• Home
  • »
  • News
  • »
  • tech
  • »
  • Samsung Smart Tv: ಈ ಸ್ಮಾರ್ಟ್​ ಟಿವಿಯನ್ನು ಖರೀದಿಸಿದ್ರೆ ಗ್ಯಾಲಕ್ಸಿ ಫೋಲ್ಡ್​ ಮೊಬೈಲ್​ ಉಚಿತ! ಇಲ್ಲಿದೆ ಕಂಪ್ಲೀಟ್ ಮಾಹಿತಿ

Samsung Smart Tv: ಈ ಸ್ಮಾರ್ಟ್​ ಟಿವಿಯನ್ನು ಖರೀದಿಸಿದ್ರೆ ಗ್ಯಾಲಕ್ಸಿ ಫೋಲ್ಡ್​ ಮೊಬೈಲ್​ ಉಚಿತ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸ್ಯಾಮ್​ಸಂಗ್​ ಬಿಗ್​ ಟಿವಿ ಡೇಸ್ ಸೇಲ್​

ಸ್ಯಾಮ್​ಸಂಗ್​ ಬಿಗ್​ ಟಿವಿ ಡೇಸ್ ಸೇಲ್​

ಸ್ಯಾಮ್​​ಸಂಗ್ ಬಿಗ್​ ಟಿವಿ ಡೇಸ್​ ಸೇಲ್​ ಅನ್ನು ಇದೀಗ ವರ್ಷಾಂತ್ಯದಲ್ಲಿ ಪ್ರಾರಂಭಿಸಿದೆ. ಇದರಲ್ಲಿ ಬಿಗ್​ ಸ್ಮಾರ್ಟ್​ ಟಿವಿಗಳನ್ನು ಭಾರೀ ಅಗ್ಗದಲ್ಲಿ ಖರೀದಿಸಬಹುದಾಗಿದೆ. ಜೊತೆಗೆಗ್ಯಾಲಕ್ಸಿ ಝಡ್​ ಫೋಲ್ಡ್​  4 ಸ್ಮಾರ್ಟ್​ಫೋನ್ ಕೂಡ ಉಚಿತವಾಗಿ ಸಿಗಲಿದೆ ಎಂದು ಹೇಳಿದೆ. ಅದರೆ ಈ ಆಫರ್​ 2023 ಜನವರಿ 31 ರವರೆಗೆ ಮಾತ್ರ ಲಭ್ಯವಿರುತ್ತದೆ.

ಮುಂದೆ ಓದಿ ...
  • Share this:

    ಸ್ಯಾಮ್​ಸಂಗ್​ ಕಂಪನಿ (Samsung Company) ತನ್ನ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಟ್ಷು ಜನಪ್ರಿಯತೆಯನ್ನು ಪಡೆದಿದೆ. ಇದೀಗ ಈ ಕಂಪನಿ ಸ್ಮಾರ್ಟ್​ ಟಿವಿಗಳನ್ನು (Smart Tv) ಉತ್ಪಾದಿಸುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುತ್ತಿದೆ. ಸ್ಯಾಮ್​ಸಂಗ್​ ಹೇಳಿದಾಗಲೇ ನಮಗೆಲ್ಲರಿಗೂ ಮೊದಲಿಗೆ ನೆನಪಾಗೋದೇ ಸ್ಮಾರ್ಟ್​​ಫೋನ್​ಗಳು. ಆದರೆ ಇನ್ಮುಂದೆ ಸ್ಯಾಮ್​ಸಂಗ್ ಎಂಬ ಹೆಸರನ್ನು ಕೆಳುವಾಗ ಸ್ಮಾರ್ಟ್​ ಟಿವಿಗಳ ನೆನಪಾಗುವಂತೆ ಕಂಪನಿ ಮಾಡಿದೆ. ಹೇಗೆಂದರೆ, ಕಂಪನಿ ಇದೀಗ ಸ್ಯಾಮ್​ಸಂಗ್ ಬಿಗ್​ ಟಿವಿ ಡೇಸ್​ ಸೇಲ್ (Samsung Big Days Sale)​ ಅನ್ನು ಆರಂಭಿಸಿದೆ. ಈ ಸೇಲ್​ನಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್​​ ಟಿವಿಗಳನ್ನು ಭಾರೀ ಅಗ್ಗದಲ್ಲಿ ಮಾರಾಟ ಮಾಡುತ್ತಿದೆ. ಜೊತೆಗೆ ಈ ಟಿವಿಗಳನ್ನು ಖರೀದಿಸಿದರೆ ಸ್ಯಾಮ್​ಸಂಗ್​ ಗ್ಯಾಲಕ್ಸಿ ಝಡ್​ ಫೋಲ್ಡ್​ 4 (Samsung Galaxy Z Fold 4) ಮೊಬೈಲ್​ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಿಸಿದೆ.


    ಸ್ಯಾಮ್​​ಸಂಗ್ ಬಿಗ್​ ಟಿವಿ ಡೇಸ್​ ಸೇಲ್​ ಅನ್ನು ಇದೀಗ ವರ್ಷಾಂತ್ಯದಲ್ಲಿ ಪ್ರಾರಂಭಿಸಿದೆ. ಇದರಲ್ಲಿ ಬಿಗ್​ ಸ್ಮಾರ್ಟ್​ ಟಿವಿಗಳನ್ನು ಭಾರೀ ಅಗ್ಗದಲ್ಲಿ ಖರೀದಿಸಬಹುದಾಗಿದೆ. ಜೊತೆಗೆಗ್ಯಾಲಕ್ಸಿ ಝಡ್​ ಫೋಲ್ಡ್​  4 ಸ್ಮಾರ್ಟ್​ಫೋನ್ ಕೂಡ ಉಚಿತವಾಗಿ ಸಿಗಲಿದೆ ಎಂದು ಹೇಳಿದೆ. ಅದರೆ ಈ ಆಫರ್​ 2023 ಜನವರಿ 31 ರವರೆಗೆ ಮಾತ್ರ ಲಭ್ಯವಿರುತ್ತದೆ.


    ಯಾವೆಲ್ಲಾ ಸ್ಮಾರ್ಟ್​ ಟಿವಿಗಳು ಆಫರ್​​ನಲ್ಲಿ ಲಭ್ಯ?


    ಭಾರತದಲ್ಲಿ ನಿಯೋ QLED 8K, ನಿಯೋ QLED TV, ಪ್ರೇಮ್‌ ಮತ್ತು ಕ್ರಿಸ್ಟಲ್ 4K UHD ಸ್ಮಾರ್ಟ್‌ ಟಿವಿಗಳಲ್ಲಿ ಇದೀಗ ಹೊಸ ಡೀಲ್‌ಗಳು ಮತ್ತು ಕೊಡುಗೆಗಳನ್ನು ಪ್ರಕಟಿಸಿದೆ. ಈ ಕೊಡುಗೆಗಳು ಜನವರಿ 31, 2023 ರವರೆಗೆ ಲಭ್ಯವಿರಲಿದ್ದು, ಗ್ರಾಹಕರಿಗೆ ಗ್ಯಾಲಕ್ಸಿ Z ಫೋಲ್ಡ್‌ 4, ಗ್ಯಾಲಕ್ಸಿ A23, ಅಥವಾ ಸ್ಯಾಮ್‌ಸಂಗ್‌ ಲೈಫ್‌ಸ್ಟೈಲ್ ಸೌಂಡ್‌ಬಾರ್ ಅನ್ನು ಉಚಿತವಾಗಿ ಕಂಪನಿ ನೀಡಲಿದೆ ಎಂದು ಹೇಳಿದೆ.


    ಇದನ್ನೂ ಓದಿ: ಈ ಸಿಮ್​ ಗ್ರಾಹಕರಿಗೆ ಗುಡ್​ ನ್ಯೂಸ್​! ಹೊಸವರ್ಷಕ್ಕೆ ಭಾರೀ ಅಗ್ಗದ ರೀಚಾರ್ಜ್​ ಪ್ಲ್ಯಾನ್ ಬಿಡುಗಡೆ


    ಆಫರ್ಸ್​ಗಳು ಹೇಗಿದೆ?


    98 ಇಂಚಿನ ನಿಯೋ QLED TV ಮತ್ತು 85 ಇಂಚಿನ ಮತ್ತು 75 ಇಂಚಿನ ನಿಯೋ QLED 8K ಮಾದರಿ ಟಿವಿಗಳನ್ನು ಖರೀದಿಸುವ ಗ್ರಾಹಕರು, 2 ವರ್ಷಗಳ ವ್ಯಾರಂಟಿ ಜೊತೆಗೆ 1,54,999 ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಅನ್ನು ಉಚಿತವಾಗಿ ಪಡೆಯುತ್ತಾರೆ.


    ಸ್ಯಾಮ್​ಸಂಗ್​ ಬಿಗ್​ ಟಿವಿ ಡೇಸ್ ಸೇಲ್​


    ಹಾಗೆಯೇ 85 ಇಂಚಿನ ಮತ್ತು 75 ಇಂಚಿನ ನಿಯೋ QLED ಟಿವಿ ಮಾಡೆಲ್‌ಗಳು, 75 ಇಂಚಿನ ದಿ ಫ್ರೇಮ್‌ ಟಿವಿ ಅಥವಾ 85 ಇಂಚಿನ ಮತ್ತು 75 ಇಂಚಿನ ಅಲ್ಟ್ರಾ ಹೆಚ್‌ಡಿ 4ಕೆ QLED ಮಾಡೆಲ್‌ಗಳನ್ನು ಖರೀದಿಸಿದರೆ, ಗ್ರಾಹಕರು 40,999 ರೂಪಾಯಿ ಮೌಲ್ಯದ HW-S801B ಸ್ಯಾಮ್‌ಸಂಗ್‌ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ.


    65 ಇಂಚಿನ ನಿಯೋ QLED 8ಕೆ ಟಿವಿ, 85 ಇಂಚಿನ, 75 ಇಂಚಿನ, 65 ಇಂಚಿನ ಮತ್ತು 55 ಇಂಚಿನ ನಿಯೋ QLED ಟಿವಿಗಳ ಖರೀದಿಯ ಮೇಲೆ, 85 ಇಂಚಿನ, 75 ಇಂಚಿನ, 65 ಇಂಚಿನ ಅಲ್ಟ್ರಾ ಹೆಚ್‌ಡಿ 4K QLED ಟಿವಿಗಳು, ಅಥವಾ 75 ಇಂಚಿನ ಮತ್ತು 85 ಇಂಚಿನಕ್ರಿಸ್ಟಲ್ 4K UHD ಟಿವಿಗಳನ್ನು ಖರೀದಿಸಿದರೆ ಗ್ರಾಹಕರು 18,499ರೂಪಾಯಿ ಮೌಲ್ಯದ ಉಚಿತವಾಗಿ ಗ್ಯಾಲಕ್ಸಿ ಎ23 ಸ್ಮಾರ್ಟ್​ಫೋನ್ ಅನ್ನು ಪಡೆಯುತ್ತಾರೆ.


    ಖರೀದಿಸುವ ಆಯ್ಕೆ


    ಈ ಎಲ್ಲಾ ಸ್ಮಾರ್ಟ್​​​ ಟಿವಿಗಳನ್ನು ಸ್ಯಾಮ್​ಸಂಗ್​ನ ಅಧಿಕೃತ ಆನ್​ಲೈನ್​ ಸ್ಟೋರ್​ ಆಗಿರುವ ಸ್ಯಾಮ್​ಸಂಗ್​ ಶಾಪ್​ ಮತ್ತು ಎಲ್ಲಾ ರೀಟೇಲ್​ ಸ್ಟೋರ್​ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ 10 ಪ್ರತಿಶತ ಕ್ಯಾಶ್‌ಬ್ಯಾಕ್ ಪಡೆಯಬಹುದು ಜೊತೆಗೆ 20 ಶೇಕಡಾದವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ.


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಝಡ್​ ಫೋಲ್ಡ್​ 4 ಸ್ಮಾರ್ಟ್​ಫೋನ್​ ಫೀಚರ್ಸ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್​ ಫೋಲ್ಡ್‌ 4 ಸ್ಮಾರ್ಟ್‌ಫೋನ್‌ 7.6 ಇಂಚಿನ ಡೈನಾಮಿಕ್ ಅಮೋಲ್ಡ್​ 2X ಇನ್ಫಿನಿಟಿ ಫ್ಲೆಕ್ಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದಲ್ಲದೆ 6.2 ಇಂಚಿನ HD+ ಡೈನಾಮಿಕ್ ಅಮೋಲ್ಡ್​2X ಕವರ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 23.1:9 ರಚನೆಯ ಅನುಪಾತವನ್ನು ಹೊಂದಿದೆ.


    ಸ್ಯಾಮ್​ಸಂಗ್​ ಬಿಗ್​ ಟಿವಿ ಡೇಸ್ ಸೇಲ್​


    ಇನ್ನು ಇದರ ಕ್ಯಾಮೆರಾ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮೇನ್‌ ಡಿಸ್‌ಪ್ಲೇಯಲ್ಲಿ 4 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ಹಾಗೂ ಕವರ್ ಡಿಸ್‌ಪ್ಲೇಯಲ್ಲಿ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು