ಸ್ಮಾರ್ಟ್ಫೋನ್ಗಳು (Smartphones) ಇತ್ತೀಚೆಗೆ ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಆದರೆ ಇತ್ತೀಚೆಗಂತೂ ಮೊಬೈಲ್ ಮಾರುಕಟ್ಟೆ (Mobile Market) ಬಹಳಷ್ಟು ಅಭಿವೃದ್ಧಿಯಾಗುತ್ತಿದೆ. ಸ್ಮಾರ್ಟ್ಫೋನ್ ಕಂಪೆನಿಗಳು ಸಹ ಈ ಎಲ್ಲ ಬೆಳವಣಿಗೆಯನ್ನು ಕಂಡು ಮಾರುಕಟ್ಟೆಗೆ ಹೊಸ ಹೊಸ ಮೊಬೈಲ್ಗಳನ್ನು ಪರಿಚಯಿಸುತ್ತಲೇ ಇದೆ. ಈಗಿನ ಸ್ಮಾರ್ಟ್ಫೋನ್ಗಳು ಉತ್ತಮ ಫೀಚರ್ಸ್ನೊಂದಿಗೆ ಬಹಳಷ್ಟು ಗ್ರಾಹಕರನ್ನು ಆಕರ್ಷಿಸುತ್ತಿದೆ. ಸ್ಮಾರ್ಟ್ಫೋನ್ ಬಳಕೆ ಮಾಡುವವರು ಏನಾದರು ಒಂದು ಫೀಚರ್ಸ್ಗಳನ್ನು ಹುಡುಕುತ್ತಲೇ ಇರುತ್ತಾರೆ. ಇದೀಗ ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್ಫೋನ್ಗಳಲ್ಲಿ ಒಂದೇ ಬಾರಿಗೆ ಎರಡು ಆ್ಯಪ್ಗಳನ್ನು ಬಳಸಬಹುದು.ಈ ಮೂಲಕ ಮೊಬೈಲ್ನ ಒಂದೇ ಡಿಸ್‌ಪ್ಲೇನಲ್ಲಿ (Split Screen) ಒಂದು ಸೈಡ್ನಲ್ಲಿ ವಿಡಿಯೋ ನೋಡ್ತಾ ಇದ್ರೆ, ಇನ್ನೊಂದು ಬದಿಯಲ್ಲಿ ಬೇರೆ ಯಾವುದಾದರು ಆ್ಯಪ್ ಅನ್ನು ಬಳಕೆ ಮಾಡಬಹುದು.
ಯಾವುದೇ ಒಂದು ದೊಡ್ಡ ಡಿಸ್‌ಪ್ಲೇನಲ್ಲಿ ಅಥವಾ ಲ್ಯಾಪ್ಟಾಪ್ಗಳಲ್ಲಿ ಒಂದೇ ಡಿಸ್‌ಪ್ಲೇನಲ್ಲಿ ಎರಡು ಕೆಲಸಗಳನ್ನು ಮಾಡಬಹುದಿತ್ತು. ಆದರೆ ಈಗ ಸ್ಮಾರ್ಟ್ಫೋನ್ಗಳಲ್ಲೂ ಒಂದೇ ಬಾರಿಗೆ ಎರಡು ಆ್ಯಪ್ಗಳನ್ನು ಬಳಕೆ ಮಾಡ್ಬಹುದು. ಹೇಗೆ ಎಂಬುದರ ಕಂಪ್ಲೀಟ್ ಈ ಲೇಖನದಲ್ಲಿದೆ ಓದಿ.
ಸ್ಪ್ಲಿಟ್ ಸ್ಕ್ರೀನ್ ಫೀಚರ್
ಸ್ಪ್ಲಿಟ್ ಸ್ಕ್ರೀನ್ ಎನ್ನುವುದು ಯಾವುದೇ ಡಿವೈಸ್‌ಗಳಲ್ಲಿ ಒಂದು ವಿಶೇಷ ಫೀಚರ್ಸ್ ಆಗಿದ್ದು, ಬಳಕೆದಾರರಿಗೆ ಒಂದೇ ಡಿಸ್‌ಪ್ಲೇನಲ್ಲಿ ಏಕಕಾಲದಲ್ಲಿ ಎರಡು ವಿಭಿನ್ನ ಅಪ್ಲಿಕೇಶನ್‌ಗಳನ್ನು ವೀಕ್ಷಿಸಲು ಮತ್ತು ವಿಡಿಯೋ, ಮೆಸೇಜ್ ಮಾಡಲು ಅನುವು ಮಾಡಿಕೊಡುತ್ತದೆ. ಹೆಸರೇ ಸೂಚಿಸುವಂತೆ ಸ್ಪ್ಲಿಟ್ ಸ್ಕ್ರೀನ್ ಫೀಚರ್ಸ್ ಡಿಸ್‌ಪ್ಲೇಯನ್ನು ಎರಡು ಅಥವಾ ಹೆಚ್ಚಿನ ವಿಭಾಗಗಳಾಗಿ ವಿಂಗಡಿಸುತ್ತದೆ.
ಇದನ್ನು ಓದಿ: ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ಪ್ರತಿದಿನ 2ಜಿಬಿ ಡೇಟಾ ಪಡೆಯಿರಿ!
ಇನ್ನು ಪ್ರತಿ ವಿಭಾಗವು ಪ್ರತ್ಯೇಕ ಅಪ್ಲಿಕೇಶನ್ ತೆರೆಯಲು ಅನುವು ಮಾಡಿಕೊಡಲಿದ್ದು, ಈ ವಿಭಾಗದ ಗಾತ್ರವನ್ನು ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್ಫೋನ್ನಲ್ಲಿ ಸೆಟ್ಟಿಂಗ್ಸ್ ಮೂಲಕ ಸೆಟ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈಗಾಗಲೇ ತೆರೆದ ಅಪ್ಲಿಕೇಶನ್ ಅನ್ನು ಬೇಕೆಂದಾಗ ಕ್ಲೋಸ್ ಮಾಡಿ ಬೇಕಾದ ಆ್ಯಪ್‌ನಲ್ಲಿ ತಕ್ಷಣವೇ ತೆರೆಯುವ ಅವಕಾಶ ಸಹ ಇದರಲ್ಲಿದೆ. ಹಾಗಿದ್ರೆ ಈ ಫೀಚರ್ ಅನ್ನು ಬಳಸುಲು ಕೆಲವೊಂದು ಹಂತಗಳಿವೆ.
ಹಂತ- 1
ನಿಮ್ಮ ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಫೀಚರ್ ಬಳಕೆ ಮಾಡಲು ನೀವು ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಸ್ಪ್ಲಿಟ್ ಸ್ಕ್ರೀನ್ ಎಂಬ ಆಯ್ಕೆಯನ್ನು ಸರ್ಚ್ ಮಾಡಿ.
ಹಂತ 2
ಇದಾದ ನಂತರ ಇತ್ತೀಚಿನ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಓಪನ್ ಮಾಡಬೇಕು. ಈ ಆಯ್ಕೆ ಡಿಸ್‌ಪ್ಲೇನ ಕೆಳಭಾಗದಲ್ಲಿ ನೀಡಲಾಗುತ್ತದೆ. ಅದರಲ್ಲಿ ಒಂದು ಅಪ್ಲಿಕೇಶನ್ ಅನ್ನು ಸೆಲೆಕ್ಟ್ ಮಾಡಿ ಓಪನ್ ಮಾಡ್ಬೇಕು.
ಹಂತ 3
ಇನ್ನು ಯಾವ ಆ್ಯಪ್ ಓಪನ್ ಮಾಡಿದ್ದೀರೋ ಆ ಆ್ಯಪ್ ಅನ್ನು ಡಿಸ್‌ಪ್ಲೇನ ಅರ್ಧದಷ್ಟು ಭಾಗದಲ್ಲಿ ಸೆಟ್ ಮಾಡಲು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ.
ಇದಾದ ನಂತರ ನೀವು ಒಂದೇ ಬಾರಿಗೆ ಎರಡು ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಬಹುದಾಗಿದೆ.
ಸ್ಮಾರ್ಟ್ಫೋನ್ಗಳು ಇತ್ತೀಚೆಗೆ ಎಲ್ಲರ ಅಗತ್ಯ ಸಾಧನವಾಗಿದೆ ಹೌದು ಆದರೆ ಅನೇಕರು ಬ್ಯಾಟರಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಮಾರ್ಟ್ಫೋನ್ನ ಬ್ಯಾಟರಿ ಬೇಗನೆ ಏಕೆ ಖಾಲಿ ಆಗುತ್ತಿದೆ ಎಂಬ ಯೋಚನೆ ಮಾಡ್ತಿದ್ದಾರೆ. ಹಾಗಿದ್ರೆ ಸ್ಮಾರ್ಟ್ಫೋನ್ನ ಬ್ಯಾಟರಿ ವೇಗವಾಗಿ ಮುಗಿಯದಂತೆ ಮಾಡಲು ಇಲ್ಲಿದೆ ಟಿಪ್ಸ್.
ಜಿಪಿಎಸ್ ಆಫ್ ಮಾಡಿ:
ಆಂಡ್ರಾಯ್ಡ್ ಫೋನ್ ಇರಲಿ ಇಲ್ಲವೇ ಐಫೋನ್ ಆಗಿರಲಿ ಜಿಪಿಎಸ್ ಅಥವಾ ಲೊಕೇಶನ್ ಅನ್ನು ಫೋನ್‌ನಲ್ಲಿ ಗುರುತಿಸಲಾಗುತ್ತದೆ. ಇದು ಹೆಚ್ಚುವರಿ ಬ್ಯಾಟರಿಯನ್ನು ಖರ್ಚು ಮಾಡಿಬಿಡುತ್ತದೆ. ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಾರದಾದ್ರೆ ಜಿಪಿಎಸ್ ಅನ್ನು ಆಫ್ ಮಾಡಿ.
ವೈಫೈ ಬಳಸಿ:
ಸಾಧ್ಯವಾದಷ್ಟು ಇಂಟರ್ನೆಟ್ ಬಳಕೆ ಮಾಡುವ ಬದಲು ವೈಫೈ ಬಳಕೆಯನ್ನು ಮಾಡಿ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಸ್ವಯಂಚಾಲಿತವಾಗಿ ವೈಫೈ ಆನ್ ಇದ್ದರೆ ಅದನ್ನೇ ಬಳಕೆ ಮಾಡಿ. ಇದರಿಂದ ನಿಮ್ಮ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ