ಸ್ಮಾರ್ಟ್ಫೋನ್ಗಳು ಎಷ್ಟು ಬೆಳವಣಿಗೆಯಾಗಿದೆ ಎಂದರೆ, ಇತ್ತೀಚೆಗೆ ಬಳಕೆದಾರರು ಯಾವುದೇ ಕೆಲಸವನ್ನೂ ಸಹ ಮನೆಯಲ್ಲಿಯೇ ಕುಳಿತುಕೊಂಡು ಮಾಡಬಹುದಾಗಿದೆ. ಉದಾಹರಣೆಗೆ ನಾವು ಬ್ಯಾಂಕಿಂಗ್ ವ್ವಹಾರವನ್ನೇ ನೋಡಬಹುದು. ಪ್ರಸ್ತುತವಾಗಿ ಡಿಜಿಟಲ್ ಬ್ಯಾಂಕಿಂಗ್ (Digital Banking) ಸೌಲಭ್ಯವೂ ಬಾರಿ ಪ್ರಚಲಿತದಲ್ಲಿದೆ. ಬಹುತೇಕ ಎಲ್ಲಾ ಬ್ಯಾಂಕ್ಗಳು ತನ್ನ ಗ್ರಾಹಕರಿಗೆ ಬ್ಯಾಂಕ್ ವಹಿವಾಟು ನಡೆಸಲು ಅನುಕೂಲವಾಗುವಂತೆ ಆ್ಯಪ್ಗಳನ್ನು ರಚಿಸಿದೆ. ಈ ಮೂಲಕ ಬ್ಯಾಲೆನ್ಸ್ ಚೆಕ್, ಹಣ ವರ್ಗಾವಣೆ ಹಾಗೂ ಇತರೆ ವಹಿವಾಟು ನಡೆಸಬಹುದಾಗಿದೆ. ಅದೇ ರೀತಿ ಎಸ್ಬಿಐ (SBI) ತನ್ನ ಖಾತೆದಾರರಿಗಾಗಿ ಯೋನೋ (YONO Application) ಅಪ್ಲಿಕೇಶನ್ ಅನ್ನು ನೀಡಿದ್ದು, ಈ ಮೂಲಕ ಹಲವಾರು ಅಗತ್ಯ ಸೇವೆಗಳನ್ನು ಪೂರೈಸಬಹುದಾಗಿದೆ.
ಸದ್ಯ ಎಸ್ಬಿಐ ತನ್ನ ಗ್ರಾಹಕರಿಗೆ ಯೋನೋ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಮೂಲಕ ಬಳಕೆದಾರರು ತಮ್ಮ ಎಸ್ಬಿಐ ಬ್ಯಾಂಕ್ ಅಕೌಂಟ್ಗೆ ಸಂಬಂಧಿಸಿದ ಯಾವುದೇ ಡೀಟೇಲ್ಸ್ ಅನ್ನು ನೋಡಬಹುದಾಗಿದೆ. ಇದಕ್ಕಾಗಿ ಗ್ರಾಹಕರಿಗೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ನೀಡಿರುತ್ತಾರೆ. ಕೆಲವೊಮ್ಮೆ ಈ ಪಾಸ್ವರ್ಡ್ ಮರೆತೋಗುತ್ತೆ. ಆ ಸಂದರ್ಭದಲ್ಲಿ ಪಾಸ್ವರ್ಡ್ ಅನ್ನು ಮರಳಿ ಹೇಗೆ ಪಡೆಯುವುದು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.
ಯೋನೋ (YONO) ಅಪ್ಲಿಕೇಶನ್
ಎಸ್ಬಿಐ ಬ್ಯಾಂಕ್ನಲ್ಲಿ ಅಕೌಂಟ್ ಅನ್ನು ಹೊಂದಿರುವವರಿಗೆ ಮಾತ್ರ ಈ ಆ್ಯಪ್ ಸೂಕ್ತವಾಗಿದೆ. ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡುವ ಮೂಲಕ ನಮ್ಮ ಬ್ಯಾಂಕ್ ಖಾತೆಗೆ ಬಹುತೇಕ ಎಲ್ಲಾ ಸೇವೆಗಳನ್ನು ಮಾಡಬಹುದಾಗಿದೆ.
ಖಾತೆದಾರರು ಆನ್ಲೈನ್ ಎಸ್ಬಿಐ ಲಾಗಿನ್ ಕ್ರೆಡೆನ್ಶಿಯಲ್ ಅಥವಾ ಎಟಿಎಮ್ ಕಾರ್ಡ್ ಸೇರಿದಂತೆ ಅಕೌಂಟ್ನ ಡೀಟೇಲ್ಸ್ ಅನ್ನು ನೀಡುವ ಮೂಲಕ ಯೋನೋ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆಗಬಹುದಾಗಿದೆ. ಇದಲ್ಲದೆ ಮೊಬೈಲ್ನಲ್ಲಿಯೇ ಯೋನೋ ಅಪ್ಲಿಕೇಶನ್ ಅನ್ನು ಬಳಕೆ ಮಾಡಲು ಮತ್ತು ವೇಗದ ಲಾಗಿನ್ಗಾಗಿ 6 ಅಂಕಿಯ ಪಿನ್ ಅನ್ನು ಸಹ ಸೆಟ್ ಮಾಡಬಹುದಾಗಿದೆ. ಇದನ್ನು ಸುರಕ್ಷತೆಯ ದೃಷ್ಟಿಯಿಂದ ರಚಿಸಲಾಗುತ್ತದೆ.
ಬಳಕೆದಾರರು ಯೂಸರ್ ನೇಮ್ ರೀಸೆಟ್ ಮಾಡುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ