Tech Tips: ಮನೆಯಲ್ಲಿ ಎಸಿ ಇದ್ರೂ ಸರಿಯಾಗಿ ಗಾಳಿ ಬರ್ತಿಲ್ವಾ? ಈ ಟ್ರಿಕ್ಸ್ ಫಾಲೋ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೇಸಿಗೆ ಕಾಲ ಬಂದಾಗ ಎಷ್ಟೋ ಜನರು ಹೊಸ ಎಸಿ, ಫ್ಯಾನ್​ ಖರೀದಿಸಲು ರೆಡಿಯಾಗುತ್ತಾರೆ. ಖರೀದಿಸಿದ ಕೆಲದಿನಗಳ ನಂತರ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ನಿಮ್ಮ ಮನೆಯಲ್ಲೇ ಎಸಿಯನ್ನು ಸರಿ ಮಾಡ್ಬಹುದು. 

  • News18 Kannada
  • 5-MIN READ
  • Last Updated :
  • New Delhi, India
  • Share this:

    ಬೇಸಿಗೆ ಕಾಲ (Summer Season) ಈಗಾಗಲೇ ಆರಂಭವಾಗಿದೆ. ಈ ಸಮಯದಲ್ಲಿ ಬಿಸಿಲಿನ ಬೇಗೆ ಯಾರಿಗೂ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಾಲ ಕಳೆದಂತೆ ವಾತಾವರಣ ಸಹ ಬದಲಾಗೋದು ಸಹಜ. ಅದ್ರಲ್ಲೂ ಬೇಸಿಗೆಯಲ್ಲಂತೂ ಜನರಿಗೆ ಬಿಸಿಲಿನ ತಾಪವನ್ನು ತಡೆದುಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಹೆಚ್ಚಿನ ಜನರು ಏರ್​​ಕೂಲರ್ (Air Cooler)​, ಫ್ಯಾನ್​, ಎಸಿ ಮುಂತಾದ ಸಾಧನಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಆದರೆ ಇತ್ತೀಚೆಗೆ ಎಷ್ಟೇ ದುಬಾರಿ ಬೆಲೆಯ ಸಾಧನಗಳನ್ನು ಖರೀದಿಸಿದ್ರು ಸ್ವಲ್ಪ ದಿನಗಳ ನಂತರ ಹಾಳಾಗುತ್ತದೆ. ಇದಕ್ಕೆ ಕಾರಣ ಕೆಲವೊಮ್ಮೆ ನಾವು ಬಳಸುವ ವಿಧಾನಗಳಾಗಿರಬಹುದು ಅಥವಾ ಆ ಸಾಧನದ ಗುಣಮಟ್ಟವೂ ಆಗಿರಬಹುದು. ಅದ್ರಲ್ಲೂ ಎಸಿ (Air Conditionor) ಬಗ್ಗೆ ಹೇಳುವುದಾದರೆ ಆರಂಭದಲ್ಲಿ ಇದರಿಂದ ಒಳ್ಳೆಯ ತಂಪಾದ ಗಾಳಿ ಬರುತ್ತದೆ. ಕೆಲ ದಿನಗಳಾದ ನಂತರ ಸರಿಯಾಗಿ ಕೆಲಸವೇ ಮಾಡುವುದಿಲ್ಲ. ಇದಕ್ಕೂ ಕೆಲವೊಂದು ಕಾರಣಗಳಿವೆ.


    ಬೇಸಿಗೆ ಕಾಲ ಬಂದಾಗ ಎಷ್ಟೋ ಜನರು ಹೊಸ ಎಸಿ, ಫ್ಯಾನ್​ ಖರೀದಿಸಲು ರೆಡಿಯಾಗುತ್ತಾರೆ. ಖರೀದಿಸಿದ ಕೆಲದಿನಗಳ ನಂತರ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಟ್ರಿಕ್ಸ್​ ಫಾಲೋ ಮಾಡಿದ್ರೆ ನಿಮ್ಮ ಮನೆಯಲ್ಲೇ ಎಸಿಯನ್ನು ಸರಿ ಮಾಡ್ಬಹುದು.


    ಎಸಿ ಮೋಟಾರ್​ ಚೆಕ್​ ಮಾಡ್ತಾ ಇರಿ


    ಎಸಿ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದರೆ ಮುಖ್ಯವಾಗಿ ಅದರ ಮೋಟಾರ್​ ಸರಿಯಾಗಿ ಕಾರ್ಯನಿರ್ವಹಿಸಬೇಕು. ಎಸಿಯಲ್ಲಿನ ಮೋಟಾರ್​  ಬಹಳ ಮುಖ್ಯವಾಗಿರುತ್ತದೆ. ಎಸಿಯಲ್ಲಿನ ಮೋಟಾರ್​ ಹಾಳಾಗಲು ಮುಖ್ಯ ಕಾರಣ ಮನೆಯಲ್ಲಾಗುವ ವಿದ್ಯುತ್​​ನ ಏರಿಳಿತಗಳು. ಈ ರೀತಿಯಾದಾಗ ಎಸಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಎಸಿ ಮೆಕ್ಯಾನಿಕ್​ ಅನ್ನು ಅಥವಾ ಎಸಿ ಕಂಪೆನಿಯನ್ನು ಸಂಪರ್ಕಿಸಬೇಕು.


    ಇದನ್ನೂ ಓದಿ: ಮೊಬೈಲ್‌ ಸ್ಕ್ರೀನ್‌ ನೋಡೋದ್ರಿಂದ ನಿಮ್ಮ ಕಣ್ಣುಗಳ ಮೇಲೆ ಹೀಗೆಲ್ಲ ಪರಿಣಾಮ ಬೀರಬಹುದು!


    ಏರ್ ಫಿಲ್ಟರ್ ಆಗಾಗ ಕ್ಲೀನ್​ ಮಾಡ್ತಾ ಇರಿ


    ಬೇಸಿಗೆ ಬಂದಾಗ ಹಚ್ಚಿನ ಜನರು ಎಸಿಯನ್ನು ಖರೀದಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಸರಿಸುಮಾರು 6 ತಿಂಗಳವರೆಗೆ ಜನರು ಎಸಿಯನ್ನು ಬಳಸುತ್ತಾರೆ. ಇನ್ನು ಎಸಿಯಲ್ಲಿ ಏರ್​ ಫಿಲ್ಟರ್​ ಆನ್​ ಓಪನ್​ ಇದ್ದಾಗ ಧೂಳು, ಮಣ್ಣಿನಂತಹ ಅಂಶಗಳು ಸೇರಿಕೊಳ್ಳುತ್ತವೆ. ಇದರಿಂದ ಕೆಲವೊಂದು ಬಾರಿ ಏರ್​ ಫಿಲ್ಟರ್​ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನೀವು ಏಸಿಯಲ್ಲಿನ ಏರ್​ ಫಿಲ್ಟರ್​ ಅನ್ನು ಬದಲಾಯಿಸಿ ಅಥವಾ ಬಟ್ಟೆಯಿಂದ ನೀರಿನಲ್ಲಿ ಕ್ಲೀನ್ ಮಾಡಿ. ಇದರಿಂದ ನಿಮ್ಮ ಎಸಿಯನ್ನು ಸರಿಪಡಿಸಬಹುದು.


    ಸಾಂಕೇತಿಕ ಚಿತ್ರ


    ಹೊರಗಿನ ಕಂಡೆನ್ಸರ್​ ಅನ್ನು ಕ್ಲೀನ್ ಮಾಡಿ


    ಎಸಿಯಲ್ಲಿ ಕಂಡೆನ್ಸರ್​ ಬಹಳ ಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಸಾಮಾನ್ಯವಾಗಿ ಮನೆಯ ಹೊರಭಾಗದಲ್ಲಿ ಇಡಲಾಗುತ್ತದೆ. ಇದು ಗಾಳಿಯನ್ನು ಪಡೆದುಕೊಂಡು ಎಸಿಯಲ್ಲಿ ತಂಪಾದ ಗಾಳಿ ಬರಲು ಕಾರಣವಾಗುತ್ತದೆ. ಆದರೆ ಕೆಲವೊಂದು ಬಾರಿ ಧೂಳೂ, ನೀರು ಅಥವಾ ಹಕ್ಕಿಗಳ ಗೂಡುಗಳಿಂದ ಇದು ಮುಚ್ಚಿಬಿಡುತ್ತದೆ. ಈ ಸಮಯದಲ್ಲಿ ಎಸಿಯಲ್ಲಿ ತಂಪಾದ ಗಾಳಿ ಬರುವುದಿಲ್ಲ. ಅದಕ್ಕಾಗಿ ಯಾವುದಾದರು ಬ್ರಶ್​ ಅನ್ನು ಬಳಸಿ ಅದನ್ನು ಕ್ಲೀನ್ ಮಾಡ. ನಂತರ ಯಾವುದೇ ಪಕ್ಷಿಗಳಿಂದ ಅದನ್ನು ರಕ್ಷಿಸಲು ಪರದೆಯನ್ನು ಸಹ ಹಾಕಬಹುದು.




    ಎಸಿ ಕಂಪ್ರೆಸರ್


    ನಿಮ್ಮ ಮನೆಯ ಎಸಿ ಸರಿಯಾಗಿ ಕಾರ್ಯನಿರ್ವಹಿಸದೇ ಇರಲು ಮುಖ್ಯ ಕಾರಣ ಎಸಿಯಲ್ಲಿನ ಕಂಪ್ರೆಸರ್​. ಎಸಿಯಲ್ಲಿರುವಂತಹ ಮುಖ್ಯ ಸಾಧನಗಳಲ್ಲಿ ಕಂಪ್ರೆಸರ್​ ಸಹ ಒಂದು. ಈ ಕಂಪ್ರೆಸರ್​ ಸರಿಯಿಲ್ಲದಿದ್ದರೆ ಎಸಿಯಲ್ಲಿ ಬರುವಂತಹ ಗಾಳಿಯಲ್ಲಿ ಏರಿಳಿತಗಳಾಗುತ್ತದೆ. ಇನ್ನು ಈ ಕಂಪ್ರೆಸರ್​ಗಳು ಹಾಳಾದಾಗ ಯಾವತ್ತೂ ಮನೆಯಲ್ಲಿಯೇ ಸರಿಮಾಡಲು ಹೋಗ್ಬಾರ್ದು ಬದಲಿಗೆ ಎಸಿ ಕಂಪೆನಿಗಳಿಗೆ ಹೋಗುವುದು ಉತ್ತಮ

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು