ಎರಡು ತಿಂಗಳು ಉಚಿತ ಪೋಸ್ಟ್​ಪೇಯ್ಡ್​ ಸೇವೆಗೆ ಮುಂದಾದ ಜಿಯೊ!


Updated:August 20, 2018, 3:46 PM IST
ಎರಡು ತಿಂಗಳು ಉಚಿತ ಪೋಸ್ಟ್​ಪೇಯ್ಡ್​ ಸೇವೆಗೆ ಮುಂದಾದ ಜಿಯೊ!
ರಿಲಾಯನ್ಸ್ ಜಿಯೋ
  • Share this:
ರಿಲಯನ್ಸ್​ ಜಿಯೋ ತನ್ನ ನೂತನ ಪೋಸ್ಟ್​ಪೇಯ್ಡ್​ ಸರ್ವಿಸ್​ಗಾಗಿ ಐಸಿಐಸಿಐ ಬ್ಯಾಂಕ್​​ನೊಂದಿದೆ ಒಪ್ಪಂದ ಮಾಡಿಕೊಂಡಿದ್ದು, ಪೋಸ್ಟ್​ಪೇಯ್ಡ್​ ಗ್ರಾಹಕರಿಗೆ ಎರಡು ತಿಂಗಳ ಕಾಲ ಉಚಿತ ಸೇವೆಯನ್ನು ನೀಡಲು ತೀರ್ಮಾನಿಸಿದೆ.

ಐಸಿಐಸಿಐ ಬ್ಯಾಂಕ್​ನೊಂದಿಗಿನ ಒಪ್ಪಂದದ ಪ್ರಕಾರ ಈ ಆಫರ್​ ಕೇವಲ ಕ್ರೆಡಿಟ್​ ಕಾರ್ಡ್​ ಬಳಕೇದಾರರಿಗೆ ಮಾತ್ರಾ ಉಪಯೋಗ ಆಗುತ್ತದೆ. ಆಫರ್​ ಕುರಿತು ಹೇಳುವುದಾದರೆ, ಮೊದಲ ಆರು ತಿಂಗಳ ರಿಚಾರ್ಜ್​ ಮಾಡಿಕೊಂಡರೆ ಏಳನೇ ತಿಂಗಳಿನ ಬಿಲ್​ಗೆ ಯಾವುದೇ ಮೊತ್ತ ಪಾವತಿಸುವ ಅಗತ್ಯ ಇರುವುದಿಲ್ಲ. ಒಂದು ವೇಳೆ ನೀವು 12 ತಿಂಗಳ ರಿಚಾರ್ಜ್​ ಮಾಡಿದರೆ ಜಿಯೊ ಮತ್ತು ಐಸಿಐಸಿಐ ಬ್ಯಾಂಕ್​ ಎರಡು ತಿಂಗಳ ಬಿಲ್​ನ್ನು ನಿಮ್ಮ ಕ್ರೆಡಿಟ್​ ಕಾರ್ಡ್​ಗೆ ಮರು ಪಾವತಿ ಮಾಡುತ್ತಾರೆ.

ಈ ಆಫರ್​ನ್ನು ನೀವು ಪಡೆಯಬೇಕಾದರೆ ನೀವು “My Jio app” ಡೌನ್​ಲೋಡ್​ ಮಾಡಿಕೊಳ್ಳಬೇಕು, ಬಳಿಕ ” JioPay” ಎಂಬ ಆಯ್ಕೆಯ ಮೂಲಕ ನಿಮ್ಮ ಕ್ರೆಡಿಟ್​ ಕಾರ್ಡ್​ ಮೂಲಕ ನಿರಂತರವಾಗಿ ಪಾವತಿಯಾಗುವಂತೆ “Jio Auto Pay” ಆಯ್ಕೆಯನ್ನು ಉಪಯೋಗಿಸಿ. ಈ ಆಫರ್​ ಪಡೆಯಲು 199 ರೂ. ಅಧಿಕ ಪಾವತಿಸಬೇಕು.

ಇನ್ನು ಈ ಆಫರ್​ನಲ್ಲಿ ಜಿಯೋ ಟಿವಿ, ಜಿಯೋ ಮ್ಯೂಸಿಕ್​, ಜಿಯೊ ಪೇ, ಮುಂತಾದ ಸೇವೆಗಳಿಗೆ ಉಚಿತ ಅವಕಾಶ ನೀಡಲಾಗಿದೆ.
First published: August 20, 2018, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading