GB WhatsApp ಹೇಗೆ ಕಾರ್ಯನಿರ್ವಹಿಸುತ್ತದೆ ? ಅಪಾಯಕಾರಿಯೇ? ಈ ಬಗ್ಗೆ ಮಾಹಿತಿ ಇಲ್ಲಿದೆ

ವಾಟ್ಸ್ಆ್ಯಪ್​ ಜತೆಗೆ ಜಿಬಿ ವಾಟ್ಸ್ಆ್ಯಪ್​ ಎಂಬುದು ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ಸಂಚಲನವನ್ನು ಉಂಟುಮಾಡಿದೆ. ವಾಟ್ಸ್ಆ್ಯಪ್​ನ ಹೊಸ ಆವೃತ್ತಿಯಂತೆ ಹರಿದಾಡುತ್ತಿದೆ. ಆದರೆ ಇದು ವಾಟ್ಸ್ಆ್ಯಪ್​ ಆವೃತ್ತಿಯಲ್ಲ. ಜಿಬಿ ವಾಟ್ಸ್ಆ್ಯಪ್​ ವಿಭಿನ್ನವಾದ ಅಪ್ಲಿಕೇಶನ್​ ಆಗಿದೆ.

GB WhatsApp

GB WhatsApp

  • Share this:
    GB WhatsApp Update: ಸ್ಮಾರ್ಟ್​ಫೋನ್​ ಬಳಕೆದಾರರು ಯಾವುದೇ ಆ್ಯಪ್ ಬಗ್ಗೆ ಯೋಚಿಸಿದಾಗೆಲ್ಲಾ ಮೊದಲಿಗೆ ಬರುವ ಆ್ಯಪ್​ ವಾಟ್ಸ್ಆ್ಯಪ್​. ಇದರ ಮೂಲಕ ದೈನಂದಿನ ವ್ಯವಹಾರವನ್ನು, ಫೋಟೋ, ವಿಡಿಯೋ, ಆಡಿಯೋವನ್ನು ಕಳುಹಿಸುತ್ತಾರೆ. ಅಷ್ಟು ಮಾತ್ರವಲ್ಲದೆ, ಆಡಿಯೋ ಕರೆ, ವಿಡಿಯೋ ಕರೆಯನ್ನು ಮಾಡುವಂತಹ ಆಯ್ಕೆ ಇದರಲ್ಲಿದೆ. ಹಾಗಾಗಿ ಬಹುಪಾಲು ಜನರಿಗೆ ವಾಟ್ಸ್ಆ್ಯಪ್​ ಮತ್ತಷ್ಟು ಹತ್ತಿರವಾಗಿದೆ.

    ವಿಶ್ವದಾದ್ಯಂತ ಬಹುಪಾಲು ಜನರು ವಾಟ್ಸ್ಆ್ಯಪ್​ ಬಳಸುತ್ತಿದ್ದಾರೆ. ವಾಟ್ಸ್ಆ್ಯಪ್​ ಕೂಡ ಬಳಕೆದಾರರ ಅನುಕೂಲದಂತೆ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಫ್ಲೇಬ್ಯಾಕ್​ ಫೀಚರ್​ ಪರಿಚಯಿಸಲು ಮುಂದಾಗಿದೆ. ಇದು ವೇವ್​ ರೆಕಾರ್ಡನ್ನು ಸಪೋರ್ಟ್​ ಮಾಡಲಿದ್ದು, ಮತ್ತಷ್ಟು ಸ್ಪಷ್ಟವಾಗಿ ಧ್ವನಿಯನ್ನು ಆಲಿಸಬಹುದಾಗಿದೆ. ಹಾಗಾಗಿ ವಾಟ್ಸ್ಆ್ಯಪ್​ ಸದಾ ಸುದ್ದಿಯಲ್ಲಿರುತ್ತದೆ.

    ಹೀಗಿರುವಾಗ ವಾಟ್ಸ್ಆ್ಯಪ್​ ಜತೆಗೆ ಜಿಬಿ ವಾಟ್ಸ್ಆ್ಯಪ್​ ಎಂಬುದು ಸ್ಮಾರ್ಟ್​ಫೋನ್​ ಪ್ರಿಯರಲ್ಲಿ ಸಂಚಲನವನ್ನು ಉಂಟುಮಾಡಿದೆ. ವಾಟ್ಸ್ಆ್ಯಪ್​ನ ಹೊಸ ಆವೃತ್ತಿಯಂತೆ ಹರಿದಾಡುತ್ತಿದೆ. ಆದರೆ ಇದು ವಾಟ್ಸ್ಆ್ಯಪ್​ ಆವೃತ್ತಿಯಲ್ಲ. ಜಿಬಿ ವಾಟ್ಸ್ಆ್ಯಪ್​ ವಿಭಿನ್ನವಾದ ಅಪ್ಲಿಕೇಶನ್​ ಆಗಿದೆ.

    ಜಿಬಿ ವಾಟ್ಸ್ಆ್ಯಪ್​:

    ಸದ್ಯ ಸುದ್ದಿಯಲ್ಲಿರುವ ಜಿಬಿ ವಾಟ್ಸ್ಆ್ಯಪ್​ ಅಪ್ಲಿಕೇಶನ್​ ವಾಟ್ಸ್ಆ್ಯಪ್​ನ ಕ್ಲೋನ್​​ ಆ್ಯಪ್​ ಆಗಿದೆ. ಸರಳವಾಗಿ ಹೇಳಬೇಕಾದರೆ ಥರ್ಡ್​ ಪಾರ್ಟಿ ಡೆವಲಪರ್​ ವ್ಯಾಟ್ಸ್​​ಆ್ಯಪ್​ನಂತೆಯೇ ಈ ಕ್ಲೀನ್​ ಆ್ಯಪ್​​​ ಅನ್ನು ಸಿದ್ಧಪಡಿಸಿದ್ದಾರೆ. ಇದು ವಾಟ್ಸ್ಆ್ಯಪ್​ನಂತೆಯೇ ಅನುಭವ ನೀಡುತ್ತದೆ.  ಜತೆಗೆ ವಿಡಿಯೋ, ಆಡಿಯೋ ಕರೆಯನ್ನು ಮಾಡಬಹುದಾಗಿದೆ.

    ಇದನ್ನೂ ಓದಿ: Airtel prepaid plans: ಏರ್​​ಟೆಲ್​ನ ಈ ಯೋಜನೆಗಳು ಸ್ಥಗಿತ; ಪಟ್ಟಿಯಲ್ಲಿ ನೀವು ಅಳವಡಿಸಿರುವ ಪ್ಲಾನ್​ಗಳಿದೆಯಾ?

    ಜಿಬಿ ವಾಟ್ಸ್ಆ್ಯಪ್​ ಹೆಚ್ಚುವರಿ ವೈಶಿಷ್ಟ್ಯವನ್ನು ನೀಡುತ್ತಿದೆ. ವಾಟ್ಆ್ಯಪ್​ಗಿಂತಲೂ ಹೆಚ್ಚಿನ ಅನುಭವ ಒದಗಿಸಲಿದೆ. ಆದರೆ ಥರ್ಟ್​​ ಪಾರ್ಟಿ ಅಪ್ಲಿಕೇಶನ್​ ಇದಾಗಿರುವುದರಿಂದ ಬಳಸುವುದು ಅಪಾಯಕಾರಿಯೂ ಹೌದು.
    Published by:Harshith AS
    First published: