ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಕಂಪೆನಿಯಾಗಿಯಾಗಿರು ಸ್ಯಾಮ್ಸಂಗ್ ಕಂಪೆನಿ (Samsung Comapny) ಬಿಡುಗಡೆ ಮಾಡಿರುವ ಸ್ಮಾರ್ಟ್ಫೋನ್ಗಳಿಗೆ (Smartphones) ಪ್ರಪಂಚದಾದ್ಯಂತ ಈ ಗಲೂ ಉತ್ತಮ ಬೇಡಿಕೆಯಿದೆ. ಈ ಕಂಪೆನಿಯು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ವಿವಿಧ ವಿಭಾಗಗಳಲ್ಲಿ ಅನೇಕ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಇತ್ತೀಚೆಗೆ ತನ್ನ ಮುಂಬರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳ ಕುರಿತು ಪ್ರಮುಖ ಪ್ರಕಟಣೆಯನ್ನು ಮಾಡಿದೆ. ಸ್ಯಾಮ್ಸಂಗ್ ಕಂಪೆನಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಗ್ಯಾಲಕ್ಸಿ ಅನ್ಪ್ಯಾಕ್ಡ್-2023 ಈವೆಂಟ್ನಲ್ಲಿ ಗ್ಯಾಲಕ್ಸಿ ಎಸ್ 23 ಸೀರಿಸ್ನ (Galaxy S23 Siries) ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸ್ಯಾಮ್ಸಂಗ್ ಈ ಸೀರಿಸ್ನ ಸ್ಮಾರ್ಟ್ಫೋನ್ಗಳಿಗೆ ಪ್ರಿ-ರಿಸರ್ವ್ ಆಯ್ಕೆಯನ್ನು ಸಹ ನೀಡುವುದಾಗಿ ಘೋಷಿಸಿದೆ.
ಇದೀಗ ಸ್ಯಾಮ್ಸಂಗ್ ಕಂಪೆನಿಯಿಂದ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲು ರೆಡಿಯಾಗಿರುವ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳ ಬಿಡುಗಡೆಯ ಸುದ್ದಿಯನ್ನು ಬಹಿರಂಗ ಪಡಿಸಿದೆ. ಹಾಗಿದ್ರೆ ಈ ಸೀರಿಸ್ನಲ್ಲಿ ಯಾವೆಲ್ಲಾ ಮಾದರಿಗಳಲ್ಲಿ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಭಾರತದಲ್ಲಿ ಪ್ರೀ ಬುಕಿಂಗ್ ಆರಂಭ
ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳನ್ನು ಪ್ರೀ-ಬುಕ್ ಮಾಡುವುದರಿಂದ ಆರಂಭಿಕ ಪ್ರವೇಶ ಮತ್ತು ವಿಶೇಷ ಕೊಡುಗೆಗಳನ್ನು ಪಡೆಯಬಹುದು. Samsung.com, ಸ್ಯಾಮ್ಸಂಗ್ನ ಸ್ಟೋರ್ಗಳಲ್ಲಿ, ಅಮೆಜಾನ್ ಮೂಲಕ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳನ್ನು ರೂ.1999 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಔಟ್ಲೆಟ್ಗಳಲ್ಲಿ ಮೊದಲೇ ಕಾಯ್ದಿರಿಸಬಹುದಾಗಿದೆ.
ಇದನ್ನೂ ಓದಿ: 22 ಸಾವಿರದ ಸ್ಮಾರ್ಟ್ಟಿವಿ ಕೇವಲ 7,500 ರೂಪಾಯಿಗೆ ಲಭ್ಯ! ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಆಫರ್
ಸ್ಯಾಮ್ಸಂಗ್ ಕಂಪೆನಿಯಿಂದ ಮುಂಬರು ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ ಅನ್ನು ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು ರೂ.5000 ಮೌಲ್ಯದ ಪ್ರೀ-ಬುಕಿಂಗ್ನಲ್ಲಿ ಕೆಲವೊಂದು ಪ್ರಯೋಜನಗಳನ್ನೂ ಪಡೆಯುತ್ತಾರೆ. ಆದರೆ 31ನೇ ಮಾರ್ಚ್ 2023 ರ ಮೊದಲು ಖರೀದಿಸುವ ಪ್ರಕ್ರಿಯೆಯನ್ನು ಅಥವಾ ಸಕ್ರಿಯ ಗೊಳಿಸಿದವರಿಗೆ ಮಾತ್ರ ಈ ಪ್ರಯೋಜನಗಳು ದೊರೆಯುತ್ತದೆ.
3 ರೂಪಾಂತರಗಳಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು
ಸ್ಯಾಮ್ಸಂಗ್ನ ಹಿಂದಿನ ಸರಣಿಯಂತೆ, ಗ್ಯಾಲಕ್ಸಿ ಎಸ್23 ಸೀರಿಸ್ನಲ್ಲಿ ಕೂಡ ಮೂರು ರೂಪಾಂತರಗಳನ್ನು ಹೊಂದಿರುವ ಸಾಧ್ಯತೆಯಿದೆ. ಗ್ಯಾಲಕ್ಸಿ ಎಸ್23 ಸರಣಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ ಎಂಬ ಮೂರು ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಮದು ಕಂಪೆನಿ ಹೇಳಿದೆ. ಇನ್ನು ಈ ಸೀರಿಸ್ನ ಸ್ಮಾರ್ಟ್ಫೋನ್ಗಳೆಲ್ಲವೂ ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 8 ಜೆನ್ 2 ಚಿಪ್ಸೆಟ್ ಅನ್ನು ಹೊಂದಿರುವ ನಿರೀಕ್ಷೆಯಿದೆ.
ಗ್ಯಾಲಕ್ಸಿ ಎಸ್23 ಸೀರಿಸ್ನ ಫೀಚರ್ಸ್
ಪ್ರಮುಖ ವಿಭಾಗದಲ್ಲಿ ಬರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸರಣಿಯ ಗ್ಯಾಲಕ್ಸಿ ಎಸ್23, ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಸ್ಮಾರ್ಟ್ಫೋನ್ಗಳಲ್ಲಿ ಕಂಪೆನಿಯು ಮುಖ್ಯವಾಗಿ ಕ್ಯಾಮೆರಾದ ಫೀಚರ್ಸ್ಗಳ ಮೇಲೆ ಕೇಂದ್ರೀಕರಿಸಿದೆ ಎಂದು ವರದಿಗಳು ಬಹಿರಂಗಪಡಿಸಿವೆ. ಮುಖ್ಯವಾಗಿ, ಗ್ಯಾಲಕ್ಸಿ ಎಸ್23 ಅಲ್ಟ್ರಾ ಪ್ರಮುಖ ಸ್ಪೆಷಲ್ ಫೀಚರ್ಸ್ಗಳೊಂದಿಗೆ ಬರಲಿದೆ ಎಂದು ವದಂತಿಗಳಿವೆ.
ಈ ಉನ್ನತ-ಮಟ್ಟದ ರೂಪಾಂತರವು 200 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಬಹುದು ಎಂದು ಟೆಕ್ ಮೂಲಗಳು ಅಂದಾಜು ಮಾಡಿದೆ. ಇನ್ನು ಈ ಸ್ಮಾರ್ಟ್ಫೋನ್ 6.8-ಇಂಚಿನ ಡಿಸ್ಪ್ಲೇ, 256 ಜಿಬಿ ಇಂಟರ್ನಲ್ ಮೆಮೊರಿ ಸಾಮರ್ಥ್ಯವನ್ನು ಹೊಂದಿರಬಹುದು. ಹಾಗೆಯೇ ಇದರಲ್ಲಿ ಹಿಂದಿನ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದರಲ್ಲಿ 40 ಎಮ್ಪಿ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.
ಇದು ಸ್ಯಾಮ್ಸಂಗ್ ಕಂಪೆನಿಯಿಂದ ಬಿಡುಗಡೆಯಾಗುತ್ತಿರುವ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳಾಗಿದೆ. ಈ ಸ್ಮಾರ್ಟ್ಫೋನ್ಗಳ ಬೆಲೆ, ಲಭ್ಯತೆಯ ಬಗ್ಗೆ ಇನ್ನೂ ಸರಿಯಾಗಿ ಮಾಹಿತಿಯನ್ನು ಕಂಪೆನಿ ಬಹಿರಂಗ ಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ