ಸ್ಮಾರ್ಟ್ಫೋನ್ಗಳು (Smartphone) ಇಂದಿನ ದಿನದಲ್ಲಿ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಹೊಸ ಹೊಸ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದಂತೆ ಗ್ರಾಹಕರು ಸಹ ಅದಕ್ಕೆ ಬೇಗನೆ ಆಕರ್ಷಿತರಾಗುತ್ತಾರೆ. ಮೊಬೈಲ್ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಏನೇ ಕೆಲಸ ಮಾಡಬೇಕಾದ್ರು ಇಂದಿನ ದಿನದಲ್ಲಿ ಮೊಬೈಲ್ ಬೇಕೇ ಬೇಕು. ಹಾಗಿರುವಾಗ ಸ್ಮಾರ್ಟ್ಫೋನ್ಗಳು ಇದ್ದಾಗ ಯಾವುದೇ ಕೆಲಸಗಳನ್ನು ಧೈರ್ಯದಿಂದ ಮಾಡ್ಬಹುದು ಎಂಬ ನಂಬಿಕೆಯಿರುತ್ತದೆ. ಇನ್ನು ಕೆಲವೊಂದು ಬಾರಿ ಇ-ಕಾಮರ್ಸ್ ಕಂಪೆನಿಗಳು (E-Commerse Company), ಸೋಶಿಯಲ್ ಮೀಡಿಯಾಗಳು ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಆಫರ್ಸ್ ಅನ್ನು ಘೋಷಿಸುತ್ತದೆ. ಆದರೆ ಇಲ್ಲೊಂದು ಜನಪ್ರಿಯ ಆನ್ಲೈನ್ ಬ್ಯಾಂಕ್ ಸರ್ವೀಸ್ (Paytm) ಮಾಡೋ ಕಂಪೆನಿ ಎರಡು ಪ್ರೀಮಿಯಮ್ ಸ್ಮಾರ್ಟ್ಫೋನ್ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಇದೀಗ ಜನಪ್ರಿಯ ಹಣಕಾಸು ವಹಿವಾಟು ಕಂಪೆನಿ ಪೇಟಿಯಂ ವಿಶೇಷ ಕೊಡುಗೆಯನ್ನು ನೀಡಿದೆ. ಈ ಮೂಲಕ ಬಳಕೆದಾರರಿಗಡ ಉಚಿತವಾಗಿ ಐಫೋನ್ 14, ಒನ್ಪ್ಲಸ್ ಸ್ಮಾರ್ಟ್ಫೋನ್ಗಳನ್ನು ಉಚಿತವಾಗಿ ಪಡೆಯಬಹುದು. ಹಾಗಿದ್ರೆ ಇದನ್ನು ಹೇಗೆ ಪಡೆಯೋದು ಅಂತ ಗೊತ್ತಾಗ್ಬೇಕಾದ್ರೆ ಈ ಲೇಖನದಲ್ಲಿದೆ ಓದಿ.
ಪೇಟಿಯಮ್ನಲ್ಲಿ ವಿಶೇಷ ಸ್ಪರ್ಧೆ
ಪೇಟಿಯಮ್ ಇದೀಗ ತನ್ನ ಬ್ರಾಂಡ್ನಲ್ಲಿ ರೆಫರ್ ಆಂಡ್ ವಿನ್(Refer and Win) ಎಂಬ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ವಿಜೇತರಿಗೆ ಐಫೋನ್ 14, ಒನ್ಪ್ಲಸ್10T ಮತ್ತು ಜೆಬಿಎಲ್ ಲೈವ್‌ನಂತಹ ಸಾಧನಗಳು ಉಚಿತವಾಗಿ ಲಭ್ಯವಿವೆ. ನಿಮ್ಮ ಜೊತೆಗಿರುವ, ಕಾಂಟ್ಯಾಕ್ಟ್ನಲ್ಲಿರುವ ಸ್ನೇಹಿತರು ಯುಪಿಐ ಮೂಲಕ ಮೊದಲ ಬಾರಿಗೆ ಹಣವನ್ನು ವರ್ಗಾಯಿಸಿದರೆ, ನಂತರ ನೀವು ಈ ಬಹುಮಾನಗಳನ್ನು ಪಡೆಯಬಹುದು. ನೀವು ಪಡೆಯುವ ಬಹುಮಾನವು ನೀವು ಉಲ್ಲೇಖಿಸುವ ಸ್ನೇಹಿತರ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಇದನ್ನೂ ಓದಿ: ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ರೆ 30 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಸೈಕಲ್ ಫ್ರೀ! ಈ ಆಫರ್ ಮತ್ತೆ ಬರಲಿಕ್ಕಿಲ್ಲ!
ಐಫೋನ್ ಫ್ರೀ
ಇನ್ನು ಪೇಟಿಯಮ್ನ ಈ ವಿಶೇಷ ಆಫರ್ನಲ್ಲಿ ನೀವು 11 ಕ್ಕಿಂತ ಹೆಚ್ಚು ಜನರನ್ನು Paytm ಗೆ ರೆಫರ್ ಮಾಡಿದರೆ, ನೀವು iPhone 14 ಅನ್ನು ಉಚಿತವಾಗಿ ಗೆಲ್ಲಬಹುದು. ಒಬ್ಬ ವ್ಯಕ್ತಿ ಮಾತ್ರ ಈ ಐಫೋನ್ ಅನ್ನು ಪಡೆಯಬಹುದು. 11 ಕ್ಕೂ ಹೆಚ್ಚಿನ ಜನರು ಮಾತ್ರ ರೆಫರ್ ಆದ್ರೆ iPhone 14 ಅನ್ನು ಗೆಲ್ಲುವ ಅವಕಾಶವನ್ನು ಹೊಂದಿವೆ. ಅದೇ 5 ರಿಂದ 10 ಜನರಿಗೆ ರೆಫರ್ ಮಾಡಿದರೆ, ಅವರಿಗೆ OnePlus 10T ಸ್ಮಾರ್ಟ್‌ಫೋನ್ ಅನ್ನು ನೀಡಲಾಗುತ್ತದೆ. ಈ ಒನ್ಪ್ಲಸ್ 10ಟಿ ಸ್ಮಾರ್ಟ್‌ಫೋನ್ ಅನ್ನು ಮೂರು ಜನರಿಗೆ ಮಾತ್ರ ನೀಡಲಾಗುವುದು. ಅಂದರೆ 5 ರಿಂದ 10 ಜನರನ್ನು ಉಲ್ಲೇಖಿಸಿದ 3 ಜನರು ಈ ಒನ್ಪ್ಲಸ್ ಸ್ಮಾರ್ಟ್‌ಫೋನ್ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.
ಜೆಬಿಎಲ್ ಹೆಡ್ಫೋನ್ ಫ್ರೀ
ನೀವು 1 ರಿಂದ 4 ಜನರನ್ನು ಉಲ್ಲೇಖಿಸಿದರೆ, ಅವರು ಜೆಬಿಎಲ್ ಲೈವ್ ಹೆಡ್‌ಫೋನ್‌ಗಳನ್ನು ಪಡೆಯುತ್ತಾರೆ. ಹತ್ತು ಮಂದಿಗೆ ಈ ಅವಕಾಶ ಸಿಗಲಿದೆ. ಅಂದರೆ 1 ರಿಂದ 4 ಜನರನ್ನು ಉಲ್ಲೇಖಿಸುವ 10 ಜನರು ಜೆಬಿಎಲ್ ಹೆಡ್‌ಫೋನ್‌ಗಳನ್ನು ಪಡೆಯುತ್ತಾರೆ. ಈ ಬಹುಮಾನಗಳ ಹೊರತಾಗಿ, ನಿಖರವಾದ ರೆಫರಲ್ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ನಿಮ್ಮ ರೆಫರಲ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ನೀವು ಶೇರ್ ಮಾಡಿಕೊಳ್ಬೇಕು. ನಿಮ್ಮ ಸ್ನೇಹಿತರು ನೀವು ಹಂಚಿಕೊಂಡ ಲಿಂಕ್ ಅನ್ನು ತೆರೆದರೆ ಮತ್ತು ಮೊದಲ ಬಾರು ಯುಪಿಐ ಮೂಲಕ ಹಣವನ್ನು ವರ್ಗಾಯಿಸಿದರೆ, ನೀವು ಮತ್ತು ನಿಮ್ಮ ಸ್ನೇಹಿತ ಇಬ್ಬರೂ ಕ್ಯಾಶ್ ಬ್ಯಾಕ್ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ