IPhone 14: ಇನ್ಮುಂದೆ ಐಫೋನ್​ಗಳು ಗೋಲ್ಡ್​ ಬಣ್ಣದಲ್ಲೂ ಖರೀದಿಗೆ ಲಭ್ಯ! ಕಾರಣವೇನು ಗೊತ್ತಾ?

ಐಫೋನ್​

ಐಫೋನ್​

IPhone 14: ಕಳೆದ ಕೆಲವು ದಿನಗಳ ಹಿಂದೆ ಗೋಲ್ಡ್‌ ಐಫೋನ್‌ 14 ಸುದ್ದಿ ಭಾರೀ ವೈರಲ್ ಆಗಿತ್ತು. ಯಾಕೆಂದರೆ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ಗೆಲುವನ್ನು ಸಂಭ್ರಮಿಸಲು 35 ಚಿನ್ನದ ಲೇಪಿತ ಐಫೋನ್ 14 ಗಳನ್ನು ಖರೀದಿ ಮಾಡಿದ್ದಾರೆ. ಇವುಗಳನ್ನು ತಮ್ಮ ತಂಡದ ಸದಸ್ಯರಿಗೆ ನೀಡಿದ್ದಾರೆ. ಇದಾದ ಬಳಿಕ ಈಗ ಐಫೋನ್‌ 14 ಗೆ ಭಾರೀ ಬೇಡಿಕೆ ನಿರ್ಮಾಣ ಆಗಿದೆ ಎನ್ನಲಾಗಿದ್ದು, ಇದೀಗ ಮತ್ತೆ ಹೊಸ ರೀತಿಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.

ಮುಂದೆ ಓದಿ ...
  • Share this:

    ಕಳೆದ ವರ್ಷ, ಆ್ಯಪಲ್ (Apple)​ ತನ್ನ ಐಫೋನ್ 14 ಸೀರಿಸ್​​ನ (IPhone 14 Series) ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸಿತು. ಜನರು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಇದಕ್ಕೆ ಪ್ರಮುಖ ಕಾರಣ ಫೋನ್‌ನಲ್ಲಿನ ವೈಶಿಷ್ಟ್ಯಗಳ ಕೊರತೆ ಮತ್ತು ಹೆಚ್ಚಿನ ಬೆಲೆ. ಆದರೆ ಈಗ ಆ್ಯಪಲ್ ಕಂಪೆನಿಯು ಗ್ರಾಹಕರನ್ನು ಸೆಳೆಯಲು ಹೊಸ ಪ್ಲ್ಯಾನ್​ ಅನ್ನು ನಡೆಸಿದೆ. ಇದುವರೆಗೆ ಕೇವಲ ಕೆಂಪು, ನೀಲಿ, ಬಿಳಿ ಹೀಗೆ ಹಲವು ಬಣ್ಣಗಳಲ್ಲಿ ಖರೀದಿಗೆ ಅವಕಾಶಗಳಿತ್ತು. ಈ ಸಾಲಿಗೆ ಮತ್ತೊಂದು ಬಣ್ಣ ಸೇರ್ಪಡೆಯಾಗುತ್ತಿದೆ. ಅದೇ ಚಿನ್ನದ ಬಣ್ಣ (Gold Colour). ಇನ್ಮುಂದೆ ಐಫೋನ್​ 14 ಸೀರಿಸ್​ನ ಸ್ಮಾರ್ಟ್​​ಫೋನ್​​ಗಳನ್ನು ಗೋಲ್ಡ್​ ಬಣ್ಣದಲ್ಲಿಯೂ ಖರೀದಿ ಮಾಡಬಹುದು.


    ಕಳೆದ ಕೆಲವು ದಿನಗಳ ಹಿಂದೆ ಗೋಲ್ಡ್‌ ಐಫೋನ್‌ 14 ಸುದ್ದಿ ಭಾರೀ ವೈರಲ್ ಆಗಿತ್ತು. ಯಾಕೆಂದರೆ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ತಮ್ಮ ಗೆಲುವನ್ನು ಸಂಭ್ರಮಿಸಲು 35 ಚಿನ್ನದ ಲೇಪಿತ ಐಫೋನ್ 14 ಗಳನ್ನು ಖರೀದಿ ಮಾಡಿದ್ದಾರೆ. ಇವುಗಳನ್ನು ತಮ್ಮ ತಂಡದ ಸದಸ್ಯರಿಗೆ ನೀಡಿದ್ದಾರೆ. ಇದಾದ ಬಳಿಕ ಈಗ ಐಫೋನ್‌ 14 ಗೆ ಭಾರೀ ಬೇಡಿಕೆ ನಿರ್ಮಾಣ ಆಗಿದೆ ಎನ್ನಲಾಗಿದ್ದು, ಇದೀಗ ಮತ್ತೆ ಹೊಸ ರೀತಿಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.


    ಕಳೆದ ವರ್ಷ ಐಫೋನ್ 13 ನಲ್ಲಿ ಹಸಿರು ಬಣ್ಣ


    ಕಳೆದ ವರ್ಷ ಕಂಪೆನಿಯು ಐಫೋನ್ 13 ಸರಣಿಯಲ್ಲಿ ಹೊಸ ರೀತಿಯಲ್ಲಿ ಹಸಿರು ಬಣ್ಣಗಳನ್ನು ಪರಿಚಯಿಸಿತ್ತು, ಆದರೆ ಏಪ್ರಿಲ್ 2021 ರಲ್ಲಿ, ಐಫೋನ್ 12 ಮತ್ತು ಐಫೋನ್ 12 ಮಿನಿ ನೇರಳೆ ಬಣ್ಣದಲ್ಲಿ ಲಭ್ಯವಾಯಿತು. ಪ್ರಸ್ತುತ, ಐಫೋನ್ 14 ಮತ್ತು ಐಫೋನ್ 14 ಪ್ಲಸ್ ನೀಲಿ, ನೇರಳೆ, ಮಿಡ್‌ನೈಟ್ ಕಪ್ಪು, ಸ್ಟಾರ್‌ಲೈಟ್ (ಬಿಳಿ / ಬೆಳ್ಳಿ) ಮತ್ತು ಉತ್ಪನ್ನ ಕೆಂಪು ಬಣ್ಣಗಳಲ್ಲಿ ಲಭ್ಯವಿದೆ, ಆದರೆ ಐಫೋನ್ 14 ಪ್ರೋ ಮಾದರಿಗಳು ಡೀಪ್ ಪರ್ಪಲ್, ಗೋಲ್ಡ್, ಸಿಲ್ವರ್ ಮತ್ತು ಸ್ಪೇಸ್ ಬ್ಲ್ಯಾಕ್‌ನಲ್ಲಿ ಬರುತ್ತವೆ.


    ಇದನ್ನೂ ಓದಿ: ನಿಮ್ಮ ಹಣ ಡಬಲ್​ ಮಾಡ್ತೀವಿ ಅಂತ ದೋಖಾ, ಟೆಲಿಗ್ರಾಮ್​ನಲ್ಲಿ ಲಿಂಕ್​ ಓಪನ್​ ಮಾಡೋ ಮುನ್ನ ಹುಷಾರ್​!


    ಆ್ಯಪಲ್‌ ಐಫೋನ್‌ 14 ಈಗ ಚಿನ್ನದ ಬಣ್ಣದಲ್ಲಿ


    ಮೆಸ್ಸಿ ಅವರ ಚಿನ್ನದ ಫೋನ್‌ಗಳು ಭಾರೀ ಸುದ್ದಿಯಾದ ನಂತರ ಇದೀಗ ಸಾಮಾನ್ಯ ಐಫೋನ್‌ 14 ಗಳು ಸಹ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳಲಿವೆ ಎಂದು ವರದಿಯಾಗಿದೆ. ಅದರಂತೆ ಆ್ಯಪಲ್‌ ಶೀಘ್ರದಲ್ಲೇ ತನ್ನ ಐಫೋನ್ 14 ಅನ್ನು ಗೋಲ್ಡ್​ ಬಣ್ಣದಲ್ಲಿ ಪರಿಚಯಿಸಲಿದೆ ಎಂದು ಪ್ರಮುಖ ವರದಿಗಳಿಂದ ತಿಳಿದುಬಂದಿದೆ. ಆದರೂ ಸಹ ಈ ಫೋನ್‌ನ ಫೀಚರ್ಸ್‌ ಹಾಗೂ ಇನ್ನಿತರೆ ಶೈಲಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.


    ಐಫೋನ್​


    ಆ್ಯಪಲ್‌ನ ಪಿಆರ್‌ ತಂಡವು ಮುಂದಿನ ವಾರ ಉತ್ಪನ್ನ ಬ್ರೀಫಿಂಗ್ ಅನ್ನು ಯೋಜಿಸುತ್ತಿದೆ ಎಂದು ಮ್ಯಾಕ್ ರೂಮೋರ್ಸ್ ವರದಿ ಮಾಡಿದ್ದು, ಈ ವೇಳೆ ಯಾವುದೇ ಹೊಸ ಫೋನ್‌ ಬಗ್ಗೆ ಘೋಷಣೆ ಮಾಡದೆ ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಐಫೋನ್‌ 14 ಅನ್ನು ಬೇರೆ ಬಣ್ಣದಲ್ಲಿ ಪರಿಚಯಿಸುವ ಬಗ್ಗೆ ಉಲ್ಲೇಖಿಸಲಾಗುತ್ತದೆ ಎನ್ನಲಾಗಿದೆ. ಈ ನೀತಿಯು ಐಫೋನ್ 14 ಮಾರಾಟವನ್ನು ಹೆಚ್ಚಿಸುವ ಆ್ಯಪಲ್‌ನ ಕಾರ್ಯತಂತ್ರದ ಭಾಗವಾಗಿದೆ ಎಂದೂ ಸಹ ತಿಳಿದುಬಂದಿದೆ.




    ಐಫೋನ್​ 15 ಯಾವೆಲ್ಲಾ ಬಣ್ಣದಲ್ಲಿ ಬರಲಿದೆ?


    ಹಳದಿ ಬಣ್ಣದ ಆಯ್ಕೆಯು ಆ್ಯಪಲ್​ ಕಂಪೆನಿಯ ಪ್ರೋ ಮಾದರಿಯಲ್ಲಿ ಲಭ್ಯವಿರುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆ್ಯಪಲ್ ಪ್ರೋ ಮಾದರಿಗೆ ಹೊಸ ಬಣ್ಣವನ್ನು ಸೇರಿಸಿದರೆ, ಕೆಲವು ಜನರು ಗೋಲ್ಡ್​ ಐಫೋನ್ 14 ಬಗ್ಗೆ ಉತ್ಸುಕರಾಗಬಹುದು. ಈ ಮಧ್ಯೆ, ಆ್ಯಪಲ್​ನ ಮುಂದಿನ ಐಫೋನ್ 15, ಐಫೋನ್ 15 ಪ್ರೋ ಡಾರ್ಕ್​ ಕೆಂಪು ಬಣ್ಣದ ಆಯ್ಕೆಯಲ್ಲಿ ಬರಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

    Published by:Prajwal B
    First published: