Flying Car: ಪೆಟ್ರೋಲ್​ ಎಂಜಿನ್​, 200 ಕೆ.ಜಿ ತೂಕ, 2 ನಿಮಿಷದಲ್ಲಿ ವಿಮಾನವಾಗಿ ಬದಲಾಗುತ್ತೆ ಈ ಕಾರು!

Flying car

Flying car

  • Share this:

    ಪ್ರಪಂಚದಾದ್ಯಂತ ಕೆಲವು ಕಂಪನಿಗಳು ಹಾರುವ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಬೋಯಿಂಗ್​ ಕಂಪನಿ ಕೂಡ ಫೈಯಿಂಗ್​ ಕಾರು ಅಭಿವೃದ್ಧಿ ಪಡಿಸುತ್ತಿದ್ದು, ಇದೀಗ ಸ್ಲೋವಾಕಿಯಾದ ಕಂಪನಿಯಾದ ಕ್ಲೈನ್​ ವಿಷನ್​ ಹಾರುವ ಕಾರು ವಿಮಾನ ನಿಲ್ದಾಣಗಳ ನಡುವೆ ಪರೀಕ್ಷಾ ಹಾರಾಟ ನಡೆಸಿತು. ನೂತನ ಕಾರಿನ ಹಾರುವ ವಿಡಿಯೋವನ್ನು ಕಂಪನಿ ತನ್ನ ಇನ್​ಸ್ಟಾಗ್ರಾಂ ಅಫೀಶಿಯಲ್​ ಖಾತೆಯಲ್ಲಿ ಹಂಚಿಕೊಂಡಿದೆ.


    ಅಚ್ಚರಿಯ ವಿಚಾರವೆಂದರೆ, ಈ ಹಾರುವ ಕಾರು ಕೇವಲ 2 ನಿಮಿಷದಲ್ಲಿ ವಿಮಾನವಾಗಿ ಬದಲಾಗುತ್ತದೆ. ಇದರಲ್ಲಿ ಬಿಎಂಡಬ್ಯು ಎಂಜಿನ್​ ಜೋಡಿಸಲಾಗಿದ್ದು, ಸಾಮಾನ್ಯ ಪೆಟ್ರೋಲ್​ನಲ್ಲಿ ಚಲಿಸುತ್ತದೆ ಎಂದು ಹೇಳಲಾಗುತ್ತಿದೆ.


    ಇನ್ನು ಫೈಯಿಂಗ್​ ಕಾರಿನ ಮೊದಲ ಐತಿಹಾಸಿಕ ಹಾರಾಟವನ್ನು ಕ್ಲೈನ್​​ ವಿಷನ್​ ಸ್ಥಾಪಕ ಮತ್ತು ಸಿಇಒ ಸ್ಟೀಫನ್​ ಕ್ಲೈನ್​ ನಿರ್ವಹಿಸಿದ್ದಾರೆ.  ಸ್ಲೋವಾಕಿಯಾದ ನೈಟ್ರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಾರಂಭವಾಯಿತು. ಕ್ಲೈನ್​​ ರನ್ವೇಯಿಂದ ಹೊರಟು ಬ್ರಾಟಿಸ್ಲಾವಾಕ್ಕೆ ತನ್ನ 35 ನಿಮಿಷ ಹಾರಾಟವನ್ನು ಪೂರ್ಣಗೊಳಿಸಿದೆ.


    20 ವರ್ಷಗಳ ಪರಿಶ್ರಮ!


    ಅನೇಕ ವರ್ಷಗಳಿಂದ ಹಾರುವ ಕಾರಿನ ಅಭಿವೃದ್ಧಿ ಕುರಿತು ಚಿಂತಿಸಲಾಗುತ್ತಿದೆ. ಅದರಂತೆ ಕ್ಲೈನ್​ನ 20 ವರ್ಷ ಪರಿಶ್ರಮದಿಂದ ಈ ಹಾರುವ ಕಾರನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಅಭಿವೃದ್ಧಿ ಸಮಯದಲ್ಲಿ 140 ಕ್ಕೂ ಅಧಿಕ ಭಾರೀ ಪರೀಕ್ಷೆಯನ್ನು ಎದುರಿಸಿದೆ.


    ಇನ್ನು ಹಾರುವ ಕಾರನ್ನು ವಿಭಿನ್ನವಾಗಿ ವಿನ್ಯಾಸ ಮಾಡಲಾಗಿದೆ. ವಾಯುಬಲದ ವಿಜ್ನಾನವನ್ನು ಮಾರ್ಪಡಿಸುವಾಗ ಕಾರು ರೆಕ್ಕೆಗಳು ಹೊರಬರುತ್ತದೆ. 135 ಸೆಕೆಂಡಿನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಕಂಪನಿ ತಿಳಿಸಿದೆ.




    ಪೆಟ್ರೋಲ್ ಎಂಜಿನ್​ ಹೊಂದಿರುವ ಈ ಕಾರು 190 ಕಿ.ಮೀ ವೇಗವನ್ನು ಹೆಚ್ಚಿಸುತ್ತದೆ. ಒಂದೇ ಇಂಧನ ಟ್ಯಾಂಕ್​ ಟಾಪ್​-ಅಪ್​ನಲ್ಲಿ  ಅದರ ವೇಗವನ್ನು 300 ಕಿ.ಮೀ ಮತ್ತು 100 ಕಿ.ಮೀ ವೇಗವನ್ನು ಹೆಚ್ಚಿಸುವುದು ಕ್ಲೈನ್​ ಅವರ ಮುಂದಿನ ಗುರಿಯಾಗಿದೆ.


    ಹಾರುವ ಕಾರು 200 ಕೆ.ಜಿ ತೂಕವನ್ನು ಹೊಂದಿದ್ದು, ಎರಡು ಜನರು ಇದರಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗಿದೆ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು