ಡ್ಯುಯಲ್ ಏರ್‌ಬ್ಯಾಗ್‌, ವಾಹನಗಳ ಬೆಲೆ ಹೆಚ್ಚಳ: ಏಪ್ರಿಲ್ 1 ರಿಂದ ಆಟೋಮೊಬೈಲ್ ಉದ್ಯಮದ ಬದಲಾವಣೆಗಳು ಹೀಗಿವೆ..

ರಸ್ತೆ ಮತ್ತು ಸಾರಿಗೆ ಸಚಿವಾಲಯವು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಹೊಸ ಕಾರು ಮಾಡೆಲ್‌ಗಳು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿರುವುದು ಕಡ್ಡಾಯ ಎಂದು ಮಾಹಿತಿ ನೀಡಿದೆ. ಹಳೆಯ ಮಾಡೆಲ್‌ಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಸರ್ಕಾರ ಆಗಸ್ಟ್ 31 ರವರೆಗೆ ಕಾರು ತಯಾರಕರಿಗೆ ಅವಕಾಶ ನೀಡಿದೆ.

ಡ್ಯುಯಲ್ ಏರ್‌ಬ್ಯಾಗ್

ಡ್ಯುಯಲ್ ಏರ್‌ಬ್ಯಾಗ್

 • Share this:
  2021-22ರ ಹೊಸ ಹಣಕಾಸು ವರ್ಷದಲ್ಲಿ ವಾಹನ ಉದ್ಯಮವು ಕೆಲವು ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹೆಚ್ಚಿನ ಕಾರು ಮತ್ತು ಬೈಕ್ ತಯಾರಕರು ಪರಿಚಯಿಸಿರುವ ಬೆಲೆ ಏರಿಕೆಯು ಅತ್ಯಂತ ಪ್ರಮುಖವಾದ ಮತ್ತು ಸಕಾರಾತ್ಮಕವಲ್ಲದ ಬದಲಾವಣೆಯಾಗಿದೆ. ಅದರ ಹೊರತಾಗಿ, ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಕಾರಿನಲ್ಲಿ ಏರ್‌ಬ್ಯಾಗ್‌ಗಳ ಸಂಖ್ಯೆಯಲ್ಲಿನ ಬದಲಾವಣೆ.

  ರಸ್ತೆ ಮತ್ತು ಸಾರಿಗೆ ಸಚಿವಾಲಯವು ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಹೊಸ ಕಾರು ಮಾಡೆಲ್‌ಗಳು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿರುವುದು ಕಡ್ಡಾಯ ಎಂದು ಮಾಹಿತಿ ನೀಡಿದೆ. ಹಳೆಯ ಮಾಡೆಲ್‌ಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಸರ್ಕಾರ ಆಗಸ್ಟ್ 31 ರವರೆಗೆ ಕಾರು ತಯಾರಕರಿಗೆ ಅವಕಾಶ ನೀಡಿದೆ. ಸ್ಟೀರಿಂಗ್ ವೀಲ್‌ನಲ್ಲಿರುವ ಒಂದೇ ಏರ್‌ಬ್ಯಾಗ್‌ನ ನಿಯಮವನ್ನು ಜುಲೈ 2019 ರಲ್ಲಿ ಕಡ್ಡಾಯಗೊಳಿಸಲಾಯಿತು. ಆದರೆ, ಏಪ್ರಿಲ್‌ 1 ರಿಂದ ಚಾಲಕ ಮತ್ತು ಹಿಂದಿನ ಸೀಟ್ ಪ್ರಯಾಣಿಕರಿಗಾಗಿ ಎರಡು ಏರ್‌ಬ್ಯಾಗ್‌ಗಳು ಕಾರುಗಳನ್ನು ಜನರಿಗೆ ಹೆಚ್ಚು ಸುರಕ್ಷಿತವಾಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಹಂತವು ಉತ್ತಮವಾಗಿದ್ದರೂ, ಇದರಿಂದ ಕಾರುಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಸರಾಸರಿ 5,000 ರಿಂದ 7,000 ರೂಗಳವರೆಗೆ ಕಾರುಗಳ ಬೆಲೆ ಹೆಚ್ಚಾಗಲಿದೆ.

  ಆಟೋಮೊಬೈಲ್‌ ತಯಾರಕರು ಬೆಲೆಯನ್ನು ಹೆಚ್ಚಿಸಲು ಕಾರಣವೆಂದರೆ ಬಳಸಿದ ವಸ್ತುಗಳ ಬೆಲೆ ಏರಿಕೆ ಮತ್ತು ವಾರ್ಷಿಕ ಬೆಲೆ ಏರಿಕೆ. ಏಪ್ರಿಲ್ 1 ರಿಂದ ಯಾವ್ಯಾವ ಕಾರು ಮತ್ತು ಬೈಕುಗಳ ಬ್ರ್ಯಾಂಡ್‌ ಬೆಲೆ ಹೆಚ್ಚಾಗಿದೆ ಎನ್ನುವ ವಿವರ ಇಲ್ಲಿದೆ ನೋಡಿ..

  ಕವಾಸಕಿ: ಬೈಕು ತಯಾರಿಸುವ ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು 18,000 ರೂ. ವರೆಗೆ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.

  ಹೀರೋ ಮೋಟೋಕಾರ್ಪ್:ಬೆಲೆ ಏರಿಕೆ ಬಗ್ಗೆ ಬೈಕು ತಯಾರಕ ಭಾರತದಲ್ಲಿನ ತನ್ನ ಕ್ಲೈಂಟ್ ಬೇಸ್‌ಗೆ ಮಾಹಿತಿ ನೀಡಿದೆ. ಅವರ ಎಲ್ಲಾ ಬೈಕು ಮತ್ತು ಸ್ಕೂಟರ್‌ಗಳ ಬೆಲೆ ₹ 2,500 ವರೆಗೆ ಹೆಚ್ಚಾಗಲಿದೆ ಎಂದು ಕಂಪನಿ ತಿಳಿಸಿದೆ.

  ನಿಸ್ಸಾನ್: ಜಪಾನಿನ ಕಾರು ತಯಾರಕರು ನಿರೀಕ್ಷಿತ ಪ್ರಮಾಣದ ಬೆಲೆ ಏರಿಕೆಯ ಬಗ್ಗೆ ವಿವರಗಳನ್ನು ನೀಡಿಲ್ಲ. ನಮಗೆ ಮಾಹಿತಿ ತಿಳಿದಿರುವಂತೆ ವೆಚ್ಚದ ಹೆಚ್ಚಳವು ಕಾರಿನ ಮಾಡೆಲ್ ಮತ್ತು ರೂಪಾಂತರವನ್ನು ಅವಲಂಬಿಸಿರುತ್ತದೆ.

  ದಾಟ್ಸನ್‌: ದಾಟ್ಸನ್‌ ರೆಡಿ ಗೋ, ದಾಟ್ಸನ್‌ ಗೋ + ಸೇರಿದಂತೆ ಸಂಪೂರ್ಣ ಕಾರುಗಳ ಬೆಲೆ ಏರಿಕೆ ಕಾಣುತ್ತದೆ. ಇಲ್ಲಿಯವರೆಗೆ, ಹೆಚ್ಚಳದ ಮೊತ್ತ ಅಥವಾ ಶೇಕಡಾವಾರು ಬಗ್ಗೆ ಯಾವುದೇ ಮಾಹಿತಿ ಇಲ್ಲ.

  ರೆನಾಲ್ಟ್: ಫ್ರೆಂಚ್ ಕಾರು ತಯಾರಿಕೆ ಕಂಪನಿಯು ಈಗಾಗಲೇ ಈ ವರ್ಷದ ಜನವರಿಯಲ್ಲಿ ತಮ್ಮ ಕಾರುಗಳ ಬೆಲೆಯನ್ನು 28,000 ರೂ. ವರೆಗೆ ಹೆಚ್ಚಿಸಿತ್ತು. ಆದರೂ ಬ್ರ್ಯಾಂಡ್‌ ಮತ್ತೆ ತಮ್ಮ ವಾಹನಗಳ ದರವನ್ನು ಪರಿಷ್ಕರಿಸಲು ಹೊರಟಿದೆ ಎಂಬ ಮಾಹಿತಿ ಇದೆ. ಆದರೆ ಇತ್ತೀಚಿನ ಬೆಲೆ ಏರಿಕೆಯ ನಿಖರ ಪ್ರಮಾಣ ಇನ್ನೂ ಲಭ್ಯವಿಲ್ಲ.

  ಮಾರುತಿ ಸುಜುಕಿ: ಗ್ರಾಹಕರು ಖರೀದಿಸಲು ಆಯ್ಕೆ ಮಾಡುವ ವಾಹನವನ್ನು ಅವಲಂಬಿಸಿ ಈ ಬ್ರ್ಯಾಂಡ್‌ 1 ರಿಂದ 6 ಪ್ರತಿಶತದಷ್ಟು ಬೆಲೆಯನ್ನು ಹೆಚ್ಚಿಸಲಿದೆ. ಒಟ್ಟು ಮೊತ್ತಕ್ಕೆ ಸಂಬಂಧಿಸಿದಂತೆ, ಬೆಲೆ ಏರಿಕೆ ಸರಿಸುಮಾರು
  5,000 ರೂ. ಮತ್ತು 34,000 ರೂ. ನಡುವೆ ಇರುತ್ತದೆ.
  First published: