WhatsApp Business: ಇನ್ಮುಂದೆ ವಾಟ್ಸಾಪ್​ನಲ್ಲೇ ಮೆಟ್ರೋ ಡಿಜಿಟಲ್​ ಸೇವೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಟ್ಸಾಪ್​ ಟ್ರಾನ್ಸಿಟ್ ಸೇವೆಗಳು ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಲೈವ್ ಆಗಿದ್ದು, ಬಳಕೆದಾರರಿಗೆ ಟಿಕೆಟ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ ಮತ್ತು ಅವರು ತಮಗೆ ಬೇಕಾದ ಭಾಷೆಯಲ್ಲಿ ವಹಿವಾಟು ಮಾಡಬಹುದು. ಇನ್ನು ಈ ವಾಟ್ಸಾಪ್​ನ ಹೊಸ ಫೀಚರ್​ ಮೂಲಕ, ಬಳಕೆದಾರರಿಗೆ ರೈಲಿನಿಂದ ನೇರವಾಗಿ ಆಹಾರವನ್ನು ಬುಕ್ ಮಾಡಲು ಅವಕಾಶ ನೀಡುತ್ತದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

    ಮೆಟಾದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಾಪ್​ ಈಗ ದೇಶಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಕಂಪನಿಯು ಈಗ ವಾಟ್ಸಾಪ್​ ಬ್ಯುಸಿನೆಸ್​ ವೇದಿಕೆಗಳ ಮೂಲಕ ದೇಶಾದ್ಯಂತ ವಿವಿಧ ಮೆಟ್ರೋ ರೈಲು ಸೇವೆಗಳನ್ನು (Metro Train Service) ನೀಡಲು ಮುಂದಾಗಿದೆ. ಇನ್ನು ವಾಟ್ಸಾಪ್​ (WhatsApp) ಚಾಟ್‌ಬಾಟ್‌ನಿಂದ ನೇರವಾಗಿ ಮೆಟ್ರೋ ಟಿಕೆಟ್‌ಗಳನ್ನು (Metro Tickets) ಬುಕ್ ಮಾಡಲು, ಖರೀದಿಸಲು ಮತ್ತು ರದ್ದುಗೊಳಿಸಲು ತಂತ್ರಜ್ಞಾನಗಳನ್ನು ನೀಡುತ್ತದೆ. ಈ ಟೆಕ್ನಾಲಜಿ ಮೂಲಕ ಇನ್ಮುಂದೆ ಬಳಕೆದಾರರು ಟಿಕೆಟ್‌ಗಳನ್ನು ರೀಚಾರ್ಜ್ ಮಾಡಬಹುದು ಮತ್ತು ಪ್ರಯಾಣದ ಮಾಹಿತಿ, ದರದ ವಿವರಗಳು, ಸಮಯಗಳು ಮತ್ತು ಇತರ ವಿವರಗಳನ್ನು ನೇರವಾಗಿ ವಾಟ್ಸಾಪ್​ನಲ್ಲಿ ಪಡೆಯಬಹುದು.


    ವಾಟ್ಸಾಪ್​ ಟ್ರಾನ್ಸಿಟ್ ಸೇವೆಗಳು ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಲೈವ್ ಆಗಿದ್ದು, ಬಳಕೆದಾರರಿಗೆ ಟಿಕೆಟ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ ಮತ್ತು ಅವರು ತಮಗೆ ಬೇಕಾದ ಭಾಷೆಯಲ್ಲಿ ವಹಿವಾಟು ಮಾಡಬಹುದು. ಇನ್ನು ಈ ವಾಟ್ಸಾಪ್​ನ ಹೊಸ ಫೀಚರ್​ ಮೂಲಕ, ಬಳಕೆದಾರರಿಗೆ ರೈಲಿನಿಂದ ನೇರವಾಗಿ ಆಹಾರವನ್ನು ಬುಕ್ ಮಾಡಲು ಅವಕಾಶ ನೀಡುತ್ತದೆ.


    ಈ ಬಗ್ಗೆ ವಾಟ್ಸಾಪ್​ ಬ್ಯುಸಿನೆಸ್​ ಮೆಸೇಜಿಂಗ್​​ನ ನಿರ್ದೇಶಕರ ಮಾತು


    ವಾಟ್ಸಾಪ್‌ನ ಬ್ಯುಸಿನೆಸ್ ಮೆಸೇಜಿಂಗ್‌ ಅಪ್ಲಿಕೇಶನ್​ನ ನಿರ್ದೇಶಕ ರವಿ ಗಾರ್ಗ್ ಈ ಟೆಕ್ನಾಲಜಿ ಬಗ್ಗೆ ಹೇಳಿದ್ದು, ಭಾರತದ ಡಿಜಿಟಲ್ ಕ್ರಾಂತಿಯು ಈಗ ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ, ಚುರುಕಾದ ಮತ್ತು ಹೆಚ್ಚು ಅನುಕೂಲಕರವಾಗಿಸಿದೆ. ಅನೇಕ ನಗರಗಳಲ್ಲಿ ಭಾರತದ ವಿಶ್ವ ದರ್ಜೆಯ ಮೆಟ್ರೋ ಸೇವೆಗಳು ಈಗ ವಾಟ್ಸಾಪ್‌ನಲ್ಲಿ ತಮ್ಮ ಬೆರಳ ತುದಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಯೋಜಿಸಲ್ಪಟ್ಟಿವೆ ಎಂದು ನಾವು ಹೆಮ್ಮೆಪಡುತ್ತೇವೆ. ನಾವು ಇತರ ನಗರಗಳನ್ನು ಬೆಂಬಲಿಸಲು ಸಂತೋಷ ಪಡುತ್ತೇವೆ ಮತ್ತು ದೇಶಾದ್ಯಂತ ದೈನಂದಿನ ಪ್ರಯಾಣಿಕರ ಜೀವನಕ್ಕೆ ಅನುಕೂಲವಾಗುವ ಉದ್ದೇಶದಿಂದ ರೈಲು ಸೇವೆಯನ್ನು ವಾಟ್ಸಾಪ್​ ಮೂಲಕ ಡಿಜಿಟಲೈಸೇಶನ್​ ಮಾಡಲಿದ್ದೇವೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ: ವಿಶೇಷ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬರ್ತಿದೆ ಫೈರ್​ಬೋಲ್ಟ್​​ ಸ್ಮಾರ್ಟ್​​ವಾಚ್!


    ಸದ್ಯ ವಾಟ್ಸಾಪ್​ನ ಈ ಸೇವೆ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಮಾತ್ರ ಆರಂಭವಾಗಿದ್ದು, ಹೇಗೆ ಬಳಸಬಹುದು ಎಂದು ಇಲ್ಲಿದೆ ಮಾಹಿತಿ.


    ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(BMRCL):


    ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು, ಬಳಕೆದಾರರು ವಾಟ್ಸಾಪ್‌ನಲ್ಲಿ +918105556677 ಗೆ “ಹಾಯ್” ಎಂದು ಕಳುಹಿಸಬೇಕು. ಇದು ಅವರಿಗೆ ಟಿಕೆಟ್‌ಗಳು, ದರದ ವಿವರಗಳು, ಟಾಪ್-ಅಪ್‌ಗಳು ಮತ್ತು ಎಂಡ್-ಟು-ಎಂಡ್ ಕ್ಯೂಆರ್ ಕೋಡ್​​ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಲು ಸಹಕಾರಿಯಾಗುತ್ತದೆ. ಇನ್ನು ಟಿಕೆಟ್​ಗಳಿಗೆ ರೀಚಾರ್ಜ್​ ಮಾಡಲು ಸಹ ಅನುಮತಿಸುತ್ತದೆ. ಇನ್ನು ಈ ಸೇವೆಯು ಇಂಗ್ಲೀಷ್​ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ. ಇನ್ನು ನಮ್ಮ ಮೆಟ್ರೋದ ಪ್ರಯಾಣಿಕರು ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ರದ್ದುಗೊಳಿಸಬಹುದು


    ಸಾಂಕೇತಿಕ ಚಿತ್ರ


    ಮುಂಬೈ ಮೆಟ್ರೋ:


    ಇನ್ನು ಮುಂಬೈ ಮೆಟ್ರೋನ ವಾಟ್ಸಾಪ್​ ಮೂಲಕ ಇ-ಟಿಕೆಟ್​ ಪಡೆಯಬೇಕೆಂದರೆ ವಾಟ್ಸಾಪ್​ ಟಿಕೆಟ್‌ಗಳನ್ನು ಖರೀದಿಸಲು ಲಿಂಕ್ ಅನ್ನು ಕಳುಹಿಸುತ್ತದೆ. ಪೇಮೆಂಟ್​ ಮಾಡಿದ ನಂತರ QR ಕೋಡ್ ಅನ್ನು ನೀಡಲಾಗುತ್ತದೆ ಮತ್ತು ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಲು ಅನುಮತಿಸುವ ಮೊದಲು ಅದನ್ನು ಸ್ವಯಂಚಾಲಿತ ಶುಲ್ಕ ಸಂಗ್ರಹಣೆ ಗೇಟ್‌ನಲ್ಲಿ ಪರಿಶೀಲಿಸಬೇಕು. ಇನ್ನು ಮುಂಬೈ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು, ಬಳಕೆದಾರರು ವಾಟ್ಸಾಪ್‌ನಲ್ಲಿ +919670008889 ಗೆ “ಹಾಯ್” ಎಂದು ಕಳುಹಿಸಬೇಕು. ಇದು ಅವರಿಗೆ ಟಿಕೆಟ್‌ಗಳು, ದರದ ವಿವರಗಳು, ಟಾಪ್-ಅಪ್‌ಗಳು ಮತ್ತು ಎಂಡ್-ಟು-ಎಂಡ್ ಕ್ಯೂಆರ್ ಕೋಡ್​​ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಲು ಸಹಕಾರಿಯಾಗುತ್ತದೆ.


    ಪುಣೆ ಮೆಟ್ರೋ


    ಇನ್ನು ಪುಣೆ ಮೆಟ್ರೋ ಸೇವೆಯ ಇ ಟಿಕೆಟ್​ ಅನ್ನು ಪಡೆಯಬೇಕೆಂದರೆ ವಾಟ್ಸಾಪ್​ನಲ್ಲಿ +919420101990 ನಂಬರ್​ಗೆ ಹಾಯ್ ಎಂದು ಮೆಸೇಜ್ ಮಾಡಿ. ನಂತರ ನಿಮಗೆ ಇಲ್ಲಿ ನಿಮಗೆ ಬೇಕಾದ ಸ್ಥಳದ ಟಿಕೆಟ್​ಗಳನ್ನು ಖರೀದಿ ಮಾಡಬಹುದು ಮತ್ತು ಬೇಡವಾದರೆ ರಿಜೆಕ್ಟ್​ ಸಹ ಮಾಡ್ಬಹುದು.




    ಎಲ್ & ಟಿ ಮೆಟ್ರೋ ರೈಲ್ ಹೈದರಾಬಾದ್ ಲಿಮಿಟೆಡ್(L&TMRHL)


    ಇನ್ನು ಹೈದರಾಬಾದ್ ಮೆಟ್ರೋನ ವಾಟ್ಸಾಪ್​ ಮೂಲಕ ಇ-ಟಿಕೆಟ್​ ಪಡೆಯಬೇಕೆಂದರೆ ವಾಟ್ಸಾಪ್​ ಟಿಕೆಟ್‌ಗಳನ್ನು ಖರೀದಿಸಲು ಲಿಂಕ್ ಅನ್ನು ಕಳುಹಿಸುತ್ತದೆ. ಪೇಮೆಂಟ್​ ಮಾಡಿದ ನಂತರ QR ಕೋಡ್ ಅನ್ನು ನೀಡಲಾಗುತ್ತದೆ ಮತ್ತು ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಲು ಅನುಮತಿಸುವ ಮೊದಲು ಅದನ್ನು ಸ್ವಯಂಚಾಲಿತ ಶುಲ್ಕ ಸಂಗ್ರಹಣೆ ಗೇಟ್‌ನಲ್ಲಿ ಪರಿಶೀಲಿಸಬೇಕು. ಇನ್ನು ಮುಂಬೈ ಮೆಟ್ರೋ ಟಿಕೆಟ್‌ಗಳನ್ನು ಬುಕ್ ಮಾಡಲು, ಬಳಕೆದಾರರು ವಾಟ್ಸಾಪ್‌ನಲ್ಲಿ +918341146468 ಗೆ “ಹಾಯ್” ಎಂದು ಕಳುಹಿಸಬೇಕು. ಇದು ಅವರಿಗೆ ಟಿಕೆಟ್‌ಗಳು, ದರದ ವಿವರಗಳು, ಟಾಪ್-ಅಪ್‌ಗಳು ಮತ್ತು ಎಂಡ್-ಟು-ಎಂಡ್ ಕ್ಯೂಆರ್ ಕೋಡ್​​ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಲು ಸಹಕಾರಿಯಾಗುತ್ತದೆ.

    Published by:Prajwal B
    First published: