• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • ESanjeevani App: ಈ ಆ್ಯಪ್​ ಮೂಲಕ ಇನ್ಮುಂದೆ ಮನೆಯಿಂದಲೇ ವೈದ್ಯರ ಸಲಹೆ ಪಡೆಯಿರಿ! ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ESanjeevani App: ಈ ಆ್ಯಪ್​ ಮೂಲಕ ಇನ್ಮುಂದೆ ಮನೆಯಿಂದಲೇ ವೈದ್ಯರ ಸಲಹೆ ಪಡೆಯಿರಿ! ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಇಸಂಜೀವನಿ ಆ್ಯಪ್​

ಇಸಂಜೀವನಿ ಆ್ಯಪ್​

ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಆ್ಯಪ್​ ಒಂದನ್ನು ಪರಿಚಯಿಸಿದ್ದು ಇದಕ್ಕೆ ಇಸಂಜೀವಿನಿ ಎಂದು ಹೆಸರಿಡಲಾಗಿದೆ. ಈ ಆಪ್‌ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಹಾಗಿದ್ರೆ ಈ ಆ್ಯಪ್​ ಬಳಸೋದು ಹೇಗೆ?, ಇದರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಮುಂದೆ ಓದಿ ...
  • Share this:

    ದೇಶದೆಲ್ಲೆಡೆ ಇತ್ತೀಚೆಗೆ ಎಲ್ಲಾ ವಿಭಾಗದಲ್ಲೂ ಡಿಜಿಟಲೈಸ್ (Digitalise)​ ಮಾಡಲು ಮುಂದಾಗಿದೆ. ಇತ್ತೀಚೆಗೆ ಯಾವುದೇ ವಿಷಯಗಳನ್ನು ತಿಳಿಬೇಕಾದ್ರು, ಯಾವುದೇ ಸೇವೆ ಪಡೆಯಬೇಕಾದ್ರು ಕೇವಲ ಒಂದು ಸ್ಮಾರ್ಟ್​​ಫೋನ್​ ಮೂಲಕ ಪಡೆಯಬಹುದಾಗಿದೆ. ಇದೀಗ ಟೆಕ್ನಾಲಜಿ ಆರೋಗ್ಯ ಇಲಾಖೆಯನ್ನು (Health Department) ಡಿಜಿಟಲೀಕರಣ ಮಾಡಲು ಮುಂದಾಗಿದೆ. ಈ ಮೂಲಕ ಇನ್ಮುಂದೆ ಯಾವುದೇ ವೈದ್ಯರ ಸಲಹೆಯನ್ನು ಜನರು ಪಡೆಯಬೇಕಾದರು ಕೇವಲ ಒಂದು ಆ್ಯಪ್​ ಮೂಲಕ ಪಡೆಯಬಹುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ (Ministry of Health and Family) ಹೊಸ ಆಪ್‌ ಅನ್ನು ಪರಿಚಯಿಸಲಾಗಿದ್ದು, ಇದನ್ನು ಮನ್ ಕಿ ಬಾತ್ ನ 98 ನೇ ಸಂಚಿಕೆಯಲ್ಲಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ.


    ಹೌದು, ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಆ್ಯಪ್​ ಒಂದನ್ನು ಪರಿಚಯಿಸಿದ್ದು ಇದಕ್ಕೆ ಇಸಂಜೀವಿನಿ ಎಂದು ಹೆಸರಿಡಲಾಗಿದೆ. ಈ ಆಪ್‌ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ. ಹಾಗಿದ್ರೆ ಈ ಆ್ಯಪ್​ ಬಳಸೋದು ಹೇಗೆ?, ಇದರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.


    ಇಸಂಜೀವಿನಿ ಅಪ್ಲಿಕೇಶನ್


    ಇ-ಸಂಜೀವಿನಿ ಆ್ಯಪ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಪರಿಚಯಿಸಿದೆ. ಇದು ಟೆಲಿಮೆಡಿಸಿನ್ ಆ್ಯಪ್‌ ಅಂತನೂ ಕರೆಯಬಹುದು. ಈ ಆ್ಯಪ್​ ಮೂಲಕ ಯಾರೂ ಬೇಕಾದರು ತಮಗೆ ಬೇಕಾದ ವೈದ್ಯರಿಂದ ಸಲಹೆಯನ್ನು ಪಡೆಯಬಹುದು. ಇದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತದೆ.


    ಇದನ್ನೂ ಓದಿ: ಬಜೆಟ್​ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹೊಸ ಇಯರ್​ಬಡ್ಸ್​! ಆರಂಭದಲ್ಲೇ ಡಿಸ್ಕೌಂಟ್ ಶುರು


    ಈ ಆ್ಯಪ್​ನ ಲಾಭಗಳೇನು?


    ಈ ಆ್ಯಪ್‌ ಅನ್ನು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ ರೋಗಿಗಳ ನೋಂದಣಿ, ಟೋಕನ್ ಕ್ರಿಯೇಟ್‌, ವೈದ್ಯರೊಂದಿಗೆ ಆಡಿಯೋ-ವಿಡಿಯೋ ಕಾಲ್​ ಮೂಲಕ ಸಮಾಲೋಚನೆ, ಇ-ಪ್ರಿಸ್ಕ್ರಿಪ್ಷನ್ ಮತ್ತು ಎಸ್‌ಎಮ್‌ಎಸ್‌ ಹಾಗೂ ಇಮೇಲ್ ನೋಟಿಫಿಕೇಶನ್‌ ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಆ್ಯಪ್‌ನಲ್ಲಿ ರಾಜ್ಯದ ವೈದ್ಯರು ತಮ್ಮದೇ ಆದ ರೀತಿಯಲ್ಲಿ ಸೇವೆಯಲ್ಲಿ ಬಳಕೆದಾರರಿಗೆ ನೀಡುತ್ತಾರೆ.


    ಈ ಆ್ಯಪ್​ನಲ್ಲಿ ಸೇವೆಗಳನ್ನು ಪಡೆಯುವುದು ಹೇಗೆ ಎಂಬುದನ್ನು ಈ ಕೆಳಗೆ ಲೇಖನದಲ್ಲಿ ತಿಳಿಸಿದ್ದೇವೆ.


    ಇಸಂಜೀವನಿ ಆ್ಯಪ್​


    1. ಮೊದಲು ನಿಮ್ಮ ಫೋನ್‌ನಲ್ಲಿ ಇ-ಸಂಜೀವಿನಿ ಅಧಿಕೃತ ಸೈಟ್‌ಗೆ ಭೇಟಿ ನೀಡಿ ಇದು ಕಷ್ಟ ಎಂದಾದರೆ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆ್ಯಪಲ್​ ಸ್ಟೋರ್‌ ಮೂಲಕ ಇ-ಸಂಜೀವಿನಿ ಆ್ಯಪ್ ಅನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇದಕ್ಕೆ ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ಇದಾದ ನಂತರ ಪೇಜ್‌ನ ಮೇಲ್ಭಾಗದಲ್ಲಿ ರೋಗಿಗಳ ನೋಂದಣಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಮೇಲೆ ಕ್ಲಿಕ್ ಮಾಡಿ.

    2. ನಂತರ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬಳಿಕ ಅಲ್ಲೇ ಒಟಿಪಿಗಾಗಿ ಕ್ಲಿಕ್‌ ಮಾಡಿ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ನೀವು ಅಲ್ಲಿ ನೀಡಿರುವ ಮೊಬೈಲ್‌ ಸಂಖ್ಯೆಗೆ ಒಂದು ಒಟಿಪಿ ನಂಬರ್ ಬರುತ್ತದೆ. ನಂತರ ಅದನ್ನು ಅಲ್ಲಿ ಫಿಲ್ ಮಾಡಿ.

    3. ಇದಾದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಅಗತ್ಯವಾದ ಎಲ್ಲಾ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನಂತರ ಟೋಕನ್‌ ಜನರೇಟ್‌ ಮಾಡಲು ಅಲ್ಲಿ ನೀಡಲಾದ ಬಟನ್‌ ಮೇಲೆ ಟ್ಯಾಪ್‌ ಮಾಡಿ. ಇನ್ನು ಈ ವೇಳೆ ನಿಮ್ಮ ಬಳಿ ಯಾವುದಾದರೂ ನಿಮ್ಮ ಆರೋಗ್ಯ ಸಂಬಂಧಿ ದಾಖಲಾತಿ ಇದ್ದರೆ ಅದನ್ನು ಅಪ್‌ಲೋಡ್‌ ಮಾಡಬಹುದು. ಇದರಿಂದ ವೈದ್ಯರಿಗೆ ಸಹಾಯವಾಗುತ್ತದೆ.

    4. ಮೇಲೆ ತಿಳಿಸಿದ ಎಲ್ಲಾ ಡೀಟೇಲ್ಸ್​ ಭರ್ತಿ ಮಾಡಿದ ನಂತರ ನೀವು ಎಸ್‌ಎಮ್‌ಎಸ್‌ ಮೂಲಕ ರೋಗಿಯ ನೋಂದಣಿ ಅಥವಾ ಟೋಕನ್‌ ಸಂಖ್ಯೆಯನ್ನು ಪಡೆಯುತ್ತೀರಿ. ಇದಾದ ನಂತರದಲ್ಲಿ ನೀಡಲಾದ ಟೋಕನ್ ಐಡಿಯೊಂದಿಗೆ ಪೋರ್ಟಲ್‌ಗೆ ಮತ್ತೊಮ್ಮೆ ಲಾಗಿನ್ ಮಾಡಬೇಕಿದೆ. ಇದಕ್ಕಾಗಿ ಅಲ್ಲಿ Patient Login ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡ್ಬೇಕು.




    ಇನ್ನು Patient Login ಮೂಲಕ ನೀವು ಆರೋಗ್ಯ ಸೇವೆ ಪಡೆಯಬಹುದು. ಇದಕ್ಕಾಗಿ ನೀವು ಅಪಾಯಿಂಟ್ಮೆಂಟ್ ಪಡೆದುಕೊಳ್ಳಲು ನಿಮ್ಮ ಹತ್ತಿರದ ಅಥವಾ ಯಾವ ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಮುಂದಾಗುತ್ತೀರೋ ಆ ಆಸ್ಪತ್ರೆಯ ಹೆಸರನ್ನು ಎಂಟ್ರಿ ಮಾಡಬಹುದಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಅಪಾಯಿಂಟ್ಮೆಂಟ್ ಗಳಿದ್ದರೆ ನಿಮಗೆ ಸರಣಿ ಸಂಖ್ಯೆಯನ್ನು ಸಹ ಒದಗಿಸಲಾಗುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು