ಫ್ಲಿಪ್​​ಕಾರ್ಟ್​​ನಲ್ಲಿ ದಿನಸಿ ಮಾತ್ರವಲ್ಲ ಇನ್ನುಮುಂದೆ ಸಿಗಲಿದೆ ತಾಜಾ ಮಾವಿನ ಹಣ್ಣು!

ಫ್ಲಿಪ್‌ಕಾರ್ಟ್ ತಮ್ಮಲ್ಲಿ ನೋಂದಣಿಯಾಗುವ ಮಾವು ಮಂಡಳಿಯ ರೈತ ಉತ್ಪಾದಕ ಸಂಸ್ಥೆಗಳು/ ಮಾರಾಟಗಾರರು, ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಮಾರಾಟದ ವೇದಿಕೆ ಒದಗಿಸುತ್ತದೆ.   

Rajesh Duggumane | news18-kannada
Updated:May 27, 2020, 1:15 PM IST
ಫ್ಲಿಪ್​​ಕಾರ್ಟ್​​ನಲ್ಲಿ ದಿನಸಿ ಮಾತ್ರವಲ್ಲ ಇನ್ನುಮುಂದೆ ಸಿಗಲಿದೆ ತಾಜಾ ಮಾವಿನ ಹಣ್ಣು!
ಮಾವಿನ ಹಣ್ಣು
  • Share this:
ಇದು ಮಾವಿನ ಹಣ್ಣಿನ ಸೀಸನ್​. ಕಳೆದ ವರ್ಷವಾಗಿದ್ದರೆ ಈ ಸಮಯದಲ್ಲಿ ಮಾವು ಪ್ರಿಯರು ಅಂಗಡಿಗೆ ತೆರಳಿ ತಮಗಿಷ್ಟ ಬಂದ ಹಣ್ಣನ್ನು ಕೊಂಡುಬರುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಲಗ್ಗೆ ಇಟ್ಟಿದ್ದರಿಂದ ಮಾವಿನ ಹಣ್ಣು ಕೊಂಡು ಬರಲು ಜನ ಹೆದರುತ್ತಿದ್ದಾರೆ. ಮಾವು ಕೊಂಡು ಬರಲು ಹೋದರೆ ಅಲ್ಲಿ ರಷ್​​ ಇದ್ದರೆ ಎನ್ನುವ ಭಯ ಇದಕ್ಕೆ ಕಾರಣ. ಇದು ಮಾವು ಪ್ರಿಯರಿಗೆ ಬೇಸರ ಉಂಟು ಮಾಡಿದೆ! ಆದರೆ, ಮಾವು ಪ್ರಿಯರು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ಇ ಕಾಮರ್ಸ್​ ದಿಗ್ಗಜ ಫ್ಲಿಪ್​ಕಾರ್ಟ್​ನಲ್ಲಿ ಮಾವಿನ ಹಣ್ಣು ಆರ್ಡರ್​ ಮಾಡಿದರೆ ಸಾಕು ತಾಜಾ ಮಾವಿನ ಹಣ್ಣು ನಿಮ್ಮ ಮನೆ ಸೇರಲಿದೆ!

ಇನ್ನು ಮುಂದೆ ಫ್ಲಿಪ್ ಕಾರ್ಟ್ ವೇದಿಕೆಯಲ್ಲಿ ಜನರು ಮಾವಿನ ಹಣ್ಣಗಳನ್ನು ಕೊಂಡುಕೊಳ್ಳಬಹುದಾಗಿದೆ. ಈ ಸಂಬಂಧ ಫ್ಲಿಪ್‌ಕಾರ್ಟ್, ಕರ್ನಾಟಕ ರಾಜ್ಯ ಮಾವು ಇಲಾಖೆ ಹಾಗೂ ರಾಜ್ಯ ಮಾವು ಮಂಡಳಿ ಇಂದು ಒಡಂಬಡಿಕೆಗೆ ಸಹಿ ಹಾಕಿವೆ. ಈ ಮೂಲಕ ಫ್ಲಿಪ್​​ಕಾರ್ಟ್ ಬೆಂಗಳೂರು ನಗರ, ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದೊರೆಯುವ ವಿಧ ಬಗೆಯ ಮಾವಿನ ಹಣ್ಣುಗಳನ್ನು ಜನರಿಗೆ ತಲುಪಿಸಲಿದೆ. ಈ ಪಾಲುದಾರಿಕೆ ರೈತರಿಗೆ ಬಹು ಅಗತ್ಯದ ಮಾರುಕಟ್ಟೆಯನ್ನು ಒದಗಿಸಿದಂತಾಗುತ್ತಿದೆ.

ಫ್ಲಿಪ್‌ಕಾರ್ಟ್ ತಮ್ಮಲ್ಲಿ ನೋಂದಣಿಯಾಗುವ ಮಾವು ಮಂಡಳಿಯ ರೈತ ಉತ್ಪಾದಕ ಸಂಸ್ಥೆಗಳು/ ಮಾರಾಟಗಾರರು, ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಮಾರಾಟದ ವೇದಿಕೆ ಒದಗಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಚೆ ಕಚೇರಿ ಮೂಲಕ ಮನೆಗೆ ಡೆಲಿವರಿ ಆಗಲಿದೆ ಮಾವಿನ ಹಣ್ಣು!; ಆರ್ಡರ್ ಮಾಡೋದು ಹೇಗೆ?

ಗ್ರಾಹಕರು ಫ್ಲಿಪ್‌ಕಾರ್ಟ್‌ ವೆಬ್ ಸೈಟ್ ಮೂಲಕ ಅಲ್ಫೊನ್ಸೊ, ಬಾದಾಮಿ, ಅಪೂಸ್, ಬಂಗನ್‌ಪಲ್ಲಿ, ಕೇಸರ್, ನೀಲಂ, ಹಿಮಾಮ್ ಪಸಂದ್, ಸೆಂಡೂರ್ ಮತ್ತು ಮಲ್ಲಿಕಾ ಸೇರಿದಂತೆ ವಿವಿಧ ಮಾವುಗಳನ್ನು 3 ಕೆಜಿಯವರೆಗೆ ಆರ್ಡರ್ ಮಾಡಬಹುದಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಫ್ಲಿಪ್‌ಕಾರ್ಟ್ ವಿವಿಧ ಎಫ್‌ಎಂಸಿಜಿ ಮತ್ತು ಚಿಲ್ಲರೆ ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಅದೇ ರೀತಿ ಈಗ ಮಾವಿನ ಬೆಳೆಗಾರರು ಮತ್ತು ರೈತ ಸಮುದಾಯದ ಜೀವನೋಪಾಯವನ್ನು ಬೆಂಬಲಿಸಲು ರೈತ ಉತ್ಪಾದಕ ಸಂಸ್ಥೆಯ ಸಮುದಾಯಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದೆ.
First published: May 27, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading