Garmin Birthday Sale: ಗಾರ್ಮಿನ್​ ವಾಚ್​ಗಳ​ ಮೇಲೆ 14 ಸಾವಿರದಷ್ಟು ಡಿಸ್ಕೌಂಟ್! ಗಿಫ್ಟ್​ ಕೊಡುವವರಿಗೆ ಇದೊಂದು ಒಳ್ಳೆಯ ಅವಕಾಶ!

Garmin smartwatches:ಗಾರ್ಮಿನ್ ಇಂಡಿಯಾದ ಸೇಲ್​ ಆಫರ್​ ಸೆಪ್ಟೆಂಬರ್ 13 ರಿಂದ ಪ್ರಾರಂಭವಾಗಿದೆ. ಇದು ತಿಂಗಳ ಕೊನೆಯ ದಿನದವರೆಗೆ, ಅಂದರೆ ಸೆಪ್ಟೆಂಬರ್ 30, 2021 ರವರೆಗೆ ಮುಂದುವರಿಯುತ್ತದೆ. ಗಾರ್ಮಿನ್ ಕಂಪನಿಯ ವಾರ್ಷಿಕೋತ್ಸವ ಸಂಭ್ರಮವಾಗಿರುವುದರಿಂದ ಹಲವಾರು ಸ್ಮಾರ್ಟ್ ವಾಚ್‌ಗಳ ಮೇಲೆ ಈ ಆಫರ್​ ನೀಡಿದೆ.

Garmin smartwatches

Garmin smartwatches

 • Share this:
  ಅತ್ಯಾಧುನಿಕ ಸ್ಮಾರ್ಟ್ ವಾಚ್ ಮತ್ತು ಜಿಪಿಎಸ್ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಗಾರ್ಮಿನ್ ಇಂಡಿಯಾ ಕಂಪನಿ ವಾರ್ಷಿಕೋತ್ಸವದ ಅಂಗವಾಗಿ ಭಾರತದಲ್ಲಿ ಹೊಸ ಮಾರಾಟವನ್ನು ಘೋಷಿಸಿದೆ. ಮಾರಾಟವು ಆಯ್ದ ಉತ್ಪನ್ನಗಳ ಮೇಲೆ ಶೇ.25 ರಷ್ಟು ರಿಯಾಯಿತಿ ಸೇರಿದಂತೆ ಗಾರ್ಮಿನ್ ವಾಚ್​ ಶ್ರೇಣಿಯ ಮೇಲೆ ಡೀಲ್‌ಗಳನ್ನು ನೀಡುತ್ತಿದೆ.

  ಗಾರ್ಮಿನ್ ಇಂಡಿಯಾದ ಸೇಲ್​ ಆಫರ್​ ಸೆಪ್ಟೆಂಬರ್ 13 ರಿಂದ ಪ್ರಾರಂಭವಾಗಿದೆ. ಇದು ತಿಂಗಳ ಕೊನೆಯ ದಿನದವರೆಗೆ, ಅಂದರೆ ಸೆಪ್ಟೆಂಬರ್ 30, 2021 ರವರೆಗೆ ಮುಂದುವರಿಯುತ್ತದೆ. ಗಾರ್ಮಿನ್ ಕಂಪನಿಯ ವಾರ್ಷಿಕೋತ್ಸವ ಸಂಭ್ರಮವಾಗಿರುವುದರಿಂದ ಹಲವಾರು ಸ್ಮಾರ್ಟ್ ವಾಚ್‌ಗಳ ಮೇಲೆ ಈ ಆಫರ್​ ನೀಡಿದೆ.

  ಗಾರ್ಮಿನ್ ಫೋರನ್ನರ್ 745 (ಕಪ್ಪು/ಮ್ಯಾಗ್ಮಾ ರೆಡ್) - ಗಾರ್ಮಿನ್ ಬರ್ತ್ ಡೇ ಸೇಲ್ ತನ್ನ ಮುಂಚೂಣಿ 745 ಸ್ಮಾರ್ಟ್ ವಾಚ್ ಮೇಲೆ  6,000 ರೂ ರಿಯಾಯಿತಿ ನೀಡುತ್ತಿದೆ. ಆ ಮೂಲಕ 45,990 ರೂ,ಗೆ ಮಾರಾಟ ಮಾಡುತ್ತಿದೆ. ಅಂತೆಯೇ, ಗಾರ್ಮಿನ್ ಲಿಲಿ (ಡಾರ್ಕ್ ಬ್ರಾಂಜ್/ಲೈಟ್ ಗೋಲ್ಡ್) ಮೇಲೆ 3,000 ರೂ ರಿಯಾಯಿತಿ ನಿಡುತ್ತಿದೆ. ಇದು 22,990 ರೂ.ಗೆ ಲಭ್ಯವಿದೆ ಎಂದಿದೆ.

  ಗಾರ್ಮಿನ್ ಇನ್‌ಸ್ಟಿಂಕ್ಟ್‌ (ಗ್ರಾಫೈಟ್) ನಂತಹ ಇತರ ಗಾರ್ಮಿನ್ ಉತ್ಪನ್ನಗಳ ಮೇಲೆ ಇಂತಹ ಬೆಲೆ ಕಡಿತವನ್ನು ಗಮನಿಸಬಹುದಾಗಿದೆ, ಸೋಲರ್​ ಚಾರ್ಜಿಂಗ್ ಅನ್ನು ಬೆಂಬಲಿಸುವ ಗಾರ್ಮಿನ್ ಇನ್ಸ್ಟಿಂಕ್ಟ್ ಸೋಲಾರ್ (ಗ್ರ್ಯಾಫೈಟ್/ಟೈಡಲ್ ಬ್ಲೂ) ವಾಚ್​ 41,490ರೂ ಬೆಲೆ ಸಿಗುತ್ತಿದ್ದು, ಆದರೆ ಕಂಪನಿ ವಾರ್ಷಿಕೋತ್ಸವದ ಸಲುವಾಗಿ 34,990 ರೂ.ಗೆ ಮಾರಾಟವಾಗುತ್ತಿದೆ. ಅಂದಹಾಗೆಯೇ 6,500 ರೂ ರಿಯಾಯಿತಿ ನೀಡುತ್ತಿದೆ. ಗ್ರಾಹಕರಿಗಾಗಿ ಸ್ಮಾರ್ಟ್ ವಾಚ್‌ಗಳ ಆಯ್ದ ಬಣ್ಣದ ಮಾದರಿಗಳಿಗೆ ಮಾತ್ರ ಈ ರಿಯಾಯಿತಿಗಳು ಅನ್ವಯವಾಗುತ್ತವೆ ಎಂದು ಕಂನಿ ತಿಳಿಸಿದೆ.

  ಇದನ್ನು ಓದಿ⇒ Guinness World Record: ಒಂದೇ ಚಾರ್ಜ್​​ನಲ್ಲಿ 1,099 ಕಿಲೋ ಮೀಟರ್ ಕ್ರಮಿಸಿದ ಎಲೆಕ್ಟ್ರಿಕ್​ ಟ್ರಕ್​​!

  ಪ್ರೀಮಿಯಂ ಗಾರ್ಮಿನ್ ಉತ್ಪನ್ನಗಳ ಮೇಲಿನ ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಗಾರ್ಮಿನ್ ಫೆನಿಕ್ಸ್ 6 ಸರಣಿಯ ಸ್ಮಾರ್ಟ್ ವಾಚ್‌ಗಳು ಮಾರಾಟದ ಸಮಯದಲ್ಲಿ ಗಣನೀಯ ಬೆಲೆ ಕಡಿತವನ್ನು ಅನುಭವಿಸುತ್ತಿವೆ. ನೀಲಮಣಿಯಲ್ಲಿರುವ ಫೆನಿಕ್ಸ್ 6 - ಕಾರ್ಬನ್ ಗ್ರೇ ಬಣ್ಣದ ಆಯ್ಕೆಯು ರೂ .72,990 ಕ್ಕೆ ತನ್ನ ಮೂಲ ಬೆಲೆಯ ಮೇಲೆ ರೂ.

  ಇದನ್ನು ಓದಿ⇒ Xiaomi Smartglass: ಕರೆ, ಮ್ಯಾಪ್, ಫೋಟೋ, ಆಡಿಯೋ​ ಎಲ್ಲವೂ ಗಾಗಲ್ಸ್​ನಲ್ಲೇ ಕಂಟ್ರೋಲ್​ ಮಾಡಬಹುದು..ಏನ್ ಗುರು ಟೆಕ್ನಾಲಜಿ!

  ಗಾರ್ಮಿನ್ ಫ್ನಿಕ್ಸ್ 6X ವಾಚ್​ ಮೇಲೆ 10,500 ರೂಪಾಯಿಗಳ ರಿಯಾಯಿತಿ ನೀಡಿದೆ, 88,490 ರೂ ಬೆಲೆಯ ಈ ಸ್ಮಾರ್ಟ್​ವಾಚ್​ 77,990 ರೂ.ಗೆ ಖರೀದಿಗೆ ಸಿಗುತ್ತಿದೆ. ಸೋಲರ್​ ವೇರಿಯಂಟ್​ನಲ್ಲಿ ಸಿಗುವ ಫೆನಿಕ್ಸ್ 6 ಸರಣಿ ಕೈಗಡಿಯಾರಗಳ  ಮೇಲೂ ಆಫರ್​ ನೀಡಿದೆ. ಮಿನರಲ್ ನೀಲಿ ಬಣ್ಣದ ಆಯ್ಕೆಯಲ್ಲಿ ಗಾರ್ಮಿನ್ ಫೆನಿಕ್ಸ್ 6 ಪ್ರೊ ಸೋಲಾರ್ ಅನ್ನು ಮಾರಾಟ ಮಾಡುತ್ತಿದ್ದು, 84,490ರೂ.ಗೆ ಸೇಲ್ ಮಾಡುತ್ತಿದೆ. ಅಂದರೆ ಗ್ರಾಹಕರು ಈ ಸ್ಮಾರ್ಟ್ ವಾಚ್ ಮೇಲೆ 14,500 ರೂಪಾಯಿಗಳ ಭಾರೀ ರಿಯಾಯಿತಿ ಪಡೆಯಬಹುದಾಗಿದೆ.

  ಟೈಟಾನಿಯಂ ಕಾರ್ಬನ್ ಗ್ರೇ ಬಣ್ಣದಲ್ಲಿ ಗಾರ್ಮಿನ್ ಫೆನಿಕ್ಸ್ 6X ಪ್ರೊ ಸೋಲಾರ್ ಸ್ಮಾರ್ಟ್ ವಾಚ್ ಮೇಲೆ 11,500 ರೂ.ಗಳ ಬೆಲೆ ಕಡಿತ ಮಾಡಿದೆ. ಇದರೊಂದಿಗೆ, 98,990 ರೂ.ವಿನ ಗಾರ್ಮಿನ್ ಸ್ಮಾರ್ಟ್ ವಾಚ್ ಅನ್ನು 87,490 ಕ್ಕೆ ಮಾರಾಟ  ಮಾಡುತ್ತಿದೆ.
  Published by:Harshith AS
  First published: