Foxconn India iPhone: ತಮಿಳುನಾಡಿನಲ್ಲಿ ಪುನರಾರಂಭಗೊಂಡಿದೆ ಫಾಕ್ಸ್‌ಕಾನ್ ಇಂಡಿಯಾ ಐಫೋನ್ ಸ್ಥಾವರ

iPhone: ತಮಿಳುನಾಡು ರಾಜಧಾನಿ ಚೆನ್ನೈನ ಸಮೀಪದಲ್ಲಿರುವ ಶ್ರೀಪೆರಂಬದೂರ್ ಪಟ್ಟಣದಲ್ಲಿರುವ ಫಾಕ್ಸ್‌ಕಾನ್ ಸ್ಥಾವರವು ಸುಮಾರು 17,000 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆದರೆ ಆಹಾರದಲ್ಲಿ ವಿಷದಿಂದ ಅಸ್ವಸ್ಥರಾದ 250ಕ್ಕೂ ಹೆಚ್ಚು ಕಾರ್ಮಿಕರ ಪ್ರತಿಭಟನೆಯ ನಂತರ ಡಿಸೆಂಬರ್ 18 ರಂದು ಮುಚ್ಚಲಾಯಿತು.

ಐಫೋನ್ / iPhone

ಐಫೋನ್ / iPhone

 • Share this:
  ಆ್ಯಪಲ್ ಇಂಕ್ (Apple inc) ಪೂರೈಕೆದಾರ ಫಾಕ್ಸ್‌ಕಾನ್ (Foxconn) ತಮಿಳುನಾಡಿನ (Tamil Nadu) ಚೆನ್ನೈನ (Chennai) ಸಮೀಪದಲ್ಲಿರುವ ಶ್ರೀಪೆರಂಬದೂರ್‌ನಲ್ಲಿರುವ (Sriperumbudur) ಐಫೋನ್ (Iphone) ಉತ್ಪಾದನಾ ಸ್ಥಾವರವನ್ನು ಬುಧವಾರ (ಇಂದು) ಪುನಃ ತೆರೆಯುತ್ತಿದೆ ಎಂಬುದಾಗಿ ಉತ್ಪಾದನಾ ಸ್ಥಾವರ ಇರುವ ಪ್ರದೇಶದ ಶಾಸಕರು ಹಾಗೂ ಸರಕಾರಿ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ತಮಿಳುನಾಡು ರಾಜಧಾನಿ ಚೆನ್ನೈನ ಸಮೀಪದಲ್ಲಿರುವ ಶ್ರೀಪೆರಂಬದೂರ್ ಪಟ್ಟಣದಲ್ಲಿರುವ ಫಾಕ್ಸ್‌ಕಾನ್ ಸ್ಥಾವರವು ಸುಮಾರು 17,000 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಆದರೆ ಆಹಾರದಲ್ಲಿ ವಿಷದಿಂದ ಅಸ್ವಸ್ಥರಾದ 250ಕ್ಕೂ ಹೆಚ್ಚು ಕಾರ್ಮಿಕರ ಪ್ರತಿಭಟನೆಯ ನಂತರ ಡಿಸೆಂಬರ್ 18 ರಂದು ಮುಚ್ಚಲಾಯಿತು. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ಸ್ಥಾವರವನ್ನು ಮತ್ತೆ ತೆರೆಯುವುದಾಗಿ ವಿಧಾನಸಭೆಯಲ್ಲಿ ತಿಳಿಸಿದರು ಎಂಬುದಾಗಿ ರಾಜ್ಯ ವಿಧಾನಸಭೆಯ ಸದಸ್ಯ ಕೆ ಸೆಲ್ವಪೆರುಂತಗೈ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ.

  ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲಿರುವ ಸಂಸ್ಥೆ:

  ಫಾಕ್ಸ್‌ಕಾನ್ ಇಂಡಿಯಾ ಸ್ಥಾವರವನ್ನು ಪರೀಕ್ಷಾರ್ಥವಾಗಿಯೇ ಮುಂದುವರಿಸುವುದಾಗಿ ಆ್ಯಪಲ್ ತಿಳಿಸಿದ್ದು, ಉದ್ಯೋಗಿಗಳ ವಸತಿ ನಿಲಯಗಳು ಹಾಗೂ ಊಟದ ಹಾಲ್‌ಗಳಲ್ಲಿನ ಮೇಲ್ವಿಚಾರಣೆಗಳನ್ನು ಸ್ವತಂತ್ರ ಲೆಕ್ಕಪರಿಶೋಧಕರೊಂದಿಗೆ ನಡೆಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ. ವಸತಿ ನಿಲಯ ಹಾಗೂ ಊಟದ ಹಾಲ್‌ಗಳಲ್ಲಿ ಸೂಕ್ತವಾದ ಮಾನದಂಡಗಳನ್ನು ಕೈಗೊಳ್ಳಲಾಗುತ್ತಿದೆ ಎಂಬುದು ನಮಗೆ ಖಾತ್ರಿಯಾದೊಡನೆ ಕ್ರಮೇಣವಾಗಿ ಉದ್ಯೋಗಿಗಳು ಕೆಲಸಕ್ಕೆ ಮರಳಲು ಪ್ರಾರಂಭಿಸುತ್ತಾರೆ ಎಂಬುದಾಗಿ ಆ್ಯಪಲ್ ಹೇಳಿಕೆಯಲ್ಲಿ ತಿಳಿಸಿದೆ.

  ಕಠಿಣ ಮೇಲ್ವಿಚಾರಣೆ ಕ್ರಮ:

  ಈ ಹಿಂದೆ ನಡೆದ ಘಟನೆಗಳು ಮತ್ತೆ ಮರುಕಳಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಹಲವಾರು ಸರಿಪಡಿಸುವಿಕೆ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕಾರ್ಮಿಕರು ಹಾಗೂ ಅನಾಮಧೇಯರನ್ನು ಒಳಗೊಂಡಂತೆ ತಮಗಿರುವ ಯಾವುದೇ ಕಳವಳಗಳನ್ನು ವ್ಯಕ್ತಪಡಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಸಿಕೊಳ್ಳುವುದಾಗಿ ಫಾಕ್ಸ್‌ಕಾನ್ ತಿಳಿಸಿದೆ.

  ಇದನ್ನು ಓದಿ: Bluetooth ಗೊತ್ತಲ್ವಾ? ಈ ಹೆಸರಿನ ಹಿಂದೆ ರಾಜನೊಬ್ಬನ ಕಥೆಯಿದೆ!

  ಭಾರತದಲ್ಲಿ ಪೂರೈಕೆದಾರರನ್ನು ಹೊಂದಿರುವ ಆ್ಯಪಲ್ ಸಂಸ್ಥೆ:

  ಫಾಕ್ಸ್‌ಕಾನ್ ಐಫೋನ್ 12 ತಯಾರಿಕೆಯಲ್ಲಿದ್ದು ಐಫೋನ್ 13 ನ ಉತ್ಪಾದನಾ ಪರೀಕ್ಷೆಯನ್ನು ಶ್ರೀಪೆರಂಬದೂರ್ ಸ್ಥಾವರದಲ್ಲಿ ನಡೆಸುತ್ತಿದೆ ಎಂಬುದಾಗಿ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆ್ಯಪಲ್ ಭಾರತದಲ್ಲಿ ಎಂಟು ಇತರ ಪೂರೈಕೆದಾರರನ್ನು ಹೊಂದಿದೆ.

  ಸ್ಥಾವರವು 100ಕ್ಕಿಂತ ಒಳಗಿನ ಕೆಲಸಗಾರರೊಂದಿಗೆ ಉತ್ಪಾದನೆ ಆರಂಭಿಸುತ್ತಿದ್ದು ಪೂರ್ಣ ಉತ್ಪಾದನೆ ನಡೆಸಲು ಇನ್ನೂ ಎರಡಕ್ಕಿಂತ ಹೆಚ್ಚು ತಿಂಗಳ ಕಾಲಾವಕಾಶದ ಅಗತ್ಯವಿದೆ ಎಂಬುದಾಗಿ ಸ್ಥಾವರದ ಮೂಲಗಳು ತಿಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆ್ಯಪಲ್ ಅಥವಾ ಫಾಕ್ಸ್‌ಕಾನ್ ಯಾವಾಗ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಪುನರಾರಂಭಿಸುತ್ತದೆ ಎಂಬುದರ ಕುರಿತು ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

  ಡೆಟ್ರಾಯ್ಟ್‌ ಆಫ್ ಏಷ್ಯಾ:

  ತಮಿಳುನಾಡು 70 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ರಾಜ್ಯ ಮತ್ತು ದೇಶದ ಅತ್ಯಂತ ಕೈಗಾರಿಕೀಕರಣಗೊಂಡ ರಾಜ್ಯಗಳಲ್ಲಿ ಒಂದಾಗಿದೆ, ಇದನ್ನು ಕೆಲವೊಮ್ಮೆ ಡೆಟ್ರಾಯಿಟ್ ಆಫ್ ಏಷ್ಯಾ ಎಂದು ಕರೆಯಲಾಗುತ್ತದೆ. ಬಿಎಮ್‌ಡಬ್ಲ್ಯೂ, ಡೈಮ್ಲರ್, ಹ್ಯುಂಡೈ, ನಿಸ್ಸಾನ್ ಮತ್ತು ರೆನಾಲ್ಟ್ ಸೇರಿದಂತೆ ಪ್ರಮುಖ ಕಂಪನಿಗಳ ಕಾರ್ಖಾನೆಗಳಿಗೆ ನೆಲೆಯಾಗಿದೆ.

  ಇದನ್ನು ಓದಿ: Iphone ಅಸ್ತಿತ್ವವನ್ನೇ ಬದಲಾಯಿಸಲು ಈ ಮೂರು ಅಂಶಗಳೇ ಕಾರಣ!

  ವಸತಿ ನಿಲಯಗಳ ಗುಣಮಟ್ಟ ಮತ್ತು ಊಟದ ಸೌಲಭ್ಯಗಳ ಬಗ್ಗೆ ಕಳವಳ ಪರಿಹರಿಸಲು ವಿವಿಧ ಕೈಗಾರಿಕೆಗಳ ಹತ್ತಾರು ಸಾವಿರ ಕಾರ್ಮಿಕರಿಗೆ ವಸತಿ ಸೌಕರ್ಯವಿರುವ ಹಾಸ್ಟೆಲ್ ಸೌಲಭ್ಯವನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ ಎಂದು ಸೆಲ್ವಪೆರುಂತಗೈ ರಾಯಿಟರ್ಸ್‌ಗೆ ತಿಳಿಸಿದರು. ಇಂತಹ ಘಟನೆಗಳು ಮತ್ತೆ ಮರುಕಳಿಸುವುದನ್ನು ಬಯಸುವುದಿಲ್ಲ ಹಾಗೂ ಈ ಕುರಿಯಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರಕಾರ ಸ್ಪಷ್ಟಪಡಿಸಿದೆ. ಸುಮಾರು 62 ಕಾರ್ಮಿಕರು ಶ್ರೀಪೆರಂಬದೂರಿನ ಫಾಕ್ಸ್‌ಕಾನ್‌ನ ಸ್ಥಾವರಕ್ಕೆ ಮರಳಿದ್ದಾರೆ, ಇನ್ನು ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಹೆಚ್ಚಿನವರು ಆಗಮಿಸುವ ನಿರೀಕ್ಷೆಯಿದೆ ಎಂಬುದಾಗಿ ಅಧಿಕಾರಿಯೊಬ್ಬರು ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.


  Published by:Harshith AS
  First published: