• Home
  • »
  • News
  • »
  • tech
  • »
  • Gmail: ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯಾ! ಸುಲಭವಾಗಿ ಹೀಗೆ ಕ್ಲಿಯರ್ ಮಾಡಿ

Gmail: ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯಾ! ಸುಲಭವಾಗಿ ಹೀಗೆ ಕ್ಲಿಯರ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್‌ಗಳಲ್ಲಿ ಜಿಮೇಲ್ ಒಂದಾಗಿದೆ. ಜಿ-ಮೇಲ್​ನ ಸ್ಟೋರೇಜ್ ಫುಲ್ ಅದ್ರೆ ಸಮಸ್ಯೆ ಒಂದೆರಡಲ್ಲ. ಸುಲಭವಾಗಿ ಕಡಿಮೆ ಸಮಯದಲ್ಲಿ ಸ್ಟೋರೆಜ್ ಫ್ರೀ ಮಾಡ್ಕೊಳ್ಳೋಕೆ ಇಲ್ಲಿವೆ ಟಿಪ್ಸ್.

  • Share this:

    ಮೇಲ್‌ಗಳನ್ನು (Email) ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್‌ಗಳಲ್ಲಿ (Application) ಜಿಮೇಲ್ (Gmail) ಒಂದಾಗಿದೆ. ಇದನ್ನು ವೈಯಕ್ತಿಕ ಮತ್ತು ವೃತ್ತಿಪರ ಕೆಲಸಕ್ಕಾಗಿ ಬಳಸಲಾಗುತ್ತದೆ. ಈಗ ಸಾಮಾನ್ಯವಾಗಿ ಎಲ್ಲಾ  ಕಾರ್ಯಗಳಿಗೆ ಇಮೇಲ್ ಅನ್ನು ಬಳಕೆ ಮಾಡಲಾಗುತ್ತದೆ. ನೀವು ಹಲವಾರು ಸೇವೆಗಳಿಗೆ ಚಂದಾದಾರರಾಗಿದ್ದರೆ ಮತ್ತು ಅಧಿಕೃತ ಉದ್ದೇಶಗಳಿಗಾಗಿ ಅದೇ ಇಮೇಲ್ ಐಡಿಯನ್ನು (Email Id) ಬಳಸಿದರೆ, ನಿಮ್ಮ ಇನ್‌ಬಾಕ್ಸ್ ಗೆ ಸಾವಿರಾರು ಇಮೇಲ್‌ಗಳು ಬರುತ್ತಲೇ ಇರುತ್ತವೆ. ಇದನ್ನು ನೀವು ಗಮನಿಸಿರಬಹುದು. ಈ ರೀತಿ ಹಲವಾರು ಸಂದೇಶಗಳು (Message) ಬರುವುದರಿಂದ ನಮಗೆ ಗೊತ್ತಾಗದೆ ನಮ್ಮ ಜಿಮೇಲ್ ತುಂಬಿಬಿಡುತ್ತದೆ. ಅದರೆ ಈ ಟ್ರಿಕ್ಸ್​ನ ನೀವು ಬಳಸಿದರೆ ನಿಮ್ಮ ಇಮೇಲ್ ಸ್ಟೋರೆಜ್ ಕ್ಲೀಯರ್ (Clear) ಆಗುತ್ತೆ.


    ಹಲವಾರು ಬಾರಿ ಇಮೇಲ್‌ ಗಳು ಬಂದು ನಿಮ್ಮ ಜಿಮೇಲ್ ಇನ್ ಬಾಕ್ಸ್ ಸ್ಟೋರೇಜ್ ಫುಲ್ ಆಗಿ ಬೇರೆ ಯಾವುದೇ ಹೊಸ ಇಮೇಲ್ ಬರದೆ ತೊಂದರೆ ಉಂಟಾಗಬಹುದು. ಅಗತ್ಯವಾದ ಇಮೇಲ್​ಗಾಗಿ ಕಾಯುವ ಸಂದರ್ಭದಲ್ಲಿ ಇಂತಹ ಇಕ್ಕಟ್ಟಿನಲ್ಲಿ ಒದ್ದಾಡಿದವರು ಅದೇಷ್ಟೋ ಮಂದಿ ಇರಬಹುದು. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
    ಈ ಟ್ರಿಕ್ಸ್ ಫೋಲೊ ಮಾಡಿ.


    ಅನಗತ್ಯ ಮೇಲ್​ಗಳನ್ನ ಡಿಲೀಟ್ ಮಾಡಿಬಿಡಿ


    ಅನಗತ್ಯ ಇಮೇಲ್‌ಗಳನ್ನು ಅಳಿಸಲು ಹಲವಾರು ಮಾರ್ಗಗಳಿವೆ. ಆದರೆ ಅದಕ್ಕಾಗಿ ನೀವು ಕಷ್ಟಪಡಬೇಕಾಗಿಲ್ಲ. ಇಲ್ಲಿ ನಾವು ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಸಹಾಯ ಮಾಡುವ ಅತ್ಯುತ್ತಮ ಮತ್ತು ಸುಲಭವಾದ ಮಾರ್ಗವನ್ನು ತಿಳಿಸುತ್ತೇವೆ. ಅದೇನು ಅಂತ ಮುಂದೆ ನೋಡಿ.


    Gmail Storage Full! It can be cleared by doing this
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: Twitter Down: ದೇಶದ ಹಲವೆಡೆ ಟ್ವಿಟರ್ ಡೌನ್, ಲಾಗಿನ್​ ಆಗದೇ ಬಳಕೆದಾರರ ಪರದಾಟ


    ಜಿಮೇಲ್ ಸ್ಟೋರೆಜ್  ಕ್ಲೀಯರ್ ಮಾಡುವುದು  ಹೇಗೆ?


    ನೀವು ಜಿಮೇಲ್‌ನಲ್ಲಿ ಫಿಲ್ಟರ್ ಫೀಚರ್ ಅನ್ನು ಸರಳವಾಗಿ ಬಳಸಬಹುದು. ಯಾವುದೇ ಪ್ರಮುಖವಾದ ಇಮೇಲ್, ಮಾಹಿತಿಗಳು ನಷ್ಟವಾಗದಂತೆ ಒಂದೇ ಬಾರಿಗೆ ಸಾವಿರಾರು ಇಮೇಲ್‌ಗಳನ್ನು ನೀವು ಡಿಲೀಟ್ ಮಾಡಬಹುದು. ಅದಕ್ಕಾಗಿ ನೀವು ಫಿಲ್ಟರ್ ಐಕಾನ್ ಅನ್ನು ಕ್ಲಿಕ್ ಮಾಡಬೇಕು.


    ನಿಮ್ಮ ಕಂಪ್ಯೂಟರ್‌ನಲ್ಲಿ ಜಿಮೇಲ್‌ನ ಮೇಲ್ಭಾಗದಲ್ಲಿ ಸರ್ಚ್ ಮೇಲ್‌ ಎಂದು ಬರೆದಿರುವುದನ್ನು ಗಮನಿಸಿ. ಇಲ್ಲಿ ನಿಮಗೆ ನೂರಾರು ಇಮೇಲ್‌ಗಳನ್ನು ಕಳುಹಿಸಿರುವ ಯಾವುದೇ ಸೇವೆಯ ಹೆಸರು ಅಥವಾ ಇಮೇಲ್ ವಿಳಾಸವನ್ನು ಟೈಪ್ ಮಾಡಿ. ಆ ಬಳಿಕ ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿ. ಆ ಜಿಮೇಲ್ ಐಡಿಯಿಂದ ಅಥವಾ ಇಮೇಲ್ ಐಡಿಯಿಂದ ಬಂದಿರುವ ಎಲ್ಲಾ ಇಮೇಲ್‌ಗಳು ನಿಮಗೆ ಕಾಣಲಿದೆ. ನೀವು ಎಲ್ಲವನ್ನೂ ಒಂದೇ ಬಾರಿಗೆ ಅಳಿಸಬಹುದು. ಮೇಲಿನ ಎಡ ಮೂಲೆಯಲ್ಲಿ ಸಣ್ಣ ಚೌಕದ ಬಾಕ್ಸ್ ಇದೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಇಮೇಲ್‌ಗಳು ಆಯ್ಕೆಯಾಗುತ್ತವೆ.


    ಇದನ್ನೂ ಓದಿ: Bluetooth App: ನಿಮ್ಮ ಮೊಬೈಲ್​ನಲ್ಲಿ ಈ ರೀತಿಯ ಆ್ಯಪ್​ಗಳು ಇದ್ರೆ ಈಗಲೇ ಡಿಲೀಟ್ ಮಾಡಿ


    ಉದಾಹರಣೆಗೆ ನೀವು ಓಲಾ  ಎಂದು ಟೈಪ್ ಮಾಡಬಹುದು, ಹುಡುಕಾಟ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ನಂತರ ಎಲ್ಲಾ ಓಲಾ ಇಮೇಲ್‌ಗಳನ್ನು ಒಂದೇ ಬಾರಿಗೆ ಆಯ್ಕೆ ಮಾಡಿ  ಅಳಿಸಬಹುದು.


    ಮೊಬೈಲ್‌ ಸ್ಟೋರೆಜ್​ನ ಹೀಗೂ ಕ್ಲೀಯರ್ ಮಾಡಬಹುದು


    ಮೊಬೈಲ್​ನಲ್ಲಿ ಒಂದೆಬಾರಿ ಅಳಿಸಲು  ಸಾದ್ಯವಿಲ್ಲ. ನೀವು ಪ್ರತಿಒಂದನ್ನು ಕ್ಲಿಕ್​ಮಾಡಿಕೊಂಡು ಡಿಲೀಟ್ ಮಾಡಬೇಕಾಗುತ್ತದೆ. ಇದಕ್ಕೂ ಒಂದು ಸುಲಭವಾದ ಮಾರ್ಗವಿದೆ. ಅದೇನೆಂದರೆ ನೀವು ಲ್ಯಾಪ್​ಟಾಪ್, ಡೆಸ್ಕ್​ಟಾಪ್​ನಲ್ಲಿ ಡಿಲೀಟ್ ಮಾಡಿದರೆ ಸುಲಭವಾಗಿ ಕೆಲಸ ಮುಗಿಯುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಜಿ ಮೇಲ್ ಸ್ಟೋರೆಜ್ ಕ್ಲೀಯರ್ ಮಾಡಬಹುದು.

    Published by:Harshith AS
    First published: