ಟೆಕ್ ದೈತ್ಯ ಗೂಗಲ್ (Google) ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ತರುತ್ತದೆ. ಇದೀಗ ಗೂಗಲ್ಫೈಂಡ್ ಮೈ ಡಿವೈಸ್ ಎಂಬುದನ್ನು ಅಪ್ಡೇಟ್ (Update) ಮಾಡಲು ಹೊರಟಿದೆ. ಈ ಫೈಂಡ್ ಮೈ ಡಿವೈಸ್ (Find My Device) ಕಳೆದುಹೋದ ಮತ್ತು ಕದ್ದ ಸ್ಮಾರ್ಟ್ಫೋನ್ಗಳನ್ನು ಪತ್ತೆ ಮಾಡುವಂತಹ ಫೀಚರ್ ಆಗಿದೆ. ಇದೀಗ ಫೈಂಡ್ ಮೈ ಡಿವೈಸ್ ಫೀಚರ್ ಬಹಳ ಜನಪ್ರಿಯವಾಗಿದೆ. ಆದರೆ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ಗಳನ್ನು ಆನ್ಲೈನ್ ಮೋಡ್ನಲ್ಲಿ (Online Mode) ಇರಿಸಿದಾಗ ಮಾತ್ರ ಈ ಸೇವೆಯನ್ನು ಬಳಸಬಹುದಿತ್ತು. ಆದರೆ ಇನ್ಮುಂದೆ ಬಳಕೆದಾರರು ತಮ್ಮ ಆಂಡ್ರಾಯ್ಡ್ ಅಥವಾ ವಿಯರ್ಓಎಸ್ ಸಾಧನಗಳನ್ನು ಆಫ್ಲೈನ್ನಲ್ಲಿರುವಾಗಲೂ ಟ್ರ್ಯಾಕ್ ಮಾಡುವಂತೆ ಮಾಡಲು ಗೂಗಲ್ ಇದೀಗ ಪರೀಕ್ಷಿಸುತ್ತಿದೆ.
ಈ ಫೈಂಡ್ ಮೈ ಡಿವೈಸ್ ಆಯ್ಕೆಯು ಮೊಬೈಲ್ಗಳ ಸೇಫ್ಟಿಗಾಗಿ ರಚಿಸಿರುವಂತಹ ಅಪ್ಲಿಕೇಶನ್ ಆಗಿದೆ. ಆದರೆ ಇದುವರೆಗೆ ಈ ಸಿಸ್ಟಮ್ ಅನ್ನು ಇಂಟರ್ನೆಟ್ ಮೂಲಕ ಟ್ರ್ಯಾಕ್ ಮಾಡಬೇಕಿತ್ತು. ಆದರೆ ಇನ್ಮುಂದೆ ಆಫ್ಲೈನ್ನಲ್ಲೂ ಬಳಕೆ ಮಾಡುವಂತೆ ಗೂಗಲ್ ಅಪ್ಡೇಟ್ ಮಾಡುತ್ತಿದೆ ಎಂದು ವರದಿಯಾಗಿದೆ.
ಸ್ಯಾಮ್ಮೊಬೈಲ್ ವರದಿಯ ಪ್ರಕಾರ
ಸ್ಯಾಮ್ಮೊಬೈಲ್ ವರದಿಯ ಪ್ರಕಾರ. ಈ ವೈಶಿಷ್ಟ್ಯದ ವಿವರಗಳನ್ನು ಮೊದಲು ಗೂಗಲ್ ಸಿಸ್ಟಮ್ ಅಪ್ಡೇಟ್ಗಾಗಿ ಚೇಂಜ್ಲಾಗ್ನಲ್ಲಿ ಉಲ್ಲೇಖಿಸಲಾಗಿದೆ. ಈ ಸಾಧನದ ಮೂಲಕ ಕಳೆದು ಹೋದ ಅಥವಾ ಕದ್ದ ಮೊಬೈಲ್ ಅನ್ನು ಮರು ಪಡೆಯುವ ಉದ್ದೇಶದಿಂದ ಆಂಡ್ರಾಯ್ಡ್ ಸಾಧನಗಳಿಗೆ ಅಪ್ಡೇಟ್ ಮಾಡುವ ತಯಾರಿಯನ್ನು ಗೂಗಲ್ ಮಾಡುತ್ತಿದೆ ಎಂದು ಹೇಳಲಾಗಿದೆ. ಇನ್ನು ಈ ಫೈಂಡ್ ಮೈ ಡಿವೈಸ್ ಸಾಧನವು ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಶೀಘ್ರದಲ್ಲೇ ಈ ಅಪ್ಡೇಟ್ ಆಗಲಿದೆ
ಆಂಡ್ರಾಯ್ಡ್ ಮತ್ತು Wear OS ಸಾಧನಗಳು ಪರಸ್ಪರ ಸಂವಹನ ನಡೆಸಲು ಮತ್ತು ಕಳೆದುಹೋದ ಅಥವಾ ಕದ್ದ ಸಾಧನಗಳನ್ನು ಸುಲಭವಾಗಿ ಪತ್ತೆಹಚ್ಚಲು ಈ ವೈಶಿಷ್ಟ್ಯವನ್ನು ಅಪ್ಗ್ರೇಡ್ ಮಾಡಲಾಗುತ್ತದೆ. ಇದು ಸ್ಯಾಮ್ಸಂಗ್ನಂತೆಯೇ ಎಂಡ್-ಟು-ಎಂಡ್ ಎನ್ಕ್ರಿಪ್ಟ್ನಂತೆ ಕಾರ್ಯನಿರ್ವಹಿಸಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಏರ್ಟೆಲ್ನಿಂದ ಹೊಸ ರೀಚಾರ್ಜ್ ಪ್ಲಾನ್! ಯಾರೂ ಊಹೆ ಮಾಡಿರ್ಲಿಕ್ಕೂ ಇಲ್ಲ
ಸ್ಯಾಮ್ಸಂಗ್ ಮತ್ತು ಆ್ಯಪಲ್ನ ಈ ಸಾಧನ ಹೇಗೆ ಕಾರ್ಯನಿರ್ವಹಿಸುತ್ತದೆ?
ವರದಿಯ ಪ್ರಕಾರ, ಸ್ಯಾಮ್ಸಂಗ್ನ ಸ್ಮಾರ್ಟ್ಥಿಂಗ್ ಫೈಂಡ್ ಫೀಚರ್ ಗ್ಯಾಲಕ್ಸಿ ಸಾಧನವು ಆಫ್ಲೈನ್ನಲ್ಲಿರುವಾಗಲೂ ಅದರ ಸ್ಥಳವನ್ನು ಪತ್ತೆ ಮಾಡುತ್ತದೆ. ಈ ಸಾಧನದ ಮೂಲಕ ಸ್ಮಾರ್ಟ್ಫೋನ್ ಅನ್ನು ಬ್ಲೂಟೂತ್ ಮೂಲಕ ಹತ್ತಿರದ ಸ್ಯಾಮ್ಸಂಗ್ ಸಾಧನಗಳಿಗೆ ಸಂಪರ್ಕಿಸಬಹುದು ಮತ್ತು ಬಳಕೆದಾರರಿಗೆ ಯಾವ ಸ್ಥಳದಲ್ಲಿದೆ ಎಂದು ವರದಿ ಮಾಡುತ್ತದೆ. ಆದ್ದರಿಂದ ಅದರ ಸ್ಥಳವನ್ನು ಟ್ರ್ಯಾಕ್ ಮಾಡಬಹುದು. ಇನ್ನು ಆ್ಯಪಲ್ ಸಿಸ್ಟಮ್ನಲ್ಲಿ ಇದು ಅಷ್ಟು ಶಕ್ತಿಯುತವಾಗಿಲ್ಲದಿದ್ದರೂ, 200 ಮಿಲಿಯನ್ ಬಳಕೆದಾರರು ಈಗಾಗಲೇ ತಮ್ಮ ಸಾಧನಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಿನ ವರ್ಷನ್ಗೆ ಇಂಟರ್ನೆಟ್ ಕಡ್ಡಾಯ
ಫೈಂಡ್ ಮೈ ಡಿವೈಸ್ ಸೇವೆಯ ಪ್ರಸ್ತುತ ವರ್ಷನ್ನಲ್ಲಿ ಬಳಕೆದಾರರಿಗೆ ಇಂಟರ್ನೆಟ್ಗೆ ಸಂಪರ್ಕಗೊಂಡಿರುವ ಆಂಡ್ರಾಯ್ಡ್ ಸಾಧನಗಳನ್ನು ಟ್ರ್ಯಾಕ್ ಮಾಡಲು ಅನುಮತಿಸುತ್ತದೆ. ಈ ಫೀಚರ್ಸ್ ಅನ್ನು ಬಳಸಿಕೊಂಡು ಬಳಕೆದಾರರು ತಮ್ಮ ಸಾಧನದಿಂದ ದೂರದಿಂದಲೇ ಲಾಕ್ ಮಾಡಬಹುದು, ಸೈನ್ ಔಟ್ ಮಾಡಬಹುದು ಮತ್ತು ಗೂಗಲ್ ಅಕೌಂಟ್ ಅನ್ನು ಹ್ಯಾಂಡಲ್ ಮಾಡಬಹುದು. ಆದರೆ ಸಾಧನವು ಇಂಟರ್ನೆಟ್ ಕನೆಕ್ಟ್ ಆದಾಗ ಮಾತ್ರ ಈ ಸೇವೆಯು ಕೆಲಸಮಾಡುತ್ತದೆ. ನೆಟ್ವರ್ಕ್ ಇಲ್ಲದಿದ್ದರೆ ಫೈಂಡ್ ಮೈ ಡಿವೈಸ್ ಫೀಚರ್ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.
ಆದರೆ ಮುಂದಿನ ಅಪ್ಡೇಟ್ನಲ್ಲಿ ಮೊಬೈಲ್ ಬಳಕೆದಾರರು ಫೈಂಡ್ ಮೈ ಡಿವೈಸ್ ಅನ್ನು ಯಾವುದೇ ಇಂಟರ್ನೆಟ್ ಇಲ್ಲದೆಯೂ ಬಳಕೆ ಮಾಡಬಹುದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೇವೆ ಪ್ರಾರಂಭವಾಗಲಿದ್ದು, ಗೂಗಲ್ ಇದರ ಅಪ್ಡೇಟ್ ಬಗ್ಗೆ ಯೋಜನೆ ನಡೆಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ