ಸದ್ಯದಲ್ಲೇ ಬರಲಿದೆ ರೆಕ್ಕೆಯಲ್ಲಿ ಕುಳಿತು ಹಾರಾಟ ನಡೆಸಬಹುದಾದ ವಿಮಾನ!

ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್​ ಕೂಡ ಇದರ ರೆಕ್ಕೆಯಲ್ಲಿ ನೀಡಲಾಗಿದ್ದು, ಶೇ 20ರಷ್ಟು ಇಂಧನ ಮಿತವ್ಯಯ ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:September 9, 2020, 1:07 PM IST
ಸದ್ಯದಲ್ಲೇ ಬರಲಿದೆ ರೆಕ್ಕೆಯಲ್ಲಿ ಕುಳಿತು ಹಾರಾಟ ನಡೆಸಬಹುದಾದ ವಿಮಾನ!
Flying-V
  • Share this:
ಇತ್ತೀಚೆಗೆ ವಿದೇಶಿ ಮಹಿಳೆಯೊಬ್ಬಳು ಸೆಖೆಯೆಂದು ತುರ್ತು ನಿರ್ಗಮನ ದ್ವಾರದಿಂದ ಮಿಮಾನದ ರೆಕ್ಕೆ ಮೇಲೆ ಬಂದು ಓಡಾಡಿದ್ದಳು. ಆಕೆಯ ಸಾಹಸ ಅನೇಕರನ್ನು ಬೆಚ್ಚಿಬೀಳಿಸುವಂತೆ ಮಾಡಿತಲ್ಲದೆ, ರೆಕ್ಕೆ ಮೇಲೆ ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ವಿಮಾನದಿಂದ ಹೊರ ಹೋಗುವ ಸಮಯದಲ್ಲಿ ಕ್ಯೂ ಇದೆ ಎಂದು ಮಹಿಳೆ ರೆಕ್ಕೆ ಮೇಲೆ ಬಂದು ತನ್ನ ಸೆಖೆ ನಿವಾರಿಸಿದ್ದಳು. ಇಂತಹ ಸಾಹಸದಿಂದಾಗಿ ವಿಮಾನದ ರೆಕ್ಕೆಗೆ ಹಾನಿಯಾದರೆ ಸಾವಿರಾರು ಜನರ ಜೀವಕ್ಕೆ ಅಪಾಯ ಬರುವುದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಸನ್ನಿವೇಷಗಳ ನಡುವೆ ವಿಜ್ಞಾನಿಗಳು ರೆಕ್ಕೆಯಲ್ಲಿ ಕುಳಿತು ಹಾರಾಟ ನಡೆಸಬಹುದಾದ ವಿಮಾನವೊಂದನ್ನು ಸಿದ್ಧಪಡಿಸಿದ್ದಾರೆ. ಜರ್ಮನಿಯ ವಿಜ್ಞಾನಿಗಳು ಇಂತಹದೊಂದು ಚಿಂತನೆ ನಡೆಸುವ ಮೂಲಕ ಹೊಸ ಅನ್ವೇಷಣೆ ಮಾಡಿದ್ದಾರೆ. ವಿ ಆಕೃತಿಯ ವಿಮಾನವನ್ನು ಸಿದ್ಧಪಡಿಸಿದ್ದಾರೆ. ನಂತರ ಅದನ್ನು ಹಾರಾಟ ನಡೆಸಿದ್ದಾರೆ. 

ಡಚ್​​ ಏರ್​ಲೈನ್ಸ್​​ ಕೆಎಲ್​ಎಂ ಸಹಯೋಗದೊಂದಿಗೆ ನೆದರ್​ಲ್ಯಾಂಡ್​​​ ಡೆಲ್ಫ್​​​​ ಯುನಿವರ್ಸಿಟಿಯ ತಂತ್ರಜ್ಞಾನ ವಿಭಾಗ ಫ್ಲೈಯಿಂಗ್​-ವಿ ಎಂಬ ವಿಮಾನವನ್ನು ಸಿದ್ಧಪಡಿಸಿ ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ.

ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್​ ಕೂಡ ಇದರ ರೆಕ್ಕೆಯಲ್ಲಿ ನೀಡಲಾಗಿದ್ದು, ಶೇ 20ರಷ್ಟು ಇಂಧನ ಮಿತವ್ಯಯ ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫ್ಲೈಯಿಂಗ್​-ವಿ


ಮೊದಲ ಯಶಸ್ವಿ ಹಾರಾಟದ ಬಳಿಕ ಸಂಶೋಧನಾ ತಂಡದ ಜವಾಬ್ದಾರಿ ಹೊರುತ್ತಿರುವ ಡೆಲ್ಫ್ ವಿಶ್ವವಿದ್ಯಾಲಯದ ರುಲೋಫ್ ವೋಸ್‌ ಮಾತನಾಡಿದರು. ವಿಮಾನದ ಹಾರಾಟದಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ಆದರೆ ತಿರುಗುವ ಹಂತದಲ್ಲಿ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಲ್ಯಾಂಡಿಂಗ್‌ ಸಂದರ್ಭ ಸಮಸ್ಯೆ ಇದೆ. ರನ್‌ ವೇ ಸ್ಪರ್ಶಿಸುವ ವೇಳೆ ಪ್ರಯಾಣಿಕರಿಗೆ ಭಯವಾಗಬಹುದು. ಹಾಗಾಗಿ ಮುಂದಿನ ಹಂತದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದಿದ್ದಾರೆ.

ದಿನೆ ದಿನೇ ತಂತ್ರಜ್ಞಾನದಲ್ಲಿ ಬದಲಾವಣೆಗಳು ಆಗುತ್ತಿದೆ. ಹೊಸ ಆವಿಷ್ಕಾರಗಳು ಬರುತ್ತಿದೆ. ಇದೀಗ ರೆಕ್ಕೆಯಲ್ಲಿ ಕುಳಿತು ಪ್ರಯಾಣಿಸುವಂತೆ ಫೈ-ವಿ ವಿಮಾನವನ್ನು ಸಿದ್ಧಪಡಿಸಲಾಗಿದೆ. ಸದ್ಯ ಮೊದಲ ಹಾರಾಟದ ವೇಳೆ ಕಂಡುಬಂದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಫೈಯಿಂಗ್​-ವಿ ವಿಮಾನ ಆಕಾಶದಲ್ಲಿ ಹಾರಾಟ ನಡೆಸಲಿದೆ.
Published by: Harshith AS
First published: September 9, 2020, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading