ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Companies). ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿಗಳಿಂದ ಹಿಡಿದು ಖಾಸಗಿ ಕಂಪೆನಿಯವರೆಗೂ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ರೀಚಾರ್ಜ್ ಯೋಜನೆಗಳನ್ನು (Recharge Plans) ಈ ಕಂಪೆನಿಗಳು ಪರಿಚಯಿಸುತ್ತಿರುತ್ತದೆ. ಈ ಮಧ್ಯೆ ದೇಶದ ಪ್ರಬಲ ಟೆಲಿಕಾಂ ಕಂಪೆನಿಗಳೆಂದು ಗುರುತಿಸಿಕೊಂಡಿರುವ ಜಿಯೋ ಮತ್ತು ಏರ್‌ಟೆಲ್ (Jio And Airtel) ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಇತ್ತೀಚೆಗೆ ಈ ಎರಡು ಕಂಪೆನಿಗಳು 5ಜಿ ಸೇವೆಯನ್ನು ದೇಶದೆಲ್ಲೆಡೆ ವಿಸ್ತರಿಸಿದ್ದು, ಈಗಾಗಲೇ 5ಜಿ ರೀಚಾರ್ಜ್ ಪ್ಲ್ಯಾನ್ಗಳನ್ನು ಸಹ ಪರಿಚಯಿಸಿದೆ.
ಜಿಯೋ ಮತ್ತು ಏರ್‌ಟೆಲ್ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಡೇಟಾ ಸೌಲಭ್ಯವನ್ನು, ಕರೆ ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕಾಗಿಯೇ ಈ ಕಂಪೆನಿಗಳು ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪೆನಿಗಳೆಂದು ಗುರುತಿಸಿಕೊಂಡಿದೆ. ಈ ಮಧ್ಯೆ ತನ್ನ ಗ್ರಾಹಕರಿಗಾಗಿ ದೈನಂದಿನ 2ಜಿಬಿ ಡೇಟಾ ಮತ್ತು 5ಜಿ ನೆಟ್ವರ್ಕ್ ಸೌಲಭ್ಯವಿರುವ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಇದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.
ಜಿಯೋನ 249 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ನಲ್ಲಿ ಗ್ರಾಹಕರು ಪ್ರತಿದಿನ 2ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು. ಹಾಗೆಯೇ ಜಿಯೋದಿಂದ ಜಿಯೋ ನೆಟ್ವರ್ಕ್ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟ್ವರ್ಕ್ ಕರೆಗಳಿಗೆ ಉಚಿತವಾಗಿ 1,000 ನಿಮಿಷಗಳಷ್ಟು ಕರೆ ಮಿತಿ ಇದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯವಿದೆ. ಇನ್ನು ಜಿಯೋನ ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.
ಇದನ್ನೂ ಓದಿ: 52 ಲಕ್ಷಕ್ಕೆ ಮಾರಾಟವಾದ ಮೊದಲ ಜನರೇಶನ್ ಐಫೋನ್! ಏನಿದರ ವಿಶೇಷತೆ?
ಜಿಯೋನ 299 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಜಿಯೋದ ಈ ಪ್ಲ್ಯಾನ್ನಲ್ಲಿ ಪ್ರತಿದಿನ 2ಜಿಬಿ ಇಂಟರ್ನೆಟ್ ಪ್ರಯೋಜನ ಪಡೆಯಬಹುದು. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ್ ಕರೆಗಳು ಸಹ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಸಹ ಲಭ್ಯವಿದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.ಇನ್ನು ಈ ಯೋಜನೆಯ ವ್ಯಾಲಿಡಿಟಿ ಅವಧಿ ಮುಗಿಯುವ ಹೊತ್ತಿಗೆ ಒಟ್ಟು 58 ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ.
ಜಿಯೋನ 533 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ಸಹ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ನೆಟ್ವರ್ಕ್ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ್ ಕರೆಗಳು ಸಹ ಉಚಿತ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದು.
ಏರ್ಟೆಲ್ನ ರೀಚಾರ್ಜ್ ಯೋಜನೆಗಳು
ಏರ್‌ಟೆಲ್ ಟೆಲಿಕಾಂನ 299 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 299 ರೂಪಾಯಿ ಪ್ಲ್ಯಾನ್ನಲ್ಲಿ ಅನಿಯಮಿತ ಉಚಿತ ಲೋಕಲ್ ಮತ್ತು ನ್ಯಾಷನಲ್ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಒಟ್ಟು ಪ್ರತಿದಿನ 2ಜಿಬಿ ಡೇಟಾ ಹಾಗೂ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಈ ಪ್ಲ್ಯಾನ್ ಏರ್‌ಟೆಲ್ ಹೆಲೋ ಟ್ಯೂನ್ ಸೇವೆಯನ್ನು ಒದಗಿಸುತ್ತದೆ. ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ.
ಏರ್‌ಟೆಲ್ ಟೆಲಿಕಾಂನ 319 ರೂಪಾಯಿ ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂನ 319 ರೂಪಾಯಿ ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಅವಧಿನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2ಜಿಬಿ ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60ಜಿಬಿ ಡೇಟಾ ಸೌಲಭ್ಯ ಸಿಗಲಿದೆ. ಇನ್ನು ಈ ಯೋಜನೆಯಲ್ಲಿ ಅನಿಯಮಿತ ಕರೆಗಳನ್ನು ಸಹ ಮಾಡಬಹುದು. ಒಮ್ಮೆ ಈ ಡೇಟಾ ಮಿತಿ ಮುಗಿದ ನಂತರ, ಚಂದಾದಾರರಿಗೆ ಪ್ರತಿ ಎಂಬಿ ಡೇಟಾಗೆ 50 ಪೈಸೆ ಹಣ ವಿಧಿಸಬೇಕು. ಹಾಗೆಯೇ ಈ ಯೋಜನೆಯು ಪ್ರತಿದಿನ 100 ಎಸ್‌ಎಮ್‌ಎಸ್ ಅನ್ನೂ ಮಾಡ್ಬಹುದು.
ಏರ್‌ಟೆಲ್ ಟೆಲಿಕಾಂನ 359 ರೂಪಾಯಿ ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂನ 359 ರೂಪಾಯಿ ಪ್ರಿಪೇಯ್ಡ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ ಪ್ರತಿದಿನ 2ಜಿಬಿ ಡೇಟಾ ದೊರೆಯಲಿದ್ದು, ತಿಂಗಳಿಗೆ ಒಟ್ಟು 60ಜಿಬಿ ಡೇಟಾ ಲಭ್ಯವಾಗಲಿದೆ. ಜೊತೆಗೆ ಅನಿಯಮಿತ ಕರೆಗಳನ್ನು ಸಹ ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ