• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • ದುಬಾರಿ ರೋಲ್ಸ್ ರಾಯ್ಸ್​ ಕಾರನ್ನು ಟ್ಯಾಕ್ಸಿಯನ್ನಾಗಿಸಿದ ಕೇರಳ ವ್ಯಕ್ತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ದುಬಾರಿ ರೋಲ್ಸ್ ರಾಯ್ಸ್​ ಕಾರನ್ನು ಟ್ಯಾಕ್ಸಿಯನ್ನಾಗಿಸಿದ ಕೇರಳ ವ್ಯಕ್ತಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ರೋಲ್ಸ್​ ರಾಯ್ಸ್​ ಫ್ಯಾಂಟಮ್

ರೋಲ್ಸ್​ ರಾಯ್ಸ್​ ಫ್ಯಾಂಟಮ್

ಕೇರಳ ಮೂಲದ ಬಾಬಿ ಎಂಬವರು ರೋಲ್ಸ್​ ರಾಯ್ಸ್​ ಫ್ಯಾಂಟಮ್​ ಕಾರನ್ನು ಬಾಡಿಗೆ ಟ್ಯಾಕ್ಸಿಯನ್ನಾಗಿಸಿ ಬಾಡಿಗೆ ನೀಡುತ್ತಾರೆ. ಅದರಲ್ಲೂ ಕಡಿಮೆ ಹಣಕ್ಕೆ ಬಾಡಿಗೆ ನೀಡುತ್ತಾರೆ.

 • Share this:

ದುಬಾರಿ ಕಾರುಗಳ ಪಟ್ಟಿಯಲ್ಲಿ ರೋಲ್ಸ್​ ರಾಯ್ಸ್​ ಕಂಪನಿ ಉತ್ಪಾದಿಸುವ ಕಾರುಗಳು ಕೂಡ ಒಂದು. ಅತಿ ಶ್ರೀಮಂತ ವ್ಯಕ್ತಿಗಳು ಈ ಕಾರನ್ನು ಖರೀದಿಸುತ್ತಾರೆ ಮತ್ತು ಬಳಸುತ್ತಾರೆ. ಯಾಕೆಂದರೆ ಸಾಮಾನ್ಯ ವ್ಯಕ್ತಿ ಇದರ ಬೆಲೆ ಕೇಳಿದರೆ ಆಗಸ ನೋಡುತ್ತಾನೆ. ಅಷ್ಟೊಂದು ಬೆಲೆಯನ್ನು ಹೊಂದಿದೆ  ಈ ಕಂಪನಿ ಉತ್ಪಾದಿಸುವ ಕಾರುಗಳು. ಆದರೆ ಇಲ್ಲೊಂದು ಅಚ್ಚರಿಯ ವಿಚಾರವೆಂದರೆ ವ್ಯಕ್ತಿಯೊಬ್ಬರು ರೋಲ್ಸ್​ ರಾಯ್ಸ್​ ಕಂಪನಿ ಕಾರೊಂದನ್ನು ಟ್ಯಾಕ್ಸಿಯನ್ನಾಗಿ ಮಾಡಿದ್ದಾರೆ. ಅದರಲ್ಲೂ ಭಾರತೀಯರೊಬ್ಬರು ಈ ಕಾರನ್ನು ಟ್ಯಾಕ್ಸಿಯನ್ನಾಗಿಸಿ ಬಾಡಿಗೆ ಕೊಡುತ್ತಿದ್ದಾರೆ ಎಂಬುದು ಮಗದೊಂದು ಅಚ್ಚರಿ ವಿಚಾರವಾಗಿದೆ!.


ಕೇರಳ ಮೂಲದ ಬಾಬಿ ಎಂಬವರು ರೋಲ್ಸ್​ ರಾಯ್ಸ್​ ಫ್ಯಾಂಟಮ್​ ಕಾರನ್ನು ಬಾಡಿಗೆ ಟ್ಯಾಕ್ಸಿಯನ್ನಾಗಿಸಿ ಬಾಡಿಗೆ ನೀಡುತ್ತಾರೆ. ಅದರಲ್ಲೂ ಕಡಿಮೆ ಹಣಕ್ಕೆ ಬಾಡಿಗೆ ನೀಡುತ್ತಾರೆ.


ಉದ್ಯಮಿಯಾಗಿರುವ ಬಾಬಿ ಆಕ್ಸಿಜನ್​ ಎಂಬ ಹೆಸರಿನ ರೆಸಾರ್ಟ್​ ನಡೆಸುತ್ತಿದ್ದಾರೆ. ಈ ರೆಸಾರ್ಟ್​ಗೆ ಬರುವ ಗ್ರಾಹಕರಿಗೆ ಅಲ್ಲಿ ಓಡಾಡಾಲು ರೋಲ್ಸ್​ ರಾಯ್ಸ್​ ಫ್ಯಾಂಟಮ್​ ಕಾರನ್ನು ಬಾಡಿಗೆ ನೀಡುತ್ತಾರೆ.


ಗೋಲ್ಡ್​ ಬಣ್ಣದ ಕಾರು ಇದಾಗಿದ್ದು, ಈ ಕಾರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದೆ. ಬಾಬಿ ಮತ್ತು ಕಾರಿನ ಫೋಟೋಗಳು ಕೂಡ ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

top videos


  ಇನ್ನು ಬಾಬಿ ಈ ಕಾರನ್ನು ಎಂದಿಗೂ ಹೊರಗಿನವರಿಗೆ ಬಾಡಿಗೆಗೆ ನೀಡುವುದಿಲ್ಲ. ರೆಸಾರ್ಟ್​ಗೆ ಬಂದ ಅತಿಥಿಗಳಿಗೆ ಮಾತ್ರ ಕಡಿಮೆ ಬಾಡಿಗೆಗೆ ಈ ಕಾರಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಂದಹಾಗೆಯೇ ಫ್ಯಾಂಟಮ್​ ಕಾರಿನ ಬೆಲೆ 8 ರಿಂದ 11 ಕೋಟಿವರೆಗೆ ಇರುತ್ತದೆ.

  View this post on Instagram

  ആരാ നോക്ക് മക്കളെ🤩 #pewer 🌟 ______ 🎥 @_.abhinand._._ •••••••••••••••••••••••••••••••••• ● @Kozhikottukaarofficial most updated insta profile of #Kozhikode 💕 ● Since 2015* ● Dm us for collaborations👬 ● 24×7 Admin support ___ To get featured ●Tag us ●Use #_kkr ●📩 pagecalicut@gmail.com നമ്മൾ കോഴിക്കോട്ടുകാർ ❤ ____________________________________________ #calicut#kannur#wayanad#malappuram#idukki#kottayam#kochi#trivandrum#thrissur#godsowncountry#keralatourism#malayalam#keralagram#mallugram#incredibleindia#malayali#malayalee#malayalees#mallu#keralagram#mollywood#kozhikodebeach#calicutbeach#mananchira#breakthechain#mavoorroad


  A post shared by നമ്മൾ കോഴിക്കോട്ടുകാർ (@kozhikottukaarofficial) on

  Truecaller: ನೂತನ ಫೀಚರ್ ಪರಿಚಯಿಸಿರುವ ಟ್ರೂಕಾಲರ್; ಇನ್ಮುಂದೆ ಅನುವಾದ ಆಯ್ಕೆಯೂ ಲಭ್ಯ!

  First published: