ಸ್ಮಾರ್ಟ್​ಫೋನ್ ಪ್ರಿಂಟರ್: ಇನ್ಮುಂದೆ ಮೊಬೈಲ್​ಯಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು..!

ಫ್ಯುಜಿ ಫಿಲ್ಮ್ ಸ್ಮಾರ್ಟ್ ಫೋನ್ ಪ್ರಿಂಟರ್ ಮುದ್ರಿಸುವ ಚಿತ್ರವು 800X600 ಸೈಜ್​ನಲ್ಲಿರಲಿದೆ. 

zahir | news18
Updated:January 5, 2019, 6:59 PM IST
ಸ್ಮಾರ್ಟ್​ಫೋನ್ ಪ್ರಿಂಟರ್: ಇನ್ಮುಂದೆ ಮೊಬೈಲ್​ಯಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು..!
@Cnet
zahir | news18
Updated: January 5, 2019, 6:59 PM IST
ಡಿಜಿಟಲ್​ ಯುಗದಲ್ಲಿ ಅಂಗೈಯಲ್ಲಿ ಬಂಧಿಯಾಗುವ ಗ್ಯಾಜೆಟ್​ಗಳದ್ದೇ ಕಾರುಬಾರು. ಅದರಲ್ಲೂ ಮೊಬೈಲ್​ನಲ್ಲಿ ಕ್ಯಾಮೆರಾ ಬಂದ ಬಳಿಕ ಹಳೆಯ ಕಾಲದ ರೀಲ್ ಕ್ಯಾಮೆರಾ ಅಥವಾ ಮುದ್ರಿತ ಫೋಟೊಗಳು ಕಾಣುವುದು ಅಪರೂಪ. ಆದರೂ ಈ ಫೋಟೋಗಳ ಪ್ರಿಂಟ್​ ತೆಗೆದುಕೊಳ್ಳಲು ದೊಡ್ಡ ಪ್ರಿಂಟರುಗಳನ್ನು ಆಶ್ರಯಿಸಬೇಕಾಗಿತ್ತು. ಅದಕ್ಕೀಗ ಫ್ಯುಜಿ ಫಿಲ್ಮ್​ ಕಂಪೆನಿ ಪರಿಹಾರವನ್ನು ಕಂಡುಕೊಂಡಿದೆ. ಸ್ಮಾರ್ಟ್​ಫೋನ್​ ಫೋಟೋಗಳನ್ನು ಪ್ರಿಂಟ್​ ತೆಗೆಯಲು ಅಂಗೈ ಅಗಲದ ಇನ್ಸ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಎಂಬ ಸ್ಮಾರ್ಟ್​ ಪ್ರಿಂಟರನ್ನು ಫ್ಯುಜಿ ಪರಿಚಯಿಸಿದೆ.

ಸ್ಮಾರ್ಟ್ ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2
ಫ್ಯುಜಿ ಬಿಡುಗಡೆ ಮಾಡಿರುವ ನೂತನ ಡಿವೈಸ್ ಮೂಲಕ ಸ್ಮಾರ್ಟ್ ಫೋನ್ ತೆಗೆದ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಮುದ್ರಿಸಬಹುದು. ಅತ್ಯಂತ ಸಣ್ಣ ಪ್ರಿಂಟಿಂಗ್ ಡಿವೈಸ್ ಆಗಿರುವುದರಿಂದ ಇದಕ್ಕೆ ಒಂದು ನಿರ್ದಿಷ್ಟ ಸ್ಥಳವಕಾಶದ ಅವಶ್ಯಕತೆ ಕೂಡ ಇರುವುದಿಲ್ಲ.

ಇದರ ವಿಶೇಷತೆಗಳೇನು?

ಸ್ಮಾರ್ಟ್ ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಎಂಬುದು ಜೇಬಿನಲ್ಲಿಟ್ಟುಕೊಳ್ಳಬಹುದಾದ ಸಣ್ಣ ಪ್ರಿಂಟರ್. ಇದನ್ನು ಸ್ಮಾರ್ಟ್​ಫೋನ್​ಗೆ ಕನೆಕ್ಟ್​ ಮಾಡುವ ಮೂಲಕ ಮೊಬೈಲ್​ನಲ್ಲಿರುವ ಫೋಟೋಗಳನ್ನು ಪ್ರಿಂಟ್ ಮಾಡಿಕೊಳ್ಳಬಹದು. ಒಂದು ಫೋಟೋ ಮುದ್ರಿಸಲು ಕೇವಲ 10 ಸೆಕೆಂಡ್​ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ.

ಫೋಟೋ ಸೈಜ್ ಮತ್ತು ಆ್ಯಪ್​
ಫ್ಯುಜಿ ಫಿಲ್ಮ್ ಸ್ಮಾರ್ಟ್ ಫೋನ್ ಪ್ರಿಂಟರ್ ಮುದ್ರಿಸುವ ಚಿತ್ರವು 800X600 ಸೈಜ್​ನಲ್ಲಿರಲಿದೆ.  ಇದಕ್ಕಾಗಿ ಇನ್​ಸ್ಟಾಕ್ಸ್​ ಆ್ಯಪ್​ ಅನ್ನು ಕೂಡ ನೀಡಲಾಗಿದ್ದು, ಅದರ ಮೂಲಕ ಫೋಟೋಗಳನ್ನು ನಿಮಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಪ್ರಿಂಟ್ ತೆಗೆಯಬಹುದು. ಅಲ್ಲದೆ ಈ ಆ್ಯಪ್​ ಮೂಲಕವೇ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ನಲ್ಲಿ ನೀವು ಎಡಿಟ್ ಮಾಡಿರುವ ಫೋಟೋಗಳನ್ನು ಹಂಚಿಕೊಳ್ಳಬಹುದು.
Loading...

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಕನ್ನಡಿಗರಿಗೆ ಆದ್ಯತೆ

ಝಿಂಕ್ ಪೇಪರ್ ಬೆಲೆ
ಈ ಫೋಟೋ ಪ್ರಿಂಟಿಂಗ್​ಗೆ ಝಿಂಕ್ ಪೇಪರ್​ಗಳನ್ನು ಬಳಸಲಾಗುತ್ತದೆ. ಕ್ರೆಡಿಟ್ ಕಾರ್ಡ್​ನ ಅಳತೆಯಲ್ಲಿರುವ ಈ ಪ್ರಿಂಟಿಂಗ್ ಪೇಪರ್​ ಬೆಲೆ 1017 ರೂ. ಇದರಲ್ಲಿ ಒಟ್ಟು 20 ಪೇಪರ್​ಗಳಿರಲಿದ್ದು, ಹೆಚ್ಚಿನ ಝಿಂಕ್​ ಪೇಪರ್ ಬಂಡಲನ್ನು ಕೂಡ ಫ್ಯುಜಿ ಪರಿಚಯಿಸುವುದಾಗಿ ತಿಳಿಸಿದೆ.

ಇದನ್ನೂ: ಎಚ್ಚರ: ನಿಮ್ಮ ಮೊಬೈಲ್​ನಲ್ಲಿ UIDAI ನಂಬರ್ ಇದ್ದರೆ ಇಂದೇ ಡಿಲೀಟ್ ಮಾಡಿ

ಬ್ಯಾಟರಿ ಡಿವೈಸ್
ಈ ಡಿವೈಸ್ ಮೊಬೈಲ್​ನಂತೆಯೇ ಬ್ಯಾಟರಿಯಿಂದ ಕಾರ್ಯ ನಿರ್ವಹಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿಕೊಂಡರೆ ಕನಿಷ್ಠ 100 ಫೋಟೋಗಳನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಎಂದು ಫ್ಯುಜಿ ಹೇಳಿಕೊಂಡಿದೆ.

ಇದನ್ನೂ ಓದಿ: ನೋಕಿಯಾ 9 ಪ್ಯೂರ್​ವೀವ್​: ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್​ಫೋನಿನ ವಿಶೇಷತೆಗಳೇನು ಗೊತ್ತೆ?

ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಬೆಲೆ
ಇನ್​ಸ್ಟಾಕ್ಸ್​ ಶೇರ್​ ಎಸ್​ಪಿ-2 ಸ್ಮಾರ್ಟ್​ ಪ್ರಿಂಟರ್​ನ್ನು ಆನ್​ಲೈನ್​ನಲ್ಲಿ ಪರಿಚಯಿಸಲಾಗಿದ್ದು, ಇದರ ಬೆಲೆ 13,499 ರೂ. ನಿಗದಿಪಡಿಸಲಾಗಿದೆ.
First published:January 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ