Job Scams On WhatsApp: ಉದ್ಯೋಗದ ಆಸೆಯಿಂದ ಇಂಥಾ ಸಂದೇಶಗಳ ಮೇಲೆ ಕ್ಲಿಕ್​ ಮಾಡಬೇಡಿ! ನಿಮ್ಮ ಡೇಟಾ ಕಳ್ಳರ ಪಾಲಾಗಬಹುದು

ಪ್ರತಿನಿತ್ಯ ಒಬ್ಬ ವ್ಯಕ್ತಿಯಾದರೂ ಇಂತಹ ಪ್ರಕರಣದಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾನೆ. ಇದಕ್ಕಾಗಿ ವಂಚಕರು ವಾಟ್ಸ್​ಆ್ಯಪ್​ ಮತ್ತು ಸಂದೇಶವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಉದ್ಯೋಗ 'ಆಫರ್‌ಗಳು' ಜನರನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಕೆಲಸ ಮಾಡುವಂತೆ ಮಾಡುವ ಮೂಲಕ ಅವರ ಲಾಭವನ್ನು ಪಡೆದುಕೊಳ್ಳುತ್ತಿವೆ.

WhatsApp/ ವಾಟ್ಸ್​ಆ್ಯಪ್​

WhatsApp/ ವಾಟ್ಸ್​ಆ್ಯಪ್​

 • Share this:
  ನಕಲಿ ಉದ್ಯೋಗದ ಬಗ್ಗೆ ಮಾಹಿತಿ ಹಬ್ಬಿಸಿ, ಕೊನೆಗೆ ಉದ್ಯೋಗಕ್ಕಾಗಿ ಹಾತೊರೆಯುವ ಯುವಕ- ಯುವತಿಯರಿಂದ ಹಣ ವಸೂಲಿ ಮಾಡುವ ಅನೇಕ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಆದರೀಗ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನನಿತ್ಯ ಒಬ್ಬರಾದರೂ ಇಂತಹ ಪ್ರಕರಣಕ್ಕೆ ಸಿಲುಕಿ ಹಣ (Money) ಕಳೆದುಕೊಳ್ಳದೇ ಇರಲಾರರು. ತಂತ್ರಜ್ಞಾನ ಬೆಳೆದಂತೆ ಮೋಸದ ಜಾಲಗಳು ಬಲಗೊಳ್ಳುತ್ತಿವೆ. ಇದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಮೋಸ ಮಾಡುತ್ತಿದ್ದಾರೆ. ಆದರೆ ಎಷ್ಟೇ ಜಾಗೃತೆ ವಹಿಸಿದರೂ ಇಂತಹ ಮೋಸದ ಜಾಲಕ್ಕೆ ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ. ವಾಟ್ಸ್​ಆ್ಯಪ್​ (WhatsApp) ಮೂಲಕ ನಕಲಿ ಉದ್ಯೋಗ (Fake Job) ಸಂದೇಶ ರವಾನಿಸಿ ವಂಚಿಸುತ್ತಿದ್ದಾರೆ. ಇದೀಗ ಚಾಟ್-ಆಧಾರಿತ ನೇರ ನೇಮಕಾತಿ ವೇದಿಕೆಯಾದ ಹೈರೆಕ್ಟ್‌ನ ವರದಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಭಾರತದಲ್ಲಿ (India) ಸುಮಾರು 56% ಉದ್ಯೋಗಾಕಾಂಕ್ಷಿಗಳು ತಮ್ಮ ಉದ್ಯೋಗ (Job) ಹುಡುಕಾಡುವ ಸಮಯದಲ್ಲಿ ಉದ್ಯೋಗ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ. 20 ರಿಂದ 29 ವರ್ಷ ವಯಸ್ಸಿನ ಉದ್ಯೋಗಾಕಾಂಕ್ಷಿಗಳು ವಂಚಕರ ಪ್ರಮುಖ ಗುರಿಯಾಗಿದ್ದಾರೆ ಎಂದು ವರದಿಯು ಹೈಲೈಟ್ (Highlight) ಮಾಡಿದೆ. ಹೆಚ್ಚಿನ ಸಂಬಳದೊಂದಿಗೆ ಉದ್ಯೋಗಗಳಿಗೆ ಭರವಸೆ ನೀಡುವ ಮೂಲಕ ಆಸಕ್ತ ಯುವಕರನ್ನು ಮುಂಗಡವಾಗಿ ಹಣವನ್ನು ಪಾವತಿಸಲು ಆಮಿಷ ಒಡ್ಡಿ ನಂತರ ಮೋಸ ಮಾಡುತ್ತಿದ್ದಾರೆ.

  ಪ್ರತಿನಿತ್ಯ ಒಬ್ಬ ವ್ಯಕ್ತಿಯಾದರೂ ಇಂತಹ ಪ್ರಕರಣದಲ್ಲಿ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾನೆ. ಇದಕ್ಕಾಗಿ ವಂಚಕರು ವಾಟ್ಸ್​ಆ್ಯಪ್​ ಮತ್ತು ಸಂದೇಶವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಉದ್ಯೋಗ 'ಆಫರ್‌ಗಳು' ಜನರನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಕೆಲಸ ಮಾಡುವಂತೆ ಮಾಡುವ ಮೂಲಕ ಅವರ ಲಾಭವನ್ನು ಪಡೆದುಕೊಳ್ಳುತ್ತಿವೆ.

  ಎಚ್ಚರ! ಎಚ್ಚರ!

  ಅಚ್ಚರಿಯ ಸಂಗತಿ ಎಂದರೆ ವಾಟ್ಸ್​ಆ್ಯಪ್​ನಲ್ಲಿ ಅಥವಾ SMS ಮೂಲಕ ಉದ್ದೇಶಿತ ಪಠ್ಯ ಸಂದೇಶಗಳನ್ನು ಕಳುಹಿಸುವ ಮೂಲಕ ಜನರನ್ನು ಆಕರ್ಷಿಸುವ ಪ್ರವೃತ್ತಿ ಹೆಚ್ಚಾಗಿದೆ. ಉದಾಹರಣೆಗೆ, ನೀವು ಈ ರೀತಿಯ ಸಂದೇಶಗಳನ್ನು ಪಡೆಯಬಹುದು: “ಪ್ರಿಯ ನೀವು ನಮ್ಮ ಸಂದರ್ಶನದಲ್ಲಿ ಉತ್ತೀರ್ಣರಾಗಿದ್ದೀರಿ, ವೇತನವು ದಿನಕ್ಕೆ 8000 ರೂ. ವಿವರಗಳನ್ನು ಚರ್ಚಿಸಲು ದಯವಿಟ್ಟು ಸಂಪರ್ಕಿಸಿ: http://wa.me/9191XXXXXX SSBO.” ಎಂದು ಸಂದೇಶ ಕಳುಹಿಸಲಾಗುತ್ತದೆ ಇದರ ಆಸೆಗೆ ಕ್ಲಿಕ್​ ಮಾಡಿ ಯುವಕ –ಯುವತಿಯರು ಹಣ ಕಳೆದುಕೊಳ್ಳುತ್ತಿದ್ದಾರೆ.

  ಮೋಸಗಾರರು ಹಣವನ್ನು ಮುಂಗಡವಾಗಿ ಕೇಳುತ್ತಾರೆ

  ಪ್ರಾರಂಭದಲ್ಲಿ ಉದ್ಯೋಗ ಸಿಗುತ್ತದೆ ಎಂದು ಆಸಕ್ತರನ್ನು ನಂಬಿಸಿ. ಅವರಿಂದ ನೋಂದಣಿ ಶುಲ್ಕ, ಏಜೆನ್ಸಿ ಶುಲ್ಕ, ಅರ್ಜಿ ಶುಲ್ಕ, ತರಬೇತಿ ಶುಲ್ಕ, ಆಫರ್ ಲೆಟರ್ ಶುಲ್ಕಗನ್ನು ತೆಗೆದುಕೊಳ್ಳುತ್ತಾರೆ. ಬಳಿಕ ವಂಚಕರು ಮೊದಲು ನಿಮಗೆ ಕೆಲಸ ಸಿಕ್ಕಿರುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಇಷ್ಟೇಲ್ಲಾ ಆದ ಬಳಿಕ ಆಫರ್ ಲೆಟರ್ ಅನ್ನು ಬಿಡುಗಡೆ ಮಾಡಲು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಹಣವನ್ನು ಕೇಳುತ್ತಾರೆ.

  ಇದನ್ನೂ ಓದಿ: NOKIA 8210 Phone: ಇದು 4G ಫೀಚರ್ ಫೋನ್, 1 ಬಾರಿ ಚಾರ್ಜ್ ಮಾಡಿದ್ರೆ 1 ತಿಂಗಳು ಬರುತ್ತೆ!

  ಅಭ್ಯರ್ಥಿಯು ಮೊದಲ ತಿಂಗಳನ್ನು ಪೂರ್ಣಗೊಳಿಸುವ ಕ್ಷಣದಲ್ಲಿ, ಮೊದಲ ತಿಂಗಳ ಸಂಬಳವನ್ನು 'ಏಜೆನ್ಸಿ ಶುಲ್ಕ' ಎಂದು ಪಡೆಯಲು ಸ್ವಲ್ಪ ಹಣವನ್ನು ಪಾವತಿಸಲು ಹೇಳಲಾಗುತ್ತದೆ. ಆದರೆ ಅಭ್ಯರ್ಥಿಗೆ ಪೂರ್ಣವಾಗಿ 1 ತಿಂಗಳ ಸಂಬಳ ಪಾವತಿಸುವುದಿಲ್ಲ. ಸಂಬಳದ 10% ಅನ್ನು ಮಾತ್ರ ನೀಡಲಾಗುತ್ತದೆ.  ಡೇಟಾ ಕಳ್ಳತನ

  ಅಪ್ಲಿಕೇಶನ್​ ಹಾಆಕುದರಿಂದ ಪ್ರಾರಂಭವಾಗಿ , ಪ್ರತಿಯೊಂದಕ್ಕೂ ಹಣವನ್ನು ಕೇಳುತ್ತಾರೆ. ಹೀಗೆ ಭರವಸೆಯೊಂದಿಗೆ ನಿಮ್ಮನ್ನು ನಂಬಿಸಿ, ನಿಮ್ಮ ಡೇಟಾ ಸಂಗ್ರಹಿಸಿ ಮೋಸದ ಕೂಪಕ್ಕೆ ತಳ್ಳುತ್ತಾರೆ.

  ಇದನ್ನೂ ಓದಿ: Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

  ದೆಹಲಿ ಪೊಲೀಸ್‌ನ ಸೈಬರ್ ಕ್ರೈಂ ಘಟಕದ ಪ್ರಕಾರ, ವಂಚಕರು ನೌಕರಿ.ಕಾಮ್‌ನಂತಹ ಉದ್ಯೋಗ ತಾಣಗಳಿಂದ ಉದ್ಯೋಗಗಳನ್ನು ಹುಡುಕುತ್ತಿರುವ ವ್ಯಕ್ತಿಗಳ ಬೃಹತ್ ಬಯೋ-ಡೇಟಾ/ಸಿವಿಯನ್ನು ಪಡೆಯುತ್ತಾರೆ. shine.com, ಇತ್ಯಾದಿ, ಮತ್ತು CV ಯಲ್ಲಿ ನೀಡಲಾದ ವಿವರಗಳನ್ನು ಬಳಸುತ್ತಾರೆ

  ಹಾಗಾಗಿ ವಾಟ್ಸ್​ಆ್ಯಪ್​ ಆಗಲಿ ಅಥವಾ ಯಾವುದೇ ಸಂದೇಶ ನಿಮ್ಮ ಸ್ಮಾರ್ಟ್​ಫೋನ್​ಗೆ ಬಂದರೆ ಸರಿಯಾಗಿ ಪರಿಶೀಲಿಸಿ ಬಳಿಕ ಮಾಹಿತಿ ನೀಡುವುದು ಸೂಕ್ತ.
  Published by:Harshith AS
  First published: