Earbuds: ಇಯರ್​ಬಡ್ಸ್​ ಬಳಸುವಾಗ ಈ ಟಿಪ್ಸ್​ ಫಾಲೋ ಮಾಡಿ! ಸಮಸ್ಯೆನೇ ಆಗಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Earbuds: ಬಹಳ ದಿನಗಳಿಂದ ಇಯರ್ ಬಡ್ಸ್ ಧರಿಸುತ್ತಿದ್ದೀರಾ? ಹಾಗಿದ್ರೆ ಜಾಗರೂಕರಾಗಿರಿ. ಯಾವುದೇ ಇಯರ್​​ಬಡ್ಸ್​ ಅನ್ನು ನಿರಂತರವಾಗಿ ಬಳಸಬೇಡಿ. ಹೀಗೆ ಮಾಡಿದ್ರೆ ಗೋರಖ್ ಪುರದ ಯುವಕನೊಬ್ಬನಿಗೆ ಆದ ಘಟನೆಯೇ ನಿಮಗೂ ಆಗುತ್ತದೆ ಎನ್ನುತ್ತಾರೆ ವೈದ್ಯರು.

  • Share this:

ಸ್ಮಾರ್ಟ್ ಫೋನ್ (Smartphone) ಹೊಂದಿರುವ ಪ್ರತಿಯೊಬ್ಬರು ಕಿವಿಯಲ್ಲಿ ಇಯರ್ ಬಡ್ಸ್ (Earbuds) ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಕೆಲವರಿಗೆ ಅಗತ್ಯವಿದ್ದರೂ ಹಲವರು ಅನಗತ್ಯವಾಗಿ ಬಳಸುತ್ತಾರೆ. ಆದರೆ ಇತ್ತೀಚೆಗೆ ಗೋರಖ್‌ಪುರದಲ್ಲಿ (ಉತ್ತರಪ್ರದೇಶ) 18 ವರ್ಷದ ಯುವಕ ತನ್ನ ಕಿವಿಯಲ್ಲಿ ಬಹಳ ಸಮಯದಿಂದ ಇಯರ್ ಬಡ್ಸ್ ಧರಿಸಿದ್ದರಿಂದ ಇದ್ದಕ್ಕಿದ್ದಂತೆ ತನ್ನ ಶ್ರವಣಶಕ್ತಿಯನ್ನೇ (Hearing) ಆತ ಕಳೆದುಕೊಂಡಿದ್ದಾನೆ. ಆಂಗ್ಲ ಸುದ್ದಿ ಮಾಧ್ಯಮವೊಂದು ಪ್ರಕಟಿಸಿದ ಲೇಖನದ ಪ್ರಕಾರ, ಯುವಕನಿಗೆ ಕಿವಿಯ ಸೋಂಕು ಇತ್ತು ಮತ್ತು ಅವನ ಶ್ರವಣ ಶಕ್ತಿ ಸಹ ಸಂಪೂರ್ಣವಾಗಿ ನಷ್ಟವಾಗಿದೆ ಎಂದು ವೈದ್ಯರು (Doctor) ಹೇಳಿದ್ದಾರೆ.


ಯಾವುದೇ ವಸ್ತುವಾಗಲಿ ಅದರ ಬಳಕೆ ಮಿತಿಯಲ್ಲಿರಬೇಕು. ಅತಿಯಾದ್ರೆ ಅಮೃತವೂ ವಿಷ ಅನ್ನೋ ಮಾತಿದೆ. ಹಾಗೇ ಇಲ್ಲೂ ಕೂಡ ಅದೇ ನಡೆದಿದೆ. ಇಯರ್​ಬಡ್ಸ್ ಎಂಬುದು ಬಳಕೆಗೆ ಸುಲಭ. ಆದ್ರೆ ಅದರಿಂದ ಏನೆಲ್ಲಾ ಲಾಭಗಳಿವೆ, ಏನೆಲ್ಲಾ ನಷ್ಟಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು.


ಇಯರ್​ಬಡ್ಸ್ ನಿಂದಾಗಿ ಅಪಾಯ

ಕೆಲವರು ಈ ಇಯರ್​ಬಡ್ಸ್​ ಅನ್ನು ಟ್ರೆಂಡ್ ಆಗಿ ಬಳಸುತ್ತಾರೆ. ಇನ್ನು ಕೆಲವರು ಫ್ಯಾಷನ್ ಹೆಸರಿನಲ್ಲಿ, ಕೆಲವರು ತಮ್ಮ ವೃತ್ತಿ ಮತ್ತು ವ್ಯವಹಾರಕ್ಕಾಗಿ ನೇರವಾಗಿ ಫೋನ್‌ನಲ್ಲಿ ಮಾತನಾಡುವ ಬದಲು ವೈರ್‌ಲೆಸ್ ಇಯರ್ ಬಡ್ಸ್ ಬಳಸುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಇದನ್ನು ಬಳಕೆ ಮಾಡುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಇಯರ್ ಬಡ್ಸ್ ಬಳಕೆಯಿಂದ ಹಲವಾರು ಅಡ್ಡ ಪರಿಣಾಮಗಳು ಸಹ ಉಂಟಾಗುತ್ತವೆ.




ಇದೇ ರೀತಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 18 ವರ್ಷದ ಹುಡುಗನೊಬ್ಬ ಇಯರ್ ಬಡ್ಸ್ ಹಾಕಿಕೊಂಡು ಫೋನ್‌ನಲ್ಲಿ ಮಾತನಾಡುತ್ತಾ, ಹಾಡುಗಳನ್ನು ಕೇಳಿದ್ದರಿಂದ ಶ್ರವಣಶಕ್ತಿ ಕಳೆದುಕೊಂಡಿದ್ದಾನೆ. ಕಿವಿ ಸರಿಯಾಗಿ ಕೇಳಿಸದೇ ಇದ್ದುದರಿಂದ ವೈದ್ಯರ ಬಳಿಗೆ ಹೋದರು. ಪರೀಕ್ಷೆಯ ನಂತರ ಯುವಕನಿಗೆ ಕಿವಿಯ ಸೋಂಕು ಇದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




ಸಾಂದರ್ಭಿಕ ಚಿತ್ರ




ಪರೀಕ್ಷೆಯ ನಂತರ ಹೊರಬಿತ್ತು ಶಾಕಿಂಗ್ ನ್ಯೂಸ್​


ಯುವಕನನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿದರು. ಆತನ ಶ್ರವಣಶಕ್ತಿಯನ್ನು ಸರಿಮಾಡಲು ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.ಆದರೆ, 18 ವರ್ಷದ ಈ ಯುವಕನ ಸ್ಥಿತಿಯನ್ನು ನೋಡಿದ ನಂತರ, ವೈದ್ಯರು ದೀರ್ಘಕಾಲದವರೆಗೆ ಇಯರ್ ಬಡ್ಸ್ ಅನ್ನು ಧರಿಸುವವರಿಗೆ ಕಿವಿಯಲ್ಲಿ ಉರಿಯೂತವನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದ್ದಾರೆ. ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದಿದ್ದಾರೆ.


ಬ್ಯಾಕ್ಟೀರಿಯಾ, ವೈರಸ್​ ಬರಬಹುದು




ದೀರ್ಘಕಾಲದವರೆಗೆ ಇಯರ್​ಬಡ್ಸ್​ ಧರಿಸುವುದರಿಂದ ಕಿವಿಯ ನಾಳದಲ್ಲಿ ಉರಿ ಉಂಟಾಗಿ ಬ್ಯಾಕ್ಟೀರಿಯಾ, ವೈರಸ್ ಗಳ ಬೆಳವಣಿಗೆಗೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾರೆ ವೈದ್ಯರು.ಇದಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಸಹ ವೈದ್ಯರು ವಿವರಿಸಿದ್ದಾರೆ.




1. ಇಯರ್‌ಬಡ್‌ಗಳು ಅಥವಾ ಹೆಡ್‌ಫೋನ್‌ಗಳನ್ನು ಕಡಿಮೆ ಸಮಯ ಬಳಸಿ.


2. ಧ್ವನಿ ಕಡಿಮೆಯಿದ್ದರೆ ಉತ್ತಮ.


3. ವಾಲ್ಯೂಮ್ ಅನ್ನು ಗರಿಷ್ಠ ಅಂದರೆ ಶೇಕಡಾ 60 ರಷ್ಟು ಇಟ್ಟರೆ ಉತ್ತಮ.


4. ಕೊಳಕು, ಮೇಣ ಅಥವಾ ಬೆವರು ಸಂಗ್ರಹವಾಗುವುದನ್ನು ತಪ್ಪಿಸಲು ನಿಯಮಿತವಾಗಿ ಕಿವಿಗಳನ್ನು ಸ್ವಚ್ಛಗೊಳಿಸಿ.


5. ಇಯರ್‌ಬಡ್‌ಗಳ ಬದಲಿಗೆ ಓವರ್-ಇಯರ್ ಹೆಡ್‌ಫೋನ್‌ಗಳನ್ನು ಬಳಸುವುದು ಉತ್ತಮ.


ಜಾಗೃತೆಯಿಂದಿರಿ


ಜೀವನದಲ್ಲಿ ಕಿವಿಗಳು ಪ್ರಮುಖ ಪಾತ್ರವಹಿಸುತ್ತವೆ. ಅವುಗಳು ಹಾನಿಗೊಳಗಾದರೆ, ಇತರರು ಏನು ಹೇಳುತ್ತಾರೆಂದು ಕೇಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಯರ್​ಬಡ್ಸ್​ಗಳು ಅಂತಹ ಪರಿಸ್ಥಿತಿಯನ್ನು ತರಬಹುದು ಎಂದು ವೈದ್ಯರು ಸೂಚಿಸುತ್ತಾರೆ.


First published: