HOME » NEWS » Tech » FULL LIST OF TOP SWEAR WORDS AND BAD WORDS BANNED BY GOOGLE STG ZP

Google: ಗೂಗಲ್ ಬ್ಯಾನ್ ಮಾಡಿರುವ ಕೆಟ್ಟ ಪದಗಳ ಪೂರ್ಣ ಪಟ್ಟಿ ಹೇಗಿರಲಿದೆ ಗೊತ್ತಾ..!

ಗೂಗಲ್ ಕೀಬೋರ್ಡ್ ಸೆಟ್ಟಿಂಗ್‌ಗಳಲ್ಲಿ ನೀವು ಕೆಟ್ಟ ಪದಗಳನ್ನು ನಿಲ್ಲಿಸಲು ಫಿಲ್ಟರ್ ಅನ್ನು ನಿಷ್ಕ್ರಿಯಗೊಳಿಸಿದರೆ, ಕೆಟ್ಟ ಪದಗಳನ್ನು ಗೂಗಲ್​ನಲ್ಲಿ ಬಳಕೆ ಮಾಡದಂತೆ ತಡೆಯುತ್ತದೆ.

news18-kannada
Updated:February 9, 2021, 2:57 PM IST
Google: ಗೂಗಲ್ ಬ್ಯಾನ್ ಮಾಡಿರುವ ಕೆಟ್ಟ ಪದಗಳ ಪೂರ್ಣ ಪಟ್ಟಿ ಹೇಗಿರಲಿದೆ ಗೊತ್ತಾ..!
ಸಾಂದರ್ಭಿಕ ಚಿತ್ರ
  • Share this:
ಸಾಮಾಜಿಕ ತಾಣಗಳಲ್ಲಿ ಕೆಲವೊಬ್ಬರು ಅತ್ಯಂತ ಕೆಟ್ಟ ಹಾಗೂ ಕೀಳು ಪದಗಳನ್ನು ಬಳಕೆ ಮಾಡಿರುವುದನ್ನು ನೋಡಿರುತ್ತೇವೆ. ಸಾಮಾಜಿಕ ತಾಣಗಳಲ್ಲಿ ಕೆಟ್ಟ ಪದಗಳನ್ನು ಬಳಸುವುದರಿಂದ ಇದು ಹೆಚ್ಚಿನ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಕೆಟ್ಟ ಪದಗಳ ಬಳಕೆಯಿಂದಾಗಿ ಮತ್ತೊಬ್ಬರ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಎಂದು ಕೆಟ್ಟ ಪದಗಳನ್ನು ಗೂಗಲ್ ಬ್ಯಾನ್ ಮಾಡುತ್ತದೆ.

ಗೂಗಲ್ ಬ್ಯಾನ್ ಮಾಡಿರುವ ಕೆಟ್ಟ ಪದಗಳ ಪೂರ್ಣ ಪಟ್ಟಿ ಮತ್ತು ಅಶ್ಲೀಲ ಪದಗಳ ಪಟ್ಟಿ, ಆಣೆ ಪದಗಳ ಪಟ್ಟಿ, ಕೀಳರಿಮೆ ಪದಗಳ ಪಟ್ಟಿ, ಶಾಪ ಪದಗಳ ಪಟ್ಟಿ, ಅವಮಾನಕರ ಪದಗಳ ಪಟ್ಟಿ, ಅಸಭ್ಯ ಪದಗಳನ್ನು ಗೂಗಲ್ ಬ್ಯಾನ್ ಮಾಡಲಾಗಿದ್ದು, ಬ್ಯಾನ್ ಮಾಡಿರುವ ಪದಗಳ ಪಟ್ಟಿಯನ್ನು ಈ ಲೇಖನದಲ್ಲಿ ನೀಡಲಾಗುತ್ತಿದೆ.

ಬ್ಯಾನ್ ಮಾಡಿರುವ ಪದಗಳಲ್ಲಿ ಗೂಗಲ್ ಮುಖ್ಯವಾಗಿ ನಾಲ್ಕು ವಿಧಗಳನ್ನು ಮಾಡಿದೆ. ಅಶ್ಲೀಲ ಪದಗಳನ್ನು ಗೂಗಲ್ ನಿಷೇಧಿಸುತ್ತದೆ. ದೇವರನ್ನು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪದಗಳನ್ನು ಬಳಸಿದರೇ ನಿಷೇಧಿಸುತ್ತದೆ. ಒಬ್ಬ ವ್ಯಕ್ತಿಯನ್ನು ಹೀಯಾಳಿಸಿದ ಪದಗಳನ್ನು ಬ್ಯಾನ್ ಮಾಡಲಾಗುತ್ತದೆ. ಆಕ್ರಮಣಕಾರಿ ಪದಗಳನ್ನು ಕೂಡ ಗೂಗಲ್ ನಿಷೇಧಿಸುತ್ತದೆ.

ಇಂಟರ್ನೆಟ್ ಸರ್ಚಿಂಗ್ ಬಗ್ಗೆ ಗೂಗಲ್ ಕಾಳಜಿ:
ಗೂಗಲ್ ಅತಿದೊಡ್ಡ ಅಂತರ್ಜಾಲ ಕಂಪನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗೂಗಲ್ ತನ್ನ ಬಳಕೆದಾರರಿಗೆ ಉಪಯುಕ್ತ ಫಲಿತಾಂಶಗಳನ್ನು ನೀಡಲು ಕೆಟ್ಟ ಪದಗಳು ಬಳಕೆದಾರರಿಗೆ ಸಿಗದಂತೆ ಗೂಗಲ್ ಇಂಟರ್ನೆಟ್ ಸರ್ಚಿಂಗ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆದ್ದರಿಂದ, ನೀವು ಹುಡುಕಲು ಪದವನ್ನು ಟೈಪ್ ಮಾಡಿದಾಗಲೆಲ್ಲಾ, ಗೂಗಲ್ ತನ್ನ ಫಲಿತಾಂಶಗಳನ್ನು ಹೆಚ್ಚು ಸೂಕ್ತವಾದ ಹೊಂದಾಣಿಕೆಗಳನ್ನು ತೋರಿಸಲು ಫಿಲ್ಟರ್ ಮಾಡುತ್ತದೆ.

ಒಂದು ವೇಳೆ ನೀವು ಒಮ್ಮೆ ಗೂಗಲ್​ನಲ್ಲಿ ಕೆಟ್ಟ ಪದಗಳನ್ನು ಬಳಸಿದರೆ ಗೂಗಲ್ ಕೂಡಲೇ ಅಂತಹ ಪದಗಳನ್ನು ತನ್ನ ಸರ್ಚಿಂಗ್ ಆಪ್ಷನ್ನಿಂದ ತೆಗೆಯುತ್ತದೆ. ಕೆಟ್ಟ ಪದಗಳು ಗೂಗಲ್ ಬಳಕೆದಾರರಿಗೆ ಸಿಗದಂತೆ ನೋಡಿಕೊಳ್ಳುತ್ತದೆ.
Youtube Video
ಒಂದು ವೇಳೆ ನೀವು ಬಳಸುವ ಪದ ಕೆಟ್ಟದು ಎಂದು ತಿಳಿಯುವುದು ಹೇಗೆ?

ಗೂಗಲ್ ಬಿಡುಗಡೆಗೊಳಿಸಿರುವ ಆಂಡ್ರಾಯ್ಡ್ ಮೊಬೈಲ್ ಕೀ-ಬೋರ್ಡ್​ನಲ್ಲಿ ಗೂಗಲ್ ನಿಷೇಧಿತ ಪದಗಳ ಪಟ್ಟಿಯೊಂದಿಗೆ ಬರುತ್ತದೆ.
ಗೂಗಲ್ ಕೀಬೋರ್ಡ್​ನಲ್ಲಿ ನೀವು ಕೆಟ್ಟ ಪದಗಳನ್ನು ಟೈಪ್ ಮಾಡಿದರೆ ನಿಮಗೆ ಗೂಗಲ್ ಸಹಾಯ ಮಾಡುವುದಿಲ್ಲ.
ಗೂಗಲ್ ಕೀಬೋರ್ಡ್ ಸೆಟ್ಟಿಂಗ್‌ಗಳಲ್ಲಿ ನೀವು ಕೆಟ್ಟ ಪದಗಳನ್ನು ನಿಲ್ಲಿಸಲು ಫಿಲ್ಟರ್ ಅನ್ನು ನಿಷ್ಕ್ರಿಯಗೊಳಿಸಿದರೆ, ಕೆಟ್ಟ ಪದಗಳನ್ನು ಗೂಗಲ್​ನಲ್ಲಿ ಬಳಕೆ ಮಾಡದಂತೆ ತಡೆಯುತ್ತದೆ.
Published by: zahir
First published: February 9, 2021, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories