• Home
  • »
  • News
  • »
  • tech
  • »
  • Motorola Washing Machine: ಈ ವಾಷಿಂಗ್ ಮೆಷಿನ್ ಖರೀದಿಸಿದರೆ ಫ್ಲಿಪ್​ಕಾರ್ಟ್​ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಪಡೆಯಬಹುದು!

Motorola Washing Machine: ಈ ವಾಷಿಂಗ್ ಮೆಷಿನ್ ಖರೀದಿಸಿದರೆ ಫ್ಲಿಪ್​ಕಾರ್ಟ್​ನಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ಪಡೆಯಬಹುದು!

ಮೊಟೊರೊಲಾ ವಾಷಿಂಗ್ ಮೆಷಿನ್

ಮೊಟೊರೊಲಾ ವಾಷಿಂಗ್ ಮೆಷಿನ್

ಈಗ ವಾಷಿಂಗ್​ ಮೆಷಿನ್​ಗಳನ್ನು ಹೊಂದಿರುವವರೇ ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಗುಣಮಟ್ಟದ ವಾಷಿಂಗ್ ಮೆಷಿನ್​ ಅನ್ನೇ ಬಯಸುತ್ತಾರೆ. ಆದರೆ ಇದೀಗ ಫ್ಲಿಪ್ ಕಾರ್ಟ್​ ತನ್ನ ಗ್ರಾಹಕರಿಗಾಗಿ ಹೊನಸ ವಾಷಿಂಗ್ ಮೆಷಿನ್​ ಅನ್ನು ವಿಶೇಷ ಆಫರ್​ನೊಂದಿಗೆ ನೀಡುತ್ತಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

    ಇತ್ತೀಚೆಗೆ ಮೊಬೈಲ್ ಕಂಪನಿಗಳು(Mobile Company) , ಟೆಲಿಕಾಂ ಕಂಪನಿಗಳು (Telecom Company), ಹೀಗೆ ಹಲವಾರು ತಂತ್ರಜ್ಞಾನ ಕಂಪನಿಗಳು ಪ್ರತೀದಿನ ಏನಾದರೊಂದು ವಿಶೇಷ ಕೊಡುಗೆಯನ್ನು ನೀಡುತ್ತಲೇ ಇದೆ. ಇದೀಗ ವಾಷಿಂಗ್ ಮೆಷಿನ್​ನಲ್ಲೂ (Washing Machine) ನಾವು ಆಫರ್​ ಅನ್ನು ನೋಡಬಹುದಾಗಿದೆ. ಅದೇಷ್ಟೋ ಮಂದಿಗೆ ಬಟ್ಟೆ ಒಗೆಯಲು ಕಷ್ಟವಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಉನ್ನತ ತೊಳೆಯುವ ಯಂತ್ರಗಳನ್ನು ಖರೀದಿಸುವ ಯೋಚನೆ ಮಾಡುತ್ತಾರೆ. ಇದೀಗ ವಾಷಿಂಗ್ ಮೆಷಿನ್ ಖರೀದಿಸಬೇಕೆಂದು ಯೋಜನೆಯಲ್ಲಿರುವವರಿಗೆ ಇಕಾಮರ್ಸ್ (E Commerce)​ ವೆಬ್​ಸೈಟ್​ ಆಗಿರುವ ಫ್ಲಿಪ್ ಕಾರ್ಟ್​​ನಲ್ಲಿ (Flipkart) ವಾಷಿಂಗ್​ ಮೆಷಿನ್​ ಮೇಲೆ ವಿಶೇಷ ರಿಯಾಯಿತಿ ಆಫರ್​ ಅನ್ನು ನೀಡಿದೆ.. ವಾಷಿಂಗ್ ಮೆಷಿನ್ ಮೇಲೆ ನೀವು ಶೇಕಡಾ 50% ರಷ್ಟು ರಿಯಾಯಿತಿ ಪಡೆಯಬಹುದು.


    ಈಗ ವಾಷಿಂಗ್​ ಮೆಷಿನ್​ಗಳನ್ನು ಹೊಂದಿರುವವರೇ ಹೆಚ್ಚಾಗಿದ್ದಾರೆ. ಆದರೆ ಎಲ್ಲರೂ ಗುಣಮಟ್ಟದ ವಾಷಿಂಗ್ ಮೆಷಿನ್​ ಅನ್ನೇ ಬಯಸುತ್ತಾರೆ. ಆದರೆ ಇದೀಗ ಫ್ಲಿಪ್ ಕಾರ್ಟ್​ ತನ್ನ ಗ್ರಾಹಕರಿಗಾಗಿ ಹೊನಸ ವಾಷಿಂಗ್ ಮೆಷಿನ್​ ಅನ್ನು ವಿಶೇಷ ಆಫರ್​ನೊಂದಿಗೆ ನೀಡುತ್ತಿದೆ. ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.


    ಮೊಟೊರೊಲಾ ವಾಷಿಂಗ್ ಮೆಷಿನ್:


    ಮೊಟೊರೊಲಾ ವಾಷಿಂಗ್ ಮೆಷಿನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಇವುಗಳಲ್ಲಿ ನೀವು ಅದೇ ಕೊಡುಗೆಗಳನ್ನು ಪಡೆಯಬಹುದು. ಮೊಟೊರೊಲಾ 10.5 ಕೆಜಿ ವಾಷಿಂಗ್ ಮೆಷಿನ್‌ನಲ್ಲಿ ಶೇಕಡಾ 50% ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಈ ವಾಷಿಂಗ್ ಮೆಷಿನ್ ನ ಎಂಆರ್​ಪಿ 57,999 ರೂಪಾಯಿಯಾಗಿದೆ. ಆದರೆ ಈಗ ಇದನ್ನು 29,490 ರೂಪಾಯಿಗೆ ಖರೀದಿಸಬಹುದು. ಅಂದರೆ ಶೇಕಡಾ 49% ರಷ್ಟು ರಿಯಾಯಿತಿಯೊಂದಿಗೆ ಮಾರಾಟದಲ್ಲಿ ಲಭ್ಯವಿದೆ.


    ಇದನ್ನೂ ಓದಿ: ವಿಶೇಷ ಫೋಟೋದೊಂದಿಗೆ ಫಿಫಾ ಫುಟ್​​​ಬಾಲ್ ವಿಶ್ವಕಪ್ ಆಚರಿಸಿದ ಗೂಗಲ್ ಡೂಡಲ್! ಇಲ್ಲಿದೆ ನೋಡಿ ಆ ಇಮೇಜ್


    ವಿಶೇಷ ರಿಯಾಯಿತಿ:


    ಅಲ್ಲದೆ, ಈ ವಾಷಿಂಗ್ ಮೆಷಿನ್‌ನಲ್ಲಿ ನೀವು ಶೇಕಡಾ 10% ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಂದರೆ 1250 ರೂಪಾಯಿಯ ರಿಯಾಯಿತಿ ದರದಲ್ಲಿ ದೊರೆಯಲಿದೆ. ಹಾಗಾಗಿ ಈಗ ವಾಷಿಂಗ್ ಮೆಷಿನ್ ದರ 28,240 ರೂಪಾಯಿಯಾಗಿದೆ.


    ಮೊಟೊರೊಲಾ ವಾಷಿಂಗ್ ಮೆಷಿನ್


    ವಾಷಿಂಗ್​ ಮೆಷಿನ್​ನ ವಿನ್ಯಾಸ:


    ಇದು ಮುಂಭಾಗದಲ್ಲಿ ತೊಳೆಯುವಂತಹ ಯಂತ್ರವಾಗಿದೆ. 5 ಸ್ಟಾರ್ ರೇಟಿಂಗ್ ಹೊಂದಿದೆ. ಇದು ಸ್ಮಾರ್ಟ್ ವೈಫೈ ಸಕ್ರಿಯಗೊಳಿಸಿದ ತೊಳೆಯುವ ಯಂತ್ರ ಮತ್ತು  ಹೀಟರ್‌ನೊಂದಿಗೆ ಒಳಗೊಂಡಿದೆ.


    ಎಕ್ಸ್ಚೇಂಜ್ ಆಫರ್:


    ಇದಲ್ಲದೆ, ಈ ತೊಳೆಯುವ ಯಂತ್ರದಲ್ಲಿ ಎಕ್ಸ್​​​ಚೇಂಜ್ ಆಫರ್ ಇದೆ. ನಿಮ್ಮ ಮೆಷಿನ್​ನ ಎಕ್ಸ್​​ಚೇಂಜ್​ನ ಅಡಿಯಲ್ಲಿ ವಿನಿಮಯ ಕೊಡುಗೆ. 5,200  ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ ಈ ವಾಷಿಂಗ್ ಮೆಷಿನ್ ಅನ್ನು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಮಾಸಿಕ EMI ಇದು 4915 ರೂಪಾಯಿಯಿಂದ ಇದು ಪ್ರಾರಂಭವಾಗುತ್ತದೆ.


    ಇಎಮ್​ಐ ನ ಬೆಲೆ ಮತ್ತು ವ್ಯಾಲಿಡಿಟಿ:


    ನೀವು ಇಎಮ್​ಐ ಮೂಲಕ ಖರೀದಿಸುವುದಾದರೆ ಇಲ್ಲಿ ಮೊದಲಿಗೆ 24 ತಿಂಗಳವರೆಗೆ ಅವಧಿಯು ಇರಬಹುದು. ಈಗ ತಿಂಗಳಿಗೆ 1430 ರೂಪಾಯಿ ಪಾವತಿಸಬೇಕು. ಅದೇ 18 ತಿಂಗಳು ಆದರೆ ಇಎಮ್​ಐ 1840 ರೂಪಾಯಿ ಆಗಿರುತ್ತದೆ. ಅಲ್ಲದೆ 12 ತಿಂಗಳ ಇಎಮ್​ಐ ಆದರೆ 2648 ರೂಪಾಯಿ ಪಾವತಿಸಬೇಕು. 9 ತಿಂಗಳು ಆದರೆ ತಿಂಗಳಿಗೆ 3471 ರೂಪಾಯಿ ಕಟ್ಟಬೇಕು.


    ಮೊಟೊರೊಲಾ ವಾಷಿಂಗ್ ಮೆಷಿನ್


    ನೀವು ಸೆಲೆಕ್ಟ್​ ಮಾಡುವಂತಹ ಇಎಮ್​​ಐಗೆ ಅನುಗುಣವಾಗಿ ನಿಮ್ಮ ಇಎಮ್​ಐ ಬೆಲೆ ಕೂಡ ಬದಲಾಗುತ್ತಿರುತ್ತದೆ. ಇದಲ್ಲದೆ ಅನೇಕ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್​ಗಳಲ್ಲಿ  ಕೂಡ ಈ ವಾಷಿಂಗ್​​ ಮೆಷಿನ್​ ಅನ್ನು ಖರೀದಿಸಬಹುದಾಗಿದೆ. ನೀವು ಒಂದು ವೇಳೆ ಬ್ಯಾಂಕ್​ಗಳ ಕ್ರೆಡಿಟ್ ಕಾರ್ಡ್​ ಮೂಲಕ ಖರೀದಿಸಿದರೆ 1416 ರೂಪಾಯಿಯನ್ನು ಪಾವತಿಸಿ ಖರಿದಿಸಬಹುದಾಗಿದೆ.


    ಇದು ಫ್ಲಿಪ್​ಕಾರ್ಟ್​ನಲ್ಲಿ ಮೊಟೊರೊಲಾ ವಾಷಿಂಗ್ ಮೆಷಿನ್ ಮೇಲೆ ಇರುವಂತಹ ವಿಶೇಷ ಕೊಡುಗೆಯಾಗಿದೆ. ಇಲ್ಲಿ ನೀವು ನಿಮಗೆ ಬೇಕಾದ ಆಯ್ಕೆಯಲ್ಲಿ ಖರಿದಿಸುವ ಅವಕಾಶವನ್ನು ನೀಡಿದೆ. ಆದ್ದರಿಂದ ಗ್ರಾಹಕರು ತಮಗೆ ಇಷ್ಟ ಬಂದಂತೆ ಖರೀದಿಸಬಹುದಾಗಿದೆ. ಆದ್ದರಿಂದ ಈ ಬಾರಿಯ ಫ್ಲಿಪ್​ಕಾರ್ಟ್​ನ ವಿಶೇಷ ಕೊಡುಗೆ ಅಂತ ಹೇಳ್ಬಹುದು.

    Published by:Prajwal B
    First published: