HOME » NEWS » Tech » GAME DESIGNER STUDENTS CAN EARN IN THOUSANDS BY DOING COURSES TO BECOME GAME DESIGNER OR GAME DEVELOPER HG

Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಸುಲಭದ ಕೋರ್ಸ್​ಗಳು ಇಲ್ಲಿವೆ

Game Designer: ಕಳೆದ ವರ್ಷದ ವಿಡಿಯೋ ಗೇಮಿಂಗ್​​ ಉದ್ಯಮದಲ್ಲಿ ಭಾರತ ಅದ್ಭುತ ಬೆಳವಣಿಗೆ ಕಂಡಿದೆ. ಅನೇಕ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ವಲಯದತ್ತ ಮುನ್ನುಗುತ್ತಿದ್ದು, ಗೇಮಿಂಗ್​ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

news18-kannada
Updated:June 16, 2021, 9:35 AM IST
Game Developer: ಗೇಮಿಂಗ್ ಡೆವೆಲಪರ್ ಆಗ್ಬೇಕಾ? ಸುಲಭದ ಕೋರ್ಸ್​ಗಳು ಇಲ್ಲಿವೆ
Photo: Google
  • Share this:
ಸ್ಮಾರ್ಟ್​ಫೋನ್​ ಮತ್ತು ಲ್ಯಾಪ್​ಟಾಪ್​ ಮೂಲಕ ಗೇಮಿಂಗ್​ ಆಡುವುದು ಹವ್ಯಾಸವಾಗಿಬಿಟ್ಟಿದೆ. ಪುಟಾಣಿ ಮಕ್ಕಳಿಂದ ಹಿಡಿದು ಯುವಕರು ವಿಡಿಯೋ ಗೇಮಿಂಗ್​ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆನ್​ಲೈನ್​ ಸಾಕಷ್ಟು ವಿಡಿಯೋ ಗೇಮಿಂಗ್​​ ಕೂಡ  ಸಿಗುತ್ತಿದೆ. ಪ್ರಸ್ತುತ ವಿಡಿಯೋ ಗೇಮಿಂಗ್​ ಅಭಿವೃದ್ಧಿ ಪಡಿಸುವ ಕೋರ್ಸ್​ನತ್ತ ಯುವ ಜನರು ಮುಂದಾಗುತ್ತಿದ್ದಾರೆ. ಇದನ್ನೇ ಉತ್ತಮ ವೃತ್ತಿಯನ್ನಾಗಿ ಆಯ್ಕೆ ಮಾಡುತ್ತಿದ್ದಾರೆ.

ಕಳೆದ ವರ್ಷದ ವಿಡಿಯೋ ಗೇಮಿಂಗ್​​ ಉದ್ಯಮದಲ್ಲಿ ಭಾರತ ಅದ್ಭುತ ಬೆಳವಣಿಗೆ ಕಂಡಿದೆ. ಅನೇಕ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ವಲಯದತ್ತ ಮುನ್ನುಗುತ್ತಿದ್ದು, ಗೇಮಿಂಗ್​ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ಗೇಮ್​ ಡಿಸೈನರ್​ ಅಥವಾ ಗೇಮ್​ ಡೆವೆಲಪರ್​ ಕೋರ್ಸ್​ಗಳನ್ನು ಮಾಡುವ ಮೂಲಕ ಉತ್ತಮವಾಗಿ ಹಣ ಗಳಿಸಬಹುದಾಗಿದೆ.

ಗೇಮ್​ ಡೆವೆಲಪರ್​ ಆಗಲು ಕಲ್ಪನೆ, ಆಲೋಚನೆ, ಸೃಜನಶೀಲತೆ ತುಂಬಾ ಮುಖ್ಯ. ಹಾಗಿದ್ದರೆ ಮಾತ್ರ ಒಂದೊಳ್ಳೆ ಗೇಮ್​ ರಚಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಗೇಮಿಂಗ್​ ಸಾಫ್ಟ್​ವೇರ್​ ಮತ್ತು ಗೇಮಿಂಗ್​ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಬೇಕು. ಗೇಮಿಂಗ್​ ವೃತ್ತಿಯತ್ತ ತೆರಳಲು ಚಿತ್ರಕಲೆ ಮತ್ತು ಲೈಟಿಂಗ್​​ ಅಗತ್ಯವಾಗಿದೆ.

ಎಸ್​ಎಸ್​​ಎಲ್​ಸಿ ಮತ್ತು ಪಿಯುಸಿ ನಂತರ ಮಲ್ಟಿಮೀಡಿಯಾ ಮತ್ತು ಗೇಮಿಂಗ್​ ಅನಿಮೇಷನ್​ ಕೋರ್ಸ್​ ಮೂಲಕ  ಗೇಮ್ ಡಿಸೈನಿಂಗ್​​ ಕಳಿಯಬಹುದಾಗಿದೆ. ದೇಶದಾದ್ಯಂತ ವಿವಿಧ ಸಂಸ್ಥೆಗಳು ಡಿಪ್ಲೊಮಾ, ಪದವಿ ಮತ್ತು ಪ್ರಮಾಣಪತ್ರ ಆಧಾರದಲ್ಲಿ ಕೋರ್ಸ್​ ಮಾಡಬಹುದಾಗಿದೆ.

ಗೇಮಿಂಗ್​ ಕೋರ್ಸ್​​ ಎಲ್ಲೆಲ್ಲಿದೆ?

-ಭಾರ್ತಿ ವಿದ್ಯಾಪೀತ್ ಡೀಮ್ಡ್ ವಿಶ್ವವಿದ್ಯಾಲಯ, ಪುಣೆ-ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್ಡ್ ಸಿನೆಮ್ಯಾಟಿಕ್ (ಎಂಎಎಸಿ), ಮುಂಬೈ

-ಅರೆನಾ ಆನಿಮೇಷನ್ಸ್, ನವದೆಹಲಿ

-ಝೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ಸ್, ಬೆಂಗಳೂರು

-ಐಪಿಕ್ಸಿಯೊ ಆನಿಮೇಷನ್ ಕಾಲೇಜು, ಬೆಂಗಳೂರು

-ಅನಿಮಾಸ್ಟರ್ ಅಕಾಡೆಮಿ - ಕಾಲೇಜ್ ಫಾರ್ ಎಕ್ಸಲೆನ್ಸ್ ಇನ್ ಆನಿಮೇಷನ್, ಬೆಂಗಳೂರು

-ಅಕಾಡೆಮಿ ಆಫ್ ಆನಿಮೇಷನ್ ಅಂಡ್ ಗೇಮಿಂಗ್, ನೋಯ್ಡಾ

ಗೇಮಿಂಗ್​ ಕೋರ್ಸ್​ ಮಾಡಿದ ನಂತರ ತಿಂಗಳಿಗೆ 15 ಸಾವಿರದಿಂದ 18 ಸಾವಿರದವರೆಗೆ ಸಂಬಳವನ್ನು ಗಳಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಅನುಭವ ಹೊಂದಿದ ನಂತರ ಲಕ್ಷ ಸಂಬಳ ಗಳಿಸಬಹುದಾಗಿದೆ.
Published by: Harshith AS
First published: June 16, 2021, 9:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories