ಮಾರುಕಟ್ಟೆ ಪ್ರವೇಶಿಸಿದ Gionee Max Pro ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​; 6 ಸಾವಿರ mAh ಬ್ಯಾಟರಿ, ಡುಯೆಲ್​ ಕ್ಯಾಮೆರಾ ಇದರ ಪ್ರಮುಖ ಹೈಲೈಟ್ಸ್​

Gionee Max Pro ಸ್ಮಾರ್ಟ್​ಫೊನ್​ ಡುಯೆಲ್​ ಸಿಮ್​ ಹೊಂದಿದ್ದು, ಆ್ಯಂಡ್ರಾಯ್ಡ್​ 10ನಿಂದ ಬೆಂಬಲವನ್ನು ಪಡೆದಿದೆ. ಒಕ್ಟಾಕೋರ್​ ಯನಿಸಾಕ್​​ 9863ಎ Socಯಿಂದ ಕಾರ್ಯನಿರ್ವಹಿಸುತ್ತದೆ. ಅಂತೆಯೇ 3GB RAM ಮತ್ತು 32GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

Gionee Max Pro

Gionee Max Pro

 • Share this:
  Gionee Max Pro ಸ್ಮಾರ್ಟ್​ಫೋನ್​ ದೇಶಿಯ ಮಾರುಕಟ್ಟೆಗೆ ಕಾಲಿರಿಸಿದೆ. ನೂತನ ಸ್ಮಾರ್ಟ್​ಫೋನ್​ 6.52 ಇಂಚಿನ ಡಿಸ್​ಪ್ಲೇ ಹೊಂದಿದ್ದು,  ಅಧಿಕ RAM ಮತ್ತು ಸ್ಟೊರೇಜ್​ ಆಯ್ಕೆಯಲ್ಲಿ ಹೊರಹೊಮ್ಮಿದೆ. ಅಂದಹಾಗೆಯೇ ದೀರ್ಘ ಕಾಲದ ಬಾಳಿಕೆಗಾಗಿ ಅಧಿಕ ಬ್ಯಾಟರಿಯನ್ನು ಪರಿಚಯಿಸಿದೆ. ಈ ನೂತನ  Gionee Max Pro ಸ್ಮಾರ್ಟ್​ಫೋನ್​ ಏನೆಲ್ಲಾ ವಿಶೇಷೆಯನ್ನು ಒಳಗೊಂಡಿದೆ ತಿಳಿಯೋಣ.

  Gionee Max Pro ಸ್ಮಾರ್ಟ್​ಫೊನ್​ ಡುಯೆಲ್​ ಸಿಮ್​ ಹೊಂದಿದ್ದು, ಆ್ಯಂಡ್ರಾಯ್ಡ್​ 10ನಿಂದ ಬೆಂಬಲವನ್ನು ಪಡೆದಿದೆ. ಒಕ್ಟಾಕೋರ್​ ಯನಿಸಾಕ್​​ 9863ಎ Socಯಿಂದ ಕಾರ್ಯನಿರ್ವಹಿಸುತ್ತದೆ. ಅಂತೆಯೇ 3GB RAM ಮತ್ತು 32GB ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

  ಇನ್ನು ನೂತನ ಸ್ಮಾಟ್​ಫೋನ್​ಡುಯೆಲ್​​​ ರಿಯಲ್​ camera ಸೆಟಪ್​ ಹೊಂದಿದ್ದು, 13 ಮೆಗಾಫಿಕ್ಸಲ್​​ ಮತ್ತು 2 ಮೆಗಾಫಿಕ್ಸೆಲ್​​ ಸೆಕೆಂಡರಿ ಸೆನ್ಸಾರ್​​ ಜೊತೆಗೆ ಬೋಕೆಶ್​ ಲೆನ್ಸ್​ ಅಳವಡಿಸಲಾಗಿದೆ. ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್​​ ಸೆನ್ಸಾರ್​ ನೀಡಲಾಗಿದೆ.

  Gionee Max Pro ಸ್ಮಾರ್ಟ್​ಫೋನ್​ನಲ್ಲಿ ಧೀರ್ಘ ಕಾಲದ ಬಾಳಿಕೆಗಾಗಿ 6 ಸಾವಿರ mAh​ ಬ್ಯಾಟರಿ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಸ್ಮಾರ್ಟ್​ಫೋನಿನಲ್ಲಿ 4G ಲೈಟ್​, Wi-Fi, ಬ್ಲೂಟೂತ್​ 4.2, ಜಿಪಿಎಸ್​, 3.5 ಹೆಡ್​ಫೋನ್​, ಮೈಕ್ರೊ USB ಚಾರ್ಜರ್​ ನೀಡಲಾಗಿದೆ.

  ಬೆಲೆ: ಸದ್ಯ Gionee Max Pro ಸ್ಮಾರ್ಟ್​ಫೋನ್​ ಫ್ಲಿಪ್​ಕಾರ್ಟ್​ನಲ್ಲಿ ಬಿಡುಗಡೆಯಾಗಿದೆ. ಮಾರ್ಚ್​ 8 ರಿಂದ ಖರೀದಿಗೆ ಸಿಗಲಿದೆ. ಈ ಸ್ಮಾರ್ಟ್​ಫೋನ್​ ಬೆಲೆ 6,999 ರೂ ಆಗಿದ್ದು, ನೀಲಿ, ಕಪ್ಪು ಮತ್ತು ಕೆ.ಪು ಬಣ್ಣದಲ್ಲಿ ಖರೀದಿಗೆ ಸಿಗಲಿದೆ.
  Published by:Harshith AS
  First published: