ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಗ್ರಾಹಕರಿಗೆ ಡಬಲ್ ಡೇಟಾ​; ಜಿಯೋದಿಂದ ಬಂಪರ್​ ಆಫರ್​!

ಜಿಯೋ ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಆಫರ್​ ಸ್ಯಾಮ್​ಸಂಗ್​ ಗೆಲಾಕ್ಸಿ ಎಂ10 ಅಥವಾ ಗೆಲಾಕ್ಸಿ ಎಂ20 ಮೊಬೈಲ್​ ಖರೀದಿಸಿರುವ ಗ್ರಾಹಕರಿಗೆ ಅನ್ವಯವಾಗಲಿದೆ. 10 ರೀಚಾರ್ಜ್​ಗಳವರೆಗೆ ಡಬಲ್​ ಡೇಟಾ ಆಫರ್​ ನೀಡಲಾಗುವುದು.

sushma chakre | news18
Updated:February 5, 2019, 8:43 PM IST
ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಗ್ರಾಹಕರಿಗೆ ಡಬಲ್ ಡೇಟಾ​; ಜಿಯೋದಿಂದ ಬಂಪರ್​ ಆಫರ್​!
ಸ್ಯಾಮ್​ಸಂಗ್
  • News18
  • Last Updated: February 5, 2019, 8:43 PM IST
  • Share this:
ಬೆಂಗಳೂರು (ಫೆ. 5): ಹಿಂದೆಲ್ಲ ನೋಕಿಯಾ ಬಿಟ್ಟರೆ ಸ್ಯಾಮ್​ಸಂಗ್​ ಎಂಬಂತಹ ಕಾಲವಿತ್ತು. ನಂತರ ಸಾಕಷ್ಟು ಹೊಸ ಬ್ರ್ಯಾಂಡ್​ಗಳು ಬಂದ ಕಾರಣ ಸ್ಯಾಮ್​ಸಂಗ್​ ಮೊಬೈಲ್​ ಬೇಡಿಕೆಯೂ ಕಡಿಮೆಯಾಯಿತು. ಆದರೆ, ಸ್ಯಾಮ್​ಸಂಗ್​ ಮೊಬೈಲನ್ನು ಪ್ರಚಾರ ಮಾಡಲು ಬಂಪರ್​ ಆಫರ್​ ನೀಡಲಾಗಿದ್ದು, ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಜೊತೆಗೆ ಒಪ್ಪಂದ ಮಾಡಿಕೊಂಡು ಜಿಯೋ ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಆಫರ್ ನೀಡಲಾಗಿದೆ.

ಜಿಯೋ ಸ್ಯಾಮ್​ಸಂಗ್​ ಗೆಲಾಕ್ಸಿ ಎಂ ಸೀರೀಸ್​ ಆಫರ್​ ಸ್ಯಾಮ್​ಸಂಗ್​ ಗೆಲಾಕ್ಸಿ ಎಂ10 ಅಥವಾ ಗೆಲಾಕ್ಸಿ ಎಂ20 ಮೊಬೈಲ್​ ಖರೀದಿಸಿರುವ ಗ್ರಾಹಕರಿಗೆ ಅನ್ವಯವಾಗಲಿದೆ. 10 ರೀಚಾರ್ಜ್​ಗಳವರೆಗೆ ಡಬಲ್​ ಡೇಟಾ ನೀಡಲಾಗುವುದು. ಜಿಯೋ ಪ್ರೀಪೇಯ್ಡ್​ನ​ ರೂ. 198 ಮತ್ತು ರೂ. 299 ಪ್ಲಾನ್​ಗಳನ್ನು ರೀಚಾರ್ಜ್​ ಮಾಡಿಸಿಕೊಳ್ಳಬಹುದು.

ವಿವೋ ಮೊಬೈಲ್​​ ಖರೀದಿಸಿ, 2 ಸಾವಿರ ರೂಪಾಯಿ ಉಳಿಸಿ!ಸ್ಯಾಮ್​ಸಂಗ್​ ಗೆಲಾಕ್ಸಿ ಎಂ10 ಅಥವಾ ಗೆಲಾಕ್ಸಿ ಎಂ20 ಸ್ಮಾರ್ಟ್​ಫೋನ್​ನ ಮುಂದಿನ ಮಾರಾಟ ಫೆ. 7ರಂದು ಇರಲಿದೆ. ರಿಲಯನ್ಸ್​ ಜಿಯೋ ಕೂಡ ಈ ಮೊಬೈಲ್​ಗಳ ಮೇಲೆ ಭಾರೀ ಆಫರ್​ ನೀಡಿದ್ದು, ಜಿಯೋ ಪ್ರೀಪೇಯ್ಡ್​ ಪ್ಲಾನ್​ನ 198 ಮತ್ತು 299 ರೂ. ರೀಚಾರ್ಜ್​ ಮಾಡಿಸಿಕೊಳ್ಳುವವರಿಗೆ ಡಬಲ್​ ಡೇಟಾ ನೀಡಲಿದೆ. ಈ ಆಫರ್ ಇಂದಿನಿಂದ ಆರಂಭವಾಗಿದ್ದು, ಈ ಎರಡು ರೀಚಾರ್ಜ್​ಗಳಿಗೆ ಮಾತ್ರ ಆಫರ್​ ಅನ್ವಯವಾಗಲಿದೆ.

ರಿಲಯನ್ಸ್​ ಜಿಯೋ ಸಾಕಷ್ಟು ಸ್ಮಾರ್ಟ್​ಫೋನ್​ ಬ್ರಾಂಡ್​ಗಳ ಜೊತೆಗೆ ಟೈ ಅಪ್​ ಮಾಡಿಕೊಂಡಿದ್ದು, ಇದೀಗ ಸ್ಯಾಮ್​ಸಂಗ್​ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಡಬಲ್​ ಡೇಟಾ ಆಫರ್​ ಮೈ ಜಿಯೋ ಅಕೌಂಟ್​ಗೆ ಹೋಗಲಿದ್ದು, 3ಜಿ ಅಥವಾ 4 ಜಿ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ. ಈ ಡಬಲ್​ ಡೇಟಾವನ್ನು 3 ತಿಂಗಳೊಳಗಅಗಿ ಖರ್ಚು ಮಾಡಬೇಕು.

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ