ಸೋಷಿಯಲ್ ಮೀಡಿಯಾಗಳು (Social Media) ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿದೆ. ಸ್ಮಾರ್ಟ್ಫೋನ್ಗಳ ಬಳಕೆ ಯಾವಾಗ ಹೆಚ್ಚಾಯಿತೋ, ಅಂದಿನಿಂದ ಸೋಷಿಯಲ್ ಮೀಡಿಯಾಗಳನ್ನು ಸಹ ಬಳಸುವವರು ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಇದರಲ್ಲಿರುವಂತಹ ಕೆಲವೊಂದು ವೇದಿಕೆಗಳು. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾಗಲು ಮನರಂಜನಾ ಮಾಧ್ಯಮವಾಗಿ ಮಾರ್ಪಟ್ಟಿದೆ. ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ನಂತಹ (WhatsApp) ಅಪ್ಲಿಕೇಶನ್ಗಳು ಹಲವಾರು ರೀತಿಯಲ್ಲಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಬಳಕೆಗೆ ಬಂದಿವೆ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೇಕ್ ನ್ಯೂಸ್ಗಳು (Free Laptop Fake News) ಸಹ ಬಹಳಷ್ಟು ಹರಿದಾಡುತ್ತಿದೆ. ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಂತೆ ಇದನ್ನು ದುರುಪಯೋಗದ ದೃಷ್ಟಿಯಿಂದಳು ಕೆಲವರು ಬಳಕೆ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ಕಳುಹಿಸಿ ಆಫರ್ ನೀಡುತ್ತೇವೆ ಎಂಬ ಮೆಸೇಜ್ ಅನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ರೀತಿ ಇತ್ತೀಚೆಗೊಂದು ಕೇಂದ್ರ ಸರ್ಕಾರ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುತ್ತಿದೆ ಎಂಬ ಮೆಸೇಜ್ ಭಾರೀ ವೈರಲ್ ಆಗುತ್ತಿದೆ. ಇದರಿಂದ ಎಷ್ಟೋ ಜನರು ಗೊಂದಕ್ಕೊಳಗಾಗಿದ್ದಾರೆ. ಹಾಗಿದ್ರೆ ಈ ಸುದ್ದಿ ನಿಜನಾ ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ಮೆಸೇಜ್ ಭಾರೀ ವೈರಲ್ ಆಗುತ್ತಿದೆ. ಈ ಮೆಸೇಜ್ನಲ್ಲಿ ಪ್ರಧಾನಿಯವರ ಉಚಿತ ಲ್ಯಾಪ್‌ಟಾಪ್ ಯೋಜನೆ 2023 ರಲ್ಲಿ ಅರ್ಹ ಜನರಿಗೆ ಲ್ಯಾಪ್ಟಾಪ್ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಭಾರತ ಸರ್ಕಾರ ನೀಡುವ ಈ ಯೋಜನೆಯಲ್ಲಿ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಅನ್ನು ಪಡೆಯಬಹುದು ಎಂದು ಬರೆದಿರುತ್ತದೆ. ಜೊತೆಗೆ ಒಂದು ಲಿಂಕ್ ಸಹ ಇರುತ್ತದೆ. ಜೊತೆಗೆ ಇಂಟೆಲ್ ಸೆಲೆರಿಯೊ ಡ್ಯುಯಲ್ ಕೋರ್ ಲ್ಯಾಪ್‌ಟಾಪ್ ಅನ್ನು ಪಡೆಯಬಹುದು ಎಂದು ಇರುತ್ತದೆ.
ಇದನ್ನೂ ಓದಿ: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!
ಸತ್ಯನಾ? ಸುಳ್ಳಾ?
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಉಚಿತ ಲ್ಯಾಪ್‌ಟಾಪ್ ಯೋಜನೆಯ ಮೆಸೇಜ್ ಯಾವುದೇ ರೀತಿ ಸತ್ಯ ಸಂಗತಿಯಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಹಾಗಾಗಿ ಯಾರಿಗಾದರೂ ಇಂತಹ ಮೆಸೇಜ್ಗಳು ಬಂದರೆ ಜಾಗರೂಕರಾಗಿರಿ. ಏಕೆಂದರೆ ರಿಜಿಸ್ಟರ್ ಮಾಡಿದವರಿಗೆ ಮಾತ್ರ ಈ ಪ್ರಯೋಜನ ಸಿಗಲಿದೆ ಎಂದು ನೋಟಿಸ್ ವೈರಲ್ ಆಗಿದೆ. ಹೀಗಾಗಿ ಉಚಿತವಾಗಿ ಲ್ಯಾಪ್ ಟಾಪ್ ಸಿಗುತ್ತದೆ ಎಂದು ರಿಜಿಸ್ಟರ್ ಮಾಡಿಕೊಂಡರೆ ಮೋಸ ಹೋಗುವುದದಂತು ಗ್ಯಾರಂಟಿ.
ಲಿಂಕ್ ಕ್ಲಿಕ್ ಮಾಡಿದ್ರೆ ಏನಾಗುತ್ತದೆ?
ಒಂದು ವೇಳೆ ಈ ರೀತಿಯ ಮೆಸೇಜ್ ಬಂದಾಗ ತಪ್ಪಿ ಕ್ಲಿಕ್ ಮಾಡಿದ್ರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವಂತಹ ಹಣ ಖಾಲಿಯಾಗಬಹುದು. ಹಾಗಾಗಿ ನಿಮ್ಮ ಫೋನ್ ನಲ್ಲೂ ಈ ರೀತಿಯ ಮೆಸೇಜ್ ಬಂದರೆ ಅಥವಾ ಎಲ್ಲಿಯಾದರೂ ಈ ರೀತಿಯ ಸೂಚನೆ ಕಂಡರೆ ಎಚ್ಚರದಿಂದಿರಿ. ಏಕೆಂದರೆ ಅದು ಫೇಕ್ ನ್ಯೂಸ್ ಆಗಿದೆ. ಒಂದು ವೇಳೆ ಇದನ್ನು ನೋಡಿ ನಂಬಿ ರಿಜಿಸ್ಟರ್ ಮಾಡಲು ಮುಂದಾದ್ರೆ ನಿಮ್ಮ ವೈಯಕ್ತಿಕ ಡೇಟಾ, ಬ್ಯಾಂಕ್ ವಿವರ, ಎಲ್ಲವೂ ವಂಚಕರ ಕೈಸೇರುತ್ತದೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆಯೂ ಖಾಲಿಯಾಗುವುದು ಖಚಿತ.
ಈ ರೀತಿಯ ಹಲವಾರು ಫೇಕ್ ಮೆಸೇಜ್ಗಳಿವೆ
ಇಷ್ಟು ಮಾತ್ರವಲ್ಲದೆ ಇಂತಹ ಮೆಸೇಜ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ನೀವು ಉಚಿತವಾಗಿ ರೀಚಾರ್ಜ್ ಮಾಡಬಹುದು, ಹುಡುಗಿಯರಿಗೆ ಮದುವೆಯ ಉಡುಗೊರೆಗಳು ಸೇರಿದಂತೆ ಹಲವು ರೀತಿಯ ನಕಲಿ ಸುದ್ದಿಗಳಿವೆ. ಆದ್ದರಿಂದ ನೀವು ಈ ವೈರಲ್ ಸಂದೇಶಗಳನ್ನು ಓಪನ್ ಮಾಡುವ ಮೊದಲು ಜಾಗರೂಕರಾಗಿರಬೇಕು. ಯೋಚಿಸದೆ ಆತುರಪಟ್ಟರೆ ತೊಂದರೆಯಾಗುವುದಂತು ಗ್ಯಾರಂಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ