Gmail ಈಗ ಹೊಸ ವೈಶಿಷ್ಟ್ಯಗಳೊಂದಿಗೆ ನಿಮ್ಮ ಮುಂದೆ; ಇಲ್ಲಿದೆ ಡೀಟೇಲ್ಸ್

ಇದೀಗ ಗೂಗಲ್‌ ತನ್ನ ಸೇವೆಯಲ್ಲಿ ಒಂದಾದ ಜೀಮೇಲ್‌ ಅನ್ನು ಮತ್ತಷ್ಟು ವಿಶೇಷವಾಗಿ ನವೀಕರಿಸುತ್ತಿದೆ. ಗೂಗಲ್‌ನ ಮೆಟೀರಿಯಲ್ ಡಿಸೈನ್ 3 ಅನ್ನು ಆಧರಿಸಿದ ಹೊಸ ಜಿಮೇಲ್‌ ಸಂಪೂರ್ಣ ಭಿನ್ನ ರೂಪವನ್ನು ತಳೆದು ಬಳಕೆದಾರರ ಮುಂದೆ ಬರಲು ಸಜ್ಜಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇದೀಗ ಗೂಗಲ್‌ (Google) ತನ್ನ ಸೇವೆಯಲ್ಲಿ ಒಂದಾದ ಜೀಮೇಲ್‌ ಅನ್ನು (Gmail) ಮತ್ತಷ್ಟು ವಿಶೇಷವಾಗಿ ನವೀಕರಿಸುತ್ತಿದೆ. ಗೂಗಲ್‌ನ ಮೆಟೀರಿಯಲ್ ಡಿಸೈನ್ 3 ಅನ್ನು ಆಧರಿಸಿದ ಹೊಸ ಜಿಮೇಲ್‌ ಸಂಪೂರ್ಣ ಭಿನ್ನ ರೂಪವನ್ನು ತಳೆದು ಬಳಕೆದಾರರ ಮುಂದೆ ಬರಲು ಸಜ್ಜಾಗಿದೆ. ಇದಕ್ಕೆ ಆಧುನಿಕ ಸ್ಪರ್ಶ ನೀಡಿರುವುದರಿಂದ ಹೊಸ ವಿನ್ಯಾಸವೊಂದು ಜಗತ್ತಿಗೆ ಬರುತ್ತಿದೆ ಎಂದು ಹೇಳಬಹುದು. ಈ ದೊಡ್ಡ ತಾಂತ್ರಿಕ ವಿನ್ಯಾಸವನ್ನು (Technical design) ಆಧುನಿಕ ಬಳಕೆದಾರರಿಗೆ ಅನುಕೂಲವಾಗಲಿ ಎಂದು ಹೆಚ್ಚು ಒತ್ತು ನೀಡಿ ವಿನ್ಯಾಸಗೊಳಿಸಲಾಗಿದೆ. ಇದರ ಹೊಸ ಯುಐ, ಬಳಕೆದಾರರಿಗೆ ಅನುಗುಣವಾಗಿ ಜಿಮೇಲ್‌ ಹೆಚ್ಚು ಸುವ್ಯವಸ್ಥಿತವಾಗಿದೆ. ಇದನ್ನು ಅತ್ಯಂತ ಸುಂದರವಾಗಿ ಕಸ್ಟಮೈಸ್ ಮಾಡಲಾಗಿದೆ. ಗೂಗಲ್‌ ಆಗಾಗ ತನ್ನ ಸೇವೆಯನ್ನು ನವೀಕರಿಸುತ್ತಲೇ ಇರುತ್ತದೆ. ಆ ನವೀಕರಣದಲ್ಲಿ ಈ ಪ್ರಯೋಗ ಮತ್ತೊಂದು ಮೈಲಿಗಲ್ಲು ಎಂದು ಹೇಳಬಹುದು.

ಹೇಗಿದೆ ಜೀಮೆಲ್‌ ನ ಹೊಸ ವಿನ್ಯಾಸ:
ಗೂಗಲ್‌ ಚಾಟ್ ಅನ್ನು ಬಳಸುತ್ತಿರುವ ಎಲ್ಲಾ ಬಳಕೆದಾರರಿಗೆ ಜೀಮೆಲ್‌ ಗಾಗಿ ಹೊಸ ಬಳಕೆದಾರ ಸಂಯೋಜನೆಯನ್ನು ಹೊರತರಲು ಗೂಗಲ್‌ ಹೊಸ ವಿನ್ಯಾಸವನ್ನು ಪ್ರಾರಂಭಿಸಿದೆ. ಹೊಸ ಜೀಮೇಲ್‌ ನೋಟವು ಈ ಅಪ್ಲಿಕೇಶನ್‌ ಮೂಲಕ ಆಗಾಗ ಬಳಕೆ ಮಾಡಿದ ಅಪ್ಲಿಕೇಶನ್‌ಗಳನ್ನು ಹತ್ತಿರಕ್ಕೆ ತಂದಿದೆ. ಈ ಜೀಮೆಲ್‌ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ ಮತ್ತು ಇದು ಬಳಕೆದಾರರ ಅನುಭವವನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಿದೆ.

ಏನೆಲ್ಲಾ ಇದೆ ಈ ಹೊಸ ವಿನ್ಯಾಸದಲ್ಲಿ 
ಈ ಹೊಸ ವಿನ್ಯಾಸದಲ್ಲಿ ಗೂಗಲ್‌ನ ಮೇಲ್, ಸ್ಪೇಸ್‌ಗಳು, ಮೀಟ್ ಮತ್ತು ಚಾಟ್ ಬಟನ್‌ಗಳನ್ನು ಜೀಮೆಲ್‌ ವಿಂಡೋದ ಮೇಲಿನ ಎಡ ಮೂಲೆಯಲ್ಲಿರುವ ಒಂದು ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಈ ಎಲ್ಲ ಅಪ್ಲಿಕೇಶನ್‌ಗಳನ್ನು ಪ್ರತ್ಯೇಕವಾಗಿ ತೆರೆಯುವ ಅವಶ್ಯಕತೆ ಅಥವಾ ತೆರೆಯುವಾಗ ಎದುರಾಗುವ ತೊಂದರೆಗಳಿಂದ ದೂರ ಇರಿಸುತ್ತದೆ. ಈ ಜೀಮೆಲ್‌ ವಿನ್ಯಾಸ ಬಳಕೆದಾರರಿಗೆ ವಿವಿಧ ಗೂಗಲ್‌ ಅಪ್ಲಿಕೇಶನ್‌ಗಳ ನಡುವೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಈ ಬದಲಾವಣೆಯು ಬಳಕೆದಾರರಿಗೆ ಪೂರ್ಣ ಅಥವಾ ಪಾಪ್-ಅಪ್ ವಿಂಡೋ ಸ್ವರೂಪದಲ್ಲಿ ಚಾಟ್‌ಗಳ ಸೂಚನೆಗೆ ಪ್ರತ್ಯುತ್ತರಿಸಲು ಅನುಮತಿಸುತ್ತದೆ.

ಇದನ್ನೂ ಓದಿ:  ಬಳಕೆದಾರರ ಅಸಮಾಧಾನಕ್ಕೆ ಬಗ್ಗಿದ Instagram: ಈ ಎಲ್ಲಾ ಹೊಸ ಸೆಟ್ಟಿಂಗ್ ಗಳು ಸ್ಥಗಿತ

ಬಳಕೆದಾರರ ಹೆಸರುಗಳು ಮತ್ತು ಇಮೇಲ್ ವಿಳಾಸಗಳನ್ನು ಒಳಗೊಂಡಂತೆ ಜೀಮೆಲ್‌ ನಲ್ಲಿ ಹುಡುಕಾಟ ಸಾಮರ್ಥ್ಯಗಳು ಮತ್ತು ಸಲಹೆಗಳಿಗೆ ಟ್ವೀಕ್‌ಗಳನ್ನು ಸಹ ಮಾಡಲಾಗಿದೆ. ಅಪ್ಲಿಕೇಶನ್‌ನೊಂದಿಗಿನ ಕ್ರಿಯೆಯ ಆಧಾರದ ಮೇಲೆ ಸಲಹೆಗಳನ್ನು ಹೆಚ್ಚು ವೈಯಕ್ತೀಕರಿಸಲಾಗಿದೆ. ಅಲ್ಲದೆ, ಹುಡುಕಾಟ ವೈಶಿಷ್ಟ್ಯವನ್ನು ಉತ್ತಮಗೊಳಿಸಲು ಮತ್ತಷ್ಟು ಸಹಾಯವಾಗಲೆಂದು ಜೀಮೆಲ್‌ ಈಗ ವಿವಿಧ ಫಿಲ್ಟರ್‌ಗಳನ್ನು ಕೂಡ ಹೊಂದಿದೆ.

ಹಳೆ ವಿನ್ಯಾಸಕ್ಕೆ ಹಿಂತಿರುಗಬೇಕಾದರೆ ಕೆಲವು ಸುಲಭ ಸೂಚನೆಗಳು
ಬಳಕೆದಾರರಿಗೆ ಹೊಸ ವಿನ್ಯಾಸವು ನವೀಕರಣಗೊಳ್ಳದಿದ್ರೆ ಅವರು ಮತ್ತೆ ತಮ್ಮ ಹಳೆ ಜೀಮೆಲ್‌ ಲೇಔಟ್‌ಗೆ ಹಿಂತಿರುಗಲು ಗೂಗಲ್‌ ಬ್ಯಾಕ್‌ ಆಯ್ಕೆಯನ್ನು ನೀಡುತ್ತಿದೆ. ಆದರೆ ಹಳೆಯ ವಿನ್ಯಾಸವೇ ಬೆಸ್ಟ್‌ ಎಂದು ನೀವು ಹಳೆ ವಿನ್ಯಾಸಕ್ಕೆ ಹಿಂತಿರುಗಬೇಕಾದರೆ, ಕೆಲವು ಸುಲಭ ಸೂಚನೆಗಳನ್ನು ಅನುಸರಿಸಿ:

ಇದನ್ನೂ ಓದಿ: Gmail ಬಳಸುತ್ತಿದ್ದೀರಾ? ನಿಮ್ಮ ಹೆಸರನ್ನು ಸರಳ ರೀತಿಯಲ್ಲಿ ಬದಲಾಯಿಸಲು ಹೀಗೆ ಮಾಡಿ

  • ಜೀಮೆಲ್‌ ಅನ್ನು ಪ್ರಾರಂಭಿಸಿ ಮತ್ತು ನಂತರ ಮೇಲಿನ ಬಲಭಾಗದಲ್ಲಿ, ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ

  • ಕ್ವಿಕ್‌ ಸೆಟ್ಟಿಂಗ್‌ಗಳ ಆಯ್ಕೆಯ ಅಡಿಯಲ್ಲಿ, 'ಮೊದಲು ಬಳಸುತ್ತಿದ್ದ ಜೀಮೆಲ್‌ ವೀಕ್ಷಣೆಗೆ ಹಿಂತಿರುಗಿ' ಎಂಬ ಬಟನ್‌ ಆಯ್ಕೆ ಮಾಡಿ.

  • ಈಗ, ಹೊಸ ವಿಂಡೋದಲ್ಲಿ ಜೀಮೆಲ್‌ ಅನ್ನು ಪ್ರಾರಂಭಿಸಿ. ಆಗ ಹಳೆಯ ವಿನ್ಯಾಸದ ಜೀಮೆಲ್‌ ಮತ್ತೆ ಇನ್‌ಸ್ಟಾಲ್‌ ಆಗುವುದು.
    ಅಂತಿಮವಾಗಿ ಜೀಮೆಲ್‌ಗೆ ಮಾಡಿದ ಈ ಎಲ್ಲ ನವೀಕರಣದ ಬದಲಾವಣೆಗಳು ಗೂಗಲ್‌ ತನ್ನ ಕಾರ್ಯಸ್ಥಳ ಸೂಟ್‌ಗೆ ಅನ್ವಯಿಸುತ್ತಿರುವ ಹೊಸ ವಿಧಾನದ ಭಾಗವಾಗಿದೆ. ಈ ವಿಧಾನದ ಪ್ರಕಾರ, ಪ್ಲಾಟ್‌ಫಾರ್ಮ್ ಅನ್ನು ಹೆಚ್ಚು ಏಕೀಕರಿಸಲಾಗುತ್ತದೆ ಮತ್ತು ಅನೇಕ AI-ಚಾಲಿತ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಗೂಗಲ್‌ ಸಂಸ್ಥೆಯು ಹೇಳಿದೆ.

Published by:Ashwini Prabhu
First published: