ಮುಂದಿನ ತಿಂಗಳಿಂದ ವಿಮಾನದಲ್ಲಿ ಮೊಬೈಲ್, ಇಂಟರ್​ನೆಟ್ ಬಳಕೆಗೆ ಅನುಮತಿ

ಫ್ಲೈ ಕನೆಕ್ಟಿವಿಟಿಗಾಗಿ ಟೆಲಿಕಾಂ ಇಲಾಖೆ ಫೆಬ್ರವರಿ 10ರವರೆಗೆ ಪರವಾನಗಿ ನೀಡಲಿದ್ದು, ಪರವಾನಗಿ ಶುಲ್ಕ 1 ರೂ. ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ. ಈಗಾಗಲೇ ಸ್ಪೈಸ್​ ಜೆಟ್​ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಮೊಬೈಲ್​ ಫೋನ್​ ಬಳಕೆಗೆ ಬೇಕಾದ ವ್ಯವಸ್ಥೆಯ ತಯಾಯಲ್ಲಿದೆ.

zahir | news18
Updated:February 1, 2019, 11:09 PM IST
ಮುಂದಿನ ತಿಂಗಳಿಂದ ವಿಮಾನದಲ್ಲಿ ಮೊಬೈಲ್, ಇಂಟರ್​ನೆಟ್ ಬಳಕೆಗೆ ಅನುಮತಿ
@PhocusWire
zahir | news18
Updated: February 1, 2019, 11:09 PM IST
ಹೊಸದಿಲ್ಲಿ: ಶೀಘ್ರದಲ್ಲೇ ಭಾರತೀಯ ವಿಮಾನ ಪ್ರಯಾಣಿಕರಿಗೆ ವಿಮಾನದೊಳಗೆ ಮೊಬೈಲ್​ ಫೋನ್​ ಬಳಸುವ ಅವಕಾಶ ದೊರೆಯಲಿದೆ. ಈ ಕುರಿತಾದ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಅಂತಿಗೊಳಿಸಿದ್ದು, ದೂರ ಸಂಪರ್ಕದ ಪರವಾನಗಿಗಾಗಿ ಈಗಾಗಲೇ ನಾಲ್ಕು ಕಂಪೆನಿಗಳು ಅರ್ಜಿ ಸಲ್ಲಿಸಿದೆ. ಈ ಕಂಪೆನಿಗಳಿಗೆ ಫೆಬ್ರವರಿ ಎರಡನೇ ವಾರದಲ್ಲಿ ದೂರ ಸಂಪರ್ಕ ಇಲಾಖೆ ಪರವಾನಗಿ ನೀಡಲಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ವಿಮಾನದೊಳಗೆ ಫ್ಲೈ ಕನೆಕ್ಟಿವಿಟಿ ಮೂಲಕ ವೈ-ಫೈ ಮತ್ತು ಇಂಟರ್​ನೆಟ್​ ಬಳಸಲು ಕೂಡ ಟ್ರಾಯ್​ ಅನುಮತಿ ನೀಡಿದೆ.

ಡಿಜಿಟಲ್ ಯುಗದಲ್ಲಿ ವಿಮಾನದೊಳಗೆ ವೈಫೈ ಸೇವೆ ನೀಡಲು ಈ ಹಿಂದೆ ಟೆಲಿಕಾಂ ಇಲಾಖೆ ಅನುಮತಿ ನೀಡಿರಲಿಲ್ಲ. ಇದೀಗ ಏರ್​ಟೆಲ್, ಜಿಯೋ ಸೇರಿದಂತೆ ಬಹುತೇಕ ಎಲ್ಲ ಟೆಲಿಕಾಂ ಕಂಪೆನಿಗಳು ವಿಮಾನ ಪ್ರಯಾಣಿಕರಿಗೂ ಇಂಟರ್​ನೆಟ್​ ಸೌಲಭ್ಯ ಒದಗಿಸಲು ಆಸಕ್ತಿ ವಹಿಸಿದೆ. ಈ ಕಾರಣಕ್ಕಾಗಿ ಟೆಲಿಕಾಂ ಇಲಾಖೆಯ ಕೆಲ ನಿಯಮಗಳಲ್ಲಿ ಬದಲಾವಣೆ ತರಲಾಗಿದ್ದು, ಆಸಕ್ತ ವೈ-ಫೈ ಸೇವೆ ಪೂರೈಕೆದಾರರು ಟೆಲಿಕಾಂ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಕಂಪೆನಿಗಳ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಫ್ಲೈ ಕನೆಕ್ಟಿವಿಟಿಗಾಗಿ ಟೆಲಿಕಾಂ ಇಲಾಖೆ ಫೆಬ್ರವರಿ 10ರವರೆಗೆ ಪರವಾನಗಿ ನೀಡಲಿದ್ದು, ಪರವಾನಗಿ ಶುಲ್ಕ 1 ರೂ. ನಿಗದಿ ಪಡಿಸಲಾಗಿದೆ ಎಂದು ತಿಳಿಸಿದೆ. ಈಗಾಗಲೇ ಸ್ಪೈಸ್​ ಜೆಟ್​ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಮೊಬೈಲ್​ ಫೋನ್​ ಬಳಕೆಗೆ ಬೇಕಾದ ವ್ಯವಸ್ಥೆಯ ತಯಾಯಲ್ಲಿದೆ. ಇನ್ನು ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ವೈ-ಫೈ ಸೇವೆ ಒದಗಿಸಲು ಸೂಕ್ತ ಸೌಲಭ್ಯದ ವ್ಯವಸ್ಥೆ ಇನ್ನಷ್ಟೇ ಕಲ್ಪಿಸಬೇಕಾಗಿದೆ. ಸದ್ಯ ದೇಶದ ಸ್ಪೈಸ್ ಜೆಟ್ ಬೊಯಿಂಗ್ 737 ವಿಮಾನದಲ್ಲಿ ವೈ-ಫೈ ಸೇವೆ ನೀಡುವಂತಹ ಸಕಲ ಸೌಲಭ್ಯವಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಹೊಸ ವಿಮಾನಗಳಲ್ಲಿ ಈ ಸೇವೆ ಸಿಗುವ ಸಾಧ್ಯತೆಯಿದೆ.

ಲುಫ್ತಾನ್ಸಾ, ಸಿಂಗಪೂರ್ ಏರ್​ಲೈನ್ಸ್​ ಮತ್ತು ಕತರ್ ಏರ್​ಲೈನ್ಸ್​ನಲ್ಲಿ ಈಗಾಗಲೇ ವೈ-ಫೈ ಸೇವೆಯನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಶೀಘ್ರದಲ್ಲೇ ದೇಶದ ಎಲ್ಲ ಪ್ರಮುಖ ವಿಮಾನ ಸಂಸ್ಥೆಗಳಲ್ಲಿ ವೈ-ಫೈ ಸೇವೆ ನೀಡಲು ಟೆಲಿಕಾಂ ಕಂಪೆನಿಗಳು ಆಸಕ್ತಿವಹಿಸಿದೆ.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ