Valentines Day 2023: ವ್ಯಾಲೆಂಟೈನ್ಸ್ ದಿನದಂದು ನಿಮ್ಮ ಸಂಗಾತಿಗೆ ಈ ಡಿವೈಸ್​ಗಳನ್ನು ಗಿಫ್ಟ್ ಮಾಡಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವ್ಯಾಲೆಂಟೈನ್ಸ್​ ದಿನದ ಆಚರಣೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಷಣಗಣನೆ ಆರಂಭವಾಗುತ್ತದೆ. ಈಗಾಗಲೇ ಕೆಲವರು ಪ್ರೇಮ ನಿವೇದನೆ ಮಾಡಲು ಗಿಫ್ಟ್​ಗಳನ್ನು ಖರೀದಿಸಿದ್ದು, ಇನ್ನೂ ಕೆಲವೂ ಯೋಚನೇ ಮಾಡ್ತಾನೇ ಇದ್ದಾರೆ, ಹಾಗಿದ್ರೆ ನಿಮ್ಮ ಸಂಗಾತಿಗೆ ಪ್ರೇಮಿಗಳ ದಿನದ ಪ್ರಯುಕ್ತ ನೀಡಬಹುದಾದ ಉತ್ತಮ ಉಡುಗೊರೆಗಳ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

    ಇನ್ನೇನು ಕೆಲವೇ ದಿನಘಲ್ಲಿ ಪ್ರೇಮಿಗಳ ದಿನಾಚರಣೆ (Valentine's Day) ಬರುತ್ತದೆ. ಈ ಸಂದರ್ಭದಲ್ಲಿ ಅನೇಕರು ತನ್ನ ಸಂಗಾತಿಗೆ ಯಾವ ರೀತಿ ತನ್ನ ಪ್ರೀತಿಯನ್ನು ಹೇಳೋದು ಎಂಬುದನ್ನು ಯೋಚಿಸ್ತಾ ಇರ್ತಾರೆ. ಅದರಲ್ಲೂ ಇನ್ನೂ ಕೆಲವರು ಈಗಾಗಲೇ ಗಿಫ್ಟ್​ಗಳನ್ನು ಖರೀದಿಸಿ ಉಡುಗೊರೆಗಳನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇನ್ನು ಪ್ರಿತಿ ಮಾಡಿ ಹೊಸದಾಗಿ ಮದುವೆಯಾದ ದಂಪತಿಗಳು ಸಹ ತಮ್ಮ ತಮ್ಮ ಸಂಗಾತಿಗೆ ಗಿಫ್ಟ್ (Gift)​ ನೀಡುತ್ತಾರೆ. ಇವೆಲ್ಲಾ ಪ್ರಕ್ರಿಯೆಗಳು ಪ್ರತಿ ವರ್ಷವೂ ವ್ಯಾಲೆಂಟೈನ್ಸ್​ ಡೇ ಬಂತೆಂದರೆ ಸಾಕು ನಡೆಯುತ್ತಿರುತ್ತದೆ. ಆದರೆ ಟೆಕ್​ ಡಿವೈಸ್​ಗಳನ್ನೂ (Tech Device) ಈಗ ವ್ಯಾಲೆಂಟೈನ್ಸ್​​ ದಿನದಂದು ತನ್ನ ಸಂಗಾತಿಗೆ ಗಿಫ್ಟ್​ ಆಗಿ ನೀಡ್ಬಹುದು.


    ವ್ಯಾಲೆಂಟೈನ್ಸ್​ ದಿನದ ಆಚರಣೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಷಣಗಣನೆ ಆರಂಭವಾಗುತ್ತದೆ. ಈಗಾಗಲೇ ಕೆಲವರು ಪ್ರೇಮ ನಿವೇದನೆ ಮಾಡಲು ಗಿಫ್ಟ್​ಗಳನ್ನು ಖರೀದಿಸಿದ್ದು, ಇನ್ನೂ ಕೆಲವೂ ಯೋಚನೇ ಮಾಡ್ತಾನೇ ಇದ್ದಾರೆ, ಹಾಗಿದ್ರೆ ನಿಮ್ಮ ಸಂಗಾತಿಗೆ ಪ್ರೇಮಿಗಳ ದಿನದ ಪ್ರಯುಕ್ತ ನೀಡಬಹುದಾದ ಉತ್ತಮ ಉಡುಗೊರೆಗಳ ಮಾಹಿತಿ ಇಲ್ಲಿದೆ.


    ಫೈರ್​ಬೋಲ್ಟ್​ ನಿಂಜಾ 3 ಸ್ಮಾರ್ಟ್​​​ವಾಚ್​


    ಸ್ಮಾರ್ಟ್​ವಾಚ್​ಗಳು ಇತ್ತೀಚೆಗೆ ಮಾರಾಟ ಪ್ರಕ್ರಿಯೆಯಲ್ಲಿ ಭಾರೀ ಮುನ್ನಡೆಯಲ್ಲಿದೆ. ಈ ಡಿವೈಸ್​ ಅನ್ನು ಪ್ರೇಮಿಗಳ ದಿನ ಮಾತ್ರವಲ್ಲದೆ, ಯಾವುದೇ ಸಂದರ್ಭಗಳಲ್ಲು ಜನರು ಉಡುಗೊರೆಯಾಗಿ ನೀಡುತ್ತಿದ್ದಾರೆ. ಆದರೂ ಈ ಬಾರಿಯ ಪ್ರೇಮಿಗಳ ದಿನದಂದು ತನ್ನ ಸಂಗಾತಿಗೆ ಸ್ಮಾರ್ಟ್​​ವಾಚ್ ಅನ್ನೇ ಗಿಫ್ಟ್​ ಆಗಿ ನೀಡಬೇಕೆಂದುಕೊಂಡಿದ್ದರೆ, ಫೈರ್​​ಬೋಲ್ಟ್​ ನಿಂಜಾ 3 ಸ್ಮಾರ್ಟ್​​ವಾಚ್​ ಉತ್ತಮ ಆಯ್ಕೆಯಾಗಿದೆ.


    ಇದನ್ನೂ ಓದಿ: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​22 ಮತ್ತು ಗ್ಯಾಲಕ್ಸಿ 23 ಸ್ಮಾರ್ಟ್​​​ಫೋನ್​​ಗಳಲ್ಲಿ ಬೆಸ್ಟ್​ ಯಾವುದು?


    ಈ ಮೂಲಕ ನಿಮ್ಮ ಪ್ರೀತಿ ಪಾತ್ರರನ್ನು ಖುಷಿ ಪಡಿಸಬಹುದು. ಫೈರ್​ಬೋಲ್ಟ್​ ನಿಂಜಾ 3 ಸ್ಮಾರ್ಟ್​​ವಾಚ್​ ಆರೋಗ್ಯ ಸಂಬಂಧಿ ಮಾಹಿತಿ ನೀಡುವ ಫೀಚರ್​ ಅನ್ನು ಹೊಂದಿದೆ. ಹೀಗೆ ಹಲವಾರು ವಿಶೇಷ ಫೀಚರ್ಸ್​ಗಳನ್ನು ಇದು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಕೇವಲ 1,299 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.


    ಲೆನೋವೋ ಟ್ಯಾಬ್​


    ಲೆನೋವೋ ಟ್ಯಾಬ್‌ ನಿಮ್ಮ ಗೆಳೆಯ ಅಥವಾ ಗೆಳತಿಗೆ ಖಂಡಿತಾ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ನಿಮ್ಮ ಸಂಗಾತಿ ಹೆಚ್ಚು ಓದುವವರಾಗಿದ್ದರೆ, ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ ಹಾಗೂ ಟ್ರಾವೆಲ್‌ ಸಮಯದಲ್ಲಿ ಹೆಚ್ಚಾಗಿ ಸಂಗೀತ ಅಥವಾ ಮನರಂಜನೆಯನ್ನು ಇಷ್ಟಪಟ್ಟರೆ ಖಂಡಿತಾ ಈ ಉಡುಗೊರೆ ಇಷ್ಟವಾಗುತ್ತದೆ.


    ಸಾಂಕೇತಿಕ ಚಿತ್ರ


    ಈ ಟ್ಯಾಬ್‌ ಆಕ್ಟಿವ್‌ ಪೆನ್‌ನೊಂದಿಗೆ ಪ್ಯಾಕ್‌ ಆಗಿದ್ದು, 10.3 ಇಂಚಿನ ಡಿಸ್‌ಪ್ಲೇ ಹೊಂದಿದೆ ಇನ್ನು ಈ ಡಿವೈಸ್‌ ಅನ್ನು 18,999 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಗಮನಿಸಬೇಕಾದ ವಿಷಯ ಎಂದರೆ ಕೇವಲ ಲೆನೋವೋ ಟ್ಯಾಬ್‌ ಮಾತ್ರವಲ್ಲದೆ ಇತರೆ ಹಲವಾರು ಕಂಪೆನಿಯ ಟ್ಯಾಬ್‌ಗಳು ಸಹ ಮಾರುಕಟ್ಟೆಯಲ್ಲಿದ್ದು, ನಿಮ್ಮ ಬಜೆಟ್‌ಗೆ ತಕ್ಕ ಡಿವೈಸ್‌ ಅನ್ನು ಖರೀದಿ ಮಾಡಬಹುದು.


    ಬೋಟ್​​ ರಾಕರ್ಸ್​ 450 ಹೆಡ್​ಫೋನ್ಸ್​


    ಬೋಟ್‌ನ ಹೆಡ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಇದರ ನಡುವೆ ನೀವು ಪ್ರೇಮಿಗಳ ದಿನದಂದು ಉಡುಗೊರೆಯಾಗಿ ಈ ಬೋಟ್ ರಾಕರ್ಸ್​​ 450 ಹೆಡ್‌ಫೋನ್ಸ್‌ ಅನ್ನು ನೀಡುವುದರಿಂದ ನಿಮ್ಮ ಪ್ರೀತಿ ಪಾತ್ರರು ಖಂಡಿತಾ ನಿಮ್ಮನ್ನು ಇನ್ನಷ್ಟು ಪ್ರೀತಿ ಮಾಡಲು ಮುಂದಾಗುತ್ತಾರೆ. ನಿಮ್ಮ ಪ್ರೀತಿ ಪಾತ್ರರು ಹೆಚ್ಚು ಸಂಗೀತ ಪ್ರಿಯರಾಗಿದ್ದರೆ ಈ ಡಿವೈಸ್‌ ಅನ್ನು ನೀಡಬಹುದಾಗಿದೆ. ಹಾಗೆಯೇ ಇದನ್ನು ನೀವು ಕೇವಲ 1,399 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.




    ಪ್ರೊಕಸ್​ ಒನ್​ ವರ್ಚುವಲ್​ ರಿಯಾಲಿಟಿ ಹೆಡ್​ಸೆಡ್​


    ಪ್ರೊಕಸ್‌ಒನ್ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಯಾರಿಗಾದರೂ ಉಡುಗೊರೆ ಮಾಡಬೇಕೆಂದುಕೊಂಡವರಿಗೆ ಉತ್ತಮ ಆಯ್ಕೆಯಾಗಿದೆ. ನಿಮ್ಮ ಪ್ರೀತಿ ಪಾತ್ರರು ಹೆಚ್ಚಾಗಿ ಮೊಬೈಲ್‌ನಲ್ಲಿ ಗೇಮ್‌ ಆಡುವ ಅಭ್ಯಾಸ ಹೊಂದಿದ್ದರೆ ಈ ಡಿವೈಸ್‌ ಅನ್ನು ಉಡುಗೊರೆಯಾಗಿ ನೀಡಬಹುದು.ಇದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಎರಡರಲ್ಲೂ ಬೆಂಬಲವನ್ನು ನೀಡಲಿದ್ದು, ಕೇಳುಗರಿಗೆ 40MM ಲೆನ್ಸ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಈ ಪ್ರೊಕಸ್ ವರ್ಚುವಲ್ ರಿಯಾಲಿಟಿ ಡಿವೈಸ್‌ಗೆ ಇಕಾಮರ್ಸ್​ ತಾಣಗಳಲ್ಲಿ 1,999 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು