• Home
  • »
  • News
  • »
  • tech
  • »
  • Internet Explorer: ಫೆಬ್ರವರಿ 14 ರಿಂದ ‘ಇಂಟರ್ನೆಟ್​ ಎಕ್ಸ್​​ಪ್ಲೋರರ್​​‘ ಕಾರ್ಯನಿರ್ವಹಿಸುವುದಿಲ್ಲವಂತೆ! ಕಾರಣವೇನು ಗೊತ್ತಾ?

Internet Explorer: ಫೆಬ್ರವರಿ 14 ರಿಂದ ‘ಇಂಟರ್ನೆಟ್​ ಎಕ್ಸ್​​ಪ್ಲೋರರ್​​‘ ಕಾರ್ಯನಿರ್ವಹಿಸುವುದಿಲ್ಲವಂತೆ! ಕಾರಣವೇನು ಗೊತ್ತಾ?

ಇಂಟರ್ನೆಟ್​ ಎಕ್ಸ್​​ಪ್ಲೋರರ್

ಇಂಟರ್ನೆಟ್​ ಎಕ್ಸ್​​ಪ್ಲೋರರ್

ಮೈಕ್ರೋಸಾಫ್ಟ್​ ಕಂಪನಿ ತನ್ನ ಹೊಸ 'ಮೈಕ್ರೋಸಾಫ್ಟ್ ಎಡ್ಜ್' ಬ್ರೌಸರ್‌ ಅನ್ನು ಪ್ರಾರಂಭಿಸಲಿದೆ. ಆ ಬ್ರೌಸರ್​ ಬಿಡುಗಡೆಯಾಗುವ ದಿನವೇ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಸಹ ಅಧಿಕೃತವಾಗಿ ತನ್ನ ಕಾರ್ಯಗಳನ್ನು ನಿಲ್ಲಿಸಲಿದೆ ಎಂದು ಹೇಳಿದೆ.

  • Share this:

    ಒಂದು ಕಾಲದಲ್ಲಿ ಇಂಟರ್ನೆಟ್ (Internet)​ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ಇಂಟರ್ನೆಟ್​ ಅಂದರೆ ಏನೆಂಬುದನ್ನು ಜಗತ್ತಿಗೆ ಪರಿಚಯಿಸಿದ್ದು ‘ಇಂಟರ್ನೆಟ್​ ಎಕ್ಸ್​​ಪ್ಲೋರರ್‘ (Internet Explorer) ಬ್ರೌಸರ್​. ಇದು 21ನೇ ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಯನ್ನು ಪಡೆದ ಬ್ರೌಸರ್ (Browser) ಅಗಿದೆ. ಆದರೆ ಇಂಟರ್ನೆಟ್​ ಎಕ್ಸ್​​ಪ್ಲೋರರ್ ಬ್ರೌಸರ್​ ಫೆಬ್ರವರಿ 23, 2023 ರಂದು ಸಂಪೂರ್ಣವಾಗಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಲಿದೆ. ಈ ಬ್ರೌಸರ್ ತನ್ನ ಕೆಲಸಕಾರ್ಯಗಳನ್ನು ಕಳೆದ ಜೂನ್ 15 ರಿಂದಲೇ ಸ್ಥಗಿತಗೊಳಿಸಿತ್ತು. ಆದರೆ ಇದೀಗ ವಿಂಡೋಸ್‌ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಅನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸುವಿಕೆಯ ಕುರಿತು ಮೈಕ್ರೋಸಾಫ್ಟ್ ಸಂಸ್ಥೆ (Microsoft Company) ಹೇಳಿದೆ.


    ಮೈಕ್ರೋಸಾಫ್ಟ್​ ಕಂಪನಿ ತನ್ನ ಹೊಸ 'ಮೈಕ್ರೋಸಾಫ್ಟ್ ಎಡ್ಜ್' ಬ್ರೌಸರ್‌ ಅನ್ನು ಪ್ರಾರಂಭಿಸಲಿದೆ. ಆ ಬ್ರೌಸರ್​ ಬಿಡುಗಡೆಯಾಗುವ ದಿನವೇ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಸಹ ಅಧಿಕೃತವಾಗಿ ತನ್ನ ಕಾರ್ಯಗಳನ್ನು ನಿಲ್ಲಿಸಲಿದೆ ಎಂದು ಹೇಳಿದೆ.


    ಫೆಬ್ರವರಿ 14, 2023 ರಂದು ಇಂಟರ್ನೆಟ್​ ಎಕ್ಸ್​​ಪ್ಲೋರರ್ ಕಾರ್ಯ ನಿಷ್ಕ್ರಿಯ


    ಟೆಕ್ನಾಲಜಿ ಯುಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದ ಇಂಟರ್ನೆಟ್ ಎಕ್ಸ್​ಪ್ಲೋರರ್ ತನ್ನ ಕಾರ್ಯವನ್ನು 2023 ಫೆಬ್ರವರಿ 14 ರಂದು ನಿಲ್ಲಿಸಲಿದೆ ಎಂದು ಹಲವು ವರದಿಗಳು ತಿಳಿಸಿವೆ. ಈ ಬ್ರೌಸರ್ 1995 ರಲ್ಲಿ ಪ್ರಾರಂಭವಾಯಿತು.


    ಇದನ್ನೂ ಓದಿ: ಏರ್​​​ಟೆಲ್​ ಗ್ರಾಹಕರಿಗೆ ಬಂಪರ್​ ಆಫರ್​! ಈ ಯೋಜನೆಯಲ್ಲಿ ಓಟಿಟಿ ಪ್ಲಾಟ್​ಫಾರ್ಮ್ಸ್​ ಫ್ರೀ


    ಇಂಟರ್ನೆಟ್​ ಎಕ್ಸ್​ಪ್ಲೋರರ್​ ಬೆಳವಣಿಗೆ

    1995ರಲ್ಲಿ ಆರಂಭವಾದ ಇಂಟರ್ನೆಟ್ ಎಕ್ಸ್‌ಪ್ಲೋರರ್ 2003ರ ವರೆಗೂ ಬಳಕೆದಾರರ ಅಗತ್ಯದ ಬ್ರೌಸರ್ ಆಗಿತ್ತು ಆ ಬಳಿಕ ಮಾರುಕಟ್ಟೆಗೆ ಹಲವಾರು ಹೊಸ ಬ್ರೌಸರ್‌ಗಳ ಆಗಮನವಾಯಿತು. ಇದರ ಮುಂದೆ ಇಂಟರ್ನೆಟ್​ ಎಕ್ಸ್​ಪ್ಲೋರರ್ ಬ್ರೌಸರ್​ ಪೈಪೋಟಿ ಕೊಡಲು ವಿಫಲವಾಯಿತು.


    2003 ರಲ್ಲಿ ಜಗತ್ತಿನ ಶೇ.93 ರಷ್ಟು ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇತರೆ ಕಂಪನಿಗಳ ಬ್ರೌಸರ್‌ಗೆ ಪೈಪೋಟಿ ಕೊಡಲಾಗದೇ ತನ್ನ ಬ್ರೌಸರ್​ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಹಾಗಾಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ತನ್ನ ಕೆಲಸಕ್ಕೆ ನಿವೃತ್ತಿಯನ್ನು ನೀಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ವಿಂಡೋಸ್‌ಗಳಲ್ಲಿ 'ಮೈಕ್ರೋಸಾಫ್ಟ್‌ ಎಡ್ಜ್' ಬ್ರೌಸರ್ ಬರಲಿದೆ ಎಂದು ಕಂಪನಿ ಹೇಳಿದೆ.


    ಮೈಕ್ರೋಸಾಫ್ಟ್​ ಎಡ್ಜ್​ ಹೊಸ ಅಪ್ಡೇಟ್​ನೊಂದಿಗೆ ಮತ್ತೆ ಆರಂಭ


    ಫೆಬ್ರವರಿ 14, 2023 ರಂದು ಮೈಕ್ರೋಸಾಫ್ಟ್ ಸಂಸ್ಥೆ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ ಅನ್ನು ಹೊಸ ಅಪ್ಡೇಟ್ಸ್​ನೊಂದಿಗೆ ಬಿಡುಗಡೆ ಮಾಡಲಿದೆ. ಈ ಮೂಲಕ ವಿಂಡೋಸ್​10 ವರ್ಷನ್​ನಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಡಿಲೀಟ್​ ಆಗಲಿದೆ. ಆದರೆ ಇದರ ಬದಲಾಗಿ ಮೈಕ್ರೋಸಾಫ್ಟ್ ಮುಂದಿನ ಪ್ರಮುಖ ವಿಂಡೋಸ್​10 ವರ್ಷನ್​ನಲ್ಲಿ ಮೈಕ್ರೋಸಾಫ್ಟ್​ ಎಡ್ಜ್​ ಅನ್ನು ಪರಿಚಯಿಸಲಿದೆ. ಇದು ಇನ್ನಷ್ಟು ಫೀಚರ್ಸ್​ಗಳೊಂದಿಗೆ ಇತರ ಬ್ರೌಸರ್​ಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಇಂಟರ್ನೆಟ್​ ಎಕ್ಸ್​​ಪ್ಲೋರರ್​ನ ಕಾರ್ಯ ನಿಲ್ಲುವ ದಿನವೇ ಮೈಕ್ರೋಸಾಫ್ಟ್​ ಎಡ್ಜ್​ ಸಕ್ರಿಯವಾಗಲಿದೆ ಎಂದು ಕಂಪನಿ ತಿಳಿಸಿದೆ.



    ಮೈಕ್ರೋಸಾಫ್ಟ್​ ಎಡ್ಜ್​ ಬ್ರೌಸರ್​ನ ಹಿಂದಿನ ಬೆಳವಣಿಗೆ 


    ಜಾಗತಿಕ ಸರ್ಚ್ ಎಂಜಿನ್ ದೈತ್ಯ ಗೂಗಲ್ ಕ್ರೋಮ್‌ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್‌ ಎಡ್ಜ್ ಬ್ರೌಸರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಪರಿಣಾಮದಿಂದಾಗಿ ಕಳೆದ ವರ್ಷ ಜಾಗತಿಕ ಬ್ರೌಸರ್ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಜಗತ್ತಿನ ಜನಪ್ರಿಯ ಮೊಝಿಲಾ ಫೈರ್ ಫಾಕ್ಸ್ ಅನ್ನು ಹಿಂದಿಕ್ಕಿ 2ನೇ ಸ್ಥಾನವನ್ನು ಪಡೆದಿತ್ತು.


    ನೆಟ್ ಮಾರ್ಕೆಟ್ ಶೇರ್ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ ಮೈಕ್ರೋಸಾಫ್ಟ್ ಎಡ್ಜ್ ಶೇ.8.09ರಷ್ಟು ಮಾರ್ಕೆಟ್ ಷೇರು ಪ್ರಮಾಣ ಹೊಂದುವ ಮೂಲಕ 2ನೇ ಸ್ಥಾನಕ್ಕೇರಿದ್ದರೆ, ಫೈರ್ ಫಾಕ್ಸ್ ಶೇ.7.36ರಷ್ಟು ಷೇರು ಪ್ರಮಾಣದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿದುಬಂದಿತ್ತು. ಆದರೆ ಬ್ರೌಸರ್​ ಮಾರುಕಟ್ಟೆಯಲ್ಲಿ ಬಹಳಷ್ಟು ಗ್ರಾಹಕರನ್ನು ಹೊಂದಿಕೊಂಡಿರುವ ಗೂಗಲ್​ ಕ್ರೋಮ್​ ಬ್ರೌಸರ್​ ಅಗ್ರಸ್ಥಾನವನ್ನು ಪಡೆದಿದೆ.

    Published by:Prajwal B
    First published: