ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ (Telecom Company) ಏರ್ಟೆಲ್ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ಜಿಯೋ (Jio) ನಂಬರ್ ಒನ್ ಸ್ಥಾನದಲ್ಲಿದೆ. ಆದರೆ ಜಿಯೋ ಕಂಪೆನಿಗೆ ಪ್ರತಿಸ್ಪರ್ಧಿಯಾಗಿರುವ ಏರ್ಟೆಲ್ ಕಂಪೆನಿ (Airtel Company) ಸ್ಮಾರ್ಟ್ಫೋನ್ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇತ್ತೀಚೆಗೆ ಏರ್ಟೆಲ್ ಕಂಪೆನಿ ಅತೀ ಕಡಿಮೆ ಬೆಲೆ ಡೇಟಾ ವೋಚರ್ ಪ್ಲ್ಯಾನ್ (Data Vocher Plan) ಅನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಗುಡ್ ನ್ಯೂಸ್ ಅನ್ನು ಕಂಪೆನಿ ಗ್ರಾಹಕರಿಗೆ ನೀಡಿದೆ. ಈ ಸುದ್ದಿಯ ಪ್ರಕಾರ ಗ್ರಾಹಕರಿಗೆ ಏರ್ಟೆಲ್ ಕಡೆಯಿಂದ 2ಜಿಬಿ ಡೇಟಾ ಉಚಿತವಾಗಿ ಲಭ್ಯವಾಗುತ್ತದೆ ಎಂದು ತಿಳಿದು ಬಂದಿದೆ.
ಏರ್ಟೆಲ್ ಇದುವರೆಗೆ ಆಕರ್ಷಕ ಆಫರ್ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ.ಈ ಎಲ್ಲದರ ನಡುವೆ ಈಗ ಮತ್ತೊಂದು ಸೌಲಭ್ಯವನ್ನು ಘೋಷಿಸಿದೆ. ಹಾಗಿದ್ರೆ ಆ ಆಫರ್ ಯಾವುದು? ಇದರ ಪ್ರಯೋಜನ ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಏರ್ಟೆಲ್ನಿಂದ 2ಜಿಬಿ ಡೇಟಾ ಉಚಿತ
ಏರ್ಟೆಲ್ ಗ್ರಾಹಕರು ತಮ್ಮ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಬಳಕೆ ಮಾಡಿಕೊಂಡು ತಮ್ಮ ಸಿಮ್ಗಳಿಗೆ ರೀಚಾರ್ಜ್ ಮಾಡಿದ್ರೆ ಕಂಪೆನಿ ನಿಮಗಾಗಿ 2ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತದೆ. ಈ ಆ್ಯಪ್ ಮೂಲಕ ಮಾತ್ರವಲ್ಲದೇ 265 ರೂ, 359 ರೂ,549 ರೂ, 699 ರೂ, 719 ರೂ ಮತ್ತು 839 ರೂಪಾಯಿ ರೀಚಾರ್ಜ್ ಯೋಜನೆಗಳಲ್ಲಿ ಈ ಸೌಲಭ್ಯ ದೊರೆಯುತ್ತದೆ.
ಏರ್ಟೆಲ್ ಥ್ಯಾಂಕ್ಸ್ ಆ್ಯಪ್
ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಎಂಬುದು ಏರ್ಟೆಲ್ನ ಜನಪ್ರಿಯ ಆಂತರಿಕ ಅಪ್ಲಿಕೇಶನ್ ಆಗಿದೆ. ಈ ಆ್ಯಪ್ ಮೂಲಕ ಏರ್ಟೆಲ್ ಗ್ರಾಹಕರಿಗೆ ಲಭ್ಯವಿರುವಂತಹ ಎಲ್ಲಾ ಸೇವೆಗಳನ್ನು ನೋಡಬಹುದಾಗಿದೆ. ಪ್ರಮುಖವಾಗಿ ರೀಚಾರ್ಜ್ ಪ್ಲ್ಯಾನ್ಗಳು ಯಾವುದೆಲ್ಲಾ ಇದೆ, ಇದರ ಬೆನಿಫಿಟ್ಗಳು ಹೇಗೆಲ್ಲಾ ಇದೆ ಮತ್ತು ರೀಚಾರ್ಜ್ ಮಾಡಲು ಸಹ ಇದು ಅನುಮತಿಸುತ್ತದೆ.
ಏರ್ಟೆಲ್ ಥ್ಯಾಂಕ್ಸ್ ಮೂಲಕ ರೀಚಾರ್ಜ್ ಮಾಡುವುದರಿಂದಾಗುವ ಲಾಭ
ಇನ್ನು ಈ ಮೇಲಿನ ಬರಹದಲ್ಲಿ ತಿಳಿಸಿದಂತೆ 359 ರೂ, 549 ರೂ ಹಾಗೂ 699 ರೂ. ಗಳ ವಿಶೇಷ ಪ್ಲ್ಯಾನ್ನಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತವಾಗಿ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ 719 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ನಲ್ಲಿ ಡಿಸ್ನಿ + ಹಾಟ್ಸ್ಟಾರ್ ಚಂದಾದಾರಿಕೆ ಸೌಲಭ್ಯವೂ ದೊರೆಯುತ್ತದೆ. ಅದೇ ರೀತಿ 839 ರೂಪಾಯಿಗಳ ರೀಚಾರ್ಜ್ನಲ್ಲಿ ಡಿಸ್ನಿ + ಹಾಟ್ಸ್ಟಾರ್ನ ಚಂದಾದಾರಿಕೆಯನ್ನು ಉಚಿತವಾಗಿ ಗ್ರಾಹಕರು ಪಡೆಯುತ್ತಾರೆ.
ಆದರೆ ಇಷ್ಟೆಲ್ಲಾ ರೀಚಾರ್ಜ್ನಲ್ಲಿ ಈ ಪ್ರಯೋಜನಗಳನ್ನೆಲ್ಲಾ ಪಡೆಯಬೇಕೆಂದರೆ ಮುಖ್ಯವಾಗಿ ನಿಮ್ಮ ಫೋನ್ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಹಾಗಿದ್ರೆ ಮಾತ್ರ ನೀವು 2ಜಿಬಿ ಉಚಿತ ಡೇಟಾವನ್ನು ಪಡೆಯಲು ಸಾಧ್ಯವಾಗುತ್ತದೆ.
ಏರ್ಟೆಲ್ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರಚಾರ
ಏರ್ಟೆಲ್ನ ಮುಖ್ಯ ಉದ್ದೇಶವೇ ಏರ್ಟೆಲ್ನ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವುದು. ಇದಕ್ಕಾಗಿಯೇ ಏರ್ಟೆಲ್ ಕಂಪೆನಿ ರೀಚಾರ್ಜ್ ಪ್ಲ್ಯಾನ್ಗಳ ಜೊತೆಗೆ ಈ ರೀತಿಯ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆ. ಹೆಚ್ಚಿನ ಜನರಿಗೆ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ಗಳಿವೆ ಎಂಬುದೇ ಗೊತ್ತಿಲ್ಲ. ಆದರೆ ಈ ಆ್ಯಪ್ಗಳನ್ನು ಡೌನ್ಲೋಡ್ ಮಾಡಿದ್ರೆ ಗ್ರಾಹಕರಿಗೆ ಸುಲಭದಲ್ಲಿ ಏರ್ಟೆಲ್ನ ಪ್ರೀಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ರೀಚಾರ್ಜ್ ಯೋಜನೆಗಳು ಹೇಗಿದೆ- ಎಂಬುದನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: ಇಂಟೆಲ್ ಕಂಪೆನಿಯಿಂದ ವಿಶ್ವದ ಮೊದಲ ವೇಗದ ಡೆಸ್ಕ್ಟಾಪ್ ಪ್ರೊಸೆಸರ್ ಲಾಂಚ್!
ಏರ್ಟೆಲ್ನ ಥ್ಯಾಂಕ್ಸ್ ಆ್ಯಪ್ ಅನ್ನು ಜನರು ಬಳಸಬೇಕು ಎನ್ನುವ ನಿಟ್ಟಿನಲ್ಲೇ ಈ ಉಚಿತ ಆಫರ್ ಅನ್ನು ನೀಡಲಾಗಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ