ಬೆಂಗಳೂರು ಮೆಟ್ರೋ (Metro) ಪ್ರಯಾಣಿಕರಿಗೆ ಗುಡ್ ನ್ಯೂಸ್. ಇನ್ಮುಂದೆ ಪೇಟಿಯಂ (Paytm) ಮತ್ತು ಯಾತ್ರಾ (Yatra) ಅಪ್ಲಿಕೇಶನ್ ಮೂಲಕವೂ ಟಿಕೆಟ್ಗಳನ್ನು ಖರೀದಿ ಮಾಡ್ಬಹುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ವರದಿ ಮಾಡಿದೆ. ಇದು ಮೆಟ್ರೋ ತನ್ನ ಗ್ರಾಹಕರಿಗೆ ನೀಡಿದಂತಹ ವಿಶೇಷ ಕೊಡುಗೆ ಅಂತಾನೂ ಹೇಳ್ಬಹುದು. ಈ ರೀತಿಯ ಸೌಲಭ್ಯಗಳು ಪ್ರಯಾಣಿಕರಿಗೆ ಸುಲಭವಾಗುವ ದೃಷ್ಟಿಯಿಂದ ಮಾಡಲಾಗಿದೆ ಮತ್ತು ಇನ್ನು ಮೂಮದಿನ ದಿನಗಳಲ್ಲಿ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಕ್ಯೂಆರ್ ಟಿಕೆಟಿಂಗ್ (QR Ticketing) ಸೌಲಭ್ಯವನ್ನು ಬಿಡುಗಡೆ ಮಾಡುವ ಜೊತೆಗೆ ಪೇಟಿಯಂ ಮತ್ತು ಯಾತ್ರಾ ಅಪ್ಲಿಕೇಶನ್ಗಳಲ್ಲೂ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ (Scan) ಮಾಡಿ ಟಿಕೆಟ್ ಖರೀದಿಸುವ ಸಾಫ್ಟ್ವೇರ್ ಅನ್ನು ಮಾಡಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದುವರೆಗೆ ಮೆಟ್ರೋ ಪ್ರಯಾಣಿಕರಿಗೆ ಮೊಬೈಲ್ನಲ್ಲಿರುವ ಅಪ್ಲಿಕೇಶನ್ಗಳಲ್ಲಿ ಕೆಲವೊಂದು ನಿಯಮಗಳಲ್ಲಿ ಟಿಕೆಟ್ ಮಾಡಬೇಕಿತ್ತು. ಆದರೆ ಇನ್ಮುಂದೆ ಪೇಟಿಯಂ ಮತ್ತು ಯಾತ್ರಾ ಅಪ್ಲಿಕೇಶನ್ಗಲಲ್ಲೂ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಮಾಡ್ಬಹುದು. ಹೇಗೆ, ಇದರ ನಿಯಮಗಳೆಲ್ಲಾ ಈ ಕೆಳಗೆ ಇದೆ.
ಮೊಬೈಲ್ನಲ್ಲೇ ಸ್ಕ್ಯಾನ್ ಮಾಡುವ ಮೂಲಕ
ಮುಖ್ಯವಾಗಿ ನಾವು ಈ ಹಿಂದೆ ಸ್ಟೇಷನ್ಗಳಿಗೆ ಹೋಗಿ ಅಲ್ಲೇ ಟಿಕೆಟ್ ಮಾಡುತ್ತಿದ್ದೆವು ಅಥವಾ ಮೆಟ್ರೋ ಪಾಸ್ ಇರುತ್ತಿತ್ತು. ಆದರೆ ಇನ್ನುಮುಂದೆ ಮೊಬೈಲ್ನಲ್ಲೇ ಮೆಟ್ರೋ ಟಿಕೆಟ್ ಸುಲಭದಲ್ಲಿ ಮಾಡಿಕೊಳ್ಳಬಹುದು. ಮೆಟ್ರೋ ಸ್ಟೇಷನ್ನಲ್ಲಿ ಗೇಟ್ ಪಕ್ಕದಲ್ಲಿ ನಿಮ್ಮ ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನೀವು ಮೆಟ್ರೋ ಟಿಕೆಟ್ ಮಾಡಿಕೊಳ್ಬಹುದಾಗಿದೆ.
ಇದನ್ನೂ ಓದಿ: ವಾಟ್ಸಪ್ನಲ್ಲೇ ಹೀಗೆ ಮೆಟ್ರೋ ಟಿಕೆಟ್ ಖರೀದಿಸಬಹುದು!
ಟಿಕೆಟ್ ಕ್ಯಾನ್ಸಲ್ ಮಾಡುವ ಅವಕಾಶವಿದೆ
ಒಂದು ವೇಳೆ ಪ್ರಯಾಣಿಕರು ತಮ್ಮ ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಮಾಡಿಕೊಂಡ ನಂತರ ಬೇಡವಾದರೆ ಟಿಕೆಟ್ ಕ್ಯಾನ್ಸಲ್ ಮಾಡುವಂತಹ ಅವಕಾಶಗಳೂ ಇವೆ. ಇದರ ಜೊತೆಗೆ ನಿಮಗೆ ನೀವು ಟಿಕೆಟ್ಗಾಗಿ ಪೇ ಮಾಡಿದಂತಹ ಸಂಪೂರ್ಣ ಹಣ ಕೂಡ ರೀಫಂಡ್ ಆಗುತ್ತದೆ.
ವಾಟ್ಸಪ್ನಲ್ಲೂ ಟಿಕೆಟ್ ಖರೀದಿಬಹುದು
ನವೆಂಬರ್ 1ನೇ ತಾರೀಕಿನಂದು ಬಿಎಮ್ಆರ್ಸಿಎಲ್ ಆನ್ಲೈನ್ನಲ್ಲಿ ಟಿಕೆಟ್ ಲಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಿತು. ಮತ್ತು ನಮ್ಮ ಮೆಟ್ರೋದ ವಾಟ್ಸಪ್ ಚಾಟ್ಬಾಟ್ ಆಧಾರಿತ ಕ್ಯೂಆರ್ ಟಿಕೆಟಿಂಗ್ ಸೇವೆಯನ್ನು ಪ್ರಾರಂಭಿಸಿದೆ. ವಾಟ್ಸಪ್ನಲ್ಲಿ ಎಂಡ್-ಟು-ಎಂಡ್ ಕ್ಯೂಆರ್ ಟಿಕೆಟಿಂಗ್ ಅನ್ನು ಸ್ಥಾಪಿಸಿದ ಜಾಗತಿಕವಾಗಿ ಇದು ಮೊದಲ ಸಾರಿಗೆ ಸೇವೆಯಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿಕೊಂಡಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಹೊಸದಾಗಿ ಪರಿಚಯಿಸಲಾದ ವಾಟ್ಸಪ್ ಚಾಟ್ಬಾಟ್ ಟಿಕೆಟಿಂಗ್ ವ್ಯವಸ್ಥೆಯನ್ನು ಸುಲಭವಾಗಿ ಬಳಕೆ ಮಾಡಬಹುದು.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMCRL) WhatsApp ಸಂಖ್ಯೆ 8105556677. ಮೊದಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಳ್ಳಿ.
ನೀವು WhatsApp ಸಂಖ್ಯೆ 8105556677 ಗೆ 'ಹಾಯ್' ಎಂದು ಕಳುಹಿಸಿ. ಆಗ ನಿಮಗೆ ಮೂರು ಆಯ್ಕೆಗಳನ್ನು ಸಿಗುತ್ತವೆ.
ಈಗ ಕಾಣಿಸುವ ಆಯ್ಕೆಗಳು ಹೀಗಿರುತ್ತವೆ:
1. QR ಟಿಕೆಟ್ಗಳು
2. ಕಾರ್ಡ್ ಮಾಹಿತಿ ಮತ್ತು ರೀಚಾರ್ಜ್
3. ಇನ್ನಷ್ಟು ಆಯ್ಕೆಗಳು
ನೀವು ಮೊದಲು QR ಟಿಕೆಟ್ಗಳ ಆಯ್ಕೆಯನ್ನು ಆರಿಸಿ. ನೀವು ಟಿಕೆಟ್ ಕಾಯ್ದಿರಿಸಲು ಬಯಸಿದರೆ, 'ಟಿಕೆಟ್ ಖರೀದಿಸಿ' ಆಯ್ಕೆಯನ್ನು ಟ್ಯಾಪ್ ಮಾಡಿ. ಈ ಆಯ್ಕೆಯಡಿ ನಿಮ್ಮ ಅಸ್ತಿತ್ವದಲ್ಲಿರುವ ಟಿಕೆಟ್ ಅನ್ನು ಸಹ ನೀವು ರದ್ದುಗೊಳಿಸಬಹುದು. ನಿಮ್ಮ ಇತ್ತೀಚಿನ ಪ್ರಯಾಣಗಳನ್ನು ಇಲ್ಲಿ ಪರಿಶೀಲಿಸಬಹುದು.
ನೀವು 'ಟಿಕೆಟ್ ಖರೀದಿಸಿ' ಆಯ್ಕೆಯನ್ನು ಆರಿಸಿದಾಗ ಮೂರು ಆಯ್ಕೆಗಳು ಕಾಣಿಸುತ್ತವೆ.
'ಸ್ಥಳ ಹಂಚಿಕೆ', 'ಟೈಪ್ ಸ್ಟೇಷನ್ ಹೆಸರು' ಮತ್ತು 'ಪಟ್ಟಿಯಿಂದ ಹುಡುಕಿ'. ನಿಮ್ಮ ಬಳಿ ಮೆಟ್ರೋ ನಿಲ್ದಾಣವನ್ನು ಹುಡುಕಲು ನೀವು ಪ್ರಯತ್ನಿಸುತ್ತಿರುವಾಗ 'ಸ್ಥಳವನ್ನು ಹಂಚಿಕೊಳ್ಳಿ' ಆಯ್ಕೆಯನ್ನು ಆರಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ