ಫ್ರಾನ್ಸ್​​ ವಿದ್ಯಾರ್ಥಿಗಳಿಗೆ ಮೊಬೈಲ್​ ಬಳಕೆ ನಿಷೇಧ


Updated:August 2, 2018, 3:52 PM IST
ಫ್ರಾನ್ಸ್​​ ವಿದ್ಯಾರ್ಥಿಗಳಿಗೆ ಮೊಬೈಲ್​ ಬಳಕೆ ನಿಷೇಧ

Updated: August 2, 2018, 3:52 PM IST
ಸ್ಮಾರ್ಟ್​ಪೋನ್​ ಬಳಕೆ ಹೆಚ್ಚಾಗುತ್ತಾ ಹೋದಂತೆ ಅದರಿಂದ ಉಂಟಾಗುವ ದುಷ್ಪರಿಣಾಮಗಳೂ ಕೂಡಾ ಏರಿಕೆಯಾಗ ತೊಡಗಿತು. ಅಪಾಯದ ಮಟ್ಟವನ್ನು ಮೀರಿರುವ ಸ್ಮಾರ್ಟ್​ಫೊನ್​ ಬಳಕೆಯನ್ನು ತಡೆಯಲು ಫ್ರಾನ್ಸ್ ಮುಂದಾಗಿದೆ. ಹೀಗಾಗಿ ಶಾಲಾ ಪಠ್ಯ ಸಮಯದಲ್ಲಿ ಮೊಬೈಲ್​ ಬಳಕೆ ಮಾಡದಂತೆ ನೂತನ ಆದೇಶ ಹೊರಡಿಸಿದೆ.

ಫ್ರೆಂಚ್​ ಸಂಸತ್ತಿನಲ್ಲಿ ಈ ಕುರಿತು ಅನುಮೋದನೆ ಹೊರಡಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ನಿಯಮ ಚಾಲ್ತಿಗೆ ಬರಲಿದೆ. ಇನ್ನು 15 ವರ್ಷದ ಎಲ್ಲಾ ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಮೊಬೈಲ್​ ಅಥವಾ ಟ್ಯಾಬ್ಲೆಟ್​ಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆಗೆ ಶಾಲೆಗೆ ಮೊಬೈಲ್​ ಒಯ್ದರೆ ಅದನ್ನು ಸ್ವಿಚ್​ ಆಫ್​ ಮಾಡಿಡಬೇಕು ಎನ್ನಲಾಗಿದೆ.

ಮಕ್ಕಳ ಪ್ರಕಾಶಕರಾದ ಬೇಯರ್ಡ್​ ನಡೆಸಿದ ಜೂನಿಯರ್​ ಕನೆಕ್ಟ್​ 2015ರ ವರದಿ ಪ್ರಕಾರ ಶೇ.78 ರಷ್ಟು ಮಕ್ಕಳು ಮತ್ತು ಯುವ ಪೀಳಿಗೆ (1-19 ವರ್ಷದೊಳಗೆ) ಮೊಬೈಲ್​ ಫೋನ್​ ಬಳಕೆ ಮಾಡುತ್ತಿವೆ ಎಂದು ಹೇಳಿತ್ತು. ಅಲ್ಲದೇ 2010ರಲ್ಲೇ ಫ್ರಾನ್ಸ್​​ ಮೊಬೈಲ್​ ನಿಷೇಧಿಸುವ ಕುರಿತು ಚಿಂತನೆ ನಡೆಸಿತ್ತು. ಆದರೆ ಈವರೆಗೂ ಇದು ಚಾಲ್ತಿಗೆ ಬಂದಿರಲಿಲ್ಲ. ಇದೀಗ ಈ ಯೋಜನೆಯಲ್ಲಿ ಚಾಲ್ತಿಗೆ ತರಲು ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ತೀರ್ಮಾನಿಸಿದ್ದಾರೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ