ಇದು ಡಿಜಿಟಲ್ ಯುಗ. ಯಾವುದೇ ಕೆಲಸ ಮಾಡಬೇಕಾದ್ರೂ ಸ್ಮಾರ್ಟ್ಫೋನ್ (Smartphonr), ಲ್ಯಾಪ್ಟಾಪ್ ಮೂಲಕವೇ ಮಾಡುತ್ತಾರೆ. ಸ್ಮಾರ್ಟ್ಫೋನ್ಗಳಂತೂ ಈಗ ಪ್ರತಿಯೊಬ್ಬರಿ ಅಗತ್ಯ ಸಾಧನವಾಗಿಬಿಟ್ಟಿದೆ. ಹಿಂದೆಲ್ಲಾ ಯಾವುದೇ ಇಂಪಾರ್ಟೆಂಟ್ ವಿಷಯಗಳಿದ್ದರೂ ಅದನ್ನು ಡೈರಿ ಮೂಲಕವೋ, ಫೋಟೋ ಮೂಲಕವೋ ಇಡುತ್ತಿದ್ದರು. ಆದರೆ ಈಗ ಹೆಚ್ಚಾಗಿ ಪಿಡಿಎಫ್ ಫೈಲ್ (PDF File) ಮೂಲಕವೇ ಇಡಲಾರಂಭಿಸಿದ್ದಾರೆ. ಆದರೆ ಕೆಲವೊಂದು ಬಾರಿ ಸೇಫ್ಟಿಗಾಗಿ ಅದಕ್ಕೆ ಪಾಸ್ವರ್ಡ್ಗಳನ್ನು ಸೆಟ್ ಮಾಡಿರುತ್ತದೆ. ಕೆಲವೊಂದು ಬಾರಿ ಈ ಪಾಸ್ವರ್ಡ್ಗಳು ಮರೆತುಹೋಗುತ್ತದೆ. ಸ್ಮಾರ್ಟ್ಫೋನ್ಗಳಲ್ಲಿ ಯಾವುದೇ ಒಂದು ಡಾಕ್ಯುಮೆಂಟ್ಗಳನ್ನು ಪ್ರೈವಸಿಯ ದೃಷ್ಟಿಯಿಂದ ಹಲವಾರು ಪಾಸ್ವರ್ಡ್ಗಳನ್ನು (PDF Password) ಹಾಕಿರುತ್ತಾರೆ. ಆದರೆ ಕೆಲವೊಂದು ಬಾರಿ ಅದು ನೆನಪೇ ಆಗುವುದಿಲ್ಲ.
ಹೆಚ್ಚಿನ ಜನರು ಈಗ ಪಿಡಿಎಫ್ ಫೈಲ್ಗಳಲ್ಲೇ ತಮ್ಮ ಏನೇ ಡಾಕ್ಯುಮೆಂಟ್ಗಳಿದ್ದರೂ ಸೇವ್ ಮಾಡಿಟ್ಟುಕೊಂಡಿರುತ್ತಾರೆ. ಆದರೆ ಸೇಫ್ಟಿಗಾಗಿ ಪಾಸ್‌ವರ್ಡ್ ಅನ್ನು ಸಹ ಸೆಟ್ ಮಾಡಿರುತ್ತಾರೆ. ಆದರೆ ಕೆಲವೊಂದು ಬಾರಿ ಆ ಪಾಸ್ವರ್ಡ್ಗಳನ್ನೇ ಮರೆತು ಬಿಡುತ್ತಾರೆ. ಈ ಸಂದರ್ಭದಲ್ಲಿ ಈ ಟಿಪ್ಸ್ ಫಾಲೋ ಮಾಡಿದ್ರೆ ಪಿಡಿಎಫ್ ಫೈಲ್ ಅನ್ನು ಸುಲಭದಲ್ಲಿ ಓಪನ್ ಮಾಡ್ಬಹುದು.
ಅಡೋಬ್ ಅಕ್ರೋಬ್ಯಾಟ್ ಪ್ರೋದಲ್ಲಿ ಪಾಸ್‌ವರ್ಡ್ ಹೇಗೆ ತೆಗೆಯೋದು?
ಅಡೋಬ್ ಅಕ್ರೋಬ್ಯಾಟ್ ಪ್ರೋ ಅನ್ನು ಬಳಸಿ ಪಾಸ್‌ವರ್ಡ್ ಇರುವಂತಹ ಪಿಡಿಎಫ್ ಫೈಲ್ ಓಪನ್ ಮಾಡಬಹುದು. ಇನ್ನು ಇದಕ್ಕಾಗಿ ನೀವು ಮೊದಲಿಗೆ ವಿಂಡೋದ ಎಡಭಾಗದಲ್ಲಿರುವ ಲಾಕ್ ಐಕಾನ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ಪರ್ಮಿಷನ್ ಡೀಟೇಲ್ಸ್ ಅನ್ನು ಕೇಳಲಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಹಾಸಿಗೆಯಲ್ಲಿಟ್ಟ ಮೊಬೈಲ್ ಇದ್ದಕ್ಕಿದ್ದಂತೆಯೇ ಬ್ಲಾಸ್ಟ್! ಸಿಕ್ಕಸಿಕ್ಕಲ್ಲಿ ಇಡುವ ಮುನ್ನ ಹುಷಾರ್
ಈ ಮೂಲಕ ನೀವು ಪಿಡಿಎಫ್ ಫೈಲ್ ಅನ್ನು ನೋಡಬಹುದು. ನಂತ ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ನೋ ಸೆಕ್ಯುರಿಟಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡ್ಬೇಕು. ಈ ಮೂಲಕ ನಿಮ್ಮ ಪಿಡಿಎಫ್ ಫೈಲ್ನ ಪಾಸ್‌ವರ್ಡ್ ಅನ್ನು ರಿಮೂವ್ ಮಾಡ್ಬಹುದು.
ಪಾಸ್‌ವರ್ಡ್ ರಿಮೂವ್ ಮಾಡೋದು ಹೇಗೆ?
ಪಿಡಿಎಫ್ ಫೈಲ್ಗಳಲ್ಲೆ ಸೆಟ್ ಮಾಡಿರುವಂತಹ ಪಾಸ್ವರ್ಡ್ಗಳನ್ನು ಕೆಲವೊಂದು ಬಾರಿ ಮರೆತುಬಿಡುತ್ತೇವೆ. ಆದ್ರೆ ಈ ಸಂದರ್ಭದಲ್ಲಿ ಏನು ಮಾಡೋದು ಎಂದೇ ಗೊತ್ತಾಗಲ್ಲ. ಆದ್ರೆ ಈ ಸಂದರ್ಭದಲ್ಲಿ ಕೆಲವೊಂದು ಟಿಪ್ಸ್ಗಳೀವೆ. ಇನ್ನೂ ಸುಲಭದಲ್ಲಿ ಪಾಸ್‌ವರ್ಡ್ ತೆಗೆಯಲು ಎರಡು ಟಿಪ್ಸ್ಗಳಿವೆ. ಅದರಲ್ಲಿ ಒಂದು, ಅಡೋಬ್ ಅಕ್ರೋಬ್ಯಾಟ್ ಪ್ರೋ ಮೂಲಕ ಅಧಿಕೃತವಾಗಿ ಪಾಸ್‌ವರ್ಡ್ ಅನ್ನು ರಿಮೂವ್ ಮಾಡಬಹುದಾಗಿದೆ. ಇನ್ನೊಂದು ಟ್ರಿಕ್ಸ್ ಕೆಲವು ಸಮಯಗಳವರೆಗೆ ಮಾತ್ರವಾಗಿದ್ದು, ವಿಂಡೋಸ್ ಓಎಸ್‌ನೊಂದಿಗೆ ಬರುವ ಟೂಲ್ಸ್ಗಳನ್ನು ಬಳಸಿ, ಯಾವುದೇ ಸಾಫ್ಟ್ವೇರ್ನ ಅಗತ್ಯವಿಲ್ಲದೆಯೇ ಕ್ಲಿಯರ್ ಮಾಡ್ಬಹುದು.
ಆಂಡ್ರಾಯ್ಸ್ನಲ್ಲಿ ಪಿಡಿಎಫ್ ಪಾಸ್‌ವರ್ಡ್ ಕ್ಲಿಯರ್ ಮಾಡೋದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ