• Home
  • »
  • News
  • »
  • tech
  • »
  • Airtel ಗ್ರಾಹಕರೇ.. ಕೇವಲ 179 ರೂ.ಗೆ ಪ್ರಿಪೇಯ್ಡ್ ರೀಚಾರ್ಜ್ ಮಾಡಿ 2 ಲಕ್ಷ ರೂ. ಲಾಭ ಪಡೆಯಿರಿ..

Airtel ಗ್ರಾಹಕರೇ.. ಕೇವಲ 179 ರೂ.ಗೆ ಪ್ರಿಪೇಯ್ಡ್ ರೀಚಾರ್ಜ್ ಮಾಡಿ 2 ಲಕ್ಷ ರೂ. ಲಾಭ ಪಡೆಯಿರಿ..

ಏರ್‌ಟೆಲ್ /Airtel

ಏರ್‌ಟೆಲ್ /Airtel

Airtel Rs 179 Prepaid Recharge : ಏರ್‌ಟೆಲ್  179 ರೂ. ಪ್ರಿಪೇಯ್ಡ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಭಾರತದ ಯಾವುದೇ ಮೊಬೈಲ್ ನೆಟ್‍ವರ್ಕ್‍ಗೆ ಅನಿಯಮಿತ ಕರೆಗಳು, 2 ಜಿಬಿ ಡೇಟಾ ಮತ್ತು 300 ಎಸ್‍ಎಂಎಸ್‍ಗಳನ್ನು ಒಳಗೊಂಡಿದೆ. 

  • Share this:

    Rs 2 Lakh Life Insurance: ಮೊಬೈಲ್ ಕಂಪನಿಗಳು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಆಲೋಚನೆಗಳ ಮೂಲಕ ಸೆಳೆಯುತ್ತಿದ್ದಾರೆ. ಭಾರತಿ ಏರ್‌ಟೆಲ್ ಟೆಲಿಕಾಂ  ತನ್ನ ಎಲ್ಲಾ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದರ ಬೆಲೆ 179 ರೂಪಾಯಿ. ಏರ್‌ಟೆಲ್  179 ರೂ. ಪ್ರಿಪೇಯ್ಡ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಭಾರತದ ಯಾವುದೇ ಮೊಬೈಲ್ ನೆಟ್‍ವರ್ಕ್‍ಗೆ ಅನಿಯಮಿತ ಕರೆಗಳು, 2 ಜಿಬಿ ಡೇಟಾ ಮತ್ತು 300 ಎಸ್‍ಎಂಎಸ್‍ಗಳನ್ನು ಒಳಗೊಂಡಿದೆ.  ಇದರಲ್ಲಿ ಗ್ರಾಹಕರಿಗೆ ಇರುವ ನಿಜವಾದ ಲಾಭ ಏನೆಂದರೆ ಭಾರತಿ AXA ಜೀವ ವಿಮೆ.  ಪ್ರಿಪೇಯ್ಡ್ ರೀಚಾರ್ಜ್ ಮಾಡಿಸುವ ಮೂಲಕ ನೀವು 2 ಲಕ್ಷ  ರೂ. ಜೀವ ವಿಮಾ ಸೌಲಭ್ಯವನ್ನು ಪಡೆಯಬಹುದು. 


    ಕುಟುಂಬಕ್ಕೆ ಆರ್ಥಿಕ ಭದ್ರತೆ


    "ಅಂತರ್ ನಿರ್ಮಿತ ಟರ್ಮ್ ಇನ್ಶೂರೆನ್ಸ್ ಯೋಜನೆಗಳೊಂದಿಗೆ ನಮ್ಮ ನವೀನ ಪ್ರಿಪೇಯ್ಡ್ ಯೋಜನೆಗಳಿಗೆ ಗ್ರಾಹಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಇದು ಇಡೀ ಗ್ರಾಹಕ ಸಮೂಹದಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ನಮ್ಮನ್ನು ಉತ್ತೇಜಿಸಿದೆ. ರೂ. 179 ರೀಚಾರ್ಜ್ ನೂರಾರು ಮಿಲಿಯನ್ ಭಾರತೀಯರು ಏರ್‌ಟೆಲ್‌ನ ವಿಶ್ವ ದರ್ಜೆಯ ನೆಟ್‍ವರ್ಕ್‍ನಲ್ಲಿ ಸಂಪರ್ಕದಲ್ಲಿರಿಸಲು, ತಮ್ಮನ್ನು ಮತ್ತು ಅವರ ಕುಟುಂಬಗಳನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಲು ಸರಳ ಮತ್ತು ಅತ್ಯಂತ ಸುಲಭವಾಗಿ ಲಭ್ಯವಿರುವ ವೇದಿಕೆಗಳಲ್ಲಿ ಒಂದು ಎಂದು ಭಾರತಿ ಏರ್‍ಟೆಲ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ಶಾಶ್ವತ್ ಶರ್ಮಾ ಹೇಳಿದರು.


    ಎಲ್ಲ ಗ್ರಾಹಕರಿಗೆ ವಿಮಾ ರಕ್ಷಣೆಯ ಸೌಲಭ್ಯ ಅನ್ವಯ


    18-54 ವರ್ಷ ವಯಸ್ಸಿನ ಎಲ್ಲ ಗ್ರಾಹಕರಿಗೆ ವಿಮಾ ರಕ್ಷಣೆಯ ಸೌಲಭ್ಯ ಅನ್ವಯವಾಗಿದೆ ಮತ್ತು ಪಾಲಿಸಿಯನ್ನು ಸಕ್ರಿಯಗೊಳಿಸಲು ಯಾವುದೇ ಕಾಗದಪತ್ರಗಳು ಅಥವಾ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿಲ್ಲ ಎಂದು ಕಂಪನಿ ಹೇಳುತ್ತದೆ. ರೀಚಾರ್ಜ್ ಸಮಯದಲ್ಲಿ ಡಾಕ್ಯುಮೆಂಟೇಶನ್ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಪಾಲಿಸಿಯನ್ನು ಅಥವಾ ವಿಮಾ ಪ್ರಮಾಣಪತ್ರವನ್ನು ತಕ್ಷಣವೇ ಡಿಜಿಟಲ್ ಆಗಿ ತಲುಪಿಸಲಾಗುತ್ತದೆ. ನೀವು ವಿಮೆಯ ಭೌತಿಕ ದಾಖಲೆಯನ್ನು ಬಯಸಿದಲ್ಲಿ, ಏರ್‌ಟೆಲ್ ಅದನ್ನು ಗ್ರಾಹಕರ ವಿನಂತಿಯ ಮೇರೆಗೆ ಒದಗಿಸುತ್ತದೆ.


    ಪ್ರತಿ ರೀಚಾರ್ಜ್‍ನೊಂದಿಗೆ ಲೈಫ್​ ಇನ್ಶೂರೆನ್ಸ್​​ 


    "ಭಾರತಿ ಏರ್‌ಟೆಲ್ ನೊಂದಿಗೆ ಪಾಲುದಾರಿಕೆ ಹೊಂದಲು ಮತ್ತು ಗ್ರಾಹಕರಿಗೆ ರಕ್ಷಣೆಯನ್ನು ನೀಡಲು ನಮಗೆ ಸಂತೋಷವಾಗಿದೆ. ಜವಾಬ್ದಾರಿಯುತ ಜೀವ ವಿಮಾದಾರರಾಗಿ, ನಾವು ಯಾವಾಗಲೂ ಗ್ರಾಹಕರಿಗೆ ಅನುಕೂಲ ಮತ್ತು ರಕ್ಷಣೆಯ ಹೊಸ ಆಯಾಮಗಳನ್ನು ಒದಗಿಸಲು ಬಯಸುತ್ತೇವೆ. ನಮ್ಮ ಪಾಲುದಾರಿಕೆಯು ಪ್ರತಿ ರೀಚಾರ್ಜ್‍ನೊಂದಿಗೆ ಪ್ರತಿಯೊಬ್ಬ ಗ್ರಾಹಕರಿಗೆ ಜೀವ ವಿಮಾ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಮತ್ತು ಅದರ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ನಿಮ್ಮ ಹಳೆಯ ಮೊಬೈಲ್ ಕೊಟ್ಟರೆ ಸಾಕು ಈ ಸ್ಮಾರ್ಟ್​​ಫೋನ್​​ನ ಕೇವಲ 940 ರೂ.ಗೆ ಖರೀದಿಸಬಹುದು..


    ಈ ಒಕ್ಕೂಟವು ದೇಶದಲ್ಲಿ ವಿಮಾ ಕ್ಷೇತ್ರವನ್ನು ಬಲಪಡಿಸುತ್ತದೆ ಎಂದು ನಮಗೆ ವಿಶ್ವಾಸವಿದೆ, ”ಎಂದು ಭಾರತಿ AXA ಜೀವ ವಿಮೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಕಾಸ್ ಸೇಠ್ ಹೇಳುತ್ತಾರೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಪ್ರಕಾರ, ಭಾರತದಲ್ಲಿ ಬಿಲಿಯನ್ ಜನಸಂಖ್ಯೆಯ ಶೇಕಡಾ 4ರಷ್ಟು ಜನರು ಮಾತ್ರ ವಿಮಾ ರಕ್ಷಣಾ ಸೌಲಭ್ಯ ಹೊಂದಿದ್ದಾರೆ. ಏರ್‌ಟೆಲ್ ರೀಚಾರ್ಜ್ ಮತ್ತು ವಿಮಾ ಸಕ್ರಿಯಗೊಳಿಸುವಿಕೆಗಳನ್ನು ಏರ್‌ಟೆಲ್ ಅಂಗಡಿಯಲ್ಲಿ ಅಥವಾ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಮಾಡಬಹುದಾಗಿದೆ.

    Published by:Kavya V
    First published: