Smartphone: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ಪ್ರಥಮ ಸ್ಥಾನ! ಹಾಗಿದ್ರೆ ಎರಡನೇ ಸ್ಥಾನ?

Samsung SmartPhone: 2021ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ಯಾಮ್‌ಸಂಗ್‌ ಮತ್ತು ಆ್ಯಪಲ್‌ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕ್ರಮವಾಗಿ ಎರಡು ಹಾಗೂ ಮೂರು ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್ (Covid) ನಂತರದ ಪರಿಣಾಮವೇನೋ ಗೊತ್ತಿಲ್ಲ, ಜಾಗತಿಕ ವಲಯದಲ್ಲಿ ಮಾರುಕಟ್ಟೆ ಅದರಲ್ಲೂ ವಿಶೇಷವಾಗಿ ಸ್ಮಾರ್ಟ್‌ಫೋನ್ (Smartphone) ಕ್ಷೇತ್ರದಲ್ಲಿ ಸ್ಥಿತಿಗತಿಗಳು ವ್ಯಾಪಾರಕ್ಕೆ ಅಷ್ಟೊಂದು ಸೂಕ್ತವಾಗಿಲ್ಲದೆ ಇರುವುದು ಹಾಗೂ ವರ್ಷಾರಂಭದಲ್ಲಿ ಕಂಡುಬಂದಿರುವ ನಿಧಾನ ಗತಿಯಲ್ಲಿ ಸಾಗಿದ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯ ಒಟ್ಟಾರೆ ಪರಿಣಾಮದಿಂದಾಗಿ 2022ರ ಮೊದಲ ತ್ರೈಮಾಸಿಕದಲ್ಲಿ (Quarter) ಸ್ಮಾರ್ಟ್‌ಫೋನ್ ಸಾಗಣೆ (Smartphone shipping) ಪ್ರಕ್ರಿಯೆಯಲ್ಲಿ 11% ರಷ್ಟು ಕುಸಿತ ಕಂಡುಬಂದಿರುವುದಾಗಿ ವರದಿಯೊಂದು ಹೇಳಿದೆ. 

  ಮಾರುಕಟ್ಟೆ ಸಂಶೋಧನೆ ನಡೆಸುವ ಕ್ಯಾನಾಲಿಸ್ ಎಂಬ ಸಂಶೋಧನಾ ಸಂಸ್ಥೆಯು ತನ್ನ ವರದಿಯೊಂದು ಪ್ರಕಟಿಸಿದ್ದು ಅದರಲ್ಲಿ ಸ್ಮಾರ್ಟ್‌ಫೋನ್ ಶಿಪ್ಮೆಂಟ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕುಸಿತ ಕಂಡುಬಂದಿದ್ದರೂ ಸ್ಯಾಮ್‌ಸಂಗ್‌ ಒಟ್ಟಾರೆ ಮಾರುಕಟ್ಟೆಯಲ್ಲಿ ತನ್ನ ಪಾಲು 24% ಇರಿಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ತದನಂತರದ ಸ್ಥಾನ ಆ್ಯಪಲ್ ಸಂಸ್ಥೆ ಪಡೆದುಕೊಂಡಿದ್ದು ಜಾಗತಿಕ ಮಟ್ಟದಲ್ಲಿ 18% ರಷ್ಟು ಪಾಲನ್ನು ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

  2021ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಸ್ಯಾಮ್‌ಸಂಗ್‌ ಮತ್ತು ಆ್ಯಪಲ್‌ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕ್ರಮವಾಗಿ ಎರಡು ಹಾಗೂ ಮೂರು ಪ್ರತಿಶತದಷ್ಟು ಹೆಚ್ಚಳವನ್ನು ದಾಖಲಿಸಿರುವುದಾಗಿ ವರದಿಯಿಂದ ತಿಳಿದುಬಂದಿದೆ. ಆ್ಯಪಲ್‌ ಸಂಸ್ಥೆ ದಾಖಲಿಸಿರುವ ತನ್ನ ಹೆಚ್ಚಳಕ್ಕೆ ಪ್ರಮುಖ ಕಾರಣ ಅದರ ಪ್ರತಿಷ್ಠಿತ ಐಫೋನ್ 13 ಫೋನಿಗೆ ಹೆಚ್ಚಿರುವ ಬೇಡಿಕೆಯೇ ಎನ್ನಲಾಗಿದೆ. ಸ್ಯಾಮ್‌ಸಂಗ್‌ ಹಾಗೂ ಆ್ಯಪಲ್‌ ನಂತರದ ಸ್ಥಾನ ಶಿಯೋಮಿ ಸಂಸ್ಥೆ ಪಡೆದುಕೊಂಡಿದ್ದು ಜಾಗತಿಕ ಮಟ್ಟದಲ್ಲಿ ಶೇ. 13 ರಷ್ಟು ಮಾರುಕಟ್ಟೆ ಪಾಲನ್ನು ದಾಖಲಿಸಿದೆ ಎನ್ನಲಾಗಿದೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಶಿಯೋಮಿ ಈ ವರ್ಷ ಒಂದು ಪ್ರತಿಶತದಷ್ಟು ಕುಸಿತ ಕಂಡಿದೆ ಎಂದು ವರದಿ ಹೇಳಿದೆ.

  ಇದೇ ರೀತಿ ಒಪ್ಪೋ ಸಹ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒನ್‍ಪ್ಲಸ್ ಬ್ರ್ಯಾಂಡ್ ಹೊರತಾಗಿಯೂ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 10% ರಷ್ಟು ಪಾಲು ದಾಖಲಿಸಿದ್ದು ಹಿಂದಿನ ವರ್ಷದ ಮೊದಲ ತ್ರೈಮಾಸಿಕ ವರದಿಗೆ ಹೋಲಿಸಿದರೆ ಇದೂ ಸಹ ಶೇ. ಒಂದರಷ್ಟು ಕುಸಿತ ಕಂಡಿದೆ. ವಿವೋ ಸಂಸ್ಥೆ ಐದನೇ ಸ್ಥಾನ ಪಡೆದುಕೊಂಡಿದ್ದು ಸ್ಮಾರ್ಟ್‌ಫೋನ್ ಮಾರುಕಟ್ಟೆ ಕ್ಷೇತ್ರದಲ್ಲಿ ಶೇ. ಎಂಟರಷ್ಟು ಪಾಲನ್ನು ದಾಖಲಿಸಿದ್ದು ಇದೇ ಪರಿಮಾಣ ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. ಹತ್ತರಷ್ಟಿತ್ತು ಎಂದು ಹೇಳಲಾಗಿದೆ.

  ಪ್ರಸ್ತುತ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಅನಿಶ್ಚಿತತೆಯ ಹೊರತಾಗಿಯೂ, ಪ್ರಮುಖ ಸ್ಮಾರ್ಟ್‌ಫೋನ್ ಸಂಸ್ಥೆಗಳು 2022ಕ್ಕೆ ಸಾಧನಗಳ ಪೋರ್ಟ್‌ಫೋಲಿಯೋಗಳನ್ನು ವಿಸ್ತರಿಸುವ ಮೂಲಕ ತಮ್ಮ ಬೆಳವಣಿಗೆಯನ್ನು ವೇಗಗೊಳಿಸಿದ್ದಾರೆ” ಎಂದು ಕೆನಾಲಿಸ್ ಸಂಸ್ಥೆಯ ವಿಶ್ಲೇಷಕ ಸನ್ಯಮ್ ಚೌರಾಸಿಯಾ ಹೇಳಿದ್ದಾರೆ.

  ಇದನ್ನೂ ಓದಿ: Jio Fiberನಿಂದ ಉಚಿತ ಸೆಟ್-ಟಾಪ್ ಬಾಕ್ಸ್, ರೂಟರ್ ಹಾಗೂ ಇನ್ಸ್ಟಾಲೇಷನ್: ಇಂಥಾ ಆಫರ್​ ಮತ್ತೆಂದೂ ಸಿಗದು

  ಅವರು ಹೇಳಿರುವಂತೆ “ಐಫೋನ್ 13 ಸರಣಿಯು ಈಗಲೂ ಗ್ರಾಹಕರ ನೆಚ್ಚಿನ ಬೇಡಿಕೆಯಾಗಿ ಮುಂದುವರೆಯುತ್ತಿದ್ದರೆ, ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ಹೊಸ ಐಫೋನ್ ಎಸ್‌ಇ ಫೋನ್ ಆ್ಯಪಲ್‌ ಸಂಸ್ಥೆಯಲ್ಲಿ ಪ್ರಮುಖ ಮಧ್ಯಮ ಶ್ರೇಣಿಯ ವಿಭಾಗದಡಿಯಲ್ಲಿ ಮುನ್ನುಗ್ಗುತ್ತಿದೆ ಎನ್ನಲಾಗಿದೆ. ಇದಕ್ಕೆ ಒಂದು ಬಲವಾದ ಕಾರಣವೆಂದರೆ ಈ ಡಿವೈಸ್ ಅದರ ಹಿಂದಿನ ಶ್ರೇಣಿಯಲ್ಲಿ ಬಿಡುಗಡೆಗೊಂಡಿದ್ದ ಡಿವೈಸ್ ಬೆಲೆಗೆ ಸಮಾನವಾಗಿದೆ. ಹಾಗೂ, ನವೀಕರಿಸಿದ ಚಿಪ್‌ಸೆಟ್ ಮತ್ತು ಸುಧಾರಿತ ಬ್ಯಾಟರಿ ಕಾರ್ಯಕ್ಷಮತೆಯನ್ನು ನೀಡುತ್ತಿರುವುದು ಮತ್ತು ಬಹು ಬೇಡಿಕೆಯಿರುವ 5G ಸಂಪರ್ಕ ಸೌಲಭ್ಯ ಒಳಗೊಂಡಿರುವುದೇ ಆಗಿದೆ.

  ಇದನ್ನೂ ಓದಿ: Maruti Suzuki Cars: ಭಾರತದಲ್ಲಿ ಮುಂಬರುವ ಟಾಪ್ 5 ಮಾರುತಿ ಸುಜುಕಿ ಕಾರುಗಳ ವಿವರ ಹೀಗಿದೆ

  ಇನ್ನು ಇದೇ ಸಮಯದಲ್ಲಿ, ಸ್ಯಾಮ್‌ಸಂಗ್ ಸಹ ತನ್ನ ವ್ಯಾಪಾರ ಕ್ಷೇತ್ರವನ್ನು ವೇಗವಾಗಿ ವೃದ್ಧಿಸಲು ನಿರ್ಧರಿಸಿದ್ದು ತನ್ನ ಪ್ರಮುಖ ಗ್ಯಾಲಕ್ಸಿ S22 ಸರಣಿಯನ್ನು ಒಳಗೊಂಡಂತೆ 2022ರ ಪೋರ್ಟ್‌ಫೋಲಿಯೋವನ್ನು ಮತ್ತೆ ರಿಫ್ರೆಶ್ ಮಾಡುವುದರ ಜೊತೆಗೆ ಮಧ್ಯಮ ಮಟ್ಟದಿಂದ ಕಡಿಮೆ-ಮಟ್ಟದ ವಿಭಾಗದಲ್ಲಿಯೂ ಸಹ ತೀವ್ರವಾಗಿ ಸ್ಪರ್ಧಿಸಲು ತನ್ನ ಜನಪ್ರಿಯ ಎ ಸರಣಿಯ ಉತ್ಪಾದನೆಯನ್ನು ಹೆಚ್ಚಿಸಿದೆ ಎನ್ನಲಾಗಿದೆ. ಈ ಮಧ್ಯೆ ಚೀನೀ ಸಂಸ್ಥೆಗಳು ಈಗಲೂ ಕೆಳ ಸ್ತರದಲ್ಲಿ ಪೂರೈಕೆ ನಿರ್ಬಂಧಗಳನ್ನು ಅನುಭವಿಸುತ್ತಿದ್ದು, ಅವುಗಳ ಜಾಗತಿಕ ವಿಸ್ತರಣೆಯ ಯೋಜನೆಯು ತಮ್ಮ ನೆಲದ ಮಾರುಕಟ್ಟೆಯಲ್ಲೇ ಕಂಡುಬರುತ್ತಿರುವ ನಿಧಾನಗತಿಯಿಂದಾಗಿ ಕುಂಠಿತವಾಗುತ್ತಿದೆ.
  Published by:Harshith AS
  First published: