Gmail Tricks: ಇಂಟರ್ನೆಟ್​ ಇಲ್ಲದೆಯೇ ಈಗ ಮೇಲ್​ ಶೇರ್​ ಮಾಡ್ಬಹುದು! ಹೇಗೆ ಗೊತ್ತಾ?

ಜಿಮೇಲ್​

ಜಿಮೇಲ್​

Tech Tips: ಯಾವುದೇ ಆ್ಯಪ್​ ಬಳಸಬೇಕಾದ್ರು ಇಂಟರ್ನೆಟ್​ ಬಹಳಷ್ಟು ಮುಖ್ಯ. ಆದರೆ ಈ ಈ ಜಿಮೇಲ್​ ಆ್ಯಪ್​ ಅನ್ನು ಇಂಟರ್ನೆಟ್​ ಇಲ್ಲದೆಯೂ ಬಳಕೆ ಮಾಡ್ಬಹುದು. ಹೇಗೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

  • Share this:

    ಇದು ಟೆಕ್ನಾಲಜಿ (Technology) ಯುಗ. ಎಲ್ಲವೂ ಈಗ ಡಿಜಿಟಲೀಕರಣ ಆಗುತ್ತಿದೆ. ಇದಕ್ಕಾಗಿ ಇಂಟರ್ನೆಟ್​ ಸೌಲಭ್ಯ ಬಹಳಷ್ಟು ಮುಖ್ಯವಾಗಿರುತ್ತದೆ., ಇಂಟರ್ನೆಟ್​ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸ್ಮಾರ್ಟ್​​ಫೋನ್​​ಗಳಲ್ಲಿ (Smartphones) ಹಲವಾರು ಅಪ್ಲಿಕೇಶನ್​​ಗಳಿವೆ. ಇಂದಿನ ದಿನದಲ್ಲಿ ಸ್ಮಾರ್ಟ್​​ಫೋನ್​ಗಳು ಹೇಗೆ ಅಗತ್ಯವಾಗಿದೆಯೋ, ಅದೇ ರೀತಿ ಮೊಬೈಲ್​ನಲ್ಲಿರುವ ಅಪ್ಲಿಕೇಶನ್​​ಗಳು ಸಹ ಅಗತ್ಯವಾಗಿದೆ. ಕೆಲವೊಂದು ಅಪ್ಲಿಕೇಶನ್​​ಗಳು ಇತ್ತೀಚೆಗೆ ಎಷ್ಟು ಉಪಯೋಗವಾಗಿದೆ ಎಂದರೆ ಯಾವುದೇ ಕೆಲಸವನ್ನು ಮಾಡ್ಬೇಕಂದ್ರು ಕ್ಷಣ ಮಾತ್ರದಲ್ಲಿ ಕೆಲಸ ಮಾಡಬಹುದು. ಈ ಅಪ್ಲಿಕೇಶನ್​​ಗಳಲ್ಲಿ ಜಿಮೇಲ್ (Gmail)​​ ಸಹ ಒಂದು ಅಗತ್ಯ ಅಪ್ಲಿಕೇಶನ್​. ಈ ಅಪ್ಲಿಕೇಶನ್​ ಇತ್ತೀಚೆಗೆ ಆಫೀಸ್​ ಕೆಲಸಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಯಾವುದೇ ಡಾಕ್ಯುಮೆಂಟ್​​ಗಳನ್ನು ಕಳಿಸಬೇಕಾದರು ಈ ಆ್ಯಪ್​​ ಮೂಲಕ ಕಳುಹಿಸಿದರೆ ಉತ್ತಮ.


    ಯಾವುದೇ ಆ್ಯಪ್​ ಬಳಸಬೇಕಾದ್ರು ಇಂಟರ್ನೆಟ್​ ಬಹಳಷ್ಟು ಮುಖ್ಯ. ಆದರೆ ಈ ಈ ಜಿಮೇಲ್​ ಆ್ಯಪ್​ ಅನ್ನು ಇಂಟರ್ನೆಟ್​ ಇಲ್ಲದೆಯೂ ಬಳಕೆ ಮಾಡ್ಬಹುದು. ಹೇಗೆಂದು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಇಂಟರ್ನೆಟ್​ ಇಲ್ಲದೆ ಜಿಮೇಲ್​ ಬಳಸೋದು ಹೇಗೆ?


    • ಜಿಮೇಲ್​ ಆಫ್‌ಲೈನ್​ನಲ್ಲಿ ಬಳಸಲು, ಮೊದಲು ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್​ ಕ್ರೋಮ್​​ ಅನ್ನು ಡೌನ್‌ಲೋಡ್ ಮಾಡಬೇಕು. ಜಿಮೇಲ್​ ಅನ್ನು ಆಫ್‌ಲೈನ್​​ನಲ್ಲಿ ಕ್ರೋಮ್​​ ಬ್ರೌಸರ್ ವಿಂಡೋದಲ್ಲಿ ಮಾತ್ರ ಬಳಸಬಹುದು.

    • ನಿಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕ್ರೋಮ್​ ವಿಂಡೋವನ್ನು ತೆರೆದ ನಂತರ, ನೀವು ಜಿಮೇಲ್ ಆಫ್‌ಲೈನ್ ಸೆಟ್ಟಿಂಗ್‌ಗಳಿಗೆ ಹೋಗಬೇಕು ಅಥವಾ ‘https://mail.google.com/mail/u/0/#settings/offline’ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.


    ಇದನ್ನೂ ಓದಿ: ಅಪರಿಚಿತರಿಂದ ಕಾಲ್​​ ಬರ್ತಾ ಇದ್ರೆ ಟೆನ್ಷನ್​ ಬೇಡ, ವಾಟ್ಸಾಪ್​ನಲ್ಲಿ ಬರ್ತಿದೆ ‘ಮ್ಯೂಟ್​‘ ಮಾಡೋ ಫೀಚರ್​

    • ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ. ಈ ವಿಂಡೋದಲ್ಲಿ ‘ಆಫ್‌ಲೈನ್ ಮೇಲ್ ಅನ್ನು ಸಕ್ರಿಯಗೊಳಿಸಿ’ ಎಂಬ ಆಯ್ಕೆ ಇರುತ್ತದೆ. ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

    • ಈಗ ನೀವು ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕು ಅಥವಾ ಕಸ್ಟಮೈಸ್ ಮಾಡಿ. ಇಲ್ಲಿ ನೀವು ಎಷ್ಟು ದಿನಗಳ ಮೇಲ್‌ಗಳನ್ನು ಸಿಂಕ್ ಮಾಡಲು ಬಯಸುತ್ತೀರಿ ಎಂಬುದನ್ನು ಸೆಲೆಕ್ಟ್​ ಮಾಡಬಹುದು. ಇದರಿಂದ ನೀವು ಆಫ್‌ಲೈನ್ ಮೋಡ್‌ನಲ್ಲಿಯೂ ಬರುವಂತಹ ಮೇಲ್‌ಗಳನ್ನು ಸ್ವೀಕರಿಸಬಹುದು.

    • ಈ ರೀತಿಯಲ್ಲಿ ನೀವು ಈ ಪ್ರಕ್ರಿಯೆಯ ಅಂತಿಮ ಹಂತವನ್ನು ತಲುಪಿದ್ದೀರಿ. ಈಗ ನೀವು ಮಾಡಬೇಕಾಗಿರುವುದು ‘ಸೇವ್‌ ಚೇಂಜಸ್‌’ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

    • ಈ ರೀತಿಯಾಗಿ ನೀವು ನಿಮ್ಮ ಜಿಮೇಲ್​ ಆಫ್‌ಲೈನ್ ಮೋಡ್ ಅನ್ನು ಸಕ್ರಿಯಗೊಳಿಸಿದರೆ ಅದನ್ನು ಸುಲಭವಾಗಿ ಬಳಸಲು ಸಾಧ್ಯವಾಗುತ್ತದೆ.


    ಜಿಮೇಲ್​


    ಮೊಬೈಲ್​ ಡೇಟಾ ಖಾಲಿಯಾಗದಂತೆ ಹೀಗೆ ಮಾಡಿ


    • ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು.

    • ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಅಲ್ಲಿ ಆಟೋ ಅಪ್ಡೇಟ್​ ಆನ್​ ಆಗಿದ್ದರೆ ಅದನ್ನು ಮೊದಲಿಗೆ ಆಫ್​ ಮಾಡ್ಬೇಕು.

    • ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ಆಟೋ ಅಪ್ಡೇಟ್​ ಆಪ್ಷನ್​ ಅನ್ನು ಸೆಲೆಕ್ಟ್​ ಮಾಡ್ಬಹುದು. ಆದರೆ ಇದು ಡೇಟಾವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ಆಫ್​ ಮಾಡಿದರೆ ಒಳ್ಳೆಯದು.

    • ಕೆಲವೊಂದು ಅಪ್ಲಿಕೇಶನ್​ಗಳು ಆಗಾಗ ಅಪ್ಡೇಟ್​ ಆಗುತ್ತಿರುತ್ತದೆ.




    ಮೊಬೈಲ್ ಡೇಟಾ​  ಮುಗಿಯದಂತೆ ಇನ್ನೂ ಹಲವಾರು ಟಿಪ್ಸ್​ಗಳಿವೆ:


    • ನೀವು ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಈ ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಕಡಿಮೆ ಡೇಟಾವನ್ನು ಬಳಸುತ್ತವೆ. ಇದರಿಂದ ನಿಮ್ಮ ಡೇಟಾವನ್ನು ಉಳಿಸಬಹುದು.

    • ಡೇಟಾ ಸೇವರ್ ಮೋಡ್ ಸಹ ನಿಮ್ಮ ಡೇಟಾವನ್ನು ಉಳಿಸಲು ಉತ್ತಮ ಆಯ್ಕೆಯಾಗಿದೆ. ಡೇಟಾ ಬಳಕೆಯನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು