• Home
 • »
 • News
 • »
 • tech
 • »
 • SmartPhone Password: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ

SmartPhone Password: ಮರೆತು ಹೋಯಿತೆ ಮೊಬೈಲ್ ಪಾಸ್‌ವರ್ಡ್? ಟೆನ್ಷನ್‌ ಬಿಡಿ, ಹುಡುಕುವ ಟಿಪ್ಸ್ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೊಮ್ಮೆ ಬಳಕೆದಾರರು ತಾವು ಹಾಕಿದ ಪಾಸ್‌ವರ್ಡ್‌, ಪ್ಯಾಟರ್ನ್‌ ಅನ್ನು ಮರೆತುಬಿಡುತ್ತಾರೆ. ಈಗ ಈ ಪಾಸ್‌ವರ್ಡ್‌, ಪ್ಯಾಟರ್ನ್‌ ಮರೆತರೆ ಸುಲಭದಲ್ಲಿ ಲಾಕ್‌ ಓಪನ್‌ ಮಾಡಬಹುದು.  ಇದಕ್ಕಾಗಿಯೇ ಒಂದು ಸುಲಭ ಮಾರ್ಗವಿದೆ!

 • Share this:

  ಪ್ರಸ್ತುತವಾಗಿ ಸ್ಮಾರ್ಟ್‌ಫೋನ್‌ (SmartPhone) ಪ್ರತಿಯೊಬ್ಬರ ಅಗತ್ಯ ಸಾಧನವಾಗಿದೆ. ಬಳಕೆದಾರರು ತನ್ನ ಅಗತ್ಯ ವಿಷಯಗಳನ್ನು ಶೇರ್‌ ಮಾಡಲು, ಚಾಟ್‌ (Chat) ಮಾಡಲು, ಪ್ರಮುಖ ದಾಖಲೆ, ಫೋಟೋ, ವಿಡಿಯೋ ಈ ರೀತಿಯ ಮಾಹಿತಿಗಳನ್ನು ಪಡೆಯಲು ಮತ್ತು ಶೇರ್‌ ಮಾಡಲು ಸ್ಮಾರ್ಟ್‌ಫೋನ್‌ ಬಹಳಷ್ಟು ಅಗತ್ಯವಾಗಿದೆ. ಆದರೆ ಕೆಲವೊಂದು ದಾಖಲೆಗಳ ಸೆಕ್ಯುರಿಟಿಯನ್ನು (Security) ಕಾಪಾಡುವ ನಿಟ್ಟಿನಲ್ಲಿ ಕೆಲವೊಂದು ಪಾಸ್‌ವರ್ಡ್‌ (Password), ಪ್ಯಾಟರ್ನ್‌ (Pattern) ಅನ್ನು ಬಳಕೆದಾರರು ಹಾಕುತ್ತಾರೆ. ಈಗ ಆದಷ್ಟು ಎಲ್ಲಾ ಕಾರ್ಯಗಳು ಈ ಸ್ಮಾರ್ಟ್‌ಫೋನ್‌ನಲ್ಲೇ ಮಾಡುತ್ತಾರೆ. ಅದಲ್ಲದೆ ಈ ಲಾಕ್‌ಡೌನ್‌ (Lockdown) ಬಂದ ಮೇಲೆ ಅಂತೂ ಮೊಬೈಲ್‌ ಇಲ್ಲದೇ ಯಾವುದೇ ಕೆಲಸ ಆಗುದಿಲ್ಲ ಅನ್ನೋ ಹಾಗಿದೆ.


  ಕೆಲವೊಮ್ಮೆ ಬಳಕೆದಾರರು ತಾವು ಹಾಕಿದ ಪಾಸ್‌ವರ್ಡ್‌, ಪ್ಯಾಟರ್ನ್‌ ಅನ್ನು ಮರೆತುಬಿಡುತ್ತಾರೆ. ಈಗ ಈ ಪಾಸ್‌ವರ್ಡ್‌, ಪ್ಯಾಟರ್ನ್‌ ಮರೆತರೆ ಸುಲಭದಲ್ಲಿ ಲಾಕ್‌ ಓಪನ್‌ ಮಾಡಬಹುದು. ಇದಕ್ಕಾಗಿಯೇ ಒಂದು ಸುಲಭ ಮಾರ್ಗವಿದೆ. ಇಲ್ಲಿ ಬಳಕೆದಾರರು ತಮ್ಮ ಡಾಟಾಗಳ ಬಗ್ಗೆ ಕಾಳಜಿ ವಹಿಸಿ ತಮ್ಮ ಮೊಬೈಲ್‌ಗೆ ಪಾಸ್‌ವರ್ಡ್‌ಗಳನ್ನು ಹಾಕುತ್ತಾರೆ. ಆದರೆ ಸ್ವಲ್ಪ ದಿನಗಳ ನಂತರ ಏನೋ ಆ ಪಾಸ್‌ವರ್ಡ್‌ ಮರೆತುಬಿಡುತ್ತಾರೆ. ಒಂದು ವೇಳೆ ನೀವು ಕೂಡಾ ಪಾಸ್‌ವರ್ಡ್‌ ಮರೆತುಬಿಟ್ಟಿದ್ರೆ ಈ ಕೆಳಗೆ ಕೊಟ್ಟಿರುವ ಕ್ರಮಗಳನ್ನು ಫಾಲೋ ಮಾಡಿ ಓಪನ್ ಮಾಡಬಹುದು.


  ಪಿನ್ ಅಥವಾ ಪ್ಯಾಟರ್ನ್ ಅನ್ನು ರೀಸೆಟ್‌ ಮಾಡಲು ಗೂಗಲ್‌ ಅಕೌಂಟ್ ಬಳಸಿ‌


  ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಗೂಗಲ್‌ ಅಕೌಂಟ್‌ನೊಂದಿಗೆ ಸಾಧನಗಳಿಗೆ ಲಾಗ್‌ಇನ್‌ ಆಗಬೇಕು. ಇದರಿಂದ ಪಿನ್, ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಮರೆತುಹೋದ ಸಂದರ್ಭಗಳಲ್ಲಿ ಈ ಗೂಗಲ್‌ ಅಕೌಂಟ್‌ ಸಹಾಯಕವಾಗುತ್ತದೆ.


  Forgot your mobile password Here are tips for why tension
  ಸಾಂದರ್ಭಿಕ ಚಿತ್ರ


  ಪಿನ್ ಅಥವಾ ಪ್ಯಾಟರ್ನ್ ಮರೆತರೆ Forgot Pattern/Password ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ನಿರಾಕರಿಸಿದರೆ, ನೀವು ರಿಜಿಸ್ಟರ್‌ ಆದ ಗೂಗಲ್ ಅಕೌಂಟ್‌ಗೆ ಲಾಗಿನ್ ಆಗುವ ಅವಕಾಶ ಇರುತ್ತದೆ. ನೀವು  ಸರಿಯಾದ ಡೀಟೇಲ್ಸ್‌ ಅನ್ನು ನಮೂದಿಸಿ ಮತ್ತು ಲಾಗಿನ್ ಮಾಡಬಹುದು.


  ಇದನ್ನೂ ಓದಿ: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!


  ಈ ಕ್ರಮ ಅನುಸರಿಸಿದ ಬಳಿಕ ನಿಮ್ಮ ಫೋನ್ ಅನ್ಲಾಕ್ ಆಗುತ್ತದೆ. ನೀವು ಈಗ ಹೊಸ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್ ಅನ್ನು ಸೆಟ್‌ ಮಾಡಬಹುದು. ಈ ಆಯ್ಕೆಗಳು ಎಲ್ಲಾ ಫೋನ್‌ಗಳಲ್ಲಿ ಲಭ್ಯವಿಲ್ಲದೆಯೂ ಇರಬಹುದು.


  ಸ್ಮಾರ್ಟ್ ಲಾಕ್ ಫೀಚರ್‌


  ಫೋನ್‌ಗಳ ಪಿನ್, ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್ ಲಾಕ್ ಮರೆತ ಸಂದರ್ಭಗಳಲ್ಲಿ ಆಂಡ್ರಾಯ್ಡ್‌ನ ಸ್ಮಾರ್ಟ್‌ ಲಾಕ್‌ (Smart Lock) ಫೀಚರ್‌ ಬಳಕೆದಾರರ ನೆರವಿಗೆ ಬರಬಹುದು. ಈ ಫೀಚರ್ ಸಾಮಾನ್ಯವಾಗಿ ಮನೆಯ ವೈ-ಫೈ ಸಹಾಯದಿಂದ ನಿಮ್ಮ ಆಂಡ್ರಾಯ್ಡ್‌ ಫೋನ್‌ಗೆ ಲಾಗ್ ಆಗುತ್ತದೆ. ಪಿನ್ ಮರೆತ ವೇಳೆ ನಿಮ್ಮ ಫೋನ್ ಅನ್ನು ಹೋಮ್ ನೆಟ್‌ವರ್ಕ್ ಬಳಿ ತೆಗೆದುಕೊಳ್ಳಿ ಮತ್ತು ಅದು ಅಟೊಮೆಟಿಕ್ ಆಗಿ ಅನ್‌ಲಾಕ್ ಮಾಡುತ್ತದೆ.‌


  Forgot your mobile password Here are tips for why tension
  ಸಾಂದರ್ಭಿಕ ಚಿತ್ರ


  ಫೈಂಡ್‌ ಮೈ ಮೊಬೈಲ್


  ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗ್ರಾಹಕರಿಗೆ, 'ಫೈಂಡ್ ಮೈ ಮೊಬೈಲ್'‌ ಪೀಚರ್‌ ನೀಡಲಾಗುತ್ತದೆ. ಈ ಫೀಚರ್‌ ಅನ್‌ಲಾಕ್ ಕೋಡ್ ಮರೆತುಹೋದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಬಳಕೆದಾರರು ಸ್ಯಾಮ್‌ಸಂಗ್‌ ಅಕೌಂಟ್‌ಗೆ ಮುಂಚಿತವಾಗಿ ಲಾಗ್ ಇನ್ ಮಾಡಬೇಕಾಗುತ್ತದೆ. ನಂತರ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಸ್ಯಾಮ್‌ಸಂಗ್ ಫೈಂಡ್ ಮೈ ಮೊಬೈಲ್ (Samsung Find My Mobile) ವೆಬ್‌ಸೈಟ್‌ಗೆ ಹೋಗಿ, ಸ್ಯಾಮ್‌ಸಂಗ್ ಫೋನಿನ ವಿವರಗಳನ್ನು ನಮೂದಿಸಿ ಮತ್ತು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ತೆಗೆದುಹಾಕಲು 'ಅನ್‌ಲಾಕ್ ಮೈ ಸ್ಕ್ರೀನ್' ಆಯ್ಕೆಯನ್ನು ಬಳಸಿ ಪಾಸ್‌ವರ್ಡ್‌ ಅನ್ನು ತೆಗೆಯಬಹುದಾಗಿದೆ.


  ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!


  ಫ್ಯಾಕ್ಟರಿ ರೀಸೆಟ್‌


  ಮೇಲೆ ತಿಳಿಸಿದ ಕ್ರಮಗಳು ಸರಿಯಾಗಿ ಕೆಲಸ ಮಾಡದಿದ್ದರೆ, ಫ್ಯಾಕ್ಟರಿ ರೀಸೆಟ್‌ ಆಯ್ಕೆಯನ್ನು ಬಳಸಬಹುದಾಗಿದೆ. ಈ ಆಯ್ಕೆಯಲ್ಲಿ ಫೋನ್ ಅನ್ನು ಸಂಪೂರ್ಣ ರೀಸೆಟ್‌  ಮಾಡಬಹುದು. ಇದು ನಿಮ್ಮ ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು ಒಂದೇ ಬಾರಿಗೆ ಡಿಲೀಟ್ ಮಾಡುತ್ತದೆ. ನಂತರ ಫೋನ್ ಆಫ್‌ ಆಗಿ ಮತ್ತೆ ತೆರೆಯುತ್ತದೆ. ಮತ್ತೆ ಹಿಂದಿನಂತೆಯೇ ಬಳಕೆ ಮಾಡಬಹುದಾಗಿದೆ.

  Published by:Harshith AS
  First published: