ದೇಶಿಯ ಮಾರುಕಟ್ಟೆಗೆ ಕಾಲಿರಿಸಿದ ‘ಫೊರ್​ರನ್ನರ್​ 45‘ ಸ್ಮಾರ್ಟ್​ವಾಚ್​; ಇದರ ವಿಶೇಷತೆ ಗೊತ್ತಾ?

ಫೊರ್​ರನ್ನರ್ ಸ್ಮಾರ್ಟ್​ವಾಚ್​ ಬಿಲ್ಟ್​ಇನ್​ ಜಿಪಿಎಸ್​ ಸೌಲಭ್ಯವನ್ನು ಹೊಂದಿದ್ದು, ಸೇಫ್ಟಿ ಹಾಘೂ ಇನ್ಸಿಡೆಂಟ್​ ಡಿಟೆಕ್ಷನ್​, ಗಾರ್ಮಿನ್​ ಕೋಚ್​ 2.0 ಫೀಚರ್​​ ಅನ್ನು ಹೊಂದಿದೆ. ಅಂತೆಯೇ ಡೈಲಿ ಸ್ಟೆಪ್​, ಕ್ಯಾಲೊರಿ ಬರ್ನ್ಡ್, ಸ್ಲಿಪ್​ ಮೊನಿಟರ್​ ಫೀಚರ್​​ಗಳಿವೆ. ಜೊತೆಗೆ 24x​7 ಬುಲ್ಟ್​​ ಎಚ್​ಆರ್​​ ಮೊನಿಟರಿಂಗ್​ ಒಳಗೊಂಡಿದೆ. ಆಕ್ಸಿಜನ್​ ಲೆವೆಲ್​ ತಿಳಿಸುವ VO2 ಸೌಲಭ್ಯ ಹಾಗೂ ಹೃದಯ ಬಡಿತವನ್ನು ಮಾನಿಟರಿಂಗ್​ ಮಾಡುವ ಫೀಚರ್​ ಇದರಲ್ಲಿದೆ.

news18
Updated:August 4, 2019, 4:21 PM IST
ದೇಶಿಯ ಮಾರುಕಟ್ಟೆಗೆ ಕಾಲಿರಿಸಿದ ‘ಫೊರ್​ರನ್ನರ್​ 45‘ ಸ್ಮಾರ್ಟ್​ವಾಚ್​; ಇದರ ವಿಶೇಷತೆ ಗೊತ್ತಾ?
ಫೊರ್​ರನ್ನರ್​ 45
  • News18
  • Last Updated: August 4, 2019, 4:21 PM IST
  • Share this:
ಅಮೆರಿಕಾ ಮೂಲದ ಗಾರ್ಮಿನ್​ ಸಂಸ್ಥೆ ಇತ್ತೀಚೆಗೆ ‘ಫೊರ್​ರನ್ನರ್​ 245‘ ಮತ್ತು ‘ಫೊರ್​ರನ್ನರ್​ 245 ಮ್ಯೂಸಿಕ್‘​ ಹೆಸರಿನ ಎರಡು ಸ್ಮಾರ್ಟ್​ವಾಚ್​​ ಅನ್ನು ಬಿಡುಗಡೆ ಮಾಡಿತ್ತು. ಇದೀಗ,  ಅದೇ ಸರಣಿಯಲ್ಲಿ ‘ಫೊರ್​ರನ್ನರ್​ 45‘ ಹೆಸರಿನ ಸ್ಮಾರ್ಟ್​ವಾಚ್​ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ವಾಚ್​ ದೇಶಿಯ ಮಾಡುಕಟ್ಟೆಯಲ್ಲಿ ಲಭ್ಯವಿದೆ.

ಫೊರ್​ರನ್ನರ್ ಸ್ಮಾರ್ಟ್​ವಾಚ್​ ಬಿಲ್ಟ್​ಇನ್​ ಜಿಪಿಎಸ್​ ಸೌಲಭ್ಯವನ್ನು ಹೊಂದಿದ್ದು, ಸೇಫ್ಟಿ ಹಾಘೂ ಇನ್ಸಿಡೆಂಟ್​ ಡಿಟೆಕ್ಷನ್​, ಗಾರ್ಮಿನ್​ ಕೋಚ್​ 2.0 ಫೀಚರ್​​ ಅನ್ನು ಹೊಂದಿದೆ. ಅಂತೆಯೇ ಡೈಲಿ ಸ್ಟೆಪ್​, ಕ್ಯಾಲೊರಿ ಬರ್ನ್ಡ್, ಸ್ಲಿಪ್​ ಮೊನಿಟರ್​ ಫೀಚರ್​​ಗಳಿವೆ. ಜೊತೆಗೆ 24x​7 ಬುಲ್ಟ್​​ ಎಚ್​ಆರ್​​ ಮೊನಿಟರಿಂಗ್​ ಒಳಗೊಂಡಿದೆ. ಆಕ್ಸಿಜನ್​ ಲೆವೆಲ್​ ತಿಳಿಸುವ VO2 ಸೌಲಭ್ಯ ಹಾಗೂ ಹೃದಯ ಬಡಿತವನ್ನು ಮಾನಿಟರಿಂಗ್​ ಮಾಡುವ ಫೀಚರ್​ ಇದರಲ್ಲಿದೆ.

ಈ ಸ್ಮಾರ್ಟ್​ವಾಚ್​ನಲ್ಲಿ ರನ್ನಿಂಗ್​ ಟ್ರಾಕ್​​ ಮಾಡುವ ಆಯ್ಕೆಯನ್ನು ನೀಡಲಾಗಿದೆ, ಸೈಕ್ಲಿಂಗ್​, ಇನ್​ಡೋರ್​ ಟ್ರಾಕ್​, ಟ್ರೇಡ್​ಮಿಲ್​​, ಕಾರ್ಡಿಯೋ ಆ್ಯಕ್ಟಿವಿಟಿಗಳನ್ನು ನಿಯಮಿತವಾಗಿ ಟ್ರಾಕ್​ ಮಾಡುವ ಸೌಲಭ್ಯವನ್ನು ಅಳವಡಿಸಿಕೊಂಡಿದೆ.

ನೂತನ ಸ್ಮಾರ್ಟ್​ವಾಚ್ 19,990ರೂ ಆಗಿದ್ದು,​ ಅಮೆಜಾನ್​​​ನಲ್ಲಿ ಲಭ್ಯವಿದೆ. ಅಂತೆಯೇ, ಟಾಟಾ ಕ್ಲಿಕ್​, ಮಿಂತ್ರಾದಲ್ಲೂ ಖರೀದಿಗೆ ದೊರೆಯಲಿದೆ. ಗ್ರಾಹಕರಿಗಾಗಿ ಫೋರ್​​ರನ್ನರ್​ 45 ಸ್ಮಾರ್ಟ್​ವಾಚ್​ ಡಿವೈಸ್​ ಲಾವಾ ರೆಡ್​ ಮತ್ತು ಕಪ್ಪು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
First published:August 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...