗದ ಡೇಟಾ ಪ್ಲಾನ್ ಅನ್ನು ಘೋಷಿಸಿದೆ. ಇದು 750 ರೂಪಾಯಿಯ ಯೋಜನೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇದು ಬೆಂಗಳೂರಿನ (Banglore) ಕೆಲವು ನಗರಗಳಲ್ಲಿ ಫಿಕ್ಸಡ್ ಲೈನ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಇದೀಗ ಬಹಳಷ್ಟು ಗ್ರಾಹಕರನ್ನು ಪಡೆಯುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ಜನರಿಗೆ ಹಾತ್ವೇ ಎಂಬ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸರ್ವೀಸ್ ಕಂಪನಿ ಹೊಸ ಡೇಟಾ ಯೋಜೆನಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ 750 ರೂಪಾಯಿ ಬೆಲೆಯನ್ನು ಹೊಂದಿದ್ದು, 100ಎಮ್ಬಿಪಿಎಸ್ ಇಂಟರ್ನೆಟ್ ಸ್ಪೀಡ್ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತನ್ನ ಗ್ರಾಹಕರಿಗೆ ತಿಳಿಸಿದೆ.
ಹಾತ್ವೇ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸರ್ವೀಸ್ ಕಂಪನಿ
ಹಾತ್ವೇ ಎಂಬ ಕಂಪನಿಯು ಬೆಂಗಳೂರಿನ ಜನರಿಗೆ ಕೆಲ ಆಯ್ದ ನಗರಗಳಲ್ಲಿ ಇಂಟರ್ನೆಟ್ ಸೇವೆಯನ್ನು ನೀಡುತ್ತಾ ಬಂದಿದೆ. ಇದು ತನ್ನ ಕಂಪನಿಯ ಅಡಿಯಲ್ಲಿ ಹಲವಾರು ಡೇಟಾ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಇದು ತಿಂಗಳ ಮತ್ತು ವರ್ಷದ ಯೋಜನೆಯನ್ನು ಬಿಡುಗಡೆ ಮಾಡಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದು, ಉತ್ತಮ ಅನುಭವವನ್ನು ಇದು ನೀಡುತ್ತದೆ.
ಇದನ್ನೂ ಓದಿ: ದಾಖಲೆ ನಿರ್ಮಿಸಿದ ಜಿಯೋ ಸಿನೆಮಾ! ಡೌನ್ಲೋಡ್ ಆ್ಯಪ್ ಲೀಸ್ಟ್ನಲ್ಲಿ ನಂ.1
ಬೆಂಗಳೂರಿನ ಗ್ರಾಹಕರಿಗೆ 100ಎಮ್ಬಿಪಿಎಸ್ ಇಂಟರ್ನೆಟ್ ಸ್ಪೀಡ್
ಬೆಂಗಳೂರಿನಲ್ಲಿ ಇಂಟರ್ನೆಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಪ್ರಸಿದ್ಧ ಇಂಟರ್ನೆಟ್ ಸರ್ವೀಸ್ ಕಂಪನಿಯಾಗಿರುವ ಹಾತ್ವೇ ಹೊಸ 100ಎಮ್ಬಿಪಿಎಸ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಯನ್ನು ಪರಿಚಯಿಸಿದೆ. ಇದು 750 ರೂಪಾಯಿಯ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
ಇಲ್ಲಿನ ನಗರದ ಗ್ರಾಹಕರು 1500 ರೂಪಾಯಿ ಪಾವತಿ ಮಾಡುವ ಮೂಲಕ 100ಎಮ್ಬಿಪಿಎಸ್ ಸ್ಪೀಡ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಗೆ ಗ್ರಾಹಕರಾಗಬಹುದು. ನಂತರ ಪ್ರತೀ ತಿಂಗಳು ಈ ಯೋಜನೆ 750 ರೂಪಾಯಿಯಲ್ಲಿ ಡೇಟಾ ಸೇವೆಯನ್ನು ಪಡೆಯಬಹುದು. ಜೊತೆಗೆ ಗ್ರಾಹಕರು ಉಚಿತವಾಗಿ ಡ್ಯುಯಲ್-ಬ್ಯಾಂಡ್ ರೂಟರ್ ಸಾಧನವನ್ನು ಸಹ ಪಡೆದುಕೊಳ್ಳಬಹುದು ಎಂದು ಹಾತ್ವೇ ಕಂಪನಿ ತಿಳಿಸಿದೆ.
ಈ ಯೋಜನೆಯ ಇತರ ಬೆಲೆಗಳು
ಹಾತ್ವೇ ಕಂಪನಿ ತನ್ನ ಗ್ರಾಹಕರಿಗಾಗಿ ಉತ್ತಮ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ. ಅದರಲ್ಲೂ 100 Mbps ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಯನ್ನು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಪಡೆಯಬಹುದಾಗಿದೆ. ಎರಡು ತಿಂಗಳ 100 Mbps ಸ್ಪೀಡ್ ಬ್ರಾಡ್ಬ್ಯಾಡ್ ಯೋಜನೆ ಬೇಕಾದರೆ 1500 ರೂಪಾಯಿ ಆದರೆ, ಮೂರು ತಿಂಗಳಿಗೆ 2250 ರೂಪಾಯಿ, ಆರು ತಿಂಗಳಿಗೆ 4500 ರೂಪಾಯಿ ಮತ್ತು 12 ತಿಂಗಳ ಯೋಜನೆಗೆ 9000 ರೂಪಾಯಿ ರೀಚಾರ್ಜ್ ಮಾಡಬೇಕು ಎಂದು ಹಾತ್ವೇ ಕಂಪನಿ ತಿಳಿಸಿದೆ.
ಡೇಟಾದ ಬಗ್ಗೆ ಸ್ಪಷ್ಟನೆಯಿಲ್ಲ
ಇನ್ನು ಈ ಯೋಜನೆಯ ಮೂಲಕ ನೀಡಲಾಗುವ ಡೇಟಾವು ಕಂಪನಿಯ ಕೆಲವೊಂದು ನೀತಿಗಳಿಗೆ ಒಳಪಟ್ಟಿರುತ್ತದೆ. ಇನ್ನು ಈ ಯೋಜನೆಯನ್ನು ಪಡೆಯುವುದಾದರೆ ಇದರಲ್ಲಿ ನೀಡಲಾಗುವ ಡೇಟಾ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ತಿಂಗಳಿಗೆ 3600 ಜಿಬಿ ಡೇಟಾದೊಂದಿಗೆ ಗ್ರಾಹಕರು ಈ ಯೋಜನೆಯನ್ನು ಪಡೆಯಲು ಸಾಧ್ಯವಾಗಬಹುದು ಎಂದು ಕೆಲವು ವರದಿಗಳು ಹೇಳಿವೆ. ಇನ್ನು ಈ ವಿಷಯದ ಬಗ್ಗೆ ಹಾತ್ವೇ ಕಂಪನಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ